
ಕಾಠ್ಮಂಡು(ಮಾ.01) ಮಹಾಕುಂಭ ಮೇಳದಲ್ಲಿ ಮಣಿ, ಮಾಲೆ, ಸರ ಮಾರುತ್ತಿದ್ದ ಬೆಡಿಗ ಮೊನಾಲಿಸಿ ಕಣ್ಣು ಹಾಗೂ ಸೌಂದರ್ಯಕ್ಕೆ ಭಾರತ ಮನಸೋತಿದೆ. ಇದರ ರಾತ್ರೋರಾತ್ರಿ ಮೊನಾಲಿಸಾ ಭಾರತದಲ್ಲಿ ಸೆಲೆಬ್ರೆಟಿ ಆಗಿದ್ದಾಳೆ. ಇದರ ಬೆನ್ನಲ್ಲೇ ಬಾಲಿವುಡ್‌ನಿಂದ ಸಿನಿಮಾ ಆಫರ್ ಕೂಡ ಬಂದಿದೆ. ಇತ್ತ ಜ್ಯೂವೆಲ್ಲರಿ ಸೇರಿದಂತೆ ಹಲವು ಮಳಿಗೆ ಉದ್ಘಾಟನೆ, ಕಾರ್ಯಕ್ರಮಗಳಲ್ಲಿ ಮೊನಾಲಿಸಾ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುತ್ತಿದ್ದಾರೆ. ಭಾರತದ ಮೂಲೆ ಮೂಲೆಗಳಿಂದ ಕಾರ್ಯಕ್ರಮಗಳಿಗೆ ಕರೆ ಬರುತ್ತಿದೆ. ವಿಶೇಷ ಅಂದರೆ ಮೊನಾಲಿಸಾ ಕ್ರೇಜ್ ಭಾರತದಲ್ಲಿ ಮಾತ್ರವಲ್ಲ, ಪಕ್ಕದ ನೇಪಾಳದಲ್ಲೂ ಹೆಚ್ಚಾಗಿದೆ. ಇದೀಗ ಮೊನಾಲಿಸಾ ನೇಪಾಳದ ಆಹ್ವಾನದ ಮೇರೆಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭರ್ಜರಿ ಸ್ಟೆಪ್ಸ್ಟ್ ಹಾಕಿದ್ದಾರೆ. ಈ ವಿಡಿಯೋ ಇದೀಗ ಹೊಸ ಮೈಲಿಗಲ್ಲು ಸೃಷ್ಟಿಸಿದೆ.
ಮೊನಾಲಿಸಾ ಇದೀಗ ಭಾರತದ ನೆರೆ ದೇಶಗಳಲ್ಲೂ ವೈರಲ್ ಆಗಿದ್ದಾಳೆ. ಮೊನಾಲಿಸಾ ಸೌಂದರ್ಯಕ್ಕೆ ಜನ ಮನಸೋಲುತ್ತಿದ್ದಾರೆ. ಪಕ್ಕದ ನೇಪಾಳದಲ್ಲೂ ಮೊನಾಲಿಸಾ ಭಾರಿ ಜನಪ್ರಿಯತೆ ಪಡೆದಿದ್ದಾರೆ. ಹೀಗಾಗಿ ಮಹಾಶಿವರಾತ್ರಿ ಕಾರ್ಯಕ್ರಮದ ಪ್ರಯುಕ್ತ ನೇಪಾಳ ಕೆಲ ಸಂಘಟನೆಗಳು ಮೊನಾಲಿಸಾ ಸಂಪರ್ಕಿಸಿ ಆಹ್ವಾನ ನೀಡಿತ್ತು. ಇದರಂತೆ ಮೊನಾಲಿಸಾ ನೇಪಾಳದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರೆ. ಈ ವೇಳೆ ವೇದಿಕೆಯಲ್ಲಿ ಡ್ಯಾನ್ಸ್ ಮಾಡಿ ಗಮನಸೆಳೆದಿದ್ದಾರೆ.
ಮಹಾಕುಂಭ ಸೆನ್ಸೇಶನ್ ಮೊನಾಲಿಸಾ ಈಗ ಮಾಡೆಲ್, ಬದಲಾಗಿ ಹೋಯ್ತು ಬದುಕು!
ಮೊನಾಲಿಸಾ ವೈರಲ್ ಆಗುತ್ತಿದ್ದಂತೆ ಬಾಲಿವುಡ್ ಸಿನಿಮಾ ಆಫರ್ ಬಂದಿದೆ. ಇದರಂತೆ ಮೊನಾಲಿಸಾ, ನಟನೆ, ಡ್ಯಾನ್ಸ್ ಎಲ್ಲವನ್ನೂ ಕಲಿಯುತ್ತಿದ್ದಾರೆ. ಆದರೆ ಭಾರತದಲ್ಲಿ ಮೊನಾಲಿಸಾ ಸಂದರ್ಶನದ ವಿಡಿಯೋ, ಮಣಿ, ಸರ ಮಾರುತ್ತಿರುವ ವಿಡಿಯೋ, ನಗುವಿನ ವಿಡಿಯೋ, ನಡೆಯುತ್ತಿರುವ ವಿಡಿಯೋಗಳು ವೈರಲ್ ಆಗಿದೆ. ಆದರೆ ಮೊನಾಲಿಸಾ ಎಲ್ಲೂ ಕೂಡ ಡ್ಯಾನ್ಸ್ ಮಾಡಿರಲಿಲ್ಲ. ಆದರೆ ನೇಪಾಳ ಕಾರ್ಯಕ್ರಮದಲ್ಲಿ ಮೊನಾಲಿಸಿ ಮೊದಲ ಬಾರಿಗೆ ವೇದಿಕೆಯಲ್ಲಿ ಭರ್ಜರಿ ಸ್ಪೆಪ್ಸ್ ಹಾಕಿದ್ದಾರೆ.
ವೇದಿಕೆಯಲ್ಲಿ ಪ್ರಮುಖ ಆಹ್ವಾನಿತ ಅತಿಥಿಯಾಗಿದ್ದ ಮೊನಲಿಸಾ ಮಾತನಾಡುವ ವೇಳೆ ಹರ್ ಹರ ಮಹಾದೇವ್ ಎಂದು ಘೋಷಣಾ ವಾಕ್ಯ ಕೂಗಿದ್ದಾರೆ. ಈ ಮಾತು ಕೇಳುತ್ತಿದ್ದಂತೆ ನೆರೆದಿದ್ದ ಅಪಾರ ಜನಸ್ತೋಮ, ಹರ ಹರ ಮಹಾದೇವ್ ಉದ್ಘೋಷ ಹೊರಡಿಸಿತ್ತು. ಇದರ ಬೆನ್ನಲ್ಲೇ ಮೊನಾಲಿಸಿ ಐ ಲವ್ ಯೂ ಎಂದು ಜನರತ್ತ ಕೈಬೀಸಿದ್ದಾರೆ. ಮೊನಾಲಿಸಾ ಎನರ್ಜಿ, ನಗು, ಮಾತುಗಳು ನೆರೆದಿದ್ದವರ ಹೃದಯ ಗೆದ್ದಿತ್ತು.
ಮಾತುಗಳ ಬಳಿಕ ಮೊನಾಲಿಸಾ ಹಾಡಿಗೆ ನೃತ್ಯ ಮಾಡಿದ್ದಾರೆ. ಭರ್ಜರಿ ಸ್ಪೆಪ್ಸ್ ಹಾಕಿ ರಂಜಿಸಿದ್ದಾರೆ. ಈ ಮೂಲಕ ಮಣಿ, ಸರ ಮಾರುತ್ತಿದ್ದ ಮುಗ್ದ ಬೆಡಗಿ ಇದೀಗ ಬಾಲಿವುಡ್ ನಟಿಗಿಂತಲೂ ಹೆಚ್ಚಿನ ಜನಪ್ರಿಯತೆ ಪಡೆದಿದ್ದಾರೆ. ಇದೀಗ ಬಾಲಿವುಡ್ ಚಿತ್ರ ಸೆಟ್ಟೇರಿದರೆ ಮೊನಾಲಿಸಾ ಟಾಪ್ ನಟಿಯಾಗುತ್ತಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ.
ಮೊನಾಲಿಸಾ ಅವರ ಈ ಡ್ಯಾನ್ಸ್ ವಿಡಿಯೋಗೆ ಭರ್ಜರಿ ಕಮೆಂಟ್ ವ್ಯಕ್ತವಾಗುತ್ತಿದೆ. ಮೊನಾಲಿಸಾಗೆ ಉತ್ತಮ ಭವಿಷ್ಯವಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರ. ಇತ್ತ ಮೊನಾಲಿಸಿ ಉತ್ಸಾಹ, ನಗು, ಆತ್ಮವಿಶ್ವಾಸ ಎಲ್ಲವೂ ಯಶಸ್ಸಿನ ದಾರಿ ಹಿಡಿಯುತ್ತದೆ ಎಂದು ಹಲವರು ಹೇಳಿದ್ದಾರೆ. ಇತ್ತ ಮೊನಾಲಿಸಾಗೆ ಅಭಿಮಾನಿಗಳ ಸಂಖ್ಯೆ, ಸೋಶಿಯಲ್ ಮೀಡಿಯಾದಲ್ಲಿ ಫಾಲೋವರ್ಸ್ ಸಂಖ್ಯೆ ಹೆಚ್ಚಾಗುತ್ತಿದೆ. ನೇಪಾಳದಲ್ಲಿ ಮೊನಾಲಿಸಾಗೆ ಅಪಾರ ಅಭಿಮಾನಿ ಬಳಗವೆ ಸೃಷ್ಟಿಯಾಗಿದೆ.
ಮೊನಾಲಿಸಾಳನ್ನು ಜನ ಬಾಲಿವುಡ್ ಸಿನಿಮಾದಲ್ಲಿ ನಾಯಕಿಯಾಗಿ ನೋಡಲು ಕಾತುರಗೊಂಡಿದ್ದಾರೆ. ಚಿತ್ರದ ತಯಾರಿಗಳು ನಡೆಯುತ್ತಿದೆ. ಇತ್ತ ಮೊನಾಲಿಸಾ ಕೂಡ ಕಠಿಣ ಪ್ರಯತ್ನ ಮಾಡುತ್ತಿದ್ದಾರೆ. ಅಕ್ಷರಗಳನ್ನು ಕಲಿಯುತ್ತಿದ್ದಾರೆ. ನಟನಾ ಕೌಶಲ್ಯ, ನೃತ್ಯ ಸೇರಿದಂತೆ ಎಲ್ಲಾ ತರಬೇತಿಗಳನ್ನು ಪಡೆಯುತ್ತಿದ್ದಾರೆ. ಶೀಘ್ರದಲ್ಲೇ ಶೂಟಿಂಗ್ ಆರಂಭಗೊಳ್ಳುವ ಸಾಧ್ಯತೆ ಇದೆ. ಆದರೆ ಯಾವುದು ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.