ಲಾಕ್ ಅಪ್ ರಿಯಾಲಿಟಿ ಶೋನಲ್ಲಿ ಟ್ರೋಲ್‌ಗಳ ಬಗ್ಗೆ ಮಾತನಾಡಿದ ಪೂನಂ ಪಾಂಡೆ. ದಿನವಿಡೀ ಎಣ್ಣೆ ಕುಡಿದು ಗಂಡನಿಂದ ದೌರ್ಜನ್ಯ?
ಬಾಲಿವುಡ್‌ನಲ್ಲಿ ನಡೆಯುತ್ತಿದ್ದ ಜನಪ್ರಿಯ ರಿಯಾಲಿಟಿ ಶೋ ಅಂದ್ರೆ ಇಷ್ಟು ದಿನ ಎಲ್ಲರೂ ಬಿಗ್ ಬಾಸ್ ಎಂದು ಹೇಳುತ್ತಿದ್ದರು. ಆದರೀಗ ಓಟಿಟಿಗೆ ಶಿಫ್ಟ್ ಆಗಿ ಕಂಗನಾ ನಡೆಸಿಕೊಡುತ್ತಿರುವ ಲಾಕಪ್ ಎನ್ನುತ್ತಿದ್ದಾರೆ. ಕಾಂಟ್ರೋವರ್ಸಿ ಕ್ರಿಯೇಟ್ ಮಾಡಿರುವ ಸೂಪರ್ ಜೋಡಿಗಳೇ ಬಂದಿರುವ ಕಾರಣ ದಿನಕ್ಕೊಂದು ಬ್ರೇಕಿಂಗ್ ನ್ಯೂಸ್ ದಿನಕ್ಕೊಂದು ವೈರಲ್ ಹೇಳಿಕೆಗಳನ್ನು ನೀಡುತ್ತಿದ್ದಾರೆ ಸೆಲೆಬ್ರಿಟಿಗಳು. ಅದರಲ್ಲೂ ಎಲ್ಲಾರ ಕಣ್ಣಿಗೆ ಗುರಿಯಾಗಿರುವುರು ಪೂನಂ ಪಾಂಡೆ.
ಮದುವೆಯಾದ ದಿನದಂದಲ್ಲೂ ದೌರ್ಜನ್ಯಕ್ಕೆ ಒಳಗಾಗಿರುವುದರ ಬಗ್ಗೆ ಪೂನಂ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ. ಹೀಗಾಗಿ ಪತಿ ಸ್ಯಾಮ್ ಬಾಂಬೆ ನಾನು ಕೂಡ ಎಂಟ್ರಿ ಕೊಡಲು ರೆಡಿಯಾಗಿರುವ ಏನೇ ಸತ್ಯ ಇದ್ದರೂ, ಸಮವಾಗಿ ಹೊರ ಬರಲಿ ಎನ್ನುತ್ತಿದ್ದಾರೆ. ಸೆಪ್ಟೆಂಬರ್ 2020ರಂದು ನಡೆದ ಘಟನೆ ಬಗ್ಗೆ ಪೂನಂ ಪದೇ ಪದೇ ಹೇಳುತ್ತಿರುವ ಕಾರಣ ಸ್ಯಾಮ್ ಖಾಸಗಿ ಸಂದರ್ಶನದಲ್ಲಿ ಈ ಘಟನೆ ಬಗ್ಗೆ ಮಾತನಾಡಿದ್ದಾರೆ.
ಕೆಲಸ ಇರ್ಲಿಲ್ಲ ಅಂತ ಕಾಂಟ್ರೋವರ್ಸಿ ಮಾಡುತ್ತಿದ್ದೆ; ಸತ್ಯ ಒಪ್ಪಿಕೊಂಡ ಪೂನಂ ಪಾಂಡೆ ?ಸ್ಯಾಮ್ ಬಾಂಬೆ ಮಾತು:
'Assailt ಎನ್ನುವುದು ವಿವಿಧ ರೂಪಗಳಲ್ಲಿ ಆಗುತ್ತದೆ. ಒಬ್ಬರು, ಇಬ್ಬರು ಅಂತೆಲ್ಲಾ ಅನೇಕ ಗಂಡಸರು ಈ ರೀತಿ ಘಟನೆಯನ್ನು ಎದುರಿಸುತ್ತಿದ್ದಾರೆ. ಅವರಿಗೂ ತಾಳ್ಮೆ ಇರುತ್ತದೆ. ಅದು ಮೀರಿದಾಗ ಕಪಾಳಕ್ಕೆ ಹೊಡೆಯುತ್ತಾರೆ. ನಮ್ಮಿಬ್ಬರ ನಡುವೆ ಸೆಪ್ಟೆಂಬರ್ 2020ರಂದು ನಡೆದ ಘಟನೆ ಸತ್ಯ. ಆದರೆ ನಾನು ಯಾವ ತಪ್ಪನ್ನೂ ಮಾಡಿಲ್ಲ, ಆ ಜಗಳ ನನ್ನಿಂದ ಶುರುವಾಗಿಲ್ಲ,' ಎಂದು ಸ್ಯಾಮ್ ಇಟೈಮ್ ಜೊತೆ ಮಾತನಾಡಿದ್ದಾರೆ.
'ಪೂನಂ ನನ್ನ ಹೆಂಡತಿ. ಮದ್ವೆ ಆದ್ಮೇಲೆ ಗಂಡ ಹೆಂಡತಿ ಒಟ್ಟಿಗೆ ಸಂಸಾರ ಮಾಡಬೇಕು ಅನ್ನೋ ವಿಚಾರ ಅವಳಿಗೆ ಗೊತ್ತಿಲ್ಲ. ಇದೆಲ್ಲಾ ಅವಳು ಸೀರಿಯಸ್ ಆಗಿ ಸ್ವೀಕರಿಸಿಲ್ಲ. ಆದರೆ ನಾನು ಮದುವೆ ವಿಚಾರದಲ್ಲಿ ಸೀರಿಯಸ್ ಆಗಿರುವೆ. ಆಕೆ ಯಾವಾಗ ಬೇಕಿದ್ದರೂ ನನ್ನ ಜೀವನಕ್ಕೆ ವಾಪಸ್ ಬರಬಹುದು. ನನ್ನ ಹಂಡತಿಗೆ ಎಲ್ಲಾ ಗುಣಗಳೂ ಇವೆ, ಆದರೆ loyalty ಇಲ್ಲ. ಹೀಗಾಗಿ ಅದೊಂದು ಅವರಿಗೆ ಬರುವವರೆಗೂ ಜೀವನ ನಡೆಸುವುದು ಕಷ್ಟ,' ಎಂದು ಸ್ಯಾಮ್ ಹೇಳಿದ್ದಾರೆ.
Poonam Pandey: ಕೇಳಬಾರದವರ ಮಾತು ಕೇಳಿ ಆಗಬಾರದ್ದು ಆಯ್ತು ಅಂದ ಪೂನಂ ಪಾಂಡೆ, ಆಗಿದ್ದಾದ್ರೂ ಏನು?ಲಾಕ ಅಪ್ ರಿಯಾಲಿಟಿ ಶೋನಲ್ಲಿ ಪೂನಂ, ನನ್ನ ಪತಿ ದಿನವಿಡೀ ಕುಡಿಯುತ್ತಾನೆ. ಪೋನ್ ಮುಟ್ಟುವುದಕ್ಕೂ ಬಿಡುವುದಿಲ್ಲ, ಎಂದು ಓಪನ್ ಹೇಳಿಕೆ ನೀಡುತ್ತಾರೆ. ಆಗ ಪ್ರತಿಸ್ಪರ್ಧಿ ಕರಣ್‌ವೀರ್ ಪ್ರಶ್ನೆ ಮಾಡಿದಾಗ, 'ನನಗೆ ನಾಯಿಗಳು ಅಂದ್ರೆ ತುಂಬಾನೇ ಇಷ್ಟ. ಅವುಗಳ ಜೊತೆ ಮಲಗಿಕೊಂಡರೆ ಪ್ರಶ್ನೆ ಮಾಡುತ್ತಾನೆ. ಗಂಡನಿಗಿಂತ ನಾಯಿಯೇ ಹೆಚ್ಚು ಎಂದು ಹೇಳುತ್ತಾನೆ. ಒಂದು ನಾಯಿಯನ್ನು ಇಷ್ಟ ಪಡುವುದಕ್ಕೆ ಕಪಾಳಕ್ಕೆ ಹೊಡೆಸಿಕೊಳ್ಳಬೇಕು ನಾನು. ಇದರಿಂದಲೇ ನನಗೆ ಬ್ರೈನ್ ಹೆಮರೇಜ್ ಆಗಿರುವುದು,' ಎಂದು ಪೂನಂ ಹೇಳಿದ್ದಾರೆ.
'ಜನರು ನನ್ನನ್ನು ಬರಿ ಬೋಲ್ಡ್ ಮಾಡೆಲ್ ಮತ್ತು ಎರಡು ನಿಮಿಷಗಳಲ್ಲಿ ಹೆಡ್‌ಲೈನ್ ಮಾಡುವ ಹುಡುಗಿ ಅಂದುಕೊಂಡಿದ್ದಾರೆ. ನನ್ನ ಲೈಫ್‌ನಲ್ಲಿ ಏನು ನಡೆಯುತ್ತಿದೆ, ನಾನು ಎಲ್ಲಿಂದ ಬಂದಿರುವೆ ಎಂದು ತಿಳಿದುಕೊಳ್ಳದೇ ಮಾತನಾಡುತ್ತಾರೆ. ನಾನು ಜೀವನದಲ್ಲಿ ಕೆಲವೊಂದು ತಪ್ಪುಗಳನ್ನು ಮಾಡಿದ್ದೀನಿ. ಈಗ ಪಶ್ಚಾತ್ತಾಪವಾಗುತ್ತಿದೆ. ನಾನು ದೌರ್ಜನ್ಯಕ್ಕೆ ಒಳಗಾಗಿದ್ದೆ. ಆಗ ಟ್ಟಿಟರ್‌ನಲ್ಲಿ ನಾನು ಟ್ರೆಂಡ್ ಆಗುತ್ತಿದ್ದೆ. ಒಂದು ಮಾಧ್ಯಮದಲ್ಲಿ ನೋಡಿದ ನನ್ನ ಜೀವನದ ಬಗ್ಗೆ ಚರ್ಚೆ ಮಾಡುವುದಕ್ಕೆ ಇಬ್ಬರು ಕುಳಿತಿದ್ದರು. ಅವಳು ಈ ತೀತಿ ಬಟ್ಟೆ ಹಾಕುವುದಕ್ಕೆ ಇವೆಲ್ಲಾ ಆಗುತ್ತಿರುವುದು. ಅವಳ ಜೊತೆ ಇರುವವರು ಕೂಡ ಹಾಗೆಯೇ ಇದ್ದಾರೆ, ಎಂದೇ ತಮ್ಮ ಆದ ತೀರ್ಪು ನೀಡುತ್ತಿದ್ದರು. ಅವರಿಗೆ ಯಾರೂ ಇಲ್ಲ, ಅದಕ್ಕೆ ಇವೆಲ್ಲಾ ಮಾಡುತ್ತಿದ್ದಾರೆ ಎಂದೂ ವಾದಿಸುತ್ತಿದ್ದರು, ತರ್ಕಿಸುತ್ತಿದ್ದರು. ಅಷ್ಟಕ್ಕೂ ಮತ್ತೊಬ್ಬ ಹೆಣ್ಣಿನ ಜೀವನದ ಬಗ್ಗೆ ಇಷ್ಟು ಖುಲ್ಲಂ ಖುಲ್ಲಾ ಮಾತನಾಡುವುದು ವಿಚಿತ್ರ ಎನಿಸುತ್ತಿತ್ತು. ಒಬ್ಬ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳದೇ ಯಾಕೆ ಅವರು ಹೀಗೆ ಕಾಮೆಂಟ್ ಮಾಡುತ್ತೀರಾ? ನಾನು ಮಿಡಲ್ ಕ್ಲಾಸ್‌ನಿಂದ ಬಂದಿರುವ ಹುಡುಗಿ. ಜೀವನದಲ್ಲಿ ನಾನು ತುಂಬಾನೇ ಕಷ್ಟಪಟ್ಟಿದ್ದೇನೆ. ನನ್ನನ್ನು ನಾನು ಪಾಲಿಶ್ ಮಾಡಿಕೊಂಡಿರುವೆ. ಕೆಲಸಕ್ಕೆ ತಕ್ಕಂತೆ ಬದಲಾಗಿರುವೆ,' ಎಂದು ಮನೆ ಪ್ರವೇಶಿಸುವ ಮುನ್ನ ಪೂನಂ ಹೇಳಿದ್ದರು.