ಪ್ರಾಣ ಸ್ನೇಹಿತೆಗೆ ದ್ರೋಹ ಬಗೆದು ಆಕೆಯ ಗಂಡನಿಂದಲೇ ಗರ್ಭಿಣಿಯಾದ ಖ್ಯಾತ ನಟಿ; ಮುಂದೇನಾಯ್ತು?

Published : Dec 26, 2025, 12:04 PM IST
Amrita Arora

ಸಾರಾಂಶ

ತನ್ನ ಕ್ಲೋಸ್ ಫ್ರೆಂಡ್ ಪತ್ನಿಯನ್ನೇ ವಿವಾಹವಾಗಿ ಆಕೆಯ ಸಂಸಾರದಲ್ಲಿ ಡಿವೋರ್ಸ್‌ ಆಗಲು ಕಾರಣವಾದವರು ಈ ನಟಿ ಎಂಬ ಅಪವಾದ ಆಕೆಯ ಮೇಲೆ ಶಾಶ್ವತವಾಗಿ ಉಳಿಯಿತು. ಸಿನಿಮಾರಂಗದಲ್ಲಿ ನಟಿಯಾಗಿ ಸದ್ದು ಮಾಡಿದ್ದಕ್ಕಿಂತ ಹೆಚ್ಚಾಗಿ ಇವರು ತಮ್ಮ ವೈಯಕ್ತಿಕ ಜೀವನದಿಂದಲೇ ಸುದ್ದಿಯಾದರು. ಈ ಸ್ಟೋರಿ ನೋಡಿ..

ಸ್ನೇಹಿತೆಯ ಪತಿಯನ್ನೇ ಪಟಾಯಿಸಿದ ಈ ನಟಿ!

ಈ ನಟಿ ಪಾಕಿಸ್ತಾನಿ ಕ್ರಿಕೆಟಿಗನೊಂದಿಗೆ ಸಂಬಂಧ ಹೊಂದಿದ್ದರು.. ಕೆಲವು ವರ್ಷಗಳ ನಂತರ ಅವರು ಆ ಸಂಬಂಧಕ್ಕೆ ವಿದಾಯ ಹೇಳಿದರು.. ಬಳಿಕ ತನ್ನ ಆಪ್ತ ಸ್ನೇಹಿತೆಯ ಪತಿಯೊಂದಿಗೆ ಸಂಬಂಧ ಹೊಂದಿ, ಆತನಿಂದಲೇ ಗರ್ಭಿಣಿಯಾಗಿ ಕೊನೆಗೆ ಅವರನ್ನೇ ಮದುವೆಯಾದರು. ಈ ಮದುವೆಯಿಂದ ಶಾಶ್ವತವಾಗಿ ಆಕೆಯ ಸ್ನೇಹಿತೆ ಈ ನಟಿಯಿಂದ ದೂರವಾದಳು. ಆಕೆಯ ಕಥೆ ರೋಚಕ ಹಾಗೂ ಬಹಳಷ್ಟು ಕುತೂಹಲಕರಾರಿ..!

ಹೌದು, ಪಾಕಿಸ್ತಾನಿ ಕ್ರಿಕೆಟಿಗನೊಂದಿಗೆ ಸಂಬಂಧ ಹೊಂದಿ, ನಂತರ ತನ್ನ ಸ್ನೇಹಿತೆಯ ಪತಿಯೊಂದಿಗೂ ಸಂಬಂಧ ಬೆಳೆಸಿಕೊಂಡು, ಕೊನೆಗೆ ಅವರನ್ನೇ ಮದುವೆಯಾದ ಈ ನಾಯಕಿ ಬೇರೆ ಯಾರೂ ಅಲ್ಲ, ಒಂದು ಕಾಲದ ಜನಪ್ರಿಯ ನಟಿ ಅಮೃತಾ ಅರೋರಾ (Amrita arora). 1981 ರಲ್ಲಿ ಜನಿಸಿದ ಈ ನಟಿ ತಮ್ಮ ಅಕ್ಕ ಮಲೈಕಾ (Malaika Arora) ಅವರಂತೆಯೇ ವೀಡಿಯೊ ಜಾಕಿ (ವಿಜೆ) ಆಗಿ ತಮ್ಮ ಸಿನಿಮಾ ವೃತ್ತಿಜೀವನವನ್ನು ಪ್ರಾರಂಭಿಸಿದರು. ಬಳಿಕ ಅವರು ಬಾಲಿವುಡ್ ಸಿನಿಮಾರಂಗಕ್ಕೆ ಬಂದರು.

'ಕಿಡ್ನಿ ದೂರ್ ಕಿಡ್ನಿ ಪಾಸ್' ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಪ್ರವೇಶ 

ಅಮೃತಾ 2002 ರಲ್ಲಿ ಬಿಡುಗಡೆಯಾದ 'ಕಿಡ್ನಿ ದೂರ್ ಕಿಡ್ನಿ ಪಾಸ್' ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಪ್ರವೇಶಿಸಿದರು. ಈ ಚಿತ್ರವು ನಿರೀಕ್ಷಿತ ಮಟ್ಟದಲ್ಲಿ ಪ್ರಭಾವ ಬೀರಲಿಲ್ಲ, ಆದರೆ ಅಮೃತಾ ಅರೋರಾ ತಮ್ಮ ಪ್ರಯತ್ನ ಬಿಡಲಿಲ್ಲ. ಅಂದಿನ ಮಾಧ್ಯಮಗಳು ವರದಿ ಮಾಡಿದ್ದ ಪ್ರಕಾರ, ನಟಿ ಗರ್ಭಿಣಿಯಾದ ನಂತರ ವಿವಾಹವಾದರು.

ಅಂದು ಫ್ಯಾಷನ್ ಐಕಾನ್ ಎಂದೇ ಹೆಸರಾಗಿದ್ದ ಮಲೈಕಾ ಅರೋರಾ ಪ್ರತಿಯೊಬ್ಬ ಬಾಲಿವುಡ್ ಅಭಿಮಾನಿಗೂ ಪರಿಚಿತರು. ಅವರು ಅರ್ಬಾಜ್ ಖಾನ್ ಅವರನ್ನು ವಿವಾಹವಾದರು. ಆದರೆ ಈ ದಂಪತಿಗಳು ಹಲವು ವರ್ಷಗಳ ಮದುವೆಯ ನಂತರ ವಿಚ್ಛೇದನ ಪಡೆದರು. ಈಗ ಹೇಳುತ್ತಿರುವ ನಟಿ ಅಮೃತಾ ಅರೋರಾ ಅವರು ಈ ಮಲೈಕಾ ಅರೋರಾ ಅವರ ಸಹೋದರಿ. ಅಮೃತಾ ಅನೇಕ ಚಿತ್ರಗಳಲ್ಲಿ ನಾಯಕಿಯರಾಗಿ ಮತ್ತು ಪ್ರಮುಖ ಪಾತ್ರಗಳಲ್ಲಿ ನಟಿಸುವ ಮೂಲಕ ಸ್ವಲ್ಪ ಮಟ್ಟಿಗೆ ಭರವಸೆ ಮೂಡಿಸಿದ್ದರು. ಆದರೂ ಅವರು ತಮ್ಮ ವೃತ್ತಿಜೀವನದಲ್ಲಿ ಸ್ಟಾರ್ ನಟಿಯಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಇಂಗ್ಲಿಷ್ ಕ್ರಿಕೆಟಿಗ ಉಸ್ಮಾನ್ ಅಫೈಲ್ ಜೊತೆ ಸಂಬಂಧ

2004 ರಲ್ಲಿ, ಅಮೃತಾ ಅರೋರಾ ಪಾಕಿಸ್ತಾನದಲ್ಲಿ ವಾಸಿಸುವ ಇಂಗ್ಲಿಷ್ ಕ್ರಿಕೆಟಿಗ ಉಸ್ಮಾನ್ ಅಫೈಲ್ ಜೊತೆ ಸಂಬಂಧ ಹೊಂದಿದ್ದಾರೆ ಎಂಬ ಗಾಸಿಪ್ ಹಬ್ಬಿತ್ತು. ಉಸ್ಮಾನ್ ಕ್ರಿಕೆಟ್ ಪಂದ್ಯ ಆಡಲು ಭಾರತಕ್ಕೆ ಬಂದಾಗ, ಅವರು ಅಮೃತಾಳನ್ನು ಭೇಟಿಯಾದರು. ಅಂದಿನಿಂದ ಈ ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದರು ಎಂಬ ಸುದ್ದಿ ಆ ಸಮಯದಲ್ಲಿ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಇದಲ್ಲದೆ, ಸಂದರ್ಶನವೊಂದರಲ್ಲಿ ಮಾತನಾಡಿದ ಅಮೃತಾ, ಉಸ್ಮಾನ್ ಅವರನ್ನು ತಾವು ಪ್ರೀತಿಸುತ್ತಿರುವುದಾಗಿ ಒಪ್ಪಿಕೊಂಡರು. ಕೆಲವು ವರ್ಷಗಳ ನಂತರ, ಈ ನಟಿ 2009ರಲ್ಲಿ ಉದ್ಯಮಿ ಶಕೀಲ್ ಲಡಕ್ ಅವರನ್ನು ವಿವಾಹವಾದರು. ಶಕೀಲ್ ಅಮೃತಾ ಸ್ನೇಹಿತೆಯ ಪತಿ, ಆದರೆ ನಂತರ ಅವರು ಬೇರ್ಪಟ್ಟರು.

ವಿಚ್ಛೇದನದ ನಂತರ, ಶಕೀಲ್ ಲಡಕ್ ಪತ್ನಿಯಾಗಿದ್ದ ನಿಶಾ ನಟಿ ಅಮೃತಾ ವಿರುದ್ಧ ಹಲವಾರು ಆರೋಪಗಳನ್ನು ಮಾಡಿದರು. ಶಕೀಲ್ ಜೊತೆಗಿನ ತಮ್ಮ ವೈವಾಹಿಕ ಸಂಬಂಧದಲ್ಲಿ ಉದ್ಭವಿಸಿದ ಸಮಸ್ಯೆಗಳಿಗೆ ಅಮೃತಾ ಕಾರಣ ಎಂದು ಅವರು ಆರೋಪಿಸಿದ್ದರು. ಅಮೃತಾ ಮತ್ತು ಶಕೀಲ್ ಮೂರು ಧರ್ಮಗಳ ಪದ್ಧತಿಗಳ ಪ್ರಕಾರ ವಿವಾಹವಾದರು. ಅಮೃತಾ ಅರೋರಾ ಮತ್ತು ಶಕೀಲ್ ಲಡಕ್ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಅಮೃತಾ ಮತ್ತು ಶಕೀಲ್ ನಡುವಿನ ಸ್ನೇಹ 2005 ರಲ್ಲಿ ಪ್ರಾರಂಭವಾಯಿತು. ಬಳಿಕ, ಶಕೀಲ್ ಮೊದಲ ಸಂಸಾರದಲ್ಲಿ ಸಮಸ್ಯೆಗಳು ಪ್ರಾರಂಭವಾದವು. ಶಕೀಲ್ 2008 ರಲ್ಲಿ ತನ್ನ ಪತ್ನಿ ನಿಶಾಳನ್ನು ವಿಚ್ಛೇದನ ಮಾಡಿ, ನಂತರ ಅಮೃತಾಳನ್ನು ಮದುವೆಯಾದರು.

ಹೀಗೆ, ತನ್ನ ಕ್ಲೋಸ್ ಫ್ರೆಂಡ್ ಪತ್ನಿಯನ್ನೇ ವಿವಾಹವಾಗಿ ಆಕೆಯ ಸಂಸಾರದಲ್ಲಿ ಡಿವೋರ್ಸ್‌ ಆಗಲು ಕಾರಣವಾದ ನಟಿ ಅಮೃತಾ ಸಿಂಗ್ ಎಂಬ ಅಪವಾದ ಆಕೆಯ ಮೇಲೆ ಶಾಶ್ವತವಾಗಿ ಉಳಿಯಿತು. ಸಿನಿಮಾರಂಗದಲ್ಲಿ ನಟಿಯಾಗಿ ಸದ್ದು ಮಾಡಿದ್ದಕ್ಕಿಂತ ಹೆಚ್ಚಾಗಿ ಈ ಅಮೃತಾ ಅರೋರಾ ಅವರು ತಮ್ಮ ವೈಯಕ್ತಿಕ ಜೀವನದಿಂದಲೇ ಸುದ್ದಿಯಾದರು. ಇದು, ಸ್ನೇಹಿತೆಯ ಗಂಡನಿಂದ ಪ್ರೆಗ್ನಂಟ್ ಆಗಿ ಆಕೆಯ ಸಂಸಾರವನ್ನೇ ಹಾಳು ಮಾಡಿದ ಬಾಲಿವುಡ್ ನಟಿಯೊಬ್ಬರ ಕರಾಳ ಕಥೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸೈಲೆಂಟ್ ಆಗಿ OTTಯಲ್ಲಿ ರಿಲೀಸ್ ಆದ ಬಾಹುಬಲಿ ದಿ ಎಪಿಕ್ ಸಿನಿಮಾ.. ಯಾವುದರಲ್ಲಿ ಸ್ಟ್ರೀಮಿಂಗ್ ಆಗ್ತಿದೆ ಗೊತ್ತಾ?
ರಾಜ್ ಹೆಸರನ್ನು ಸಮಂತಾ ಬಲಗೈ ಮಧ್ಯದ ಬೆರಳಿನಲ್ಲಿ ಅಡಗಿಸಿಟ್ಟ ರಹಸ್ಯವೇನು? ನಟಿಯ ಗುಟ್ಟು ರಟ್ಟಾಯ್ತು!