ಹಿರಿಯ ನಟ ದಿಲೀಪ್ ಕುಮಾರ್ ಆಸ್ಪತ್ರೆಗೆ ದಾಖಲು, ಆರೋಗ್ಯ ಸ್ಥಿರ

By Suvarna NewsFirst Published Jun 6, 2021, 9:14 PM IST
Highlights

* ವದಂತಿಗಳಿಗೆ ಕಿವಿ ಕೊಡಬೇಡಿ, ದಿಲೀಪ್ ಆರೋಗ್ಯ ಸ್ಥಿರ
* ಬಾಲಿವುಡ್ ಮಹಾನ್ ನಟನಿಗೆ ಆರೋಗ್ಯ ಸಮಸ್ಯೆ
* ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿರುವ ದಿಲೀಪ್ ಕುಮಾರ್
* ಮುಂಬೈನ ಪಿಡಿ ಹಿಂದುಜಾ ಆಸ್ಪತ್ರೆಯಲ್ಲಿ ಚಿಕಿತ್ಸೆ

ಮುಂಬೈ (ಜೂ.  06)   ಬಾಲಿವುಡ್ ಹಿರಿಯ ನಟ ​ ಅವರಿಗೆ ಉಸಿರಾಟದ ತೊಂದರೆ ಉಂಟಾಗಿದ್ದು, ಭಾನುವಾರ (ಜೂ.6) ಬೆಳಗ್ಗೆ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದಿಲೀಪ್ ಕುಮಾರ್ ಆರೋಗ್ಯ ಸ್ಥಿರವಾಗಿದೆ ಎಂದು ಹೆಲ್ತ್ ಬುಲಿಟಿನ್ ತಿಳಿಸಿದೆ. ಅವರ ಪತ್ನಿ  ಸಾಯಿರ ಬಾನು ವಿಚಾರ ತಿಳಿಸಿದ್ದಾರೆ.

ದಿಲೀಪ್​ ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ. . ಅವರು ಪ್ಲೆರಲ್ ಎಫ್ಯೂಷನ್(ಶ್ವಾಸಕೋಶದಲ್ಲಿ ನೀರು ತುಂಬಿಕೊಳ್ಳುವುದು)  ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ.  ಸದ್ಯ ದಿಲೀಪ್ ಕುಮಾರ್ ಅವರಿಗೆ ಮುಂಬೈನ ಪಿಡಿ ಹಿಂದುಜಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ದಿಲೀಪ್ ಕುಮಾರ್ ನಿವಾಸಕ್ಕೆ  25 ಕೋಟಿ ಬೇಡಿಕೆ ಇಟ್ಟ ಮಾಲೀಕ

ದಿಲೀಪ್ ಕುಮಾರ್ ನಿಧನರಾಗಿದ್ದಾರೆ ಎಂಬ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಆದರೆ ಯಾವ ವದಂತಿಗಳಿಗೂ ಕಿವಿ ಕೊಡಬೇಡಿ ಎಂದು ಅಧಿಕೃತವಾಗಿ ತಿಳಿಸಲಾಗಿದೆ. ಕಳೆದ 2-3  ದಿನದಿಂದ ಸಂದೇಶ ಹರಿದಾಡುತ್ತಿತ್ತು.

1944ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ದಿಲೀಪ್​ ಕುಮಾರ್​ ಅವರು 5 ದಶಕಗಳ ಕಾಲ ಸಕ್ರಿಯರಾಗಿದ್ದರು. ಕೊಹಿನೂರ್​, ಮುಘಲ್-ಏ-ಆಜಮ್​, ಶಕ್ತಿ, ನಯಾ ದೌರ್​, ರಾಮ್​ ಔರ್​ ಶ್ಯಾಮ್​ ಮುಂತಾದ ಕ್ಲಾಸಿಕ್​ ಸಿನಿಮಾಗಳಲ್ಲಿ ನಟಿಸಿ ಜನರ ಮನಸ್ಸಿನಲ್ಲಿ  ನೆಲೆಯೂರಿದ್ದಾರೆ.  ದಿಲೀಪ್​ ಕುಮಾರ್​ ನಟಿಸಿದ ಕೊನೇ ಸಿನಿಮಾ ‘ಖಿಲಾ’1998ರಲ್ಲಿ ತೆರೆಕಂಡಿತ್ತು.

ದಿಲೀಪ್ ಕುಮಾರ್ ಲವ್ ಸ್ಟೋರಿ, ಯಾವ ಸಿನಿಮಾಕ್ಕೂ ಕಡಿಮೆ ಇಲ್ಲ

ದಿಲೀಪ್ ಕುಮಾರ್  ಮೂಲ ಹೆಸರು ಮೊಹಮ್ಮದ್ ಯೂಸುಫ್ ಖಾನ್. ಅವರು ಜನಿಸಿದ್ದು 11 ಡಿಸೆಂಬರ್ 1922.  ಅತಿಹೆಚ್ಚು ಫಿಲ್ಮ್ ಫೇರ್ ಪ್ರಶಸ್ತಿ ಪಡೆದುಕೊಂಡ ದಾಖಲೆ ಕುಮಾರ್ ಅವರ ಬಳಿಯೇ ಇದೆ.

ಬಾಂಬೆ ಟಾಕೀಸ್ ನಿರ್ಮಿಸಿದ ಜ್ವಾರ್ ಭಾಟಾ (1944) ಚಿತ್ರದ ಮೂಲಕ ಕುಮಾರ್ ನಟನಾಗಿ ಪದಾರ್ಪಣೆ ಮಾಡಿದರು. ಮೊದಲ ಐದು ದಶಕದಲ್ಲಿ  ಕುಮಾರ್ 65 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದರು. ಅಂದಾಜ್ (1949), ದಾಗ್ (1952), ದೇವದಾಸ್ (1955), ಆಜಾದ್ (1955), ಮಹಾಕಾವ್ಯ ಸಾರುವ ಮೊಘಲ್- ಇ-ಅಜಮ್ (1960),  ಗುಂಗಾ ಜಮುನಾ (1961) ಶ್ಯಾಮ್ (1967) ಹೀಗೆ ಸರಣಿ ಸರಣಿ ಹಿಟ್ ಚಿತ್ರಗಳನ್ನು ಕೊಟ್ಟವರು.

Don’t believe in WhatsApp forwards.
Saab is stable.
Thank you for your heart-felt duas and prayers. As per doctors, he should be home in 2-3 days. Insh’Allah.

— Dilip Kumar (@TheDilipKumar)
click me!