ಮದುವೆ ವಿಡಿಯೋನಾ ಓಟಿಟಿಗೆ ಸೇಲ್‌ ಮಾಡಿಬಿಟ್ರಾ ನಯನತಾರಾ?

By Santosh Naik  |  First Published Jun 9, 2022, 8:16 PM IST

ವಿಘ್ನೇಶ್ ಶಿವನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡ್ತಿರುವ ನಟಿ ನಯನತಾರಾ ತಮ್ಮ ಮದುವೆ ವಿಡಿಯೋನಾ ಒಟಿಟಿಗೆ ಮಾರಿಬಿಟ್ಟಿದ್ದಾರೆ ಎನ್ನುವ ಗಾಸಿಪ್ ಹರಿದಾಡುತ್ತಿದೆ. ಖ್ಯಾತ ನಿರ್ದೇಶಕ ಗೌತಮ್ ಮೆನನ್ ಮದುವೆಯ ಚಿತ್ರೀಕರಣ ಮಾಡಿದ್ದಾರೆ ಎಂದು ವರದಿಯಾಗಿದೆ.


ಚೆನ್ನೈ (ಜೂನ್ 9): ದಕ್ಷಿಣ ಭಾರತ (South India) ಚಿತ್ರರಂಗದ ಪ್ರಖ್ಯಾತ ಜೋಡಿ ಲೇಡಿ ಸೂಪರ್ ಸ್ಟಾರ್ ನಯನತಾರಾ (Nayanthara) ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ (Vignesh Shivan) ಇಂದು ಮಹಾಬಲಿಪುರಂನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದರ ಬೆನ್ನಲ್ಲಿಯೇ ಗಾಸಿಪ್ ಒಂದು ಹರಿದಾಡುತ್ತಿದ್ದು, ತಾರಾ ಜೋಡಿ ತಮ್ಮ ಮದುವೆಯ ವಿಡಿಯೋವನ್ನು ಒವರ್ ದಿ ಟಾಪ್ (ಒಟಿಟಿ) ವೇದಿಕೆಗೆ ದೊಡ್ಡ ಮೊತ್ತಕ್ಕೆ ಮಾರಾಟ ಮಾಡಿದೆ ಎನ್ನಲಾಗುತ್ತಿದೆ.

ವರದಿಯ ಪ್ರಕಾರ, ದಂಪತಿಗಳು ತಮ್ಮ ಮದುವೆಯ ವೀಡಿಯೊ ಹಕ್ಕುಗಳನ್ನು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ (streaming Platform) ನೆಟ್‌ಫ್ಲಿಕ್ಸ್‌ಗೆ (Netflix) ಮಾರಾಟ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಮುಖ ಚಲನಚಿತ್ರ ನಿರ್ಮಾಪಕ ಗೌತಮ್ ಮೆನನ್ (gautham menon) ಇಡೀ ವಿವಾಹ ಸಮಾರಂಭವನ್ನು ಸಾಕ್ಷ್ಯಚಿತ್ರ ಶೈಲಿಯಲ್ಲಿ ಚಿತ್ರೀಕರಿಸಲಿದ್ದಾರೆ ಎಂದು ವರದಿಯಾಗಿದೆ.
"

ಮಹಾಬಲಿಪುರಂನ ರೆಸಾರ್ಟ್‌ನಲ್ಲಿ ನಡೆದ  ತಾರಾ ಜೋಡಿಯ ವಿವಾಹಕ್ಕೆ ದಕ್ಷಿಣ ಭಾರತದ ಚಿತ್ರರಂಗದ ಅನೇಕ ದಿಗ್ಗಜರುಗಳಾದ ವಿಜಯ್ ಸೇತುಪತಿ, ರಜನಿಕಾಂತ್, ಚಿರಂಜೀವಿ, ಕಮಲ್ ಹಾಸನ್, ಸೂರ್ಯ ಮತ್ತು ಇತರರು ಅತಿಥಿಗಳಾಗಿ ಆಗಮಿಸಿದ್ದಾರೆ ಎನ್ನಲಾಗಿದೆ.
Nayanthara Vignesh wedding: ರಜನಿಕಾಂತ್‌ ಕೈಯಿಂದ ಮಂಗಳಸೂತ್ರ ಪಡೆದ ದಂಪತಿ
ದಂಪತಿಗಳು ತಮ್ಮ ವಿಶೇಷ ದಿನವನ್ನು ಆಚರಿಸುವ ಜೂನ್ 9 ರ ಸಂಜೆ ಗ್ರ್ಯಾಂಡ್ ಪಾರ್ಟಿಯನ್ನು ಆಯೋಜಿಸಿದ್ದಾರೆ.  ಇಂಗ್ಲಿಷ್ ವೆಬ್‌ವೊಂದು ವರದಿ ಮಾಡಿರುವ ಪ್ರಕಾರ ತಲೈವ ರಜನಿಕಾಂತ್‌ ನಿಂತು ಮದುವೆ ನಡೆಸಿಕೊಟ್ಟಿದ್ದಾರಂತೆ. ನಯನತಾರಾಗೆ ತಾಳಿ ಕಟ್ಟಲು ರಜನಿಕಾಂತ್ ತಮ್ಮ ಕೈಯಾರ ವಿಘ್ನೇಶ್‌ಗೆ ಮಾಂಗಲ್ಯಸೂತ್ರ ಕೊಟ್ಟಿದ್ದಾರಂತೆ. ಬಾಲಿವುಡ್ ಕಿಂಗ್ ಶಾರುಖ್‌ ಖಾನ್‌ ಕೂಡ ನಯನತಾರಾ ಮದುವೆಯಲ್ಲಿ ಭಾಗಿಯಾಗಿದ್ದರು. 

click me!