ಎಂಪೂರಾನ್ ಹಿಂದೂಗಳ ವಿರುದ್ಧ ನಡೆಸಿದ ಷಡ್ಯಂತ್ರ ಸಿನಿಮಾ, ಮೋಹನಲಾಲ್, ಪೃಥ್ವಿರಾಜ್ ಟ್ರೋಲ್

Published : Mar 28, 2025, 12:33 PM ISTUpdated : Mar 28, 2025, 12:46 PM IST
ಎಂಪೂರಾನ್ ಹಿಂದೂಗಳ ವಿರುದ್ಧ ನಡೆಸಿದ ಷಡ್ಯಂತ್ರ ಸಿನಿಮಾ, ಮೋಹನಲಾಲ್, ಪೃಥ್ವಿರಾಜ್ ಟ್ರೋಲ್

ಸಾರಾಂಶ

ಮೋಹನ್‌ಲಾಲ್ ಪೃಥ್ವಿರಾಜ್ ಅಭಿನಯದ ಎಲ್2 ಎಂಪೂರಾನ್ ಸಿನಿಮಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಸಿನಿಮಾ ಹಿಂದೂಗಳ ವಿರುದ್ದ ನಡೆಸಿದ ಷಡ್ಯಂತ್ರದ ಪ್ರಚಾರ ಸಿನಿಮಾ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಈ ಸಿನಿಮಾಗೆ ವಿರೋಧ ಯಾಕೆ?

ನವದೆಹಲಿ(ಮಾ.28) ಬಹುನಿರೀಕ್ಷಿತ ಎಲ್2 ಎಂಪೂರಾನ್ ಸಿನಿಮಾ ಬಿಡುಗಡೆಯಾಗಿದೆ. ಮೋಹನ್‌ಲಾಲ್ ಹಾಗೂ ಪೃಥ್ವಿರಾಜ್ ಅಭಿನಯದ ಈ ಸಿನಿಮಾ ಪರ ವಿರೋಧಕ್ಕೆ ಕಾರಣವಾಗಿದೆ. ಪ್ರಮುಖವಾಗಿ ಈ ಸಿನಿಮಾ ಹಿಂದೂಗಳ ವಿರುದ್ಧ ಪ್ರಚಾರ ನಡೆಸಲು ನಡೆಸಿದ ಷಡ್ಯಂತ್ರ ಎಂದು ಹಲವರು ಆಕ್ರೋಶ ಹೊರಹಾಕಿದ್ದಾರೆ. ಮೋಹನ್‌ಲಾಲ್ ಹಾಗೂ ಪೃಥ್ವಿರಾಜ್ ವಿರುದ್ಧ ಹಲವರು ಆಕ್ರೋಶ ಹೊರಹಾಕಿದ್ದಾರೆ, ಟ್ರೋಲ್ ಮಾಡಿದ್ದಾರೆ. 2019ರಲ್ಲಿ ಬಿಡುಗಡೆಯಾದ ಲೂಸಿಫರ್ ಚಿತ್ರದ ಮುಂದುವರಿದ ಭಾಗ ಇದಾಗಿದ್ದುಹಿಂದೂ ವಿರೋಧಿ ಸಿನಿಮಾ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.

ಮಲೆಯಾಳಂ ಸಿನಿಮಾ ಕಳೆದ ಹಲವು ವರ್ಷಗಳಿಂದ ಈ ರೀತಿಯ ಪ್ರೋಪಾಗಾಂಡ್ ಸಿನಿಮಾ ಮಾಡುತ್ತಿದೆ. ಇದೀಗ ದೊಡ್ಡ ಮಟ್ಟದಲ್ಲಿ ಹಿಂದೂ ವಿರೋಧಿ ಸಿನಿಮಾ ಮಾಡಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತಿದೆ.  ಎಂಪೂರಾನ್ ಸಿನಿಮಾ  ಮಳೆಯಾಳಂ, ಹಿಂದಿ, ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಈ ಪೈಕಿ ಬೆಂಗಳೂರಿನಲ್ಲಿ ಅತೀ ಹೆಚ್ಚು ಸಿನಿಮಾ ಥಿಯೇಟರ್‌ಗಳಲ್ಲಿ ಎಂಪೂರಾನ್ ಸಿನಿಮಾ ಬಿಡುಗಡೆಯಾಗಿದೆ. ಇದೀಗ ಮೋಹನ್‌ಲಾಲ್ ಹಲವು ಅಭಿಮಾನಿಗಳು ಈ ಸಿನಿಮಾದಿಂದ ಬೇಸರ ಹೊರಹಾಕಿದ್ದಾರೆ.

ಮಗಳು ವಿಸ್ಮಯ ಹುಟ್ಟುಹಬ್ಬದಂದೇ ಎಂಪೂರನ್ ಬಿಡುಗಡೆ: ಏನ್‌ ಮಾಡ್ತಿದ್ದಾರೆ ಮೋಹನ್‌ಲಾಲ್ ಪುತ್ರಿ

ಎಂಪುರಾನ್ ಸಿನಿಮಾದಲ್ಲಿ ಹಿಂದೂಗಳನ್ನು ವಿಲನ್ ರೀತಿ ಚಿತ್ರಿಸಲಾಗಿದೆ. ಭಾರತ ಹಾಗೂ ನೆರೆಯ ದೇಶಗಳಲ್ಲಿ ಹಿಂದೂಗಳ ಮೇಲೆ ಸತತ ದೌರ್ಜನ್ಯಗಳು ನಡೆಯುತ್ತಿದೆ. ಆದರೆ ಈ ಸಿನಿಮಾದಲ್ಲಿ ಇತರ ಸಮುದಾಯವನ್ನು ಹೀರೋ ಮಾಡಲು ಹಿಂದೂ ವಿರೋಧಿ ಷಡ್ಯಂತ್ರ ಮಾಡಲಾಗಿದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ. 

ಎಂಪುರಾನ್ ಸಿನಿಮಾ ಹಿಂದೂ ವಿರೋಧಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹರಿದಾಡುತ್ತಿದೆ. ಇದೇ ವೇಳೆ ಹಲವರು ಕೇರಳ ಸ್ಟೋರಿಗೆ ಪ್ರತಿಯಾಗಿ ಇದೀಗ ಕೇರಳ ಸಿನಿಮಾ ಇಂಡಸ್ಟ್ರೀ ಹಿಂದೂ ವಿರೋಧಿ ಪ್ರೋಪಗಾಂಡ ಸಿನಿಮಾ ಮಾಡಿದೆ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಪರ ವಿರೋಧದ ನಡುವೆ ಎಂಪುರಾನ್ ಕಲೆಕ್ಷನ್‌ನಲ್ಲಿ ಉತ್ತಮ ಗಳಿಕೆ ಕಂಡಿದೆ. ದೊಡ್ಡ ಬಜೆಟ್ ಸಿನಿಮಾ ಉತ್ತಮ ಗಳಿಕೆ ಮಾಡುವ ಸೂಚನೆ ನೀಡಿದೆ. ಮೊದಲ ದಿನವೇ ಮಲೆಯಾಳಂನ ಹಲವು ಸಿನಿಮಾ ದಾಖಲೆಯನ್ನು ಗಳಿಕೆಯಲ್ಲಿ ಮುರಿದಿದೆ. 

ಎಂಪುರಾನ್ ಚಿತ್ರದಲ್ಲಿ ಕ್ಯಾಮಿಯೋ ಯಾರು?: ಯೂಟ್ಯೂಬರ್ ಇರ್ಫಾನ್‌ಗೆ ಆ ಸೀಕ್ರೆಟ್ ಹೇಳಿದ ಮೋಹನ್ ಲಾಲ್

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!