200 ಖೈದಿಗಳ ಮಧ್ಯೆ ಶಿಲ್ಪಾ ಪತಿ ರಾಜ್ ಕುಂದ್ರಾಗೆ ರೊಟ್ಟಿ ಊಟವೇ ಗತಿ!

Suvarna News   | Asianet News
Published : Jul 31, 2021, 12:44 PM ISTUpdated : Jul 31, 2021, 02:19 PM IST
200 ಖೈದಿಗಳ ಮಧ್ಯೆ ಶಿಲ್ಪಾ ಪತಿ ರಾಜ್ ಕುಂದ್ರಾಗೆ ರೊಟ್ಟಿ ಊಟವೇ ಗತಿ!

ಸಾರಾಂಶ

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿಗಿಲ್ಲ ವಿಶೇಷ ಪರಿಗಣನೆ ಜೈಲಲ್ಲಿ 200 ಖೈದಿಗಳ ಮಧ್ಯೆ ಒಬ್ಬರಾಗಿರೋ ಕುಂದ್ರಾ

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಮುಂಬೈಯ ಖ್ಯಾತ ಉದ್ಯಮಿ ಈಗ ಜೈಲಿನಲ್ಲಿ ಸಾಮಾನ್ಯ ಖೈದಿ. ಸಾಮಾನ್ಯವಾಗಿ ರಾಜಕಾರಣಿ, ಸೆಲೆಬ್ರಿಟಿಗಳು ಜೈಲು ಸೇರಿದಾಗ ವಿಶೇಷ ಆತಿಥ್ಯ ಸಿಗುತ್ತಿದ್ದರೂ ರಾಜ್‌ಗೆ ಮಾತ್ರ ಸಾಮಾನ್ಯ ಖೈದಿಗಳ ಸೌಲಭ್ಯ ಸಿಕ್ಕಿದೆ. ಯಾವುದೇ ವಿಶೇಷ ಪರಿಗಣನೆ ಅಥವಾ ಸೌಲಭ್ಯ ಸಿಕ್ಕಿಲ್ಲ. ಬದಲಾಗಿ ಇತರ ಜೈಲು ನಿವಾಸಿಗಳಂತೆ ಜೈಲಿನಲ್ಲಿ ಉಳಿದಿದ್ದಾರೆ ಶಿಲ್ಪಾ ಶೆಟ್ಟಿ ಪತಿ.

ರಿಪು ಸುದನ್ ಬಾಲಕಿಶನ್ ಕುಂದ್ರಾ ಅಲಿಯಾಸ್ ರಾಜ್ ಕುಂದ್ರಾ 45 ವರ್ಷದ ಉದ್ಯಮಿಯಾಗಿದ್ದು ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕಾಗಿ  ಆರ್ಥರ್ ರೋಡ್ ಜೈಲಿನಲ್ಲಿದ್ದಾರೆ. ಬಾಲಿವುಡ್‌ನ ಟಾಪ್ ನಟಿ ಶಿಲ್ಪಾ ಶೆಟ್ಟಿ ಪತಿಗೆ ಯಾವುದೇ ಆದ್ಯತೆಯ ಸೌಲಭ್ಯಗಳನ್ನು ಒದಗಿಸಲಾಗಿಲ್ಲ ಎಂಬುದು ಈಗ ಬಹಿರಂಗವಾಗಿದೆ.

ಶಿಲ್ಪಾ ಅತ್ತಿದ್ದು ಮಾನಹಾನಿ ಸುದ್ದಿಯಲ್ಲ ಎಂದ ಕೋರ್ಟ್..!

ಕುಂದ್ರಾ ಅವರನ್ನು ಇತರ ಖೈದಿಗಳಂತೆ ಪರಿಗಣಿಸಲಾಗುತ್ತದೆ. ಸುಮಾರು 200 ಕೈದಿಗಳೊಂದಿಗೆ ಸಾಮಾನ್ಯ ಬ್ಯಾರಕ್‌ನಲ್ಲಿ ಇರಿಸಲಾಗುತ್ತಿದೆ ಎಂದು ಜೈಲಿನ ಮೂಲಗಳು ತಿಳಿಸಿವೆ. ಜುಲೈ 19 ರಂದು ಮುಂಬೈ ಕ್ರೈಂ ಬ್ರಾಂಚ್ ಬಂಧಿಸಿದ ಕುಂದ್ರಾ ಅವರನ್ನು ಜುಲೈ 27ರಂದು ಮತ್ತೊಮ್ಮೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು. ಅವರ ಜಾಮೀನು ಅರ್ಜಿ ತಿರಸ್ಕರಿಸಿರದಿದ್ದರೆ ಅವರು ಹೊರಗೆ ಬರುವ ಸಾಧ್ಯತೆ ಇತ್ತು. ಆದರೆ ಕೋರ್ಟ್ ಜಾಮೀನು ನಿರಾಕರಿಸಿ ನ್ಯಾಯಾಂಗ ಬಂಧನ ವಿಸ್ತರಿಸಿದೆ.

ಜುಲೈ 27 ರಂದು, ಕುಂದ್ರಾ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಜಾಮೀನು ಅರ್ಜಿ ತಿರಸ್ಕೃತವಾಗಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು. ಆರ್ಥರ್ ರಸ್ತೆ ಜೈಲಿಗೆ ಕಳುಹಿಸುವ ಮೊದಲು ಅವರನ್ನು ವೈದ್ಯಕೀಯ ತಪಾಸಣೆಗಾಗಿ ಜೆಜೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಕೊರೋನಾ ನೆಗೆಟಿವ್ ವರದಿ ಬಂದ ನಂತರ ಅವರನ್ನು ಜೈಲಿಗೆ ಶಿಫ್ಟ್ ಮಾಡಲಾಗಿತ್ತು.

"

ಜೈಲಿನ ವೃತ್ತ ಸಂಖ್ಯೆ 6 ರಲ್ಲಿ ಕುಂದ್ರಾ ಅವರನ್ನು ಬ್ಯಾರಕ್ ಸಂಖ್ಯೆ 4 ರಲ್ಲಿ ಇರಿಸಲಾಗಿದೆ. ಪ್ರತಿ ಬ್ಯಾರಕ್‌ 200 ಕ್ಕೂ ಹೆಚ್ಚು ಕೈದಿಗಳನ್ನು ಹೊಂದಿದೆ. ಮೂಲತಃ 50 ಕೈದಿಗಳ ಸಾಮರ್ಥ್ಯವಿರುವ ಬ್ಯಾರಕ್ ಈಗ ಕುಂದ್ರಾ ಸೇರಿದಂತೆ 200 ಕೈದಿಗಳನ್ನು ಹೊಂದಿದೆ ಎಂದು ಮಹಾರಾಷ್ಟ್ರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪತ್ರಕರ್ತರ ವಿರುದ್ಧ ಮಾನನಷ್ಟ ಮೊಕದ್ದಮೆ, 25 ಕೋಟಿ ಪರಿಹಾರ ಕೇಳಿದ ಶಿಲ್ಪಾ ಶೆಟ್ಟಿ

ಕುಂದ್ರಾ ಜೊತೆ ಬಂಧಿತನಾದ ಕುಂದ್ರಾ ಸಂಸ್ಥೆಯ ಐಟಿ ಮುಖ್ಯಸ್ಥ ರಯಾನ್ ಥಾರ್ಪೆಯನ್ನು ಪ್ರತ್ಯೇಕ ಬ್ಯಾರಕ್‌ನಲ್ಲಿ ಇರಿಸಲಾಗಿತ್ತು ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ. ಕುಂದ್ರಾ ಕೂಡ ಇತರರಿಗೆ ಸಿಗುವ ಅದೇ ಉಪಹಾರವನ್ನು ಪಡೆಯುತ್ತಾರೆ. ಬೆಳಗ್ಗೆ ಒಂದು ಲೋಟ ಹಾಲು ಮತ್ತು ಬಾಳೆಹಣ್ಣು. ನಂತರ ರಾತ್ರಿ 11: 30 ಕ್ಕೆ ಊಟ ಮತ್ತು ಸಂಜೆ 5 ಗಂಟೆಗೆ ಭೋಜನ ಜೈಲಿನ ಕ್ಯಾಂಟೀನ್‌ನಿಂದ ಅವರಿಗೆ ಏನಾದರೂ ಹೆಚ್ಚುವರಿಯಾಗಿ ಸಿಗಬಹುದು ಎಂದು ಅಧಿಕಾರಿ ಹೇಳಿದ್ದಾರೆ. 804 ಕೈದಿಗಳ ಸಾಮರ್ಥ್ಯ ಹೊಂದಿರುವ ಆರ್ಥರ್ ರೋಡ್ ಜೈಲಿನಲ್ಲಿ 2700 ಕ್ಕೂ ಹೆಚ್ಚು ಕೈದಿಗಳಿದ್ದಾರೆ..

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಾಜ್ ಜೊತೆ ರೊಮ್ಯಾಂಟಿಕ್ ಹನಿಮೂನ್ ಟ್ರಿಪ್ ಪ್ಲಾನ್ ಮಾಡಿದ ಸಮಂತಾ.. ಎಲ್ಲಿಗೆ ಹೋಗ್ತಿದ್ದಾರೆ?
ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?