Samantha on divorce: ಸಾಯೋ ಮನಸ್ಥಿತಿಗೆ ತಲುಪಿದ್ದ ಸಮಂತಾ, ನಟಿ ಹೇಳಿದ್ದಿಷ್ಟು

Published : Dec 08, 2021, 11:28 AM ISTUpdated : Dec 08, 2021, 11:34 AM IST
Samantha on divorce: ಸಾಯೋ ಮನಸ್ಥಿತಿಗೆ ತಲುಪಿದ್ದ ಸಮಂತಾ, ನಟಿ ಹೇಳಿದ್ದಿಷ್ಟು

ಸಾರಾಂಶ

Samantha finally opens up on divorce: ವಿಚ್ಚೇದನೆ ಬಗ್ಗೆ ಸಮಂತಾ ಮುಕ್ತ ಮಾತು ಸಾಯ್ತೀನಿ ಎಂದುಕೊಂಡಿದ್ದೆ ಎಂದ ಸಮಂತಾ

ಸಮಂತಾ ರುಥ್ ಪ್ರಭು(Samantha Ruth Prabhu) ಹಾಗೂ ನಾಗ ಚೈತನ್ಯ ವಿಚ್ಚೇದಿತರಾಗಿ ಎರಡು ತಿಂಗಳಾಗಿದೆ. ಸೌತ್‌ನ ಸೆಲೆಬ್ರಿಟಿ ಜೋಡಿ ಬೇರೆಯಾಗಿದ್ದು ಅವರ ಅಭಿಮಾನಿಗಳಿಗೆ ದೊಡ್ಡ ಆಘಾತ. ಕಾರಣ ಬಾಲಿವುಡ್‌ನಲ್ಲಿ ಆಗುವಂತೆ ಸೌತ್ ಜೋಡಿಗಳು ಅಷ್ಟು ಬೇಗ ವಿಚ್ಚೇದನೆ ಆಯ್ಕೆ ಮಾಡಿಕೊಳ್ಳುವುದಿಲ್ಲ. ಆದರೆ ಸಮಂತಾ ವಿಚಾರದಲ್ಲಿ ಇದು ಸುಳ್ಳಾಯಿತು. ಆರಂಭದಲ್ಲಿ ತನ್ನ ಹೆಸರಿನಿಂದ ಅಕ್ಕಿನೇನಿ ತೆಗೆದ ನಟಿ ಜೀವನದಿಂದಲೇ ನಾಗ ಚೈತನ್ಯ ಅವರಿಂದ ದೂರಾದರು. ಈಗ ನಟಿ ವಿಚ್ಚೇದನೆ ನಂತರದ ತಮ್ಮ ಸ್ಥಿತಿ ಕುರಿತು ಮಾತನಾಡಿದ್ದಾರೆ.

ನಟಿ ಸಮಂತಾ ರುತ್ ಪ್ರಭು ಕೊನೆಗೂ ಅಕ್ಕಿನೇನಿ ನಾಗ ಚೈತನ್ಯ(Naga chaitanya) ಅವರ ವಿಚ್ಛೇದನ ಮತ್ತು ಅದು ಅವರ ಮಾನಸಿಕ ಆರೋಗ್ಯದ ಮೇಲೆ ಬೀರಿದ ಪರಿಣಾಮದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಸ್ವಲ್ಪ ಸಮಯದ ಹಿಂದೆ, ಟಾಲಿವುಡ್‌ನ ಪ್ರಸಿದ್ಧ ಜೋಡಿ ನಾಗ ಚೈತನ್ಯ ಮತ್ತು ಸಮಂತಾ ತಮ್ಮ ವಿಚ್ಛೇದನವನ್ನು ಘೋಷಿಸಿದರು. 'ಮಜಿಲಿ' ನಟಿ ನಾಗ ಚೈತನ್ಯದಿಂದ ಬೇರ್ಪಡುವುದಾಗಿ ಘೋಷಿಸಿದಾಗಿನಿಂದ, ಅವರು ಈ ವಿಷಯದ ಬಗ್ಗೆ ಮೌನವಾಗಿದ್ದಾರೆ.

ವಿಚ್ಚೇದನೆ ನಂತರ ಮುಗಿಯದ ಟ್ರೋಲ್, ಕೊನೆಗೂ ಉತ್ತರ ಕೊಟ್ರು ಸಮಂತಾ

ತಾನು ಕುಸಿದು ಸಾಯುತ್ತೇನೆ ಎಂದು ಅನಿಸುತ್ತಿತ್ತು ಎಂದು ಸಮಂತಾ ಹೇಳಿದ್ದಾರೆ. ಆದರೆ ತನ್ನ ಜೀವನವನ್ನು ಎಲ್ಲಾ ಸಮಸ್ಯೆಗಳೊಂದಿಗೆ ಬದುಕಲು ಹೊರಟಿದ್ದೇನೆ ಎಂದು ನಾನು ಅರಿತುಕೊಂಡೆ. ನಾನು ಸ್ಟ್ರಾಂಗ್ ಮಹಿಳೆ ಎಂದು ನನ್ನನ್ನು ನಾನು ಪ್ರಶಂಸಿಸುತ್ತೇನೆ  ಎಂದಿದ್ದಾರೆ ಸಮಂತಾ.

ನಾನು ಇದನ್ನು ಪಾಸ್ ಮಾಡಿ ಮುನ್ನುಗ್ಗಬಹುದು ಎಂದು ನಾನು ಅಂದುಕೊಂಡಿರಲಿಲ್ಲ. ನಾನು ನನ್ನ ಬಗ್ಗೆ ಹೆಮ್ಮೆಪಡುತ್ತೇನೆ ಏಕೆಂದರೆ ನಾನು ಇಷ್ಟು ಬಲಶಾಲಿ ಎಂದು ನನಗೆ ತಿಳಿದಿರಲಿಲ್ಲ ಎಂದು 'ಶಾಕುಂತಲಂ' ನಟಿ ಹೇಳಿದ್ದಾರೆ. ಚೈತನ್ಯ ಅವರಿಂದ ವಿಚ್ಛೇದನ ಪಡೆದಿದ್ದು ತನ್ನ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದೆ ಎಂದು ಸಮಂತಾ ಹೇಳಿದ್ದಾರೆ.

ಹೇಳೋದನ್ನು ಚಂದದ ಭಾಷೆಯಲ್ಲಿ ಹೇಳಿ

ವಿಚ್ಛೇದನ ಘೋಷಣೆಯ ಸುಮಾರು 2 ತಿಂಗಳ ನಂತರ, ಸಮಂತಾ ಅಂತಿಮವಾಗಿ ನಾಗ ಚೈತನ್ಯ ಜೊತೆಗಿನ ವಿಚ್ಛೇದನದ ನಂತರ ತನ್ನ ಜೀವನದ ಬಗ್ಗೆ ಮಾತನಾಡಿದ್ದಾರೆ. ಸಮಂತಾ ತನ್ನ ವಿಚ್ಛೇದನದ ಘೋಷಣೆಯ ನಂತರ ತಕ್ಷಣವೇ ತೆಗೆದುಕೊಂಡ ಆಧ್ಯಾತ್ಮಿಕ ಪ್ರಯಾಣದ ಬಗ್ಗೆ ಮಾತನಾಡಿದ್ದಾರೆ. ಇದು ನಾನು ಆಶಿಸಿದ್ದು, ಮತ್ತು ಇನ್ನೂ ಹೆಚ್ಚು. ನಿಮ್ಮಲ್ಲಿ ಏನೋ ಶಾಶ್ವತವಾಗಿ ಬದಲಾಗುತ್ತದೆ. ದೇವರು ನನಗೆ ಮುಂದುವರಿಯಲು ಸರಿಯಾದ ಶಕ್ತಿಯನ್ನು ನೀಡಿದ್ದಾನೆಂದು ನಾನು ಭಾವಿಸುತ್ತೇನೆ. ಲಾಕ್‌ಡೌನ್ ಸಮಯದಲ್ಲಿ ನಾನು ಧ್ಯಾನ ಮಾಡಲು ಪ್ರಾರಂಭಿಸಿದೆ ಎಂದಿದ್ದಾರೆ.

ನಾನು ಎಲ್ಲರ ಸ್ವೀಕಾರವನ್ನು ಕೇಳುವುದಿಲ್ಲ. ನಾನು ವಿಭಿನ್ನ ಅಭಿಪ್ರಾಯಗಳನ್ನು ಹೊಂದಲು ಜನರನ್ನು ಪ್ರೋತ್ಸಾಹಿಸುತ್ತೇನೆ. ಆದರೆ ಅದನ್ನು ಹೇಳುವಾಗ ಪ್ರೀತಿ ಮತ್ತು ಸಹಾನುಭೂತಿ ಹೊಂದಬಹುದು. ತಮ್ಮ ನಿರಾಶೆಯನ್ನು ಹೆಚ್ಚು ಸುಸಂಸ್ಕೃತ ರೀತಿಯಲ್ಲಿ ವ್ಯಕ್ತಪಡಿಸಲು ನಾನು ಅವರನ್ನು ವಿನಂತಿಸುತ್ತೇನೆ ಎಂದಿದ್ದರು.

ಸೆಕ್ಸ್ ಕುರಿತ ಹೇಳಿಕೆ ವೈರಲ್:

2017ರ ಸಂದರ್ಶನ ವಿಡಿಯೋ ವೈರಲ್ ಆಗಿದ್ದು ಇದರಲ್ಲಿ ಸಮಂತಾರಲ್ಲಿ ಆಹಾರವೋ ಸೆಕ್ಸ್ ಮುಖ್ಯವೋ ಎಂಬ ಪ್ರಶ್ನೆಯನ್ನು ಕೇಳಲಾಗಿದೆ. ಇದಕ್ಕೆ ಉತ್ತರಿಸಿದ ನಟಿ ಒಂದಿನ ಆಹಾರ ಇಲ್ಲಾಂದ್ರೂ ಓಕೆ, ಆದರೆ ಸೆಕ್ಸ್ ಬೇಕೇ ಬೇಕು ಎಂದು ಉತ್ತರ ಕೊಟ್ಟಿದ್ದಾರೆ ನಟಿ. ಒಂದಿನ ಊಟ ಇಲ್ಲವೆಂದರೂ ನಿಲ್ಲಬಹುದು, ಸೆಕ್ಸ್ ಇಲ್ಲದೆ ಇರಲಾರೆ ಎಂದಿದ್ದಾರೆ ಸೌತ್‌ ನಟಿ. ಈ ವಿಡಿಯೋ ತುಣುಕು ಈಗ ವೈರಲ್ ಆಗಿದ್ದು ಅಭಿಮಾನಿಗಳು ಬೇರೆ ಬೇರೆ ರೀತಿಯಲ್ಲಿ ಪ್ರಯಿಕ್ರಿಯಿಸುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?