Prabhas: ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್‌ ಸಿನಿಮಾಗೆ ಭಾರೀ ಸೋಲು.. 12 ದಿನಕ್ಕೆ ಇಷ್ಟೇನಾ ಗಳಿಸಿದ್ದು?

Published : Jan 24, 2026, 03:21 PM IST
The Raja Saab Box Office Collection

ಸಾರಾಂಶ

ಪ್ರಭಾಸ್‌ನಟನೆಯ 'ದಿ ರಾಜಾ ಸಾಬ್' ಚಿತ್ರವು ಎಲ್ಲಾ ನಿರೀಕ್ಷೆಗಳನ್ನು ಹುಸಿಗೊಳಿಸಿದೆ. ಬಿಡುಗಡೆಗೂ ಮುನ್ನ ಈ ಚಿತ್ರದ ಬಗ್ಗೆ ತುಂಬಾ ನಿರೀಕ್ಷೆ ಇತ್ತು. ಎಲ್ಲಾ ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿಯುತ್ತದೆ ಎನ್ನಲಾಗಿತ್ತು. ಆದರೆ ಬಿಡುಗಡೆ ಬಳಿಕ ಚಿತ್ರದ ಭವಿಷ್ಯ ಸ್ಪಷ್ಟವಾಯಿತು.

ಪ್ರಭಾಸ್‌ರ ‘ದಿ ರಾಜಾ ಸಾಬ್’ ಚಿತ್ರದ ಗತಿ ಇದು!

ಪ್ಯಾನ್ ಇಂಡಿಯಾ ಸ್ಟಾರ್, ದೊಡ್ಡ ಸೂಪರ್‌ಸ್ಟಾ‌ರ್ ಅಂತಲ್ಲಾ ಅಂದ್ಕೊಂಡು ನಿರ್ಮಾಣಕ್ಕೆ ಸಾಕಷ್ಟು ಹಣ ಖರ್ಚು ಮಾಡಿ ಮಾಡಿದ್ದ ಸಿನಿಮಾ ;ದಿ ರಾಜಾ ಸಾಬ್'. ಟಾಲಿವುಡ್ ಸೂಪರ್ ಸ್ಟಾರ್, ಪ್ಯಾನ್ ಇಂಡಿಯಾ ಸ್ಟಾರ್ ನಟ ಪ್ರಭಾಸ್ (Prabhas) ಅವರ ಮಾರ್ಕೆಟ್ ಕ್ರೇಜ್ ನಂಬಿ ನಿರ್ಮಾಪಕರು ಆ ಚಿತ್ರದ ಮೇಲ ಯಥೇಚ್ಛ ಹಣ ಸುರಿದಿದ್ದರು. ಆದರೆ. ಆ ಚಿತ್ರ ದಿ ರಾಜಾ ಸಾಬ್ ಸೂಪರ್ ಹಿಟ್ ಆಗುವುದಿರಲಿ, ಫ್ಲಾಪ್ ಆಗಿದೆ. ಈ ಮೂಲಕ ಸ್ಟಾರ್‌ಗಿಂತ ಕಥೆಯೇ ಚಿತ್ರದ ಮೂಲ ಜೀವಾಳ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದೆ.

ದೊಡ್ಡ ಬಜೆಟ್ ಹೊಂದಿರುವ ಈ ಚಿತ್ರಕ್ಕೆ ಭಾರೀ ಸಂಕಷ್ಟ

ಹೌದು, ನಟ ಡಾರ್ಲಿಂಗ್ ಪ್ರಭಾಸ್ ನಟನೆಯ 'ದಿ ರಾಜಾ ಸಾಬ್' ಚಿತ್ರವು (The Raja Saab) ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಬಿಡುಗಡೆಯಾಗಿದೆ. ದೊಡ್ಡ ಬಜೆಟ್ ಹೊಂದಿರುವ ಈ ಚಿತ್ರ ಈಗ ಭಾರೀ ಸಂಕಷ್ಟದಲ್ಲಿದೆ. ಪ್ರಭಾಸ್ ಅವರ 'ದಿ ರಾಜಾ ಸಾಬ್'. ಈ ಚಿತ್ರ ಅತಿದೊಡ್ಡ ಫ್ಲಾಪ್ ಚಿತ್ರವಾಗಿದೆ. ಪ್ರಭಾಸ್ ಅವರ ಸ್ಟಾರ್‌ಡಮ್ ಕಾರಣಕ್ಕೆ ಸಿನಿಮಾ ಒಳ್ಳೆಯ ಓಪನಿಂಗ್ ಪಡೆಯಿತು. ಆದರೆ ಅದೇ ವೇಗವನ್ನು ಬಳಿಕ ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ. ಬಿಡುಗಡೆಯಾದ ಹನ್ನೆರಡನೇ ದಿನದಂದು, ಈ ಚಿತ್ರಕ್ಕೆ ಕೆಲವು ಲಕ್ಷ ರೂಪಾಯಿಗಳನ್ನು ಗಳಿಸುವುದು ಸಹ ಕಷ್ಟಕರವಾಗಿದೆ. 400 ಕೋಟಿ ರೂಪಾಯಿಗಳ ಬಜೆಟ್‌ ನಲ್ಲಿ ನಿರ್ಮಿಸಲಾದ ಈ ಚಿತ್ರವು ಇಲ್ಲಿಯವರೆಗೆ ಶೇಕಡಾ 64ಕ್ಕಿಂತ ಹೆಚ್ಚು ನಷ್ಟವನ್ನು ಕಂಡಿದೆ ಎನ್ನಲಾಗಿದೆ.

ಪ್ರಭಾಸ್‌ನಟನೆಯ 'ದಿ ರಾಜಾ ಸಾಬ್' ಚಿತ್ರವು ನಿರ್ಮಾಪಕರ ಎಲ್ಲಾ ನಿರೀಕ್ಷೆಗಳನ್ನು ಹುಸಿಗೊಳಿಸಿದೆ. ಬಿಡುಗಡೆಗೂ ಮುನ್ನ ಈ ಚಿತ್ರದ ಬಗ್ಗೆ ತುಂಬಾ ನಿರೀಕ್ಷೆ ಇತ್ತು. ಅದು ಎಲ್ಲಾ ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿಯುತ್ತದೆ ಎಂಬ ಮಾತು ಕೇಳೀಬರುತ್ತಿತ್ತು. ಆದರೆ ಚಿತ್ರ ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ತಕ್ಷಣವೇ ಚಿತ್ರದ ಭವಿಷ್ಯ ಸ್ಪಷ್ಟವಾಯಿತು. ಮೊದಲ ದಿನವೇ ಈ ಚಲನಚಿತ್ರದ ಬಗ್ಗೆ ಕೆಟ್ಟ ವಿಮರ್ಶೆಗಳು ಬಂದವು. ಪ್ರೇಕ್ಷಕರು ಕೂಡ ಚಿತ್ರವನ್ನು ಇಷ್ಟಪಡಲಿಲ್ಲ. ಚಿತ್ರದ ಕಥೆ ಮತ್ತು ನಿರ್ದೇಶನವನ್ನು ತುಂಬಾ ಟೀಕಿಸಲಾಯಿತು. ನೋಡಿದ ಜನರು ಈ ಸಿನಿಮಾ ಬಗ್ಗೆ ಕೆಟ್ಟ ಅಭಿಪ್ರಾಯ ಕೊಟ್ಟರು. ಅಲ್ಲಿಗೆ ಹೋಗಬೇಕಾದ ಜನರು ಸಿನಿಮಾ ಬಗ್ಗೆ ಆಸಕ್ತಿಯನ್ನೇ ಕಳೆದುಕೊಂಡರು.

ಟಾಲಿವುಡ್‌ ಕಂಡ ಅತಿದೊಡ್ಡ ವೈಫಲ್ಯ

ಪ್ರಭಾಸ್‌ರ 'ದಿ ರಾಜಾ ಸಾಬ್' ಚಿತ್ರವು ಮೊದಲ ವಾರದಲ್ಲಿ 130.25 ಕೋಟಿ ರೂ. ಗಳಿಕೆ ಮಾಡಿತು. ಬಳಿಕ ಎಂಟನೇ ದಿನ ಕೇವಲ 3.5 ಕೋಟಿ ರೂ., ಒಂಬತ್ತನೇ ದಿನ 3 ಕೋಟಿ ರೂ., ಹನ್ನೊಂದನೇ ದಿನ 2.6 ಕೋಟಿ ರೂ., ಹನ್ನೆರಡನೇ ದಿನ 80 ಲಕ್ಷ ರೂ. ಮತ್ತು ಹದಿಮೂರನೇ ದಿನ 50 ಲಕ್ಷ ರೂ. ಗಳಿಸಿತು. ಕಳೆದ 14 ದಿನಗಳಲ್ಲಿ 'ದಿ ರಾಜಾ ಸಾಬ್' ಚಿತ್ರದ ಒಟ್ಟು ಗಳಿಕೆ ಸುಮಾರು 142.71 ಕೋಟಿ ರೂ. ಇದರಿಂದಾಗಿ, ನಿರ್ಮಾಪಕರು ಶೇ. 64.48 ಕ್ಕಿಂತ ಹೆಚ್ಚು ನಷ್ಟ ಅನುಭವಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಟಾಲಿವುಡ್‌ ಕಂಡ ಅತಿದೊಡ್ಡ ವೈಫಲ್ಯಗಳಲ್ಲಿ ಈ ಚಿತ್ರದ ಗಳಿಕೆ ಒಂದಾಗಿದೆ. ಒಟ್ಟಿನಲ್ಲಿ, ಈಗ ಸ್ಟಾರ್ ವ್ಯಾಲ್ಯೂಗಿಂತ ಕಥೆಯೇ ಚಿತ್ರದ ಗೆಲುವಿಗೆ ಮುಖ್ಯ ಎಂಬ ಮಾತು ಮತ್ತೆ ಕೇಳಿಬರುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಜಾವೇದ್ ಅಖ್ತರ್ ಟೀಕೆಗೆ ಸೋನು ನಿಗಮ್ ಗರಂ.. 'ಸಂದೇಶೆ ಆತೆ ಹೈ' ವಿವಾದ ಎಲ್ಲಿಗೆ ಹೋಗ್ತಿದೆ?
ಸಲ್ಮಾನ್ ಖಾನ್ ತಮ್ಮ ತೋಟದ ಮನೆಯಲ್ಲಿ ಮದುವೆಯಾದರೇ?, ಫೋಟೋ ವೈರಲ್ ಆದ ನಂತ್ರ ಪ್ರಶ್ನಿಸಿದ ಜನರು