ದಿಶಾ ಪಠಾನಿ ಎಂಬ ಚೆಲುವೆಗೆ ರಾತ್ರಿ ಕಳೆದು ಬೆಳಗಾಗೋದ್ರೊಳಗೆ ಅದೇನು ಪ್ರೇರಣೆಯಾಯ್ತೋ ಗೊತ್ತಿಲ್ಲ. ಲೋ ರೈಸ್ ಜೀನ್ಸ್ ಧರಿಸಿ ಫೋಟೋ ಹೊಡೆಸಿಕೊಂಡಳು, ಇದೀಗ ಟ್ರೆಂಡ್ ಅಂದಳು. ಅವಳ ಮಾತನ್ನು ಅಲ್ಲಗೆಳೆಯೋ ಭಂಡರುಂಟೇ..
ನಿಶಾಂತ ಕಮ್ಮರಡಿ
‘ಟ್ರೆಂಡ್ ಅಂದ್ರೆ ಅದ್ರಲ್ಲಿ ನಾನು ಚೆಂದ ಕಾಣ್ತೀನೋ, ಇಲ್ವೋ ಅನ್ನೋದು ಮುಖ್ಯ ಆಗಲ್ಲ. ಆ ಸ್ಟೈಲ್‌ಅನ್ನು ಫಾಲೋ ಮಾಡ್ತಿದ್ರೆ ನಿನ್ನನ್ನು ಜನ ಅಪ್‌ಡೇಟೆಡ್ ವರ್ಶನ್‌ನಲ್ಲಿ ನೋಡ್ತಾರೆ. ಇಲ್ಲಾಂದ್ರೆ ಔಟ್ ಡೇಟೆಡ್ ಆಗಿರ್ತೀಯಾ, ಇನ್ನೊಬ್ಬರ ಕಣ್ಣಲ್ಲಿ ಹಾಗಾಗ್ತೀಯಾ ಇಲ್ಲವಾ ಬೇರೆ ಮಾತು. ಆದರೆ ನಿನ್ನೊಳಗೆ ಆ ತರದ ಥಾಟ್ ಬರುತ್ತೆ, ಅದರ ಜೊತೆಗೆ ಕಾನ್ಫಿಡೆನ್ಸ್ ಕಡಿಮೆ ಆಗುತ್ತೆ..’
undefined
ಒಂದೇ ಉಸಿರಿನಲ್ಲಿ ಇಷ್ಟುಹೇಳಿ ಮುಗಿಸಿದಳು ಫ್ಯಾಶನ್ ಡಿಸೈನರ್ ಫ್ರೆಂಡ್. ಅಷ್ಟಕ್ಕೂ ಅಲ್ಲಿ ಬಂದ ವಿಚಾರ, ಪ್ಯಾಂಟ್ ಟೀ ಶರ್ಟ್‌ನಲ್ಲಿ ಒಂದಿಷ್ಟುಟ್ರೆಂಡ್‌ಗಳು ಬರುತ್ತವೆ, ಹೋಗುತ್ತವೆ. ಅವುಗಳಲ್ಲಿ ಕೆಲವು ನಮಗೆ ಸೂಟ್ ಆಗಲ್ಲ. ಇನ್ನೂ ಕೆಲವು ಕಂಫರ್ಟ್ ಫೀಲ್ ಕೊಡಲ್ಲ. ಹಾಗಿರುವಾಗ ನಾವು ನಮಗೆ ಕಂಫರ್ಟ್ ಆಗಿರೋದನ್ನ ಆರಿಸಿಕೊಂಡು ಅದನ್ನೇ ಧರಿಸಬಹುದಲ್ವಾ.. ಟ್ರೆಂಡ್, ಫ್ಯಾಶನ್ ಅಂದುಕೊಂಡು ನಮಗಾಗದ ಸ್ಟೈಲ್ ಫಾಲೋ ಮಾಡ್ಬೇಕಾ ಅಂತ. ಆದರೆ ಫ್ಯಾಶನ್ ಫೀಲ್ಡ್ ಜೊತೆಗೆ ಈ ಜನರೇಶನ್ ಮೈಂಡ್ ಸೆಟ್‌ಅನ್ನೂ ಚೆನ್ನಾಗಿ ಅರ್ಥ ಮಾಡ್ಕೊಂಡಿರೋ ಆಕೆ ಮುಖಕ್ಕೆ ಹೊಡೆದ ಹಾಗೆ ಇಷ್ಟುಹೇಳಿದ್ಲು. ಆಮೇಲೆ ಮಾತಾಡಲಿಕ್ಕೆ ನಮಗೇನಾದರೂ ಉಳಿದ್ರೆ ತಾನೇ..ಇದು ಎಲ್ಲರಿಗೂ ಅನ್ವಯವಾಗುವ ಕಾರಣ ಇದನ್ನಿಲ್ಲಿ ದಾಖಲಿಸಬೇಕಾಯ್ತು.
ಟ್ರಾವೆಲ್ ಅಂದ್ರೆ ದೀಪಿಕಾ ಸೂಟ್‌ಕೇಸ್‌ನಲ್ಲಿ ಏನೆಲ್ಲ ಇರುತ್ತೆ ಗೊತ್ತಾ?
ಇಷ್ಟೆಲ್ಲ ಪೀಠಿಕೆ ಈಗ 2020ಕ್ಕೆ ಬರ್ತಿರೋ ಹೊಸ ಟ್ರೆಂಡ್‌ಗೆ. ‘ಸಾರಿ, ಆದ್ರೆ ಲೋ ರೈಸ್ ಜೀನ್ಸ್‌ಗಳು ಮತ್ತೆ ಬಂದಿದ್ದಾವೆ’ ವಿಷಾದದಲ್ಲೋ, ವಿನೋದದಲ್ಲೋ ‘ಕಟ್’ ಅನ್ನೋ ಲೈಫ್‌ಸ್ಟೈಲ್ ಜರ್ನಲ್ ಈ ಶೀರ್ಷಿಕೆಯಲ್ಲಿ ಲೋ ರೈಸ್ ಜೀನ್ಸ್ ಪ್ಯಾಂಟ್ ಟ್ರೆಂಡ್ ಮತ್ತೆ ಬರುತ್ತಿರುವ ಬಗ್ಗೆ ವರದಿ ಮಾಡಿದೆ.
ಪ್ಯಾರಿಸ್ ಫ್ಯಾಶನ್ ವೀಕ್‌ನಲ್ಲೋ, ಬೇರೆ ಇವೆಂಟ್‌ಗಳಲ್ಲೋ ಇಂಥದ್ದೊಂದು ಟ್ರೆಂಡ್ ಬಂದ ಕೂಡಲೇ ಗಬಕ್ಕನೆ ಆ ಡಿಸೈನ್ ಅಳವಡಿಸಿಕೊಳ್ಳೋದರಲ್ಲಿ ಬಾಲಿವುಡ್ ಮಂದಿ ಎಕ್ಸ್‌ಪಟ್ಸ್‌ರ್. ‘ಈ ವಸಂತ ಮಾಸಕ್ಕೆ ಲೋ ರೈಸ್ ಟ್ರೆಂಡ್ ಬರ್ತಿದೆ. 2020ರ ಕೀ ಟ್ರೆಂಡ್ ಇದಾಗಬಹುದು’ ಅಂತ ಅಂತಾರಾಷ್ಟ್ರೀಯ ಫ್ಯಾಶನ್ ಡಿಸೈನರ್ಸ್ ಚರ್ಚಿಸುತ್ತಿರುವ ಹೊತ್ತಲ್ಲೇ ದಿಶಾ ಪಠಾನಿ ಎಂಬ ‘ಭಾಗೀ 2’ ನಟಿ ಈ ಸ್ಟೈಲ್‌ನಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.
ಲೋ ರೈಸ್ ಜೀನ್ಸ್ ನಮಗೆ ಹೊಸತಲ್ಲವೇ ಅಲ್ಲ. 90 ರ ದಶಕದಲ್ಲಿ ಫೇಮಸ್ ಆಗಿ, 2000ನೇ ಇಸವಿಯಲ್ಲೂ ಟ್ರೆಂಡ್ ಆಗಿ, ಕಳೆದ ಮೂರು ವರ್ಷಗಳ ಕೆಳಗೆ ಮತ್ತೆ ಸಖತ್ ಕ್ರೇಜಿ ಫ್ಯಾಶನ್ ಆಗಿ ಮಿಂಚಿದ್ದು ಲೋ ವೆಸ್ಟ್ ಅಥವಾ ಲೇ ರೈಸ್ ಸ್ಟೈಲ್. ಇನ್ನೊಂದು ಅಂಶ ಅಂದರೆ ಮೂರು ವರ್ಷಗಳ ಕೆಳಗೆ ವಸಂತ ಮಾಸದ ಫ್ಯಾಶನ್ ಟ್ರೆಂಡ್ ಆಗಿಯೇ ಕಾಣಿಸಿಕೊಂಡದ್ದು ಈಗ ಮತ್ತ ಅದೇ ಸಂದರ್ಭದಲ್ಲಿ ಫ್ಯಾಶನ್ ಸ್ಟೇಟ್‌ಮೆಂಟ್ ಆಗುತ್ತಿದೆ.
ಬಮ್ ಕ್ಲೀವಿಯೇಜ್ ತೋರಿಸಿಕೊಳ್ಳೋ, ಮೇಲಿಂದ ಒಂದು ಪುಟಾಣಿ ಟಾಪ್ ಕಾಂಬಿನೇಶನ್‌ನ ಜೊತೆಗೆ ಬರುವ ಈ ಸ್ಟೈಲ್ 2020 ಯ ‘ಕೀ ಟ್ರೆಂಡ್’ ಅಂತೆ. ಹೆಣ್ಮಕ್ಕಳಿಗೆ ಮಾತ್ರ ಬಂದಿರೋ ಫ್ಯಾಶನ್ ಇದಲ್ಲ. ಹುಡುಗರೂ ಈ ಸ್ಟೈಲ್‌ಗೆ ಜೈ ಅನ್ನಬಹುದು. ಹುಡುಗಿಯರ ವಲಯದಲ್ಲಿ ಈಗಷ್ಟೇ ಲೋ ರೈಸ್ ಜೀನ್ಸ್ ಹವಾ ರೈಸ್ ಆಗ್ತಿದೆ.
ಉಡುಗೆ ಮನಸ್ಸಿನ ಕೈಗನ್ನಡಿ; ಕಂಫರ್ಟ್ ನೀಡುವ ಡ್ರೆಸ್‍ಗೇ ಮಣೆ ಹಾಕಿ
ಯಾವ ಥರದ ಜೀನ್ಸ್?
ಇಂಟರ್‌ನ್ಯಾಶನಲ್ ಲೆವೆಲ್‌ನಲ್ಲಿ ಟ್ರೆಂಡ್ ಅನಿಸಿಕೊಂಡಿರೋದು ಬೆಲ್ ಬಾಟಮ್ ಮಾದರಿಯ ಲೋ ವೆಸ್ಟ್ ಜೀನ್ಸ್ ಮತ್ತು ತ್ರೀ ಫೋರ್‌್ತ ತೋಳಿನ ವಿನ್ಯಾಸ ಇರುವ ಕ್ರಾಪ್ ಟಾಪ್. ಆದರೆ ನಮ್ಮ ಬಾಲಿವುಡ್ ಹುಡುಗಿ ದಿಶಾಪಟಾಣಿ ತೊಟ್ಟಿರುವುದು ಸ್ಕ್ರಾಚ್ ಇರೋ ಆ್ಯಂಕಲ್ ಲೆನ್‌್ತ ಲೋ ರೈಸ್ ಜೀನ್ಸ್ ಪ್ಯಾಂಟ್. ನಮ್ಮಲ್ಲಿ ಬಹುಶಃ ಇದೇ ವಿನ್ಯಾಸ ಹೆಚ್ಚು ಜನಪ್ರಿಯ ಆಗಬಹುದೇನೋ.
ಕಾಂಬಿನೇಶನ್ ಏನು?
ಹೆಣ್ಮಕ್ಕಳಿಗಾದರೆ ಲೋ ರೈಸ್ ಜೀನ್ಸ್‌ಗೆ ಕ್ರಾಪ್ ಟಾಪ್ ಬೆಸ್ಟ್ ಕಾಂಬಿನೇಶನ್. ಮುಂಭಾಗ ಹೊಕ್ಕಳು, ಪೆಲ್ವಿಕ್ ತೋರಿಸೋ ಪ್ಯಾಂಟ್‌ಗಳು ಹಿಂಭಾಗ ಬಮ್ ಕ್ಲೀವಿಯೇಜ್ ಲೆವೆಲ್‌ಗೆ ಇಳಿದರೆ ಅದು ಈ ಟ್ರೆಂಡ್ ಕರಾಮತ್ತು. ಇದು ಸಖತ್ ಹಾಟ್ ಅನಿಸಿಕೊಂಡಿವೆ. ಹುಡುಗರು ಇನ್‌ಫಾರ್ಮಲ್ ಡ್ರೆಸ್ ಅನ್ನು ಪೇರ್ ಮಾಡ್ಕೊಳ್ಳಬಹುದು. ಟೀ ಶರ್ಟ್‌ಗೆ ಚೆನ್ನಾಗಿರುತ್ತೆ.
ಸ್ಕರ್ಟ್‌ನಲ್ಲಿ ಎಷ್ಟುವಿಧ, ಅವು ಯಾವುವು?
ಈ ಕಾಂಬಿನೇಶನ್‌ಗೆ ಓಪನ್ ಹೇರ್‌ಸ್ಟೈಲ್ ಸಖತ್ತಾಗಿರುತ್ತೆ. ಮಿನಿಮಲ್ ಮೇಕಪ್, ಕಾಂಬಿನೇಶನ್ ಆಗಿ ಹೈ ಲೆನ್‌್ತ ಶೂಗಳು ಸಖತ್ ಹಾಟ್ ಅನಿಸುತ್ತವೆ.