
ಅಕ್ಷಯ್ ಕುಮಾರ್ ಅಭಿನಯದ ಲಕ್ಷ್ಮೀ ಬಾಂಬ್ ಸಿನಿಮಾ ಟ್ರೈಲರ್ ಬಿಡುಗಡೆಯಾಗಿದೆ. ಪ್ರಿಯದರ್ಶನ್ ಅವರ ಭೂಲ್ ಬುಲಯಾ ಸಿನಿಮಾದ ಥ್ರೋ ಬ್ಯಾಕ್ ಈ ಸಿನಿಮಾ ಎಂದು ಹೇಳಲಾಗ್ತಿದೆ. ಅಕ್ಷಯ್ ಜೊತೆ ಕೈರಾ ಅಡ್ವಾಣಿ, ತುಷಾರ್ ಕಪೂರ್, ಶರದ್ ಕೆಲ್ಕಾರ್, ತರುಣ್ ಅರೋರಾ ಹಾಗೂ ಅಶ್ವಿನಿ ಕಲ್ಸೇಕರ್ ನಟಿಸಿದ್ದಾರೆ.
ರಾಘವ ಲಾರೆನ್ಸ್ ನಿರ್ದೇಶನದ ತಮಿಳಿನ ಮುನಿ 2: ಕಾಂಚನಾ ಸಿನಿಮಾದ ರಿಮೇಕ್ ಆಗಿದೆ ಲಕ್ಷ್ಮೀ ಬಾಂಬ್. ಹಿಂದಿಯಲ್ಲೂ ಅವರೇ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಅಕ್ಷಯ್ ಕುಮಾರ್ ದೇಹಕ್ಕೆ ಹೆಣ್ಣಿನ ಆತ್ಮವೊಂದು ಸೇರಿಕೊಳ್ಳುತ್ತದೆ.
ಗೂಢಾಚಾರಿ ಪಾತ್ರದಲ್ಲಿ ಅಕ್ಷಯ್ ಕುಮಾರ್: ಬೆಲ್‌ಬಾಟಂ ಟೀಸರ್ ರಿಲೀಸ್
ಸಿನಿಮಾದಲ್ಲಿ ಕಾಮೆಡಿ ಮತ್ತು ಹಾರರ್ ಎರಡನ್ನೂ ಬ್ಯಾಲೆನ್ಸ್ ಮಾಡಲಾಗಿದೆ. ನವೆಂಬರ್ 9ರಿಂದ ಸಿನಿಮಾ ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದು. ಅಕ್ಷಯ್ ಕುಮಾರ್ ಈ ಸಿನಿಮಾ ಮಾತ್ರವಲ್ಲದೆ ಸದ್ಯ ಬೆಲ್‌ಬಾಟಂ ಸಿನಿಮಾಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗಷ್ಟೇ ಸಿನಿಮಾ ತಂಡ ಚಿತ್ರೀಕರಣ ಪೂರ್ತಿಗೊಳಿಸಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.