Rolls-Royceಗೆ ಆಮದು ತೆರಿಗೆ ವಿನಾಯಿತಿ ಕೇಳಿದ ಧನುಷ್‌ಗೆ ಕೋರ್ಟ್ ತರಾಟೆ

By Suvarna NewsFirst Published Aug 5, 2021, 4:51 PM IST
Highlights
  • ರಾಲ್ಸ್ ರಾಯ್ಸ್ ಕಾರು ಖರೀದಿಸಿ ಆಮದು ತೆರಿಗೆ ವಿನಾಯಿತಿ ಕೇಳಿದ ಧನುಷ್
  • ಕಾಲಿವುಡ್ ಟಾಪ್ ನಟನಿಗೆ ಕೋರ್ಟ್ ಹೇಳಿದ್ದಿಷ್ಟು..!

ಚೆನ್ನೈ(ಆ.05): ಕಾಲಿವುಡ್ ಸ್ಟಾರ್ ವಿಜಯ್ ತಮ್ಮ ಕಾರಿಗೆ ತೆರಿಗೆ ವಿನಾಯಿತಿ ಕೇಳಿದಂತೆಯೇ ನಟ ಧನುಷ್ ಕೂಡಾ ದುಬಾರಿ ರಾಲ್ಸ್ ರಾಯ್ಸ್ ಕಾರಿಗೆ ಆಮದು ತೆರಿಗೆ ವಿನಾಯಿತಿ ಕೇಳಿ ಪೇಚಿಗೆ ಸಿಲುಕಿದ್ದಾರೆ. ದುಬಾರಿ ಕಾರು ಖರೀದಿಸಿ ತೆರಿಗೆ ಕಟ್ಟದ್ದಕ್ಕೆ ನಟನನ್ನು ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ನಟ ಧನುಷ್ ತನ್ನ ಆಮದು ಮಾಡಿದ ರೋಲ್ಸ್ ರಾಯ್ಸ್ ಘೋಸ್ಟ್ ಕಾರಿನ ಆಮದು ತೆರಿಗೆಯನ್ನು ಪ್ರಶ್ನಿಸಿ 2015ರಲ್ಲಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್, ನಟರು ಜವಾಬ್ದಾರಿಯುತ ನಾಗರೀಕರಂತೆ ವರ್ತಿಸಬೇಕು. ಸಂಪೂರ್ಣವಾಗಿ ತೆರಿಗೆ ಪಾವತಿಸದೆ ತಮ್ಮ ಕಾರುಗಳನ್ನು ಚಲಾಯಿಸಬಾರದು ಎಂದು ಹೇಳಿದೆ. ಅರ್ಜಿ ವಿಚಾರಣೆ ಮಾಡಿದ ನ್ಯಾ.ಎಸ್. ಎಸ್. ಸುಬ್ರಮಣ್ಯಂ ರಾಷ್ಟ್ರಪ್ರಶಸ್ತಿ ವಿಜೇತ ನಟನ ಮನವಿಯಲ್ಲಿ ತಮ್ಮ ವೃತ್ತಿಯನ್ನು ಬಹಿರಂಗಪಡಿಸಲಿಲ್ಲ. ಈ ಬಗ್ಗೆ ಶುಕ್ರವಾರ ಸ್ಪಷ್ಟನೆ ನೀಡಬೇಕೆಂದು ಹೇಳಿದ್ದಾರೆ.

38 ವರ್ಷದ ನಟ 2015 ರಲ್ಲಿ 30 ಲಕ್ಷಕ್ಕಿಂತ ಸ್ವಲ್ಪ ಹೆಚ್ಚು ಪಾವತಿಸಿದ್ದರು. ಪ್ರವೇಶ ತೆರಿಗೆಯ ಶೇಕಡ 50 ರಷ್ಟು ಕಡಿಮೆ ಮಾಡಿ ಬೇಡಿಕೆ ಮತ್ತು ಪ್ರವೇಶ ತೆರಿಗೆಯ ವಿರುದ್ಧ ಹಿಂದಿನ ನ್ಯಾಯಾಲಯದ ತೀರ್ಪುಗಳನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಹೋಗಿದ್ದರು. ನಂತರ ಸುಪ್ರೀಂ ಕೋರ್ಟ್ ಹೈಕೋರ್ಟ್ ತೀರ್ಪು ಎತ್ತಿ ಹಿಡಿದಿದ್ದರೂ, ಧನುಷ್ ಪ್ರಕರಣವನ್ನು ಹಿಂಪಡೆಯಲಿಲ್ಲ.

ಲಕ್ಷುರಿ ಕಾರು ಇಂಪೋರ್ಟ್ ಟ್ಯಾಕ್ಸ್ ಪ್ರಶ್ನಿಸಿದ್ದ ವಿಜಯ್‌ಗೆ 1 ಲಕ್ಷ ದಂಡ

ಇಂದು ನಟ ನ್ಯಾಯಾಲಯಕ್ಕೆ ಬಾಕಿ ತೆರಿಗೆ ಮೊತ್ತವನ್ನು ಪಾವತಿಸಲು ಸಿದ್ಧನಿದ್ದೇನೆ ಮತ್ತು ಪ್ರಕರಣವನ್ನು ಹಿಂಪಡೆಯಲು ನ್ಯಾಯಾಲಯದ ಅನುಮತಿಯನ್ನು ಕೋರಿದ್ದಾರೆ.

ನಟನ ವಕೀಲ ವಿಜಯನ್ ಸುಬ್ರಮಣಿಯನ್, ಹಿಂದಿನ ವಕೀಲರು ನಿಧನರಾದರು. ವೃತ್ತಿಯನ್ನು ಏಕೆ ಬಹಿರಂಗಪಡಿಸಲಿಲ್ಲ ಎಂದು ನನಗೆ ಗೊತ್ತಿಲ್ಲ. ಈಗ ಧನುಷ್ ತೆರಿಗೆ ಸಂಪೂರ್ಣವಾಗಿ ಪಾವತಿಸಲು ಸಿದ್ಧರಿದ್ದಾರೆ ಸೋಮವಾರದ ಮೊದಲು ಪಾವತಿ ಮಾಡಬಹುದು ಎಂದಿದ್ದಾರೆ. ತಮ್ಮ ಆಮದು ಮಾಡಿರುವ ರೋಲ್ಸ್ ರಾಯ್ಸ್ ಘೋಸ್ಟ್ ಕಾರಿನ ಮೇಲೆ ಪ್ರವೇಶ ತೆರಿಗೆ ವಿಧಿಸುವುದನ್ನು ಪ್ರಶ್ನಿಸಿ ಒಂದು ತಿಂಗಳೊಳಗೆ ಎರಡು ನಟರು ಸಲ್ಲಿಸಿದ ಹಳೆಯ ಅರ್ಜಿಗಳ ಕುರಿತು ಮದ್ರಾಸ್ ಹೈಕೋರ್ಟ್ ನಟನ ಮೇಲೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಕಳೆದ ತಿಂಗಳು ಬೇರೊಂದು ಪ್ರಕರಣದಲ್ಲಿ ಅದೇ ತೆರಿಗೆಯನ್ನು ಪ್ರಶ್ನಿಸಿದ್ದ ನಟ ವಿಜಯ್ ಗೆ ನ್ಯಾಯಾಲಯ ₹ 1 ಲಕ್ಷ ದಂಡ ವಿಧಿಸಿತ್ತು. ನ್ಯಾಯಮೂರ್ತಿ ಸುಬ್ರಮಣ್ಯಂ ಅವರು ತಮ್ಮ ಆದೇಶದಲ್ಲಿ, ನಟರು ರೀಲ್ ಹೀರೋಗಳಂತೆ ವರ್ತಿಸುವ ನಿರೀಕ್ಷೆ ಇಲ್ಲ. ಆದರೆ ತೆರಿಗೆ ವಂಚನೆಯನ್ನು ರಾಷ್ಟ್ರ ವಿರೋಧಿ ಪದ್ಧತಿ ಎಂದು ಪರಿಗಣಿಸಬೇಕು. ತೆರಿಗೆ ಪವಾತಿಸದಿರುವುದು ಅಸಂವಿಧಾನಿಕ ಎಂದು ಹೇಳಿದ್ದಾರೆ.

click me!