ನಾನು ತುಂಬಾ ರೊಮ್ಯಾಂಟಿಕ್; ಅರ್ಜುನ್ ಕಪೂರ್ ಸಂಬಂಧದ ಬಗ್ಗೆ ಮೊದಲ ಬಾರಿಗೆ ಮೌನ ಮುರಿದ ಮಲೈಕಾ

Published : Dec 06, 2022, 01:15 PM IST
ನಾನು ತುಂಬಾ ರೊಮ್ಯಾಂಟಿಕ್; ಅರ್ಜುನ್ ಕಪೂರ್ ಸಂಬಂಧದ ಬಗ್ಗೆ ಮೊದಲ ಬಾರಿಗೆ ಮೌನ ಮುರಿದ ಮಲೈಕಾ

ಸಾರಾಂಶ

ಮಲೈಕಾ ಅರೋರಾ ಮೊದಲ ಬಾರಿಗೆ ಅರ್ಜುನ್ ಕಪೂರ್ ಜೊತೆಗೆ ಮದುವೆ ಮತ್ತು ಮಕ್ಕಳನ್ನು ಪಡೆಯುವ ಬಗ್ಗೆ ಮಾತನಾಡಿದ್ದಾರೆ. 

ಬಾಲಿವುಡ್ ಹಾಟ್ ನಟಿ, ಅದ್ಭುತ ಡಾನ್ಸರ್ ಮಲೈಕಾ ಅರೋರಾ ಸದ್ಯ ಹೊಸ ರಿಯಾಲಿಟಿ ಶೋನಲ್ಲಿ ಬ್ಯುಸಿಯಾಗಿದ್ದಾರೆ. ಒಟಿಟಿಯಲ್ಲಿ ಪ್ರಸಾರವಾಗಲಿರುವ ಮಲೈಕಾ ಹೊಸ ರಿಯಾಲಿಟಿ ಶೋ 'ಮೂವಿಂಗ್ ಇನ್ ವಿತ್ ಮಲೈಕಾ' ಶೋ ನಡೆಸಿಕೊಡುತ್ತಿದ್ದಾರೆ. ಈ ಶೋನ ಉದ್ಘಾಟನೆ ಸಂಚಿಕೆಯಲ್ಲಿ ಮಲೈಕಾ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಮಾಜಿ ಪತಿ ಅರ್ಬಾಜ್ ಖಾನ್ ಜೊತೆನ ಪ್ರೀತಿ, ವಿಚ್ಛೇದನ ಮತ್ತು ಅರ್ಜುನ್ ಕಪೂರ್ ಜೊತೆಗಿನ ಸಂಬಂಧದ ಬಗ್ಗೆ ಮಾತನಾಡಿದ್ದಾರೆ.  ಮೊದಲ ಬಾರಿಗೆ ಮಲೈಕಾ ಅರ್ಜುನ್ ಜೊತೆಗಿನ ಸಂಬಂಧದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಬಾಲಿವುಡ್ ನಿರ್ದೇಶಕಿ ಫರ್ಹಾ ಖಾನ್ ಜೊತೆಗಿನ ಸಂದರ್ಶನದಲ್ಲಿ ಮಲೈಕಾ ತನ್ನ ಲೈಫ್ ಬಗ್ಗೆ ಅನೇಕ ವಿಚಾರಗಳನ್ನು ಬಹಿರಂಗ ಪಡಿಸಿದರು. 

ಸದ್ಯ ಬಾಲಿವುಡ್ ನಲ್ಲಿ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಮದುವೆ ಮತ್ತು ಮಗು ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಈ ಬಗ್ಗೆ ಮಲೈಕಾ ಮತನಾಡಿದ್ದಾರೆ. ನನಗೆ ಭವಿಷ್ಯ ಏನೆಂದು ನನ್ನ ಕೈಯಲ್ಲಿ ಇಲ್ಲ ಎಂದರು ಹೇಳಿದರು. ಬಳಿಕ ಈ ಎಲ್ಲಾ ವಿಚಾರಗಳ ಬಗ್ಗೆ ಆಗಲೇ ಅರ್ಜುನ್ ಕಪೂರ್ ಜೊತೆ ಮಾತನಾಡಿರುವುದಾಗಿ ಹೇಳಿದರು. ಎಲ್ಲಾ ವಿಚಾರಗನ್ನು ನೀವು ನಿಮ್ಮ ಸಂಗಾತಿ ಜೊತೆ ಚರ್ಚೆ ಮಾಡುವ ವಿಷಯವಾಗಿದೆ ಎಂದರು. ಅರ್ಜುನ್ ಕಪೂರ್ ಮೇಲಿನ ಪ್ರೀತಿ ಮತ್ತು ಹೊಗಳಲು ಮಲೈಕಾ ಹಿಂಜರಿಕೆ ಮಾಡಿಕೊಂಡಿಲ್ಲ. 'ಅವರು ತುಂಬಾ ಒಳ್ಳೆಯ ಪಾರ್ಟನರ್. ನನ್ನ ಸ್ನೇಹಿತ ಮತ್ತು ವಿಮರ್ಶಕ' ಎಂದು ಮಲೈಕಾ ವಿವರಸಿದರು.  

ನಾನು ಈಗಾಗಲೇ ಒಮ್ಮೆ ವಿಚ್ಛೇದನ ಪಡೆದಿದ್ದೀನಿ ಅಂತ ನನಗೆ ಅಭದ್ರತೆಯ ಭಯವಿಲ್ಲ. ನಾನು ಅನುಭವಿಸಲು ಬಹಳಷ್ಟು ಇದೆ ಮತ್ತು ನಾನು ಉತ್ತಮ ವ್ಯಕ್ತಿಯ ಜೊತೆ ಸಂಬಂಧ ಹೊಂದಿದ್ದೇನೆ ಎಂದು ನಾನು ಭಾವಿಸುತ್ತೇನೆ. ನಾನು ಯಾವುದೇ ನಿರ್ಧಾರ ಅಥವಾ ಆಯ್ಕೆ ಮಾಡಿಕೊಂಡರೂ ಅದನ್ನೂ ನಾನು ಪರಿಪೂರ್ಣವಾಗಿ ಮಾಡಿದ್ದೇನೆ. ದಿನದ ಕೊನೆಯಲ್ಲಿ ನನ್ನ ಜೀವನದಲ್ಲಿ ಈ ವ್ಯಕ್ತಿ ನನಗೆ ತುಂಬಾ ಸಂತೋಷ ನೀಡುತ್ತಾನೆ' ಎಂದು ಹೇಳಿದರು. 

ಮೊದಲು ಪ್ರಪೋಸ್ ಮಾಡಿದ್ದೇ ನಾನು; ಮಾಜಿ ಪತಿ ಅರ್ಬಾಜ್ ಜೊತೆಗಿನ ಪ್ರೀತಿ ವಿಚಾರ ಬಿಚ್ಚಿಟ್ಟ ಮಲೈಕಾ

'ನಾನು ತುಂಬಾ ರೊಮ್ಯಾಂಟಿಕ್. ನನ್ನ ಸಂಗಾತಿಯನ್ನು ಸಂತೋಷ ಪಡಿಸಲು ಬಯಸುತ್ತೇನೆ. ಆಗ ಇಬ್ಬರೂ ಸಂತೋಷವಾಗಿ ಇರಬಹುದು. ಆಗ ನಾವು ಒಟ್ಟಿಗೆ ಬೆಳವಣಿಗೆ ಕಾಣಬಹುದು ಮತ್ತು ಜೀವನ ಆನಂದಿಸಬಹುದು' ಎಂದು ಮಲೈಕಾ ಹೇಳಿದ್ದಾರೆ. ಆದರೆ ಅರ್ಜುನ್ ಕಪೂರ್ ಅವರನ್ನು ಮದುವೆಯಾಗುವ ಬಗ್ಗೆ ಮಲೈಕಾ ಹೇಳಿಲ್ಲ. 

ಅರ್ಬಾಜ್ ಖಾನ್‌ ಜೊತೆ ವಿಚ್ಛೇದನದ ಬಗ್ಗೆ ಮಾತನಾಡಿ ಕಣ್ಣೀರಿಟ್ಟ ಹಾಟ್ ನಟಿ ಮಲೈಕಾ ಅರೋರಾ

ಅಂದಹಾಗೆ ಮಲೈಕಾ ಅರೋರಾ ಬಾಲಿವುಡ್ ನಟ ಸಲ್ಮಾನ್ ಖಾನ್ ಸಹೋದರ, ನಿರ್ಮಾಪಕ ಅರ್ಬಾಜ್ ಖಾನ್ ಅವರಿಂದ ವಿಚ್ಛೇದನ ಪಡೆದ ಬಳಿಕ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಇಬ್ಬರ ಪ್ರೀತಿ ವಿಚಾರ ಗುಟ್ಟಾಗಿ ಉಳಿದಿಲ್ಲ. ಆದರೆ ಇಬ್ಬರೂ ವಯಸ್ಸಿನ ಅಂತರದ ವಿಚಾರವಾಗಿ ಆಗಾಗ ಟ್ರೋಲ್ ಆಗುತ್ತಿರುತ್ತಾರೆ. ಯಾವುದಕ್ಕೂ ತಲೆಕೆಡಿಸಿಕೊಳ್ಳದ ಈ ಜೋಡಿ ಡೇಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.   

  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?