ತವರಿನಿಂದ ದೂರವಾದ ಪ್ರತಿಯೊಬ್ಬ ಮಹಿಳೆಯೂ ನೋಡಬೇಕಾದ ಕಿರುಚಿತ್ರ

Published : Feb 09, 2025, 03:47 PM ISTUpdated : Feb 10, 2025, 10:25 AM IST
ತವರಿನಿಂದ ದೂರವಾದ ಪ್ರತಿಯೊಬ್ಬ ಮಹಿಳೆಯೂ ನೋಡಬೇಕಾದ ಕಿರುಚಿತ್ರ

ಸಾರಾಂಶ

Journey of mother back to her childhood: ಈ ಕಿರುಚಿತ್ರವು ತವರು ಮನೆಗೆ ಮರಳುವ ವಯಸ್ಸಾದ ಮಹಿಳೆಯ ಕಥೆಯನ್ನು ಹೇಳುತ್ತದೆ. ತನ್ನ ಹಳೆಯ ಮನೆಯಲ್ಲಿ ಅಲೌಕಿಕ ಅನುಭವಗಳನ್ನು ಎದುರಿಸುತ್ತಾಳೆ. ಈ ಭಾವನಾತ್ಮಕ ಕಿರುಚಿತ್ರವು ಸಂಬಂಧಗಳ ಮಹತ್ವವನ್ನು ಮತ್ತು ತವರಿನ ನೆನಪುಗಳನ್ನು ಅನ್ವೇಷಿಸುತ್ತದೆ.

Short Film: ಕೆಲವೊಂದು ಸಿನಿಮಾ ಅಥವಾ ಕಿರುಚಿತ್ರಗಳು ನೋಡುಗರ ಕಣ್ಣಿನಂಚಿನಲ್ಲಿ ನೀರು ಜಿನುಗುವಂತೆ ಮಾಡುತ್ತದೆ. ಸಿನಿಮಾ ಅಥವಾ ಕಿರುಚಿತ್ರ ನೋಡುತ್ತಾ ಭಾರವಾದ ಮನಸ್ಸು ಅಂತಿಮ ದೃಶ್ಯದ ವೇಳೆಗೆ ಹಗುರವಾಗಿರುತ್ತವೆ. ಅದರಲ್ಲಿಯೂ ಕೆಲ ಕಿರುಚಿತ್ರಗಳು ಸದ್ದಿಲ್ಲದೇ ಮನೆ ಮನೆಗಳ ಮನವನ್ನು ತಲುಪಿರುತ್ತವೆ. ಇನ್ನು ಕೆಲವೊಂದು ಕಿರುಚಿತ್ರಗಳು ಈ ಕಥೆ ನಮ್ಮ ಮನೆಯದ್ದೇ ಅಲ್ಲವಾ ಅನ್ನೋವಷ್ಟು ಹತ್ತಿರವಾಗಿರುತ್ತದೆ. ಸಂಬಂಧಗಳ ಪ್ರಾಮುಖ್ಯತೆ ಮತ್ತು ತವರು ಕಳೆದುಕೊಂಡ ಮಹಿಳೆಯ ಕಥೆ ಹೇಳುವ ಕಿರುಚಿತ್ರವೇ ಲಕ್ಷ್ಮೀ. ಮಕ್ಕಳು, ಮೊಮ್ಮಕ್ಕಳನ್ನು ಕಂಡ ಇಳಿವಯಸ್ಸಿನ ಮಹಿಳೆ ತನ್ನ ತವರಿಗೆ ಹಿಂದಿರುಗಿದಾಗ ಆಕೆಗೆ ಆಗುವ ಅದ್ಭುತ ಅನುಭವವೇ ಲಕ್ಷ್ಮೀ. 

2024 ಅಕ್ಟೋಬರ್ 31ರಂದು ಲಕ್ಷ್ಮೀ  ಕಿರುಚಿತ್ರ ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿತ್ತು. 1.97 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿರುವ ಲಕ್ಷ್ಮೀ ಕಿರುಚಿತ್ರ ನೋಡಿ ಭಾವುಕರಾದವರಿಲ್ಲ. ಕೆಲವೇ ಸಮಯದಲ್ಲಿ  ಈ ಚಿತ್ರ ನಿಮಗೆ ಹತ್ತಿರವಾಗುತ್ತಿದೆ. ಕರ್ಣಗಳಿಗೆ ಹಿತವನ್ನುಂಟು ಮಾಡುವ ಸಂಗೀತದೊಂದಿಗೆ ಕಿರುಚಿತ್ರ ಆರಂಭವಾಗುತ್ತದೆ. ನಳಿನಿ ಎಂಬ ವಯಸ್ಕ ಮಹಿಳೆ, ಬಹುವರ್ಷಗಳ ಬಳಿಕ ತವರಿಗೆ ಹಿಂದಿರುಗಿರುತ್ತಾಳೆ. ಈ ವೇಳೆ ನಳಿನಿಗೆ ಆಕೆಯ ಸ್ನೇಹಿತೆ ಕಮಲಾ ಭೇಟಿಯಾಗುತ್ತಾಳೆ. ನಂತರ ಮೊಮ್ಮಗನೊಂದಿಗೆ ಖಾಲಿ ಬಿದ್ದಿರೋ ತವರಿಗೆ ನಳಿನಿ ಹೋಗುತ್ತಾಳೆ. 

ತವರಿಗೆ ಹೋಗುತ್ತಿದ್ದಂತೆ ನಳಿನಿಗೆ ತನ್ನ ಬದುಕಿನ ಒಂದೊಂದೇ ಪುಟಗಳು ತೆರೆದುಕೊಳ್ಳಲು ಆರಂಭಿಸುತ್ತವೆ. ನಳಿನಿ ಮಗ ತವರುಮನೆಯನ್ನು ಬೀಳಿಸಿ, ಅಲ್ಲಿ ಗೋಡೌನ್ ಕಟ್ಟುತ್ತಿರುತ್ತಾನೆ. ಹಾಗಾಗಿ ತಾನು ಆಡಿ ಬೆಳೆದ ಮನೆಯನ್ನು ಕೊನೆಯ ಬಾರಿ ನೋಡಲು ನಳಿನಿ ಅಲ್ಲಿಗೆ ಆಗಮಿಸಿರುತ್ತಾಳೆ. ಅಪ್ಪ-ಅಮ್ಮನಿಲ್ಲದ ಮನೆ ಸಂಪೂರ್ಣ ಕತ್ತಲಿನಲ್ಲಿ ಮುಳುಗಿರುತ್ತದೆ. ಮನೆಯೊಳಗೆ ಬಂದು ದೀಪ ಹಚ್ಚುವ ನಳಿನಿಗೆ ಅಡುಗೆಮನೆಯಲ್ಲಿನ ಬೆಳಕಿನ ಕಿಂಡಿ ತೆಗೆಯುತ್ತಿದ್ದಂತೆ ಅಚ್ಚರಿ ಕಾಣುತ್ತದೆ. ಕೈ ತುಂಬಾ ಬಳೆ, ಮುಡಿಯಲ್ಲಿ ಮಲ್ಲಿಗೆ ಹೂ,  ಹಣೆ-ಸಿಂಧೂರದಲ್ಲಿ ಕುಂಕುಮ, ಆಭರಣಗಳನ್ನು ಧರಿಸಿದ ಮಹಿಳೆ ಕಾಣುತ್ತಾಳೆ. 

ಬೆಳಗಿಂಡಿಯ ಬೆಳಕಿನಲ್ಲಿ ಕಾಣುವ ದೇವತೆ ರೂಪದ ಮಹಿಳೆ ಮತ್ತು ನಳಿನಿ ಮಧ್ಯೆ ದೀರ್ಘವಾದ ಸಂಭಾಷನೆ ನಡೆಯುತ್ತದೆ. ಒಬ್ಬಳೇ ಮಗಳಾಗಿ ಕೊನೆ ಕಾಲದಲ್ಲಿ ಅಪ್ಪ-ಅಮ್ಮನನ್ನು ನೋಡಿಕೊಳ್ಳಲಿಲ್ಲ ಎಂಬ ಕೊರಗನ್ನು ನಳಿನಿ ಆ ಮಹಿಳೆ ಮುಂದೆ ಹೇಳಿಕೊಳ್ಳುತ್ತಾಳೆ. ತಂದೆ ಮತ್ತು ತಾಯಿ ತಿಳಿದುಕೊಂಡಿದ್ದ ನಳಿನಿಯ ಎಲ್ಲಾ ತಪ್ಪು ಕಲ್ಪನೆಗಳನ್ನು ಮಹಿಳೆ ಸರಿ ಮಾಡುತ್ತಾಳೆ. ಹೀಗೆ ನಳಿನಿಯ ಒಂದೊಂದೇ ಪ್ರಶ್ನೆಗೆ ಮಹಿಳೆ ಉತ್ತರ ನೀಡುತ್ತಾ ಹೋಗುತ್ತಾಳೆ. ಅಂತಿಮವಾಗಿ ತನ್ನ ತವರು ಕಳೆದುಕೊಳ್ಳುತ್ತಿರೋ ದುಃಖವನ್ನು ಸಹ ನಳಿನಿ ಆ ಮಹಿಳೆ ಮುಂದೆ ಹೇಳಿಕೊಳ್ಳುತ್ತಾಳೆ. ಇನ್ನೇನು ಮನೆ ಉಳಿಯುತ್ತಾ ಅಥವಾ ಇಲ್ಲವಾ ಎಂದು ಹೇಳುವಷ್ಟರಲ್ಲಿ ಅಲ್ಲಿಗೆ ನಳಿನಿಯ ಮಗ  ಬರುತ್ತಾನೆ. ಇಷ್ಟೊತ್ತು ಯಾರೊಂದಿಗೆ ಮಾತಾಡಿದ್ದೆ ಎಂದಾಗ ನಳಿನಿ ಬೆರಳು ಮಾಡಿ ತೋರಿಸುತ್ತಾಳೆ. ಆದ್ರೆ ಅಲ್ಲಿ ಯಾರೂ ಇರಲ್ಲ. 

ಇದನ್ನೂ ಓದಿ: ಪ್ರತಿದಿನ ಭೀಕರ ಸಾವು, ಶವದ ಮೇಲೆ ಭಯಾನಕ ಹುಳುಗಳು; ನೋಡುಗರನ್ನು ಸೈಕಾಗಿಸಿದ ಥ್ರಿಲ್ಲರ್ ವೆಬ್ ಸಿರೀಸ್

ನಳಿನಿಯ ತವರು ಮನೆ ಉಳಿಯುತ್ತಾ? ಅಷ್ಟೊತ್ತು ನಳಿನಿಯೊಂದಿಗೆ ಮಾತನಾಡಿದ ದೇವತೆ ರೂಪದ ಮಹಿಳೆ ಯಾರು ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದ್ರೆ ಲಕ್ಷ್ಮೀ ಕಿರುಚಿತ್ರವನ್ನು ಒಮ್ಮೆ ನೀವು ನೋಡಬೇಕು. ಈ ಕಿರುಚಿತ್ರ ಹೇಗೆ ನಿರ್ಮಾಣವಾಯ್ತು ಎಂಬುದನ್ನು ಕೊನೆಯಲ್ಲಿ ಹೇಳಲಾಗಿದೆ.  

ನಳಿನಿ ಪುರೋಹಿತ್, ಪದ್ಮಜಾ ರಾವ್ ಮತ್ತು ಅಭಿಜಿತ್ ಪುರೋಹಿತ್ ಈ ಕಿರುಚಿತ್ರದಲ್ಲಿ ನಟಿಸಿದ್ದಾರೆ. ಪದ್ಮಜಾ ರಾವ್ ನಟನೆಗೆ ಯಾರು ತುಟಿಕ್ ಪಿಟಿಕ್ ಅನ್ನುವಂತಿಲ್ಲ. ಅಷ್ಟರಮಟ್ಟಿಗೆ  ಕಿರುಚಿತ್ರದಲ್ಲಿ ಮನೋಜ್ಞವಾಗಿ ನಟಿಸಿದ್ದಾರೆ. ಪ್ರಣವ್ ಅಯ್ಯಂಗಾರವರ ಸಂಗೀತ ನೋಡುಗರನ್ನು ಹೊಸಲೋಕಕ್ಕೆ ಕರೆದುಕೊಂಡು ಹೋಗುವಲ್ಲಿ ಮತ್ತು ಚಿತ್ರದೊಂದಿಗೆ ಬೆಸೆದುಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ. 

ಇದನ್ನೂ ಓದಿ: 175 ಕೋಟಿ ಕಲೆಕ್ಷನ್, 68 ಅವಾರ್ಡ್; ಈ ಸಿನಿಮಾದಲ್ಲಿರಲಿಲ್ಲ ಹೀರೋಗೆ ಒಂದೇ ಒಂದು ಡೈಲಾಗ್, ಆದ್ರೂ ಸೂಪರ್ ಹಿಟ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?
ಹೀರೋ ಆಗುವ ಮುನ್ನ ಶಾಕ್ ಕೊಟ್ಟ ಅಕೀರಾ ನಂದನ್: ರೇಣು ದೇಸಾಯಿ ಫೋನ್ ಮಾಡಿದಾಗ ಪವನ್ ನಕ್ಕಿದ್ದೇಕೆ?