ಫಿಲ್ಮ್ ಇಂಡಸ್ಟ್ರಿಗೆ ಬಾಯ್ ಬಾಯ್ ಹೇಳಿದ ಯುವನಟಿ | ಎಂಟರ್ಟೈನ್‌ಮೆಂಟ್ ಇಂಡಸ್ಟ್ರಿಗೆ ಟಾಟಾ.
ಮಾಜಿ ಬಿಗ್‌ಬಾಗ್ ಸ್ಪರ್ಧಿ ಸನಾ ಖಾನ್ ದೊಡ್ಡದೊಂದು ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈ ಮೂಲಕ ಎಂಟರ್ಟೈನ್‌ಮೆಂಟ್ ಇಂಡಸ್ಟ್ರಿಗೆ ಬಾಯ್ ಬಾಯ್ ಹೇಳಿದ್ದಾರೆ.
ಸಲ್ಮಾನ್ ಖಾನ್ ಅಭಿನಯದ ಜೈ ಹೋ ಸಿನಿಮಾದಲ್ಲಿ ನಟಿಸಿದ್ದರು. ಹಾಗೆಯೇ ಅವರು ಹಲವು ಸಿನಿಮಾ, ಟಿವಿ ಶೋಗಳಲ್ಲಿಯೂ ನಟಿಸಿದ್ದರು. ಫಿಲ್ಮ್ ಇಂಡಸ್ಟ್ರಿ ಪ್ರಸಿದ್ಧಿ, ಗೌರವ, ಸಂಪತ್ತನ್ನೂ ಕೊಟ್ಟಿದೆ. ಆದರೆ ಹಣ ಮತ್ತ ಪ್ರಸಿದ್ಧಿ ಪಡೆಯೋದಷ್ಟೇ ನನ್ನ ಗುರಿಯಾಗಬಾರದು ಎಂದು ನನಗೆ ಅರಿವಾಗಿದೆ. ಇನ್ನುಮುಂದೆ ಜನ ಸೇವೆ ಮಾಡಿ ಸೃಷ್ಟಿಕರ್ತನ ಆದೇಶ ಪಾಲಿಸುವುದಾಗಿ ಹೇಳಿದ್ದಾರೆ.
ವಯಸ್ಸಾದ ಲುಕ್ಕಲ್ಲಿ ಕಿಚ್ಚ ಸುದೀಪ್; ಜಾಹಿರಾತಿನಲ್ಲೂ ಫುಲ್ ಡಿಫರೆಂಟ್
ನಾನು ನನ್ನ ಜೀವನದ ಒಂದು ಪ್ರಮುಖ ಘಟ್ಟದಲ್ಲಿ ನಿಂತು ಮಾತನಾಡುತ್ತಿದ್ದೇನೆ. ನಾನು ಸಿನಿಮಾ ಇಂಡಸ್ಟ್ರಿಯಲ್ಲಿ ಬದುಕಿದೆ. ನನಗೆ ಸಿಕ್ಕಿದ ಪ್ರಸಿದ್ಧಿ, ಗೌರವ, ಸಂಪತ್ತಿಗೂ ನಾನು ಅಭಾರಿ. ಒಬ್ಬ ಮನುಷ್ಯ ಈ ಭೂಮಿಗೆ ಬರುವ ಉದ್ದೇಶ ಹಣ ಮತ್ತು ಪ್ರಸಿದ್ಧಿ ಪಡೆಯುವುದು ಮಾತ್ರವೇ..? ಅಸಹಾಯಕರ, ಕಷ್ಟದಲ್ಲಿರುವವರಿಗೆ ನೆರವಾಗಬೇಕಲ್ಲವೇ..? ಯಾರು ಯಾವಗಲಾದರೂ ಸಾಯಬಹುದು, ಸತ್ತ ನೇಲೆ ಏನಾಗುತ್ತದೆ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿತ್ತು ಎಂದಿದ್ದಾರೆ. ಇಂತಹದೊಂದು ಪೋಸ್ಟ್ ಹಾಕಿದ ಬೆನ್ನಲ್ಲೇ ನಟಿ ತಮ್ಮ ಫೋಟೋಸ್, ವಿಡಿಯೋಸ್ ಫೋಟೋ ಶೂಟ್, ಟ್ರಿಪ್ ಫೋಟೋಸ್ ಎಲ್ಲವನ್ನೂ ಡಿಲೀಟ್ ಮಾಡಿದ್ದಾರೆ.