
ಭಾರತದ ಟಾಪ್ ರ್ಯಾಪ್ ಸಿಂಗರ್ ಹನಿ ಸಿಂಗ್ ವಿರುದ್ಧ ಪತ್ನಿ ಆರೋಪ ಮಾಡಿದ್ದಾರೆ. ತನ್ನ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಿರುವ ಹನಿ ಸಿಂಗ್ ಪತ್ನಿ 10 ಕೋಟಿ ಪರಿಹಾರವನ್ನು ಕೇಳಿದ್ದಾರೆ. ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣೆ ಕಾಯ್ದೆಯಡಿಯಲ್ಲಿ 10 ಕೋಟಿ ಪರಿಹಾರ ನೀಡಬೇಕಾಗಿ ಅವರು ಕೇಳಿದ್ದಾರೆ. ಪ್ರಾಣಿಯಂತೆ ಅತ್ಯಂತ ಕ್ರೂರವಾಗಿ ತನ್ನನ್ನು ನಡೆಸಿಕೊಂಡಿದ್ದಾರೆ ಎಂದೂ ಆಕೆ ಆರೋಪಿಸಿದ್ದಾರೆ.
ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ತಾನಿಯಾ ಹನಿಸಿಂಗ್‌ಗೆ ನೋಟಿಸ್ ಕಳುಹಿಸಿದ್ದಾರೆ. ಹನಿಸಿಂಗ್ ಹಾಗೂ ಪತ್ನಿಯ ಜಂಟಿ ಪ್ರಾಪರ್ಟಿ ಹಕ್ಕಿನಲ್ಲಿ ಹೊಸ ಅಲೆಯನ್ಸ್ ಅಥವಾ ಮೂರನೇ ವ್ಯಕ್ತಿಗೆ ಹಕ್ಕು ನೀಡಬಾರದು. ಹನಿ ಸಿಂಗ್ ಹಾಗೂ ಅವರ ಪತ್ನಿ ನೋಯ್ಡಾದಲ್ಲಿ ಹೊಂದಿರುವ ಆಸ್ತಿಗೆ ಇದು ಅನ್ವಯವಾಗಲಿದ್ದು, ಅವರ ಪತ್ನಿಯ ಆಭರಣಕ್ಕೂ ಸಂಬಂಧಪಡುತ್ತದೆ ಎಂದು ಹನಿ ಸಿಂಗ್ ಪತ್ನಿಯ ಲಾಯರ್ ಹೇಳಿದ್ದಾರೆ.
ಸಿಂಗ್ ಅವರ ಪತ್ನಿ ಶಾಲಿನಿ ತಲ್ವಾರ್ ಅವರು ತಮ್ಮ ಪತಿ ಮತ್ತು ಅವರ ಕುಟುಂಬದಿಂದ ದೈಹಿಕ, ಮೌಖಿಕ, ಮಾನಸಿಕ ಮತ್ತು ಭಾವನಾತ್ಮಕ ನಿಂದನೆಗೆ ಒಳಗಾಗಿದ್ದಾರೆ ಎಂದು ಆರೋಪಿಸಿದ್ದಾರೆ. 38 ವರ್ಷದ ತಲ್ವಾರ್ ಕಳೆದ ಕೆಲವು ವರ್ಷಗಳಲ್ಲಿ ಸಿಂಗ್ ತನ್ನನ್ನು ಅನೇಕ ಬಾರಿ ಹೊಡೆದಿದ್ದಾನೆ. ಆತ ಮತ್ತು ಅವನ ಕುಟುಂಬವು ದೈಹಿಕ ಹಾನಿಯ ಬೆದರಿಕೆ ಹಾಕಿದ್ದರಿಂದ ಅವಳು ನಿರಂತರವಾಗಿ ಭಯದಿಂದ ಬದುಕುತ್ತಿದ್ದಳು ಎಂದು ಹೇಳಿಕೊಂಡಿದ್ದಾರೆ.
ಆಕೆಯ ಮೇಲೆ ನಡೆದ ಮಾನಸಿಕ ಕಿರುಕುಳ ಮತ್ತು ಕ್ರೌರ್ಯದ ಕಾರಣದಿಂದಾಗಿ, ಆಕೆಯು ಖಿನ್ನತೆಯ ಲಕ್ಷಣಗಳಿಂದ ಬಳಲುತ್ತಿದ್ದಳು ಮತ್ತು ವೈದ್ಯಕೀಯ ಸಹಾಯವನ್ನು ಬಯಸಿದ್ದಳು ಎಂದು ಅವರ ವಕೀಲರಾದ ಸಂದೀಪ್ ಕಪೂರ್, ಅಪೂರ್ವ ಪಾಂಡೆ ಮತ್ತು ಜಿ ಜಿ ಕಶ್ಯಪ್ ಮೂಲಕ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.
ವೃತ್ತಿಪರವಾಗಿ ಯೋ ಯೋ ಹನಿ ಸಿಂಗ್ ಎಂದು ಕರೆಯಲ್ಪಡುವ ಹಿರ್ದೇಶ್ ಸಿಂಗ್ ಮತ್ತು ತಲ್ವಾರ್ ಜನವರಿ 23, 2011 ರಂದು ವಿವಾಹವಾಗಿದ್ದರು. ಮನವಿಯಲ್ಲಿ, ತಲ್ವಾರ್ ಕಳೆದ 10 ವರ್ಷಗಳಲ್ಲಿ ಸಿಂಗ್ ತನ್ನ ಮೇಲೆ ಹೇಗೆ ದೈಹಿಕ ಹಲ್ಲೆ ಮಾಡಿದ್ದಾನೆ ಎಂದು ಹೇಳಿದ್ದಾರೆ.
ತಲ್ವಾರ್ ತನ್ನ ಪತಿಯ ವಿರುದ್ಧ ವಂಚನೆಯ ಆರೋಪಗಳನ್ನು ಹೊರಿಸಿದ್ದಾರೆ. ಅವನು ಆಗಾಗ್ಗೆ ಅನೇಕ ಮಹಿಳೆಯರೊಂದಿಗೆ ಸಂಭೋಗ ಮಾಡುತ್ತಿದ್ದ. ಅವನ ಮದುವೆಯ ಉಂಗುರವನ್ನು ಧರಿಸಲಿಲ್ಲ. ಅವರ ಮದುವೆ ಫೋಟೋಗಳನ್ನು ಆನ್‌ಲೈನ್‌ನಲ್ಲಿ ಅಪ್ ಮಾಡಿದ್ದಕ್ಕಾಗಿ ಅವಳನ್ನು ನಿರ್ದಯವಾಗಿ ಹಿಂಸಿದ್ದಾಗಿ ಆರೋಪಿಸಿದ್ದಾರೆ.
ಒಮ್ಮೆ ಡ್ರೆಸ್ ಚೇಂಜ್ ಮಾಡುವಾಗ ತನ್ನ ಮಾವ ಕುಡಿದ ಅಮಲಿನಲ್ಲಿ ತನ್ನ ಕೋಣೆಗೆ ಬಂದು ತನ್ನ ಎದೆಯನ್ನು ಮುಟ್ಟಿದ್ದಾಗಿ ಆಕೆ ಹೇಳಿದ್ದಾರೆ. ಸಿಂಗ್ ಅವರ ಪತ್ನಿ ತನ್ನ ಮೇಲೆ ನಡೆದ ವಿವಿಧ ಕೌಟುಂಬಿಕ ದೌರ್ಜನ್ಯ ಕೃತ್ಯಗಳನ್ನು ತೋರಿಸಲು ಪುರಾವೆಗಳಿವೆ ಎಂದು ಹೇಳಿದ್ದಾರೆ. ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣೆ ಕಾಯ್ದೆ 2005 ರ ಅಡಿಯಲ್ಲಿ ಆತನ ವಿರುದ್ಧ ಆದೇಶಗಳನ್ನು ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಕೌಟುಂಬಿಕ ದೌರ್ಜನ್ಯ ಎಸಗಿದ್ದಕ್ಕಾಗಿ ಮಧ್ಯಂತರ ಪರಿಹಾರವಾಗಿ 10 ಕೋಟಿ ರೂಪಾಯಿಗಳನ್ನು ನೀಡುವಂತೆ ತನ್ನ ಪತಿಗೆ ನಿರ್ದೇಶಿಸುವಂತೆ ನ್ಯಾಯಾಲಯವನ್ನ ಕೋರಿದ್ದಾರೆ. ದೆಹಲಿಯಲ್ಲಿ ಸಂಪೂರ್ಣ ಸುಸಜ್ಜಿತ ವಸತಿಗಾಗಿ ತಿಂಗಳು 5 ಲಕ್ಷ ರೂ.ಗಳ ಬಾಡಿಗೆಯನ್ನು ನೀಡುವಂತೆ ಆಕೆ ನ್ಯಾಯಾಲಯಕ್ಕೆ ವಿನಂತಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.