
ಇತ್ತೀಚೆಗೆ ನಟ ಮಮ್ಮುಟ್ಟಿ ಆರೋಗ್ಯದ ಬಗ್ಗೆ ಒಂದಷ್ಟು ವದಂತಿಗಳು ಹರಡಿತ್ತು. ಮಮ್ಮುಟ್ಟಿ ಆರೋಗ್ಯ ಚೆನ್ನಾಗಿಲ್ಲ, ಕ್ಯಾನ್ಸರ್ ಆಗಿದೆ ಎಂಬ ಮಾತುಗಳು ಹರಡಿತ್ತು. ಈ ಬಗ್ಗೆ ಮಮ್ಮುಟ್ಟಿ ಅವರ ಪಿಆರ್ ಟೀಂ, “ಆ ರೀತಿ ಇಲ್ಲ, ಶುಧ್ಧ ಸುಳ್ಳು” ಎಂದು ಅಧಿಕೃತ ಹೇಳಿಕೆ ನೀಡಿದೆ.
ಮಮ್ಮುಟ್ಟಿ ಆರೋಗ್ಯದ ಬಗ್ಗೆ ಸ್ಪಷ್ಟನೆ!
73 ವರ್ಷದ ನಟ ಮಮ್ಮುಟ್ಟಿಗೆ ಕ್ಯಾನ್ಸರ್ ಆಗಿದೆ, ಹೀಗಾಗಿ ಅವರು ಸಿನಿಮಾ ಶೂಟಿಂಗ್‌ನಿಂದ ದೂರ ಇದ್ದಾರೆ, ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದಾರೆ ಎಂಬ ಪೋಸ್ಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇವೆಲ್ಲವೂ ಶುದ್ಧ ಸುಳ್ಳು, ಆಧಾರರಹಿತ, ಮಮ್ಮುಟ್ಟಿ ಅವರು ಆರೋಗ್ಯವಾಗಿದ್ದಾರೆ ಎಂದು ಪಿಆರ್ ಟೀಂ ಹೇಳಿದೆ. ರಂಜಾನ್ ಉಪವಾಸದ ಕಾರಣ ಅವರು ಸಿನಿಮಾ ಶೂಟಿಂಗ್‌ನಿಂದ ಬ್ರೇಕ್ ತಗೊಂಡಿದ್ದಾರೆ.
“ಇದು ಸುಳ್ಳು. ರಂಜಾನ್ ಇರೋದಿಕ್ಕೆ ಅವರು ಹಾಲಿಡೇಯಲ್ಲಿದ್ದಾರೆ ಅಷ್ಟೇ. ರಂಜಾನ್ ಮುಗಿಯುತ್ತಿದ್ದಂತೆ ಅವರು ಶೂಟಿಂಗ್‌ಗೆ ಮರಳುತ್ತಾರೆ. ಮೋಹನ್‌ಲಾಲ್, ಮಹೇಶ್ ನಾರಾಯಣ್ ಜೊತೆಗಿನ ಸಿನಿಮಾ ಶೂಟಿಂಗ್‌ನಲ್ಲಿ ಅವರು ಭಾಗಿಯಾಗ್ತಾರೆ” ಎಂದು ಪಿಆರ್ ಟೀಂ ಹೇಳಿದೆ.
ದುಲ್ಕರ್ ಸಲ್ಮಾನ್‌ಗೆ ಈ ನಟಿಯೊಂದಿಗೆ ಮತ್ತೊಮ್ಮೆ ನಟಿಸುವ ಆಸೆ! ಅಭಿಮಾನಿಗಳ ಮಹದಾಸೆಯೂ ಇದೇ!
ದೊಡ್ಡ ತಾರಾಗಣವಿರುವ ಸಿನಿಮಾ!
ಹದಿನಾರು ವರ್ಷಗಳ ಹಿಂದೆ ʼ20’ ಸಿನಿಮಾದಲ್ಲಿ ಮಮ್ಮುಟ್ಟಿ, ಮೋಹನ್‌ಲಾಲ್ ಅವರು ನಟಿಸಿದ್ದರು. ಇದಾದ ಬಳಿಕ ಈ ಜೋಡಿ ಮತ್ತೆ ಒಟ್ಟಿಗೆ ನಟಿಸುತ್ತಿದೆ. ಈ ಸಿನಿಮಾದಲ್ಲಿ ನಯನತಾರಾ ಅವರು ನಟಿಸಲಿದ್ದಾರೆ ಎಂಬ ಮಾತು ಕೂಡ ಶುರುವಾಗಿದೆ. ಫಹಾದ್ ಫಾಸಿಲ್, ಕುಂಚಕೋ ಬೋಬನ್ ಅವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಶ್ರೀಲಂಕಾದಲ್ಲಿ ಈ ಸಿನಿಮಾ ಮುಹೂರ್ತ, ಪೂಜೆ ಮುಗಿದಿದೆ. ಮೋಹನ್‌ಲಾಲ್, ಮಮ್ಮುಟ್ಟಿ ಅವರು ಈ ಪೂಜೆಯಲ್ಲಿ ಭಾಗಿಯಾಗಿದ್ದಾರೆ. 150 ದಿನಗಳ ಶೆಡ್ಯೂಲ್‌ನಲ್ಲಿ ಶ್ರೀಲಂಕಾ, ಲಂಡನ್, ದುಬೈ, ಥೈಲ್ಯಾಂಡ್, ವಿಶಾಖಪಟ್ಟಣಂ, ಹೈದರಾಬಾದ್, ದೆಹಲಿ, ಕೋಚಿಯಲ್ಲಿ ಸಿನಿಮಾ ಶೂಟಿಂಗ್ ನಡೆಯಲಿದೆಯಂತೆ.
ಕೇರಳದ ಚಿತ್ರೋತ್ಸವದಲ್ಲಿ ಸ್ಟಾರ್‌ಗಳು ಭಾಗವಹಿಸುತ್ತಾರೆ: ಮಲಯಾಳಂ ನಿರ್ದೇಶಕ ಸಜೀನ್ ಬಾಬು
ನಲವತ್ತೈದು ವರ್ಷಗಳ ಸಿನಿ ಪಯಣ
1980ರಲ್ಲಿ ಮಮ್ಮುಟ್ಟಿ ಅವರು Vilkkanundu Swapnangal ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟರು. ಇದಕ್ಕೂ ಮುನ್ನ 1970ರಲ್ಲಿ ಇವರು ಎರಡು ಸಿನಿಮಾದಲ್ಲಿ ನಟಿಸಿದ್ದರೂ ಕೂಡ ಯಾರೂ ಗುರುತಿಸಲೇ ಇಲ್ಲ. 1987ರ ಹೊತ್ತಿಗೆ ಇವರಿಗೆ ಭರ್ಜರಿ ಯಶಸ್ಸು ಸಿಕ್ಕಿತ್ತು. ಮೋಹನ್‌ಲಾಲ್ ಜೊತೆಗೆ ಮಮ್ಮುಟ್ಟಿ ಕೂಡ ಸ್ಟಾರ್ ನಟರಾಗಿ ಮೆರೆದರು. ನಲವತ್ತೈದು ವರ್ಷಗಳಿಂದ ಇವರು ಚಿತ್ರರಂಗದಲ್ಲಿದ್ದು, ಮೂರು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.