ನೇಹಾ ಕಕ್ಕರ್ ನೀಡಿದ ಸ್ಪಷ್ಟನೆ ಸಾರ್ವಜನಿಕರಿಗೆ ತೃಪ್ತಿಯನ್ನುಂಟು ಮಾಡದ ಕಾರಣ ಅಸಮಾಧಾನ ಹೊರ ಹಾಕುತ್ತಿದ್ದಾರೆ.
ಮುಂಬೈ: ಹಿಂದಿಯ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ, ಸೂಪರ್ ಸ್ಟಾರ್ ಸಿಂಗರ್ ರಿಯಾಲಿಟಿ ಶೋಗೆ ತೆರೆ ಬಿದ್ದಿದೆ. ರಿಯಾಲಿಟಿ ಶೋಗಳಲ್ಲಿ ಅಂತಿಮವಾಗಿ ಒಬ್ಬರನ್ನು ವಿನ್ನರ್ ಆಗಿ ಘೋಷಣೆ ಮಾಡಲಾಗುತ್ತದೆ. ಆದ್ರೆ ಸೂಪರ್ ಸ್ಟಾರ್ ಸಿಂಗರ್ ಶೋನಲ್ಲಿ ಇಬ್ಬರನ್ನು ವಿಜೇತರು ಎಂದು ಅನೌನ್ಸ್ ಮಾಡಲಾಗಿದೆ. ಶೋ ತೆಗೆದುಕೊಂಡ ಈ ನಿರ್ಧಾರದ ಬಗ್ಗೆ ವೀಕ್ಷಕರಲ್ಲಿ ಅಸಮಾಧಾನ ಉಂಟಾಗಿದ್ದು, ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬೇಸರ ಹೊರ ಹಾಕುತ್ತಿದ್ದಾರೆ. ಹಿಂದಿಯ ರಿಯಾಲಿಟಿ ಶೋಗಳಲ್ಲಿ ದಕ್ಷಿ ಭಾರತದ ಪ್ರತಿಭೆಗಳು ಗೆಲುವು ಕಾಣೋದು ವಿರಳ. ಕಾರಣ ದಕ್ಷಿಣ ಭಾರತದಲ್ಲಿಮ ಹೆಚ್ಚು ಹಿಂದಿ ರಿಯಾಲಿಟಿ ಶೋ ವೀಕ್ಷಕರನ್ನು ಹೊಂದಿರಲ್ಲ. ಹಾಗಾಗಿ ದಕ್ಷಿಣ ಭಾರತದ ಪ್ರತಿಭೆಗಳು ಪಬ್ಲಿಕ್‌ನಿಂದ ಮತ ಪಡೆಯಲು ಕಷ್ಟಪಡಬೇಕಾಗುತ್ತದೆ. ಆದ್ರೂ ಕೇರಳದ ಆವಿರ್ಭವ್ ಶೋ ಗೆದ್ದಿದ್ದಾನೆ. ಆದ್ರೆ ಮೊದಲ ಸ್ಥಾನವನ್ನು ಇಬ್ಬರಿಗೆ ಹಂಚಿಕೆ ಮಾಡಿದ್ದಕ್ಕೆ ಸಾರ್ವಜನಿಕರು ಬೇಸರ ಹೊರ ಹಾಕಿದ್ದಾರೆ.
ಭಾನುವಾರ ಸೂಪರ್ ಸ್ಟಾರ್ ಸಿಂಗರ್ ರಿಯಾಲಿಟಿ ಶೋ ಫಿನಾಲೆ ನಡೆದಿತ್ತು. ಕೇರಳ ಮೂಲದ ಕ್ಯೂಟ್ ಹುಡುಗ ಆವಿರ್ಭವ್ ವಿನ್ನರ್ ಎಂದು ಫಿಕ್ಸ್ ಆಗಿದ್ದರು. ಆದ್ರೆ ಶೋ ಮಾತ್ರ ಅವಿರ್ಭವ್ ಜೊತೆ ಮತ್ತೋರ್ವ ಗಾಯಕ ಅಥರ್ವ್ ಗೂ ವಿನ್ನರ್ ಪಟ್ಟ ನೀಡಲಾಯ್ತು. ಪಬ್ಲಿಕ್ ವೋಟ್ ಪ್ರಕಾರ ಆರ್ವಿಭವ್‌ಗೆ ಹೆಚ್ಚಿನ ಮತಗಳು ಬಂದಿವೆ. ಆದ್ರೆ ಮೇಂಟರ್ ಹಾಗೂ ಜಡ್ಜ್ ನೀಡಿದ ಅಂಕಗಳಲ್ಲಿ ಅಥರ್ವ್ ಮುಂದಿದ್ದಾನೆ. ಹಾಗಾಗಿ ಇಬ್ಬರನ್ನು ವಿನ್ನರ್ ಎಂದು ಘೋಷಣೆ ಮಾಡಲಾಗುತ್ತಿದೆ ಎಂದು ಜಡ್ಜ್ ನೇಹಾ ಕಕ್ಕರ್ ಸ್ಪಷ್ಟನೆ ನೀಡಿದರು. ಆದರೆ ನೇಹಾ ಕಕ್ಕರ್ ನೀಡಿದ ಸ್ಪಷ್ಟನೆ ಸಾರ್ವಜನಿಕರಿಗೆ ತೃಪ್ತಿಯನ್ನುಂಟು ಮಾಡದ ಕಾರಣ ಅಸಮಾಧಾನ ಹೊರ ಹಾಕುತ್ತಿದ್ದಾರೆ.
ಅಡಿಷನ್ ನಿಂದ ಇಲ್ಲಿಯವರೆಗೂ ಆವಿರ್ಭವ್ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾನೆ. ಇದನ್ನು ಅಲ್ಲಿದ್ದ ತೀರ್ಪುಗಾರರೇ ಪ್ರತಿ ಎಪಿಸೋಡ್‌ನಲ್ಲಿ ಹೇಳುತ್ತಾ ಬಂದಿದ್ದಾರೆ. ಆದ್ರೆ ಅಥರ್ವ್ ಕೆಲವು ಬಾರಿ ಸಣ್ಣ ತಪ್ಪುಗಳನ್ನು ಮಾಡಿರೋದು ಕಂಡು ಬಂದಿದೆ. ಆದರೂ ಅಥರ್ವ್ ಅಂಕ ಹೆಚ್ಚಾಗಿದ್ದು ಹೇಗೆ ಎಂದು ಶೋ ವೀಕ್ಷಕರು ಪ್ರಶ್ನೆ ಮಾಡಿದ್ದಾರೆ. ಇದರ ಜೊತೆಗೆ ಅಥರ್ವ್ ಒಳ್ಳೆಯ ಗಾಯಕ ಅಂತಲೂ ಹಲವರು ಕಮೆಂಟ್ ಮಾಡಿದ್ದಾರೆ.
ರಿಯಾಲಿಟಿ ಶೋ ವಿನ್ನರ್ ಪಟ್ಟ ಅಲಂಕರಿಸಿದ ಬಳಿಕ ಮಾತನಾಡಿರುವ ಆವಿರ್ಭವ್, ಗೆದ್ದಿರೋದು ತುಂಬಾ ಸಂತೋಷವನ್ನುಂಟು ಮಾಡಿದೆ. ನನ್ನ ಪೋಷಕರು ಸಹ ತುಂಬಾ ಖುಷಿಯಾಗಿದ್ದಾರೆ. ಮುಂದೆಯೂ ನನ್ನ ಸಂಗೀತಾಭ್ಯಾಸ ಮುಂದುವರಿಸಿ, ಖ್ಯಾತ ಗಾಯಕ ಅರ್ಜಿತ್ ಸಿಂಗ್ ರೀತಿ ದೊಡ್ಡ ಸಿಂಗರ್ ಆಗಬೇಕೆಂಬ ಆಸೆ ಇದೆ ಎಂದು ಹೇಳಿದ್ದಾನೆ.
900 ಕೋಟಿ ಕೊಟ್ರೆ ಮಾತ್ರ ಡಿವೋರ್ಸ್ ಕೊಡುವೆ ಎಂದ ನಟಿ; ಜೀವನಾಂಶ ಕೊಡಲು ಒಪ್ತಾರಾ ಗಂಡ?
ಈ ರಿಯಾಲಿಟಿ ಶೋಗಾಗಿ ಗೆಳಯರನ ಜೊತೆ ಆಟ ಆಡೋದನ್ನು ಮಿಸ್ ಮಾಡಿಕೊಂಡಿದ್ದೇನೆ. ನಮ್ಮ ಜಡ್ಜ್ ಮತ್ತು ಕ್ಯಾಪ್ಟನ್ ಜೊತೆ ಒಳ್ಳೆಯ ಸಮಯ ಕಳೆದಿದ್ದೇನೆ. ಕ್ಯಾಪ್ಟನ್ ನನಗೆ ಎಲ್ಲಾ ರೀತಿಯ ಸಲಹೆಗಳನ್ನು ನೀಡುತ್ತಿದ್ದರು. ಹಾಗಾಗಿ ನಾನು ಉತ್ತಮವಾಗಿ ಹಾಡಲು ಸಾಧ್ಯವಾಯ್ತು. ಎಲ್ಲಾ ಕ್ಯಾಪ್ಟನ್‌ಗಳು ನನಗೆ ಇಷ್ಟ ಎಂದು ಆವಿರ್ಭವ್ ಹೇಳಿದ್ದಾನೆ.
ಗಾಯಕಿ ನೇಹಾ ಕಕ್ಕರ್ ರಿಯಾಲಿಟಿ ಶೋನ ತೀರ್ಪುಗಾರರಾಗಿದ್ದರು. ಈ ಹಿಂದೆ ಹಲವು ಸಿಂಗಿಂಗ್ ರಿಯಾಲಿಟಿ ಶೋಗಳಲ್ಲಿ ಗಮನ ಸೆಳೆದಿದ್ದ ಗಾಯಕರು ಈ ಶೋನಲ್ಲಿ ಮೆಂಟರ್ ಗಳಾಗಿದ್ದರು. ಈ ಮೆಂಟರ್‌ಗಳನ್ನು ಕ್ಯಾಪ್ಟನ್ ಎಂದು ಕರೆಯಲಾಗುತ್ತಿತ್ತು.
ಎಲ್ಲಾ ಎಲ್ಲೆಗಳನ್ನು ಮೀರಿದ ಸಿನಿಮಾಗಳು... ಮನೆಯವರೊಂದಿಗೆ ಅಲ್ಲ ಸಂಗಾತಿ ಜೊತೆ ಏಕಾಂತದಲ್ಲಿ ನೋಡಿ!