
ಕೆಲ ದಿನಗಳ ಹಿಂದಷ್ಟೇ ಬಾಲಿವುಡ್ ನಟಿ ಆಲಿಯಾ ಭಟ್ Baby be Kind ಎನ್ನುವ ಪುಸ್ತಕವನ್ನು ಓದುತ್ತಿರುವ ಫೋಟೋ ಶೇರ್ ಮಾಡಿದರು. ಆದರೆ ಅದರ ಬೆನ್ನಲ್ಲೇ ಇದೀಗ ತಮ್ಮ ಮಗಳು ರಾಹಾಳ ಎಲ್ಲಾ ಫೋಟೋಗಳನ್ನು ಇನ್ಸ್ಟಾಗ್ರಾಮ್‌ನಿಂದ ಡಿಲೀಟ್ ಮಾಡಿದ್ದಾರೆ. ರಾಹಾಳ ಮುಖ ಮರೆಮಾಚಿರುವ ಕೆಲವು ಫೋಟೋಗಳು ಮಾತ್ರ ಇಟ್ಟುಕೊಂಡಿರುವ ಆಲಿಯಾ ಭಟ್, ಉಳಿದ ಎಲ್ಲಾ ಫೋಟೋಗಳನ್ನೂ ತೆಗೆದು ಹಾಕಿದ್ದಾರೆ. ಈಚೆಗಷ್ಟೇ ಪ್ಯಾರಿಸ್ ಪ್ರವಾಸದ ಫೋಟೋ ಶೇರ್ ಮಾಡಿದ್ದರು, ಜೊತೆಗೆ ಮಗಳ ಜೊತೆಗಿನ ಹೊಸ ವರ್ಷದ ಫೋಟೋಗಳನ್ನೂ ಶೇರ್ ಮಾಡಿದ್ದರು. ಆದರೆ ಅದ್ಯಾವುವೂ ಈಗ ಕಾಣಿಸುತ್ತಿಲ್ಲ. ಮಗಳಿಗೆ ಕೆಟ್ಟ ದೃಷ್ಟಿ ಬೀಳಬಾರದು ಎನ್ನುವ ಕಾರಣಕ್ಕೆ ಫೋಟೋಗಳನ್ನು ಡಿಲೀಟ್ ಮಾಡಿರಬಹುದು ಎಂದು ಅಭಿಮಾನಿಗಳು ಹೇಳುತ್ತಿದ್ದು, ಆಲಿಯಾರ ಕ್ರಮಕ್ಕೆ ಹಲವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ ಆ ಪುಸ್ತಕ ಓದಿದ ಬಳಿಕ ಆಲಿಯಾ ಈ ನಿರ್ಧಾರ ತೆಗೆದುಕೊಂಡರಾ, ಆ ಪುಸ್ತಕದಲ್ಲಿ ಅಂಥದ್ದೇನಿದೆ ಎನ್ನುವ ಚರ್ಚೆ ಶುರುವಾಗಿದೆ.
ಅಷ್ಟಕ್ಕೂ ಬಾಲಿವುಡ್ ಕ್ಯೂಟ್ ಕಪಲ್ ಎಂದೇ ಫೇಮಸ್ ಆಗಿರುವ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಮಗಳು ರಾಹಾ ಕಪೂರ್ ಸದಾ ಫ್ಯಾನ್ಸ್ ಹೃದಯ ಕದಿಯುತ್ತಲೇ ಇರುತ್ತಾರೆ. ರಾಹಾಗೆ ಈಗ ಎರಡು ವರ್ಷ ವಯಸ್ಸು. ಪಾಪರಾಜಿಗಳನ್ನು ಕಾಣ್ತಿದ್ದಂತೆ ಫ್ಲೈಯಿಂಗ್ ಕಿಸ್ ನೀಡುವ ರಾಹಾಳ ಮೇಲೆ ಸಹಜವಾಗಿ ಎಲ್ಲರ ದೃಷ್ಟಿ ನೆಟ್ಟಿರುತ್ತದೆ. ಈಚೆಗಷ್ಟೇ, ಹೊಸ ವರ್ಷವನ್ನು ಅದ್ಧೂರಿಯಾಗಿ ಆಚರಿಸಲು ರಣಬೀರ್ ಕಪೂರ್ ಹಾಗೂ ಆಲಿಯಾ ವಿದೇಶಕ್ಕೆ ಹಾರಿದ್ದರು. ಆ ಸಮಯದಲ್ಲಿ ರಾಹಾ ಜೊತೆ ವಿಮಾನ ನಿಲ್ದಾಣದಲ್ಲಿ ಈ ಜೋಡಿ ಗಮನ ಸೆಳೆದಿದ್ದರು. ರಣಬೀರ್ ಹಾಗೂ ಆಲಿಯಾ ಬೋರ್ಡಿಂಗ್ ನಲ್ಲಿ ಬ್ಯುಸಿ ಇದ್ರೆ ರಾಹಾ ಮಾತ್ರ ಪಾಪರಾಜಿಗಳು ಕೂಗ್ತಿದ್ದಂತೆ ಅವರಿಗೆ ರಿಯಾಕ್ಟ್ ಮಾಡಿದ್ದಳು. ಬಿಳಿ ಬಣ್ಣದ ಡ್ರೆಸ್ ಧರಿಸಿ, ಅಮ್ಮನಿಗೆ ಮ್ಯಾಚಿಂಗ್ ಮಾಡ್ಕೊಂಡಿದ್ದ ರಾಹಾ, ಪಾಪರಾಜಿಗಳಿಗೆ ಫ್ಲೈಯಿಂಗ್ ಕಿಸ್ ನೀಡಿದ್ದಲ್ಲದೆ ಬೈ ಅಂತ ತನ್ನ ಕ್ಯೂಟ್ ಧ್ವನಿಯಲ್ಲಿ ಹೇಳಿದ್ದಳು.
ಶ್ಯಾಂಪೂ ಜಾಹೀರಾತಲ್ಲಿ ಕಾಣಿಸಿಕೊಳ್ಳೋ ನಟಿ ಆಲಿಯಾ ಭಟ್ ನಿಜ ಬಣ್ಣ ಬಯಲಾಗೋಯ್ತು! ಫ್ಯಾನ್ಸ್ ಶಾಕ್
ಕಳೆದ ಡಿಸೆಂಬರ್ನಲ್ಲಿ ಕ್ರಿಸ್ಮಸ್ ಸಮಯದಲ್ಲಿ ರಾಹಾ ಕ್ರಿಸ್ಮಸ್ ವಿಡಿಯೋ ವೈರಲ್ ಆಗಿತ್ತು. ಕಾರಿನಿಂದ ಇಳಿದ ಆಲಿಯಾ, ಪಾಪರಾಜಿಗಳಿಗೆ ಸೌಂಡ್ ಮಾಡ್ಬೇಡಿ ಎಂದು ವಿನಂತಿ ಮಾಡಿದ್ದರು. ಸ್ವಲ್ಪ ಕಡಿಮೆ, ಸ್ವಲ್ಪ ಕಡಿಮೆ ಮಾಡಿ, ರಾಹಾ ಹೆದರುತ್ತಿದ್ದಾಳೆ ಅಂತ ಕೈ ಮುಗಿದಿದ್ದರು. ನಂತ್ರ ರಣಬೀರ್ ಕಪೂರ್ ಜೊತೆ ಕಾರಿನಿಂದ ಹೊರಗೆ ಬಂದ ಆಲಿಯಾ ಕೆಳಗೆ ಇಳಿಯೋಕೆ ಹೆದರಿದ್ರೂ ಹ್ಯಾಪಿ ಕ್ರಿಸ್ಮಸ್ ಅಂತ ವಿಶ್ ಮಾಡಿದ್ದಲ್ಲದೆ ಬಾಯ್ ಎನ್ನುತ್ತ ಕೈ ಬೀಸಿದ್ದಳು. ಈ ವಿಡಿಯೊ ನೋಡಿದ ಜನರು ಆಲಿಯಾ ಸ್ವಲ್ಪ ಓವರ್ ಆಕ್ಟಿಂಗ್ ಮಾಡ್ತಿದ್ದಾರೆ ಅಂದ್ರೂ, ರಾಹಾ ಪ್ರತಿಕ್ರಿಯೆ ನೋಡಿ ಖುಷಿಯಾಗಿದ್ದರು. ಪೂರ್ ಕುಟುಂಬ ಪ್ರತಿ ವರ್ಷ ಕ್ರಿಸ್ಮಸ್ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತದೆ. ಈ ವರ್ಷವೂ ಕ್ರಿಸ್ಮಸ್ ಪಾರ್ಟಿ ಏರ್ಪಡಿಸಿತ್ತು. ಅದ್ರಲ್ಲಿ ಆಲಿಯಾ, ರಣಬೀರ್ ಜೊತೆ ರಾಹಾ ಮಿಂಚಿದ್ದಳು. ಅವಳ ಫೋಟೋಗಳನ್ನು ಆಲಿಯಾ, ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದರು.
ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಆಗಾಗ ಮಗಳು ರಾಹಾ ಜೊತೆ ಕಾಣಿಸಿಕೊಳ್ತಿರುತ್ತಾರೆ. ಪಾಪರಾಜಿಗಳಿಗೆ ಹೆದರಿದ್ರೂ ರಾಹಾ ಕ್ಯೂಟ್ ರಿಯಾಕ್ಷನ್ ನೀಡೋದನ್ನು ಮರೆಯೋದಿಲ್ಲ. ರಾಹಾ ವಿಡಿಯೋ ನೋಡಿದ ಫ್ಯಾನ್ಸ್ ಲೈಕ್ ಮೇಲೆ ಲೈಕ್ ಕೊಡುತ್ತಾರೆ. ಇದರಿಂದ ಆಕೆಗೆ ಸಹಜವಾಗಿ ದೃಷ್ಟಿಯಾಗಬಹುದು ಎಂದು ಅಮ್ಮಾ ಆಲಿಯಾಗೆ ಈಗ ಅನ್ನಿಸರಲಿಕ್ಕೆ ಸಾಕು. ಅದಕ್ಕಾಗಿಯೇ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. ಆದರೆ ಆಕೆಯ ಕೆಲವು ಪೋಟೋಗಳು ಇಂಟರ್ನೆಟ್ನಲ್ಲಿ ಮಾತ್ರ ಇದ್ದೇ ಇರುತ್ತವೆ ಬಿಡಿ.
ಬೋಟಾಕ್ಸ್ ಸರ್ಜರಿಯಿಂದ ಆಲಿಯಾಗೆ ಪಾರ್ಶ್ವವಾಯು- ಮುಖ ಸೊಟ್ಟಗೆ? ನಟಿ ಹೇಳಿದ್ದೇನು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.