
ನಟಿ ಸ್ನೇಹಾ ಈಗ ಎರಡು ಮಕ್ಕಳ ತಾಯಿ. ಹೆರಿಗೆಯಾದ ಮೇಲೆ ದಪ್ಪಗಾಗಿದ್ದ ಸ್ನೇಹಾ ಈಗ ಮತ್ತೆ ಸಣ್ಣಗಾಗಿದ್ದಾರೆ. ಹೆರಿಗೆಯಾದಮೇಲೆ ಸ್ನೇಹಾ ಅವರು ಡಿಪ್ರೆಶನ್‌ಗೆ ಹೋಗಿದ್ದರು. ಆಗ ಅವರು ಸಿಕ್ಕಾಪಟ್ಟೆ ತಿಂದಿದ್ದರು. ತಾನು ಸಣ್ಣಗೆ ಇದ್ದೇನೆ ಅಂತ ಸ್ನೇಹಾ ಭ್ರಮೆಯಲ್ಲಿದ್ದರು. ಆಮೇಲೆ ಅವರು ಸಣ್ಣಗಾಗಿದ್ದು ಹೇಗೆ?
ನಟಿ ಸ್ನೇಹಾ ಹೇಳಿದ್ದೇನು?
“ಒಂದುದಿನ ಅಭಿಮಾನಿಯೋರ್ವ “ಎಲ್ಲವೂ ಚೆನ್ನಾಗಿದೆ, ಆದರೆ ನೀವು ದಪ್ಪಗಾಗಿದ್ದೀರಿ” ಎಂದು ಹೇಳಿದರು. ಆಮೇಲೆ “ನನಗೆ ಹೌದು ಸಣ್ಣಗಾದೆ” ಎಂದು ಸ್ನೇಹಾ ಹೇಳಿದ್ದಾರೆ.
ನಟಿ ಸ್ನೇಹಾಗೆ ಹಲವು ವರ್ಷಗಳಿಂದ ಸಮಸ್ಯೆ ಇದೆ, ಅದಕ್ಕಾಗಿ 3 ಬಾರಿ ಮನೆ ಬದಲಾವಣೆ: ನಟ ಪ್ರಸನ್ನ
ದಿನನಿತ್ಯ ಆಹಾರ ಪದ್ಧತಿ ಹೇಗಿರುತ್ತದೆ?
“ಮನೆಯಲ್ಲಿಯೇ ವೇಟ್ ಟ್ರೇನಿಂಗ್ ಮಾಡಿದೆ, ಜೂಂಬಾ ಡ್ಯಾನ್ಸ್ ಮಾಡುತ್ತಿದ್ದೆ. ಬೆಳಗ್ಗೆ ಇಡ್ಲಿಯನ್ನು ತಿನ್ನುತ್ತಿರಲಿಲ್ಲ. ಮ್ಯೂಸಲಿ ತಿನ್ನುತ್ತಿದ್ದೆ. ಕಡಿಮೆ ಕ್ಯಾಲರಿ ಇರುವ ಆಹಾರ ಸೇವಿಸುತ್ತಿದ್ದೆ. ಮೊಟ್ಟೆ ತಿನ್ನುತ್ತಿದ್ದೆ. ಊಟದಲ್ಲಿ ಪಪ್ಪಾಯ, ಎರಡು ಚಪಾತಿ, ಪಲ್ಯ ತಿನ್ನುತ್ತಿದ್ದೆ. ರಾತ್ರಿ ಬೇಗ ಊಟ ಮಾಡುತ್ತಿರಲಿಲ್ಲ, ಒಂಭತ್ತು ಗಂಟೆಗೆ ಊಟ ಮಾಡಿದರೂ ಕಾರ್ಬ್ಸ್ ತಿನ್ನುತ್ತಿರಲಿಲ್ಲ. ಎಲ್ಲವನ್ನು ನಾನು ತಿನ್ನುತ್ತಿದ್ದೆ, ಆದರೆ ದಿನಕ್ಕೆ ಎಷ್ಟು ಕ್ಯಾಲರಿ ತಿನ್ನುತ್ತಿದ್ದೆ ಎನ್ನೋದನ್ನು ಕೌಂಟ್ ಮಾಡುತ್ತಿದ್ದೆ. ಏರೋಬಿಕ್ಸ್, ಯೋಗ ಎಲ್ಲವನ್ನೂ ಮಾಡುತ್ತಿದ್ದೆ. ಆದರೆ ಸ್ಲಿಮ್ ಆಗಬೇಕು ಅಂತ ನಮ್ಮ ದೇಹಕ್ಕೆ ಹಿಂಸೆ ಕೊಡಬಾರದು” ಎಂದು ನಟಿ ಸ್ನೇಹಾ ( Actress Sneha ) ಹೇಳಿದ್ದಾರೆ.
ಸಕ್ಕರೆ ಸೇವನೆ ಬಿಟ್ಟ ಬಳಿಕ ಏನಾಯ್ತು?
“ವರ್ಕೌಟ್ ಮಾಡಿದ ನಂತರದಲ್ಲಿ ನಾನು ಸ್ಟ್ರಾಂಗ್ ಇದ್ದೇನೆ ಎಂದು ಅನಿಸುತ್ತಿತ್ತು. ಜಿಮ್‌ನಲ್ಲಿ ನಾನು ವರ್ಕೌಟ್ ಮಾಡುವಾಗ ಏನೋ ಸಾಧನೆ ಮಾಡ್ತಿದ್ದೇನೆ ಅಂತ ಅನಿಸಿತು, ಫೈಬರ್, ಫ್ರೋಟೀನ್, ಮಿನೆರಲ್ಸ್ ಎಲ್ಲವೂ ನನ್ನ ಊಟದಲ್ಲಿ ಇರುತ್ತದೆ. ನಾನು ಸಕ್ಕರೆಯನ್ನು ಬಿಟ್ಟ ನಂತರವೇ ಸಣ್ಣಗಾದೆ. ತಿಂಗಳಲ್ಲಿ ಒಂದು ದಿನ ನಾನು ಸಕ್ಕರೆಯನ್ನು ತಿನ್ನುವೆ, ಅದಕ್ಕೂ ಜಾಸ್ತಿ ದಿನ ಆದ್ಮೇಲೆ ನಾನು ಸಕ್ಕರೆ ತಿಂದರೆ ಖುಷಿಪಡುವೆ. ಜಂಕ್ ತಿನ್ನೋದಿಲ್ಲ. ಹೊರಗಡೆ ಊಟ ಮಾಡೋದಿಲ್ಲ, ಮಸಾಲೆ ಜಾಸ್ತಿ ತಿನ್ನೋದಿಲ್ಲ. ಹೆಚ್ಚು ಉಪ್ಪು, ಖಾರ ತಿನ್ನೋದಿಲ್ಲ” ಎಂದು ನಟಿ ಸ್ನೇಹಾ ಹೇಳಿದ್ದಾರೆ.
ಒಮ್ಮೆ ಧರಿಸಿದ ಡ್ರೆಸ್ ಮತ್ತೆ ಹಾಕೊಲ್ವಂತೆ ಈ ನಟಿ: ರವಿಶಾಸ್ತ್ರಿ ಹೀರೋಯಿನ್ ಕೊಟ್ಟ ಕಾರಣ ಕೇಳಿದ್ರೆ ಬೆರಗಾಗ್ತೀರಾ!
ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಸ್ನೇಹಾ ನಟಿಸಿದ್ದಾರೆ. ಕನ್ನಡದಲ್ಲಿ ವಿ ರವಿಚಂದ್ರನ್ ಜೊತೆಗೆ ‘ರವಿ ಶಾಸ್ತ್ರೀ’, ‘ಒಗ್ಗರಣೆ’, ‘ಕುರುಕ್ಷೇತ್ರ’ ಸಿನಿಮಾದಲ್ಲಿಯೂ ಅವರು ನಟಿಸಿದ್ದಾರೆ. ಸ್ನೇಹಾ ಅವರು ನಟ ಪ್ರಸನ್ನರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಇವರಿಗೆ ಓರ್ವ ಪುತ್ರ, ಪುತ್ರಿ ಇದ್ದಾರೆ. ಈಗ ಅವರು ರಿಯಾಲಿಟಿ ಶೋ ಜಡ್ಜ್ ಆಗಿಯೂ, ನಟಿಯಾಗಿ ಕೆಲಸ ಮಾಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.