ಪ್ರಿಯಾಂಕಾ ಚೋಪ್ರಾ 'ಕಾಂಪ್ರಮೈಸ್' ಆಗಲ್ಲ.. ಸಹನಟಿ ಬಗ್ಗೆ ಹೀಗ್ ಹೇಳ್ಬಿಟ್ರು ಮಹೇಶ್ ಬಾಬು; ಏನಿದು ಮ್ಯಾಟರ್?

Published : Jan 24, 2026, 07:11 PM IST
varanasi movie

ಸಾರಾಂಶ

ರಾಜಮೌಳಿ ನಿರ್ದೇಶನದ ‘ವಾರಣಾಸಿ’ ಚಿತ್ರಕ್ಕಾಗಿ. ಈ ಚಿತ್ರದಲ್ಲಿ ಮಹೇಶ್ ಬಾಬು ಸಾಹಸಿ ಪ್ರವಾಸಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೇ ಪ್ರಿಯಾಂಕಾ ಚೋಪ್ರಾ ಅವರು ಮಹೇಶ್ ಬಾಬು, ರಾಜಮೌಳಿ ಮತ್ತು ಪೃಥ್ವಿರಾಜ್ ಸುಕುಮಾರನ್ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಪ್ರಿಯಾಂಕಾ ಚೋಪ್ರಾ ಬಗ್ಗೆ ಮಹೇಶ್ ಬಾಬು ಹೇಳಿದ್ದೇನು?

ಟಾಲಿವುಡ್‌ನ 'ಪ್ರಿನ್ಸ್' ಮಹೇಶ್ ಬಾಬು (Mahesh Babu) ಮತ್ತು ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ (Priyanka Chopra) ಜೋಡಿ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಇಬ್ಬರು ದೈತ್ಯ ಪ್ರತಿಭೆಗಳು ಎಸ್.ಎಸ್. ರಾಜಮೌಳಿ ಅವರ ಮುಂಬರುವ ಬೃಹತ್ ಚಿತ್ರ ‘ವಾರಣಾಸಿ’ (Varanasi)ಯಲ್ಲಿ ಒಟ್ಟಾಗಿ ನಟಿಸುತ್ತಿರುವುದು ಭಾರತೀಯ ಚಿತ್ರರಂಗದ ಅತಿದೊಡ್ಡ ಸುದ್ದಿಯಾಗಿದೆ. ಆದರೆ, ಈ ಚಿತ್ರ ತೆರೆಗೆ ಬರುವ ಮುನ್ನವೇ ಮಹೇಶ್ ಬಾಬು ಅವರು ಪ್ರಿಯಾಂಕಾ ಅವರ ಹೊಸ ಸಾಹಸವನ್ನು ಕಂಡು ಬೆರಗಾಗಿದ್ದಾರೆ.

ಪ್ರಿಯಾಂಕಾ ನಟನೆಯ ‘ದಿ ಬ್ಲಫ್’ ಟ್ರೈಲರ್‌ಗೆ ಮಹೇಶ್ ಬಾಬು ಜೈಕಾರ:

ಇತ್ತೀಚೆಗಷ್ಟೇ ಪ್ರಿಯಾಂಕಾ ಚೋಪ್ರಾ ನಟನೆಯ ಹೊಚ್ಚ ಹೊಸ ಇಂಗ್ಲಿಷ್ ಆಕ್ಷನ್ ಥ್ರಿಲ್ಲರ್ ‘ದಿ ಬ್ಲಫ್’ (The Bluff) ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಈ ಟ್ರೈಲರ್ ನೋಡಿದ ಮಹೇಶ್ ಬಾಬು ಅವರು ಪ್ರಿಯಾಂಕಾ ಅವರ ನಟನೆ ಮತ್ತು ಸ್ಕ್ರೀನ್ ಪ್ರೆಸೆನ್ಸ್ ಕಂಡು ಮಂತ್ರಮುಗ್ಧರಾಗಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಟ್ರೈಲರ್ ಹಂಚಿಕೊಂಡಿರುವ ಅವರು, "ಟ್ರೈಲರ್ ಅದ್ಭುತವಾಗಿದೆ. ಪ್ರಿಯಾಂಕಾ ಚೋಪ್ರಾ ಮತ್ತೊಮ್ಮೆ ರಾಜಿ ಮಾಡಿಕೊಳ್ಳದ ಮತ್ತು ಅಸಾಧಾರಣ (Uncompromising and Formidable) ನಟಿಯಾಗಿ ಮೂಡಿಬಂದಿದ್ದಾರೆ. ಫೆಬ್ರವರಿ 25 ರಂದು ಬಿಡುಗಡೆಯಾಗಲಿರುವ ಈ ಚಿತ್ರದ ಇಡೀ ತಂಡಕ್ಕೆ ನನ್ನ ಶುಭ ಹಾರೈಕೆಗಳು" ಎಂದು ಬರೆದುಕೊಂಡಿದ್ದಾರೆ. ಮಹೇಶ್ ಬಾಬು ಅವರ ಈ ಪ್ರಶಂಸೆಯ ಮಾತುಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಏನಿದು ‘ದಿ ಬ್ಲಫ್’ ಕಥೆ?:

‘ದಿ ಬ್ಲಫ್’ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಅವರು ‘ಬ್ಲಡಿ ಮೇರಿ’ ಎಂದೇ ಕರೆಯಲ್ಪಡುವ ‘ಎರ್ಸೆಲ್ ಬೋಡೆನ್’ ಎಂಬ ಸಮುದ್ರ ದರೋಡೆಕೋರ (Pirate) ಪಾತ್ರದಲ್ಲಿ ನಟಿಸಿದ್ದಾರೆ. 1800ರ ದಶಕದ ಅಂತ್ಯಭಾಗದ ಕಥೆಯನ್ನು ಈ ಸಿನಿಮಾ ಹೊಂದಿದೆ. ಟ್ರೈಲರ್‌ನಲ್ಲಿ ಪ್ರಿಯಾಂಕಾ ಅವರು ಗಾಯಗೊಂಡಿದ್ದರೂ ತನ್ನ ಮಗುವನ್ನು ರಕ್ಷಿಸಲು ಪ್ರಾಣದ ಹಂಗು ತೊರೆದು ಹೋರಾಡುವ ಕೆಚ್ಚೆದೆಯ ತಾಯಿಯಾಗಿ ಅಬ್ಬರಿಸಿದ್ದಾರೆ. ಅವೆಂಜರ್ಸ್ ಖ್ಯಾತಿಯ ‘ರುಸ್ಸೋ ಬ್ರದರ್ಸ್’ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ ಎಂಬುದು ವಿಶೇಷ. ಫೆಬ್ರವರಿ 25 ರಿಂದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಈ ಸಿನಿಮಾ ಅಬ್ಬರಿಸಲಿದೆ.

‘ವಾರಣಾಸಿ’ ಚಿತ್ರದಲ್ಲಿ ಮಹೇಶ್-ಪ್ರಿಯಾಂಕಾ ಜುಗಲ್ಬಂದಿ:

ಇನ್ನು ಪ್ರೇಕ್ಷಕರು ಅತ್ಯಂತ ಕುತೂಹಲದಿಂದ ಕಾಯುತ್ತಿರುವುದು ರಾಜಮೌಳಿ ನಿರ್ದೇಶನದ ‘ವಾರಣಾಸಿ’ ಚಿತ್ರಕ್ಕಾಗಿ. ಈ ಚಿತ್ರದಲ್ಲಿ ಮಹೇಶ್ ಬಾಬು ಸಾಹಸಿ ಪ್ರವಾಸಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೇ ಪ್ರಿಯಾಂಕಾ ಚೋಪ್ರಾ ಅವರು ಮಹೇಶ್ ಬಾಬು, ರಾಜಮೌಳಿ ಮತ್ತು ಪೃಥ್ವಿರಾಜ್ ಸುಕುಮಾರನ್ ಜೊತೆಗಿನ ಫೋಟೋಗಳನ್ನು ಹಂಚಿಕೊಂಡು, "ತೆಲುಗು ಮತ್ತು ಮಲಯಾಳಂ ಚಿತ್ರರಂಗದ ಇಬ್ಬರು ಲೆಜೆಂಡ್‌ಗಳ ಜೊತೆ ಕೆಲಸ ಮಾಡುವುದು ಮತ್ತು ರಾಜಮೌಳಿ ಅವರ ಚಿತ್ರದಲ್ಲಿ ಭಾಗಿಯಾಗುವುದು ನನ್ನ ಸೌಭಾಗ್ಯ" ಎಂದು ಬರೆದುಕೊಂಡಿದ್ದರು.

ಈ ಚಿತ್ರದಲ್ಲಿ ಪ್ರಿಯಾಂಕಾ ‘ಮಂದಾಕಿನಿ’ ಎಂಬ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಅವರ ಲುಕ್‌ನಲ್ಲಿ ಹಳದಿ ಸೀರೆಯುಟ್ಟು ಕೈಯಲ್ಲಿ ಗನ್ ಹಿಡಿದು ಪ್ರಿಯಾಂಕಾ ಮಿಂಚಿದ್ದರು. ‘ವಾರಣಾಸಿ’ ಸಿನಿಮಾ 2027ರ ಬೇಸಿಗೆಯಲ್ಲಿ ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಒಟ್ಟಾರೆಯಾಗಿ, ತಮ್ಮ ಸಹನಟಿಯ ಅಂತರಾಷ್ಟ್ರೀಯ ಸಾಧನೆಯನ್ನು ಮಹೇಶ್ ಬಾಬು ಮುಕ್ತವಾಗಿ ಹೊಗಳಿರುವುದು ಇಬ್ಬರ ನಡುವಿನ ವೃತ್ತಿಪರ ಗೌರವವನ್ನು ಎತ್ತಿ ತೋರಿಸುತ್ತಿದೆ. ಇದು ಅವರ ಅಭಿಮಾನಿಗಳಿಗೂ ಸಖತ್ ಖುಷಿ ನೀಡಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಶ್ಮಿಕಾ-ವಿಜಯ್ ಮದುವೆ ಆಗ್ತಿರೋದೇ ಸುಳ್ಳಾ? ಉತ್ತರವಿಲ್ಲದ ಈ ಪ್ರಶ್ನೆಗೆ ರಶ್ಮಿಕಾ ಹೇಳಿದ್ದೇನು?
'ಯಾರು ಆ ಎ.ಆರ್. ರೆಹಮಾನ್? ನನಗಂತೂ ಗೊತ್ತಿಲ್ಲ' ಎಂದ ಬಾಲಯ್ಯ; ಆ ನಟನಿಗೆ ರೆಹಮಾನ್ ಹೇಳಿದ್ದೇನು?