ನಟಿ ಸಾಯಿ ಪಲ್ಲವಿ ಸೌತ್ ಸಿನಿರಂಗದಲ್ಲಿ ಸಿಕ್ಕಾಪಟ್ಟೆ ಫೇಮಸ್. ಜೊತೆಗೆ ಸಿಕ್ಕಪಟ್ಟೆ ಎನ್ನುವಷ್ಟು ಕ್ರೇಜ್ ಇರುವ ಅಭಿಮಾನಿ ಬಳಗ ಹೊಂದಿದ್ದಾರೆ. ಹೀಗಾಗಿ ಸಹಜವಾಗಿಯೇ ಈ ನಟಿ ವಿರುದ್ಧ ಬಾಲಿವುಡ್ ಸಿನಿರಂಗದಲ್ಲಿ ಅಸೂಯೆ ಹೊಗೆಯಾಡತೊಡಗಿದೆ. ಹೇಗಾದರೂ ಈ ನಟಿಯ ಸಿನಿಮಾ ಸೂಪರ್ ಹಿಟ್..
ನ್ಯಾಚುರಲ್ ಬ್ಯೂಟಿ ಎಂದೇ ಖ್ಯಾತಿ ಹೊಂದಿರುವ ನಟಿ ಸಾಯಿ ಪಲ್ಲವಿ (Sai Pallavi) ಬಗ್ಗೆ ಬಾಲಿವುಡ್ ಮಂದಿ ಏನೇನೋ ಹೇಳತೊಡಗಿದ್ದಾರೆ. ದಕ್ಷಿಣ ಭಾರತದ ಈ ಚೆಲುವೆ ಸ್ಟಾರ್ ನಟಿಯರ ಪಟ್ಟಿಯಲ್ಲಿ ಸದ್ಯ ಮುಂಚೂಣಿಯಲ್ಲಿ ಇದ್ದಾರೆ. ಹೆಚ್ಚು ಮೇಕಪ್ ಇಲ್ಲದೇ ತೀರಾ ಸಿಂಪಲ್ ಆಗಿಕಾಣಿಸಿಕೊಳ್ಳುವ ಸಾಯಿ ಪಲ್ಲವಿ ಅಂದ್ರೆ ಬಹಳಷ್ಟು ಜನರಿಗೆ ತುಂಬಾ ಇಷ್ಟ. ಆದರೆ, ಸಾಕಷ್ಟು ಸೈಲೆಂಟ್ ಆಗಿದ್ರೂ ಈ ಸುಂದರಿ ಆಗಾಗ ವಿವಾದಕ್ಕೆ ಗುರಿಯಾಗ್ತಾನೇ ಇರ್ತಾರೆ.
ಇದೀಗ, ರಾಮಾಯಣ ಚಿತ್ರದ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಕಾಲಿಟ್ಟಿರುವ ಸಾಯಿ ಪಲ್ಲವಿ ವಿರುದ್ಧ ಹುನ್ನಾರ ನಡೆದಿರುವ ಶಂಕೆ ವ್ಯಕ್ತವಾಗಿದೆ. ಇತ್ತೀಚೆಗೆ ನಟಿ ಸಾಯಿ ಪಲ್ಲವಿ ಅವರು ಬಾಲಿವುಡ್ ಸ್ಟಾರ್ ನಟ ರಣಬೀರ್ ಕಪೂರ್ ಜೋಡಿಯಾಗಿ ರಾಮಾಯಣ ಚಿತ್ರದಲ್ಲಿ ಸೀತೆ ಪಾತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಇದೀಗ ರಾಮಾಯಣ ಚಿತ್ರದ ಶೂಟಿಂಗ್ ನಡೆಯುತ್ತಿರುವ ಹೊತ್ತಲ್ಲೇ ಡೇಟಿಂಗ್ ವಿಚಾರಕ್ಕೆ ಸಖತ್ ಸುದ್ದಿಯಾಗ್ತಿದಾರೆ.
ಪ್ರಿಯಾಂಕಾ ಚೋಪ್ರಾ-ನಿಕ್ ಜೊನಾಸ್ ದಂಪತಿ ಮಧ್ಯೆ ಹತ್ತು ವರ್ಷಗಳ ಗ್ಯಾಪ್ ಇದೆ; ಅದ್ರಿಂದ ಆಗಿದ್ದೇನು?
ನಟಿ ಸಾಯಿ ಪಲ್ಲವಿ ಬಗ್ಗೆ ಬಾಲಿವುಡ್ ಅಂಗಳದಲ್ಲಿ ಸುದ್ದಿಯಾಗುತ್ತಿರುವ ಗಾಸಿಪ್ ಅಂತಿಂಥದ್ದಲ್ಲ. ಸಾಯಿ ಪಲ್ಲವಿ ಅವರು ಎರಡು ಮಕ್ಕಳ ತಂದೆಯಾಗಿದರುವ ನಟರೊಬ್ಬರ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಸುದ್ದಿ ಹಬ್ಬಿಸಲಾಗಿದೆ. ಆದರೆ, ಇದನ್ನು ಯಾರೂ ನಂಬುವ ಸ್ಥಿತಿಯಲ್ಲಿ ಇಲ್ಲ. ಏಕೆಂದರೆ, ನಟಿ ಸಾಯಿ ಪಲ್ಲವಿ ಅವರು ಸದಾ ವಿವಾದಗಳಿಂದ ದೂರವಿರಲು ಬಯಸುವ ನಟಿ. ತಾವಾಯ್ತು, ತಮ್ಮ ಕೆಲಸವಾಯ್ತು ಎಂಬಂತಿರುವ ಈ ನಟಿಯ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲಾಗಿದೆ ಎನ್ನಲಾಗುತ್ತಿದೆ.
ನಟಿ ಸಾಯಿ ಪಲ್ಲವಿ ಬಗ್ಗೆ ಸದಾ ಒಂದಲ್ಲ ಮತ್ತೊಂದು ಗಾಸಿಪ್ ಹಬ್ಬುತ್ತಲೇ ಇರುತ್ತದೆ. ಆದರೆ ಅದ್ಯಾವುದಕ್ಕೂ ಈ ನಟಿ ತಲೆ ಕೆಡಿಸಿಕೊಳ್ಳುವುದಿಲ್ಲ. ಇದಕ್ಕೆಲ್ಲಾ ಪ್ರತಿಕ್ರಿಯೆ ಕೊಡುತ್ತ ಸುಮ್ಮನೇ ಕಾಲಾಹರಣ ಮಾಡುವುದಿಲ್ಲ ಈ ನಟಿ. ಆದರೆ, ಈಗ ಬಾಲಿವುಡ್‌ನಲ್ಲಿ ಎರಡು ಮಕ್ಕಳ ತಂದೆ ಜೊತೆ ಡೇಟಿಂಗ್ ಮಾಡ್ತಾ ಇದ್ದಾರೆ ಅಂತ ಸುದ್ದಿಯಾಗ್ತಿದ್ದಾರೆ. ಆದರೆ, ಈ ಸುದ್ದಿ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಲೇ ಇವೆ.
ಸಿಕ್ಕ ಮಾಹಿತಿ ಪ್ರಕಾರ, ಸೌತ್ ಫೇಮಸ್ ನಟಿಯೊಬ್ಬರು ಬಾಲಿವುಡ್ ಪ್ರವೇಶಿಸಿರುವುದು ಕೆಲವು ಬಾಲಿವುಡ್ ನಟಿಯರಿಗೆ ಇಷ್ಟವಾಗಿಲ್ಲ. ಹೀಗಾಗಿ ಪಿಆರ್ ತಂತ್ರವನ್ನು ಬಳಸಿ, ಅವರೇ ಈ ಗಾಳಿಸುದ್ದಿ ಹರಿಬಿಡುತ್ತಿದ್ದಾರೆ. ಈ ನಟಿ ಚೆಲುವೆ ಮಾತ್ರವಲ್ಲ, ಭಾರೀ ಪ್ರತಿಭೆ ಹೊಂದಿದ್ದಾರೆ ಎಂಬುದು ಅಲ್ಲಿನವರಿಗೆ ಗೊತ್ತಾಗಿದೆ. ಹೀಗಾಗಿ ಬೇಕೆಂತಲೇ ಇಮೇಜ್ ಡ್ಯಾಮೇಜ್ ಮಾಡುವ ಉದ್ದೇಶದಿಂದ ಸಾಯಿ ಪಲ್ಲವಿ ಅವರ ಹೆಸರನ್ನು ಅನಾವಶ್ಯಕವಾಗಿ ಡೇಟಿಂಗ್ ಮೂಲಕ ಹರಿಬಿಟ್ಟಿದ್ದಾರೆ ಎನ್ನಲಾಗುತ್ತಿದೆ.
ನಟಿ ಸಾಯಿ ಪಲ್ಲವಿ ಸೌತ್ ಸಿನಿರಂಗದಲ್ಲಿ ಸಿಕ್ಕಾಪಟ್ಟೆ ಫೇಮಸ್. ಜೊತೆಗೆ ಸಿಕ್ಕಪಟ್ಟೆ ಎನ್ನುವಷ್ಟು ಕ್ರೇಜ್ ಇರುವ ಅಭಿಮಾನಿ ಬಳಗ ಹೊಂದಿದ್ದಾರೆ. ಹೀಗಾಗಿ ಸಹಜವಾಗಿಯೇ ಈ ನಟಿ ವಿರುದ್ಧ ಬಾಲಿವುಡ್ ಸಿನಿರಂಗದಲ್ಲಿ ಅಸೂಯೆ ಹೊಗೆಯಾಡತೊಡಗಿದೆ. ಹೇಗಾದರೂ ಈ ನಟಿಯ ಸಿನಿಮಾ ಸೂಪರ್ ಹಿಟ್ ಆಗುವುದನ್ನು ತಡೆಯಬೇಕು, ರಶ್ಮಿಕಾ ಮಂದಣ್ಣ ತರಹವೇ ಸಾಯಿ ಪಲ್ಲವಿ ಕೂಡ ಬಾಲಿವುಡ್‌ನಲ್ಲೇ ನೆಲೆಯೂರಿಬಿಟ್ಟರೆ ತಮ್ಮ ಗತಿಯೇನು ಎಂದು ಹಲವು ನಟಿಯರು ಚಿಂತೆಗೆ ಬಿದ್ದಿದ್ದಾರೆ ಎನ್ನಲಾಗಿದೆ.
ಸೋನಲ್ ಯಾಕೆ ನಟ ದರ್ಶನ್ ನೋಡಲು ಇನ್ನೂ ಜೈಲಿಗೆ ಹೋಗಿಲ್ಲ? ಕಾರಣ ಬಿಚ್ಚಿಟ್ಟ ನಟಿ !
ಒಟ್ಟಿನಲ್ಲಿ, ಪಿಆರ್ ತಂತ್ರವನ್ನು ಬಳಸಿಕೊಂಡು ನಟ ಸಾಯಿ ಪಲ್ಲವಿ ವಿರುದ್ಧ ಹಿರಿಯ ನಟನೊಂದಿಗೆ ಡೇಟಿಂಗ್ ಶುರುವಿಟ್ಟುಕೊಂಡಿದ್ದಾರೆ ಎಂದು ಸುದ್ದಿ ಹಬ್ಬಿಸಿ ಪರಿಣಾಮಕ್ಕೆ ಕಾಯಲಾಗುತ್ತಿದೆ. ಏಕೆಂದರೆ, ಹೇಳಿಕೇಳಿ ರಾಮಾಯಣ ಚಿತ್ರದಲ್ಲಿ ನಟ ಯಶ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ, ಈ ಚಿತ್ರವು ಸುಮಾರು 840 ಕೋಟಿ ಬಜೆಟ್ ಮೂಲಕ ಹೈ ಬಜೆಟ್ ಚಿತ್ರವೆಂದು ಗುರುತಿಸಿಕೊಂಡಿದೆ. ಒಮ್ಮೆ ಸೂಪರ್ ಹಿಟ್ ಆಗಿಬಿಟ್ಟರೆ, ನಟಿ ಸಾಯಿ ಪಲ್ಲವಿ ಬಾಲಿವುಡ್ ಬ್ಯೂಟಿ ಆಗಿ ಬದಲಾಗುತ್ತಾರೆ. ಆಗ ಅಲ್ಲಿದ್ದು, ಅದನ್ನೇ ನಂಬಿಕೊಂಡಿರುವ ನಟಿಯರ ಪಾಡೇನು? ಇದಕ್ಕಾಗಿ ಈ ಗಾಸಿಪ್, ಈ ಹುನ್ನಾರ ಎನ್ನಲಾಗಿದೆ.