ಮಲಯಾಳಂ ಸೂಪರ್ ಸ್ಟಾರ್ ಮೋಹನ್ಲಾಲ್ ಅವರನ್ನು ದಿಢೀರನೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಭಿಮಾನಿಗಳು ಆತಂಕಗೊಂಡಿದ್ದಾರೆ. ನಟನಿಗೆ ಆಗಿದ್ದೇನು?
ಮಲಯಾಳಂ ಸೂಪರ್ ಸ್ಟಾರ್ ಮೋಹನ್ಲಾಲ್ ಅವರನ್ನು ದಿಢೀರನೆ ಕೊಚ್ಚಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಜರಾತಿನಲ್ಲಿ ಎಂಬುರಾನ್ ಸಿನಿಮಾದ ಶೂಟಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಅನಾರೋಗ್ಯ ಉಂಟಾಗಿತ್ತು ಎನ್ನಲಾಗಿದೆ. ಇದ್ದಕ್ಕಿದ್ದಂತೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಅಮೃತಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆಯಲ್ಲಿ ನಟನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ನಟನಿಗೆ ಚಿಕಿತ್ಸೆ ನೀಡುತ್ತಿರುವ ಬಗ್ಗೆ ಅಧಿಕೃತ ಹೇಳಿಕೆಯನ್ನು ಆಸ್ಪತ್ರೆಯು ಬಿಡುಗಡೆ ಮಾಡಿದೆ. 64 ವರ್ಷದ ಮೋಹನ್ಲಾಲ್ ಅವರಿಗೆ ತೀವ್ರ ಜ್ವರ, ಮೈ-ಕೈ ನೋವು ಜೊತೆಗೆ ಉಸಿರಾಟದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ.
ಶೂಟಿಂಗ್ ಮುಗಿಸಿ ಕೊಚ್ಚಿಗೆ ಮೋಹನ್ಲಾಲ್ ಅವರು ವಾಪಸಾಗಿದ್ದರು. ಆಗ ಅವರಿಗೆ ಜ್ವರ ಕಾಣಿಸಿಕೊಂಡಿದೆ. ಸಮಸ್ಯೆ ತೀವ್ರವಾಗಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದು ಎಂದು ವರದಿಗಳು ಹೇಳಿವೆ. ಈ ಕುರಿತು ಮಾಹಿತಿ ನೀಡಿರುವ ಅಮೃತಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆ ಆಡಳಿತ ಮಂಡಳಿ, ‘65 ವರ್ಷ ವಯಸ್ಸಿನ ಮೋಹನ್ಲಾಲ್ ಅವರಿಗೆ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಮೋಹನ್ಲಾಲ್ ಅವರಿಗೆ ತೀವ್ರ ಜ್ವರ, ಉಸಿರಾಟದಲ್ಲಿ ಸಮಸ್ಯೆ ಮತ್ತು ಮಾಂಸಖಂಡಗಳಲ್ಲಿ ನೋವು ಇರುವುದಾಗಿ ತಿಳಿದು ಬಂದಿದೆ. ಮೋಹನ್ಲಾಲ್ ಅವರಿಗೆ ಶ್ವಾಸಕೋಶದ ಸೋಂಕು ಆಗಿರುವ ಅನುಮಾನ ಇದೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಐದು ದಿನಗಳ ಕಾಲ ಔಷಧಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಜನಸಂದಣಿ ಇರುವ ಸ್ಥಳಗಳಿಗೆ ಭೇಟಿ ನೀಡುವುದನ್ನು ತಪ್ಪಿಸಿ ಮತ್ತು ಐದು ದಿನಗಳ ಕಾಲ ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳುವಂತೆ ಹಾಗೂ ಐದು ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ಸೂಚಿಸಲಾಗಿದೆ’ ಎಂದಿದ್ದಾರೆ.
ದೀಪಿಕಾ ಪಡುಕೋಣೆ ಮಗುವಿನ ಹೆಸರು ರಿವೀಲ್? ಹೆಸರಿಗೆ ಪರ್ಮಿಷನ್ ಪಡೆದಿದ್ದಾರೆ ರಣವೀರ್ ಸಿಂಗ್!
ಮೋಹನ್ಲಾಲ್ ಕುರಿತು ಹೇಳುವುದಾದರೆ, ಕನ್ನಡ, ಹಿಂದಿ, ತಮಿಳು, ಮಲಯಾಳಂ, ಹೀಗೆ ಹಲವಾರು ಭಾಷೆಗಳಲ್ಲಿ ಅಭಿನಹಿಸಿ ಚಿತ್ರರಂಗದಲ್ಲಿ ಗುರುತಿಸಿ ಕೊಂಡಿದ್ದಾರೆ. ಅಮಿತಾಭ್ ಬಚ್ಚನ್, ರಾಜಕುಮಾರ್, ರಜನಿ ಕಾಂತ್, ಹೀಗೆ ಹಲವು ಚಿತ್ರರಂಗದ ನಟರ ಜೊತೆಯಲ್ಲಿ ಕೆಲಸ ಮಾಡಿದ್ದಾರೆ. 300 ಕ್ಕೂ ಹೆಚ್ಛು ಚಿತ್ರಗಳಲ್ಲಿ ನಾಯಕನಾಗಿ ಅಭಿನಯಿಸಿರುವುದು ಮಾತ್ರವಲ್ಲದೇ, ಇವರು ನಾಯಕನ ಜೊತೆ ನಿರ್ದೇಶಕ, ನಿರ್ಮಾಪಕರಾಗಿ ಅನೇಕ ಚಿತ್ರಗಳನ್ನೂ ನಿರ್ಮಿಸಿ ಹೆಸರು ಗಳಿಸಿದ್ದಾರೆ. ಮೋಹನ್ಲಾಲ್ ಇತ್ತೀಚೆಗಷ್ಟೆ ‘ಲುಸಿಫರ್ 2’ ಸಿನಿಮಾದ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಅಲ್ಲದೆ ಅವರ ಮೊದಲ ನಿರ್ದೇಶನದ ಸಿನಿಮಾ ‘ಬರೋಜ್’ ಸಿನಿಮಾದ ಚಿತ್ರೀಕರಣವನ್ನು ಸಹ ಇತ್ತೀಚೆಗೆ ಮುಗಿಸಿದ್ದು ‘ಬರೋಜ್’ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ನಲ್ಲಿ ಮೋಹನ್ಲಾಲ್ ತೊಡಗಿಕೊಂಡಿದ್ದಾರೆ. ‘ಬರೋಜ್’ ಸಿನಿಮಾ ಅಕ್ಟೋಬರ್ 2 ರಂದು ಬಿಡುಗಡೆ ಆಗಲಿದೆ. ‘ಬರೋಜ್’ ಸಿನಿಮಾದ ಬಳಿಕ ‘ಲುಸಿಫರ್ 2’ ಸಿನಿಮಾ ತೆರೆಗೆ ಬರಲಿದೆ.
ಇತ್ತೀಚೆಗೆ ನಟ ಮೋಹನ್ ಲಾಲ್ ಅವರು ಭೂಕುಸಿತ ಪೀಡಿತ ವಯನಾಡ್‌ಗೆ ತೆರಳಿ, ವಿಪತ್ತು ಪೀಡಿತ ಪ್ರದೇಶದಲ್ಲಿ ಪುನರ್ವಸತಿ ಕಾರ್ಯಕ್ಕಾಗಿ ರೂ.3 ಕೋಟಿ ಆರ್ಥಿಕ ನೆರವನ್ನು ಪ್ರಕಟಿಸಿದ್ದರು. ಭಾರತೀಯ ಟೆರಿಟೋರಿಯಲ್ ಆರ್ಮಿಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿರುವ ಅವರು, ಸೇನಾ ಸಮವಸ್ತ್ರದಲ್ಲಿ ಮೆಪ್ಪಾಡಿಯ ಸೇನಾ ಶಿಬಿರಕ್ಕೆ ಆಗಮಿಸಿದ ನಟ, ಅಧಿಕಾರಿಗಳೊಂದಿಗೆ ಕೆಲಹೊತ್ತು ಚರ್ಚೆ ನಡೆಸಿದರು. ಬಳಿಕ ಭೂಕುಸಿತ ಪೀಡಿತ ಪ್ರದೇಶಕ್ಕೆ ತೆರಳಿದರು. ಚೂರಲ್ಮಲಾ, ಮುಂಡಕ್ಕೈ ಮತ್ತು ಪುಂಚಿರಿಮಟ್ಟಂ ಮತ್ತಿತರ ಸ್ಥಳಗಳಿಗೆ ಭೇಟಿ ನೀಡಿ ಸೇನೆ ಮತ್ತು ಸ್ಥಳೀಯರು ಸೇರಿದಂತೆ ವಿವಿಧ ರಕ್ಷಣಾ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿ ಘಟನೆಯ ತೀವ್ರತೆಯ ಬಗ್ಗೆ ಮಾಹಿತಿ ಪಡೆದರು.
ಪ್ರಿಯಕರನ ನಂಬಿ ಗಂಡನ ಬಿಟ್ಟು ವೇಶ್ಯೆಯಾದ ನಟಿ! ರಸ್ತೆ ಬದಿ ಹೆಣವಾದ 'ಕನಸಿನ ರಾಣಿ'ಯ ಕರಾಳ ಕಥೆಯಿದು...