ಹೆಣ್ಣಿನ ಈ ಭಾಗ ಎಂದರೆ ನನಗೆ ಇಷ್ಟ. ಇದು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಹೇಳಿದ ಪೋಲಿ ಮಾತು. ಯುವತಿಗೆ ಈ ಮಾತು ಹೇಳಿ ಇದೀಗ ವಿವಾದಕ್ಕೆ ಗುರಿಯಾಗಿದ್ದಾರೆ. ಅಷ್ಟಕ್ಕೂ ರಾಮ್ ಗೋಪಾಲ್ ವರ್ಮಾ ಯುವತಿಗೆ ಹೇಳಿದ್ದೇನು? ವಿಡಿಯೋದಲ್ಲಿ ಏನಿದೆ/
ಹೈದರಾಬಾದ್(ಮಾ.18) ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸದಾ ಒಂದಲ್ಲ ಒಂದು ವಿವಾದ ಸೃಷ್ಟಿಸುತ್ತಲೇ ಇರುತ್ತಾರೆ. ಕಳೆದ ಹಲವು ವರ್ಷಗಳಿಂದ ರಾಮ್ ಗೋಪಾಲ್ ವರ್ಮಾ ವಿವಾದಗಳೆಲ್ಲಾ ಹೆಣ್ಣಿನ ಸುತ್ತವೇ ಇರುತ್ತೆ. ನಟಿ ಜೊತೆಗಿನ ಕೆಲ ವಿಡಿಯೋಗಳನ್ನು ಹಂಚಿಕೊಂಡು ಇದ್ದ ಮಾನವನ್ನು ರಾಮ್ ಗೋಪಾಲ್ ವರ್ಮಾ ಕಳೆದುಕೊಂಡಿದ್ದಾರೆ. ಇದೀಗ ರಾಮ್ ಗೋಪಾಲ್ ವರ್ಮಾ ನಟಿ ಜೊತೆ ಮಾತನಾಡುತ್ತಿರುವ ವಿಡಿಯೋ ಹೊರಬಂದಿದೆ. ಈ ವಿಡಿಯೋದಲ್ಲಿ ರಾಮ ಗೋಪಾಲ್ ವರ್ಮಾ, ತನಗೆ ಹೆಣ್ಣಿನ ಒಂದು ಭಾಗ ಅತ್ಯಂತ ಇಷ್ಟ ಎಂದಿದ್ದಾರೆ. ಈ ಮಾತು ಹೇಳಿ ನಟಿಗೆ ಕಿಸ್ ಕೊಟ್ಟ ಘಟನೆ ನಡೆದಿದೆ. ರಾಮ್ ಗೋಪಾಲ್ ವರ್ಮಾ ಮಾತುಗಳು ಇದೀಗ ವಿವಾದವಾಗಿದೆ.
ರಾಮ್ ಗೋಪಾಲ್ ವರ್ಮಾ ಎ ರೇಟಿಂಗ್ ಸಿನಿಮಾ ಮೂಲಕ ಇದೀಗ ಜನಪ್ರಿಯರಾಗಿದ್ದಾರೆ. ಆರಂಭಿಕ ದಿನಗಳಲ್ಲಿ ರಾಮ್ ಗೋಪಾಲ್ ವರ್ಮಾ ಉತ್ತಮ ನಿರ್ದೇಶಕ ಅನ್ನೋ ಹೆಸರು ಗಳಿಸಿದ್ದರು. ಆದರೆ ಇದೀಗ ರಾಮ್ ಗೋಪಾಲ್ ವರ್ಮಾ ಎ ರೇಟಿಂಗ್ ಸಿನಿಮಾ ಮಾಡುತ್ತಿದ್ದಾರೆ. ಪ್ರತಿ ಸಿನಿಮಾದಲ್ಲೂ ಹೊಸ ಹೊಸ ನಟಿಯರನ್ನು ಪರಚಯಿಸುತ್ತಾರೆ. ಇನ್ನೂ ಶೂಟಿಂಗ್ ವೇಳೆ ನಡೆದ ಹಲವು ಘಟನೆಗಳ ವಿಡಿಯೋಗಳನ್ನೂ ಹಂಚಿಕೊಂಡು ಮತ್ತಷ್ಟು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಇದೇ ರೀತಿ ಇದೀಗ ಪ್ರತ್ಯುಷ ನಟಿ ಜೊತೆಗಿನ ಮಾತುಕತೆಯೂ ವಿವಾದವಾಗಿದೆ.
ಇಷ್ಟೆಲ್ಲಾ ಹೈಪ್ ಕೊಟ್ಟರೆ ಕತ್ತೆಗೂ ಸಿಂಹ ಅನಿಸುತ್ತೆ; ಸೋಶಿಯಲ್ ಮೀಡಿಯಾದಲ್ಲಿ ವರ್ಮಾ ಗಲಾಟೆ!
ಪ್ರತ್ಯುಷ ನಟಿ ರಾಮ್ ಗೋಪಾಲ್ ವರ್ಮಾ ಅವರನ್ನು ಭೇಟಿಯಾಗಿದ್ದಾರೆ. ಈ ಭೇಟಿಯಾ ವಿಡಿಯೋಗಳೇ ಇದೀಗ ಕೋಲಾಹಲ ಸೃಷ್ಟಿಸಿದೆ. ಪ್ರತ್ಯುಷಾ ನೇರವಾಗಿ ರಾಮ್ ಗೋಪಾಲ್ ವರ್ಮಾ ಇದ್ದ ಕೋಣೆಗೆ ಆಗಮಿಸಿದ್ದಾರೆ. ಈ ವೇಳೆ ನಟಿಯನ್ನು ಬರಮಾಡಿಕೊಂಡ ರಾಮ್ ಗೋಪಾಲ್ ವರ್ಮ, ನೀನು ನನ್ನನ್ನು ತಬ್ಬಿಕೊಳ್ಳುವುದಿದ್ದರೆ ಈ ಬದಿಯಿಂದ ತಬ್ಬಿಕೊಳ್ಳಬೇಕು ಎಂದಿದ್ದಾರೆ. ರಾಮ್ ಗೋಪಾಲ್ ಮಾತಿನಂತೆ ನಿರ್ದೇಶಕ ತಬ್ಬಿಕೊಂಡ ನಟಿ ಪ್ರತ್ಯುಷಾ ಕೆಲ ಹೊತ್ತು ಕಳೆದಿದ್ದಾರೆ.
ಈ ವೇಳೆ ನಟಿ ಪ್ರತ್ಯುಷ ಕೇಳಿದ ಪ್ರಶ್ನೆಗೆ ರಾಮ್ ಗೋಪಾಲ್ ವರ್ಮಾ ಉತ್ತರಿಸಿದ್ದಾರೆ. ನಟಿ ಪ್ರತ್ಯುಷ ಹೆಣ್ಣಿನ ಯಾವ ಭಾಗ ನಿಮಗೆ ತುಂಬಾ ಇಷ್ಟ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ರಾಮ್ ಗೋಪಾಲ್ ವರ್ಮಾ, ನನಗೆ ಹೆಣ್ಣಿನ ಉಬ್ಬಿರುವ ಎದೆ ಭಾಗ ಹೆಚ್ಚು ಇಷ್ಟ ಎಂದಿದ್ದಾರೆ. ರಾಮ್ ಗೋಪಾಲ್ ವರ್ಮಾ ವಯಸ್ಸಿಗೆ ತಕ್ಕಂತೆ ಮಾತನಾಡಬೇಕು ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಇಲ್ಲಿ ನಟಿ ಪ್ರತ್ಯುಷಾ ಪ್ರಶ್ನೆಯನ್ನೂ ಹಲವರು ಖಂಡಿಸಿದ್ದಾರೆ. ಇದೇ ವೇಳೆ ಮುಂದಿನ ಬಿಗ್ ಬಾಸ್ ಆವೃತ್ತಿಗೆ ಸ್ಪರ್ಧಿ ಫಿಕ್ಸ್ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಮ್ ಗೋಪಾಲ್ ವರ್ಮಾ ಎಲ್ಲಾ ಬಿಟ್ಟಿದ್ದಾರೆ. ಆದರೆ ಈ ರೀತಿಯ ವಿಡಿಯೋ, ಮಾತುಗಳಿಂದ ಸಮಾಜವನ್ನು ಯಾಕೆ ಹಾಳುಮಾಡುತ್ತಿದ್ದೀರಿ ಎಂದು ಹಲವರು ಪ್ರಶ್ನಿಸಿದ್ದಾರೆ.
ಮ್ಯಾಚ್ ಫಿಕ್ಸ್ ಆಯ್ತಾ ವರ್ಮಾ ಅಂಕಲ್, ಏನ್ಸಮಾಚಾರ: ಗುಮಾನಿ ಶುರುವಾಗಿದೆ ಅಂತಿದಾರೆ!