
ಬಸುರಿ ಬಯಕೆಗಳು ಸಾಮಾನ್ಯ. ಹಿಂದೆಲ್ಲಾ ಹುಳಿ ಮಾವು, ಸಿಹಿ ತಿನಿಸು ಕೇಳಿ ತಿನ್ನುತ್ತಿದ್ದ ಗರ್ಭಿಣಿಯರ ಟೇಸ್ಟ್ ಇಂದಿನ ಕಾಲಕ್ಕೆ ಬದಲಾಗಿದೆ. ಕೆಲವರು ಚಾಟ್ಸ್ ಬಯಕೆ ವ್ಯಕ್ತಪಡಿಸಿದರೆ ಇನ್ನೂ ಕೆಲವರಿಗೆ ಪಿಝಾ, ಸ್ಯಾಂಡ್‌ವಿಚ್‌ನಂತ ಫಾಸ್ಟ್‌ಫುಡ್ ಬಯಕೆ. ಬಾಲಿವುಡ್ ನಟಿ ಕರೀನಾ ಕಪೂರ್‌ಗೆ ಬಸುರಿ ಬಯಕೆಯಲ್ಲಿ ಪಿಝಾ ತಿಂತಿದ್ದರು.
ಕರೀನಾ ಕಪೂರ್ ಗರ್ಭಾವಸ್ಥೆಯ ಆಹಾರದಲ್ಲಿ ಸಾಕಷ್ಟು ಪಿಝಾ ತಿಂದಿದ್ದರು ಎಂದು ಬಹಿರಂಗಪಡಿಸಿದ್ದಾರೆ. 40 ವರ್ಷದ ನಟಿ ತನ್ನ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ತನ್ನ ಗರ್ಭಾವಸ್ಥೆಯಲ್ಲಿ ಪಿಝಾ ಆಸೆ ಹೊಂದಿರುವುದನ್ನು ಬಹಿರಂಗಪಡಿಸಿದ್ದಾರೆ. ನಟಿ ತನಗೆ ಆಸೆ ಆಗುವ ವಿವಿಧ ಪಿಝಾ ತಿನ್ನುವ ಮೂಲಕ ತಮ್ಮ ಬಸುರಿ ಬಯಕೆ ನಿಭಾಯಿಸಿದ್ದಾರಂತೆ. ಕರೀನಾ ಇತ್ತೀಚೆಗೆ ತನ್ನ ಹೊಸ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ. ಕರೀನಾ ಕಪೂರ್ ಖಾನ್ ಅವರ ಪ್ರೆಗ್ನೆನ್ಸಿ ಬೈಬಲ್ ವಿವಾದ ಸೃಷ್ಟಿಸುವುದರ ಜೊತೆ ಜೊತೆಗೆ ಅವರ ಅಭಿಮಾನಿಗಳಿಂದ ಸಾಕಷ್ಟು ಮೆಚ್ಚುಗೆ ಪಡೆದಿದೆ.
ಈ ಕಾರಣಕ್ಕೆ ಕರೀನಾ ಕೊಲೆ ಮಾಡುತ್ತಾರೆಂಬ ಭಯವಂತೆ ಸೈಫ್‌ಗೆ !
ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಕರೀನಾ ತನ್ನ ಗರ್ಭಾವಸ್ಥೆಯಲ್ಲಿ ವೈನ್ ಮತ್ತು ಸಿಹಿತಿಂಡಿ ಬಗ್ಗೆ ಹೆಚ್ಚಿನ ಬಯಕೆ ಹೊಂದಿದ್ದನ್ನು ತಿಳಿಸಿದ್ದಾರೆ. ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್‌ಗೆ ಇಬ್ಬರು ಗಂಡುಮಕ್ಕಳಿದ್ದಾರೆ. ತೈಮೂರ್ 2016 ರಲ್ಲಿ ಜನಿಸಿದ್ದರೆ ಈ ವರ್ಷ ಫೆಬ್ರವರಿಯಲ್ಲಿ ಜೆಹ್‌ಗೆ ಜನ್ಮ ನೀಡಿದ್ದಾರೆ ಕರೀನಾ.
ಒಂದು ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಕರೀನಾ ತನ್ನ ಗರ್ಭಾವಸ್ಥೆಯ ದಿನಗಳಲ್ಲಿ ಇಷ್ಟವಿಲ್ಲದ ಪೋಷಕರ ಸಲಹೆಯನ್ನು ಸ್ವೀಕರಿಸಿದ್ದೇನೆ, ಮಗುವಿನ ವಸ್ತುಗಳಿಗಾಗಿ ಅತಿಯಾಗಿ ಶಾಪಿಂಗ್ ಮಾಡಿದ್ದೇನೆ. ಮಗುವಿನ ಆರೈಕೆಗಾಗಿ Google ನಲ್ಲಿ ಹೆಚ್ಚಿನ ಸಮಯವನ್ನು ಬ್ರೌಸ್ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.