
2012ರಲ್ಲಿ ಮಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಬಹು ಬೇಡಿಕೆಯ ನಟನಾಗಿ ಗುರುತಿಸಿಕೊಂಡಿರುವ ಟೊವಿನೋ ತಮ್ಮ ಮುಂದಿನ ಚಿತ್ರ 'ಕಾಲಾ' ಚಿತ್ರೀಕರಣದ ವೇಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಚಿತ್ರತಂಡ ಕೊಚ್ಚಿನ್‌ನಲ್ಲಿರುವ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಕಂಗನಾ ರನೌತ್‌ಳನ್ನು ಯಾಕೆ ಬಾಲಿವುಡ್‌ನಲ್ಲಿ ಎಲ್ರೂ ದ್ವೇಷಿಸ್ತಾರೆ?
ರೋಹಿತ್ ವಿಎಸ್ ನಿರ್ದೇಶನದ 'ಕಾಲಾ' ಚಿತ್ರದ ಪ್ರಮುಖ ಸನ್ನಿವೇಶವೊಂದನ್ನು ಚಿತ್ರೀಕರಿಸಲಾಗುತ್ತಿತ್ತು. ಚಿತ್ರತಂಡ ನೀಡಿರುವ ಮಾಹಿತಿ ಪ್ರಕಾರ ಟೊವಿನೋ ಹೊಟ್ಟೆಗೆ ಬಲವಾದ ಪೆಟ್ಟು ಬಿದ್ದಿದ್ದು, ಒಳಗೆ ರಕ್ತ ಸ್ರಾವರವಾಗುತ್ತಿದೆ. (internal bleeding).ವೈದ್ಯರು ಟೊವಿನೋ ಅವರನ್ನು 24 ಗಂಟೆಗಳ ಕಾಲ ಅಬ್ಸರ್ವೇಷನ್‌ನಲ್ಲಿಡಬೇಕೆಂದು ಹೇಳಿದ್ದಾರೆ.
ಗೋಧಾ, ಮಾರಿ 2, ಅಭಿಯಮ್ ಅನುವುಮ್, ಮಾಯನಾಧಿ ಹೀಗೆ ಹತ್ತು ಹಲವು ಸಿನಿಮಾಗಳು ಟೊವಿನೋ ವೃತ್ತಿ ಜೀವನದಲ್ಲಿ ದೊಡ್ಡ ಬ್ರೇಕ್ ನೀಡಿತ್ತು. ಕೆಲವು ದಿನಗಳ ಹಿಂದೆ ಬಿಡುಗಡೆಯಾದ ಮಿನ್ನಾಲ್ ಮುರಳಿ ಟೀಸರ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆದರೆ ಕೆಲವು ದಿನಗಳ ಹಿಂದೆ ಮಿನ್ನಾಲ್ ಮುರಳಿ ಚಿತ್ರಕ್ಕೆಂದು ಹಾಕಲಾಗಿದ್ದ ದುಬಾರಿ ಚರ್ಚ್ ಸೆಟ್‌ವೊಂದನ್ನು ಕೆಲವು ಕಿಡಿಗೇಡಿಗಳು ದ್ವಂಸ ಮಾಡಿದ್ದರು. ಈ ವಿಚಾರವಾಗಿ ಟೊವಿನೋ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯವನ್ನೂ ವ್ಯಕ್ತ ಪಡಿಸಿದ್ದು, ಪೋಸ್ಟ್ ವೈರಲ್ ಆಗಿತ್ತು.
ಕಾಜೋಲ್‌ಗೆ ಬಾಲಿವುಡ್‌ನ ಈ ಸೂಪರ್‌ಸ್ಟಾರ್ ಮೇಲೆ ಕ್ರಶ್ ಇತ್ತಂತೆ!
'ಕೆಲವು ಕಿಡಿಗೇಡಿಗಳು ಈ ಕೃತ್ಯವನ್ನು ಮಾಡಿದ್ದಾರೆ. ಚಿತ್ರೀಕರಣಕ್ಕೆಂದು ಹಾಕಲಾಗಿದ್ದ ಸೆಟ್ ಅನ್ನು ದ್ವಂಸಗೊಳಿಸಿದ್ದಾರೆ. ಇದು ಇಂದು ನಮಗಾಗಿದ್ದು, ನಾಳೆ ನಿಮಗಾಗುತ್ತದೆ. ಇಡೀ ದೇಶಕ್ಕೆ ಲಾಕ್‌ಡೌನ್ ಆದ ಸಮಯದಲ್ಲಿ ಹೀಗೆ ಮಾಡುವುದು ಎಷ್ಟು ಅಮಾನವೀಯ? ನಿರ್ದೇಶಕ ಹಾಗೂ ನಿರ್ಮಾಪಕನಿಗೆ ಗೊತ್ತು ಒಂದು ರೂಪಾಯಿ ಬೆಲೆ ಏನೆಂದು,' ಎಂದು ಟೊನಿಯೋ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.