ಮಲೈಕಾ ಅರೋರಾ ಅರ್ಜುನ್ ಕಪೂರ್ ಜೊತೆ ಡೇಟಿಂಗ್‌ನಲ್ಲಿ ಇರುವಾಗಲೇ ಮದ್ವೆ ಯಾವಾಗ, ಹುಡುಗ ಯಾರು ಎಂದು ಮಗ ಪ್ರಶ್ನಿಸಿದ್ದಾನೆ. ನಟಿ ಹೇಳಿದ್ದೇನು?
ಬಾಲಿವುಡ್ ಹಸಿಬಿಸಿ ಲೇಡಿ ಮಲೈಕಾ ಅರೋರಾ (Malaika Arora) ಮತ್ತು ಅರ್ಬಾಜ್ ಖಾನ್ ಅವರನ್ನು ಹಿಂದಿನ ದಿನದ ಹಾಟೆಸ್ಟ್ ಜೋಡಿಗಳಲ್ಲಿ ಒಂದು ಎಂದೇ ಕರೆಯಲಾಗುತ್ತಿತ್ತು. ಆದರೆ ಅವರು ಬೇರ್ಪಟ್ಟು ಹಲವು ವರ್ಷಗಳೇ ಕಳೆದಿವೆ. 2017ರಲ್ಲಿ ಈ ಜೋಡಿ ಬೇರ್ಪಟ್ಟಿದೆ. ಮಲೈಕಾ ಅರೋರಾಗೆ ಈಗ 49 ವರ್ಷ ವಯಸ್ಸು. ಅರ್ಬಾಜ್ ಖಾನ್ ಜೊತೆ ಬೇರ್ಪಟ್ಟ ಬಳಿಕ 12 ವರ್ಷ ಚಿಕ್ಕವಾಗಿರುವ ನಟ ಅರ್ಜುನ್ ಕಪೂರ್ (Arjun Kapoor) ಜೊತೆ ಕೆಲ ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಮಲೈಕಾ. ಮಲೈಕಾ ಅರ್ಜುನ್ ಕಪೂರ್ ಜೊತೆ ಡೇಟಿಂಗ್ನಲ್ಲಿದ್ದರೂ ಮಗನಿಗಾಗಿ ಆಗಾಗ್ಗೆ ಅರ್ಬಾಜ್ ಖಾನ್ರನ್ನು ಭೇಟಿಯಾಗುವುದು, ತಬ್ಬಿಕೊಳ್ಳುವುದು ನಡೆದಿದ್ದು, ಇವುಗಳ ವಿಡಿಯೋಗಳೂ ವೈರಲ್ ಆಗುತ್ತಲೇ ಇರುತ್ತವೆ. ಮಲೈಕಾ ಏನೋ ಅರ್ಜುನ್ ಕಪೂರ್ ಜೊತೆ ಹಲವು ವರ್ಷಗಳಿಂದ ಸಂಬಂಧದಲ್ಲಿದ್ದಾರೆ. ಆದರೆ ಅದೇ ಇನ್ನೊಂದೆಡೆ ಅರ್ಬಾಜ್ ಖಾನ್ ಕೆಲ ತಿಂಗಳ ಹಿಂದೆ ತಮ್ಮ ಅರ್ಧ ವಯಸ್ಸಿನ ಯುವತಿ ಶುರಾ ಜೊತೆ ಮದುವೆಯಾಗಿ ಸಂಸಾರ ನಡೆಸುತ್ತಿದ್ದಾರೆ.
ಇದೀಗ, ಮಲೈಕಾ ಅರೋರಾ ಮತ್ತು ಅಬಾಜ್ ಖಾನ್ ಜೊತೆ ಇವರಿಗೆ ಹುಟ್ಟಿದ ಮಗ ಅರ್ಹಾನ್ ಖಾನ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಸೌಂಡ್ ಮಾಡುತ್ತಿದೆ. ಅದೇನೆಂದರೆ, ಅರ್ಹಾನ್ ಖಾನ್ ಪಾಡ್ಕಾಸ್ಟ್ ದಮ್ ಬಿರಿಯಾನಿ ಆರಂಭಿಸಿದ್ದು, ಅದಕ್ಕೆ ಅಮ್ಮ ಮಲೈಕಾರನ್ನು ಗೆಸ್ಟ್ ಆಗಿ ಕರೆಸಿದ್ದರು. ಈ ಪಾಡ್‌ಕಾಸ್ಟ್‌ನಲ್ಲಿ ಅಮ್ಮ-ಮಗನ ನಡುವೆ ಹಲವಾರು ವಿಷಯಗಳ ಮಾತುಕತೆ ನಡೆದಿದೆ. ಅದರಲ್ಲಿ ಮಗ ಓಪನ್ ಆಗಿ ಅಮ್ಮನಿಗೆ ನಿಮ್ಮ ಮದುವೆ ಯಾವಾಗ ಎಂದು ಕೇಳಿದ್ದಾರೆ. ಅಷ್ಟೇ ಅಲ್ಲದೇ ದಿನಾಂಕ, ಸ್ಥಳ ಮತ್ತು ಯಾರ ಜೊತೆ ಎಂದೆಲ್ಲಾ ಕೇಳಿದ್ದಾರೆ.
21 ವರ್ಷದ ಪುತ್ರಂಗೆ ಓಪನ್ನಾಗಿ ಸೆಕ್ಸ್ ಬಗ್ಗೆ ಕೇಳೋದಾ ಮಲೈಕಾ? ಅರ್ಹಾನ್ ತಿರುಗಿ ಹೇಳಿದ್ದೇನು?
ಇದಕ್ಕೆ ಕೂಡಲೇ ಮಲೈಕಾ, ಸದ್ಯಕ್ಕೆ ಆ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಿಲ್ಲ ಮತ್ತು ಬದಲಿಗೆ ಮೆಣಸಿನಕಾಯಿ ಬೇಕಾದ್ರೆ ತಿನ್ನುತ್ತೇನೆ ಎನ್ನುವ ಹಾರಿಕೆ ಉತ್ತರ ಕೊಟ್ಟಿದ್ದಾರೆ. ನಾನು ಈಗ ನನ್ನ ಅತ್ಯುತ್ತಮ ಜೀವನವನ್ನು ನಡೆಸುತ್ತಿದ್ದೇನೆ. ನಿನ್ನ ಪ್ರಶ್ನೆಗೆ ಉತ್ತರಿಸಲಾರೆ ಎಂದಿದ್ದಾರೆ. ಮಗ ಇಷ್ಟು ಓಪನ್ ಆಗಿ ಪ್ರಶ್ನೆ ಕೇಳಿರುವುದಕ್ಕೆ ಥಹರೇವಾರಿ ಕಮೆಂಟ್ಸ್ ಸುರಿಮಳೆಯಾಗುತ್ತಿದೆ.
ಅದೇ ಪಾಡ್‌ಕಾಸ್ಟ್‌ನಲ್ಲಿ ಮಲೈಕಾ, 21 ವರ್ಷದ ಮಗನಿಗೆ ಮೊದಲ ಬಾರಿಗೆ ನೀನು ಯಾವಾಗ ಸೆಕ್ಸ್‌ನಲ್ಲಿ ತೊಡಗಿಕೊಂಡೆ ಎಂದು ಪ್ರಶ್ನೆ ಮಾಡಿದ್ದಾರೆ. ಈ ಮೂಲಕ ನೀನು ಯಾವಾಗ ವರ್ಜಿನಿಟಿ ಕಳೆದುಕೊಂಡೆ ಎಂದು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಮೊದಲು ಅರ್ಹಾನ್ ಮೌನ ತಾಳಿದ್ದಾನೆ. ನಂತರ, ಇದರ ಬಗ್ಗೆ ಉತ್ತರಿಸಿದ ಅರ್ಹಾನ್, ತಾಯಿಗೇ ಉಲ್ಟಾ ಪ್ರಶ್ನಿಸಿ ನೀವು ಯಾವಾಗ ಮದುವೆ ಆಗ್ತೀರಾ ಎಂದಿದ್ದಾರೆ. 21 ವರ್ಷದ ಮಗನಿಗೆ ತಾಯೊಯೊಬ್ಬಳು ಇಂಥ ಪ್ರಶ್ನೆ ಕೇಳೋದಾ ಎನ್ನುತ್ತಿದ್ದಾರೆ. ಈ ಚಿತ್ರತಾರೆಯರಿಗೆ ಸಂಬಂಧಕ್ಕಂತೂ ಬೆಲೆನೇ ಇಲ್ಲ. ದುಡ್ಡಿಗಾಗಿ ಯಾರ ಜೊತೆ ಏನು ಬೇಕಾದ್ರೂ ಮಾಡಲು ಸಿದ್ಧ. ಕೊನೆ ಪಕ್ಷ ತಾಯಿ-ಮಗನ ಪವಿತ್ರ ಸಂಬಂಧಕ್ಕಾದರೂ ಬೆಲೆ ಕೊಡಿ. ಹೀಗೆ ಪಬ್ಲಿಕ್ ಆಗಿ ಇಂಥ ಪ್ರಶ್ನೆ ಮಾಡುತ್ತಾ ಹೆಮ್ಮೆಯ ವಿಷಯ ಎಂಬಂತೆ ಬಿಂಬಿಸುವುದು ಎಷ್ಟು ಸರಿ ಎಂದು ಪ್ರಶ್ನಿಸುತ್ತಿದ್ದಾರೆ.
ಮಲೈಕಾ ಅರೋರಾ ಹೊಟೆಲ್‌ನಲ್ಲಿ ಡ್ರೆಸ್ ಸರಿಪಡಿಸಿಕೊಳ್ತಿರೋ ಖಾಸಗಿ ವಿಡಿಯೋ ಲೀಕ್: ಫ್ಯಾನ್ಸ್ ಗರಂ