ಮೊದಲ ಬಾರಿಗೆ ದೇಹ ಸಿರಿ ತೋರಿಸಲು ಮುಂದಾದ ಕರಾವಳಿ ಬೆಡಗಿ Krithi Shetty?

Published : Apr 22, 2023, 03:56 PM IST
ಮೊದಲ ಬಾರಿಗೆ ದೇಹ ಸಿರಿ ತೋರಿಸಲು ಮುಂದಾದ ಕರಾವಳಿ ಬೆಡಗಿ  Krithi Shetty?

ಸಾರಾಂಶ

ಸಿಂಪಲ್​ ಹುಡುಗಿ ಎಂದು ಹೆಸರು ಪಡೆದಿದ್ದ ನಟಿ ಕೃತಿ ಶೆಟ್ಟಿ ಇದೀಗ ಬಿಕಿನಿ ಡ್ರೆಸ್​ ತೊಡಲು ಸಿದ್ಧರಾಗಿದ್ದಾರೆ. ಸರಣಿ ಫ್ಲಾಪ್​ ಚಿತ್ರದ ಬೆನ್ನಲ್ಲೇ ಈ ನಿರ್ಧಾರ ತೆಗೆದುಕೊಂಡಿದ್ದು, ಸಂಭಾವನೆ ಎಷ್ಟಿದೆ?   

ಹಲವು ತಿಂಗಳ ಹಿಂದೆ ಟಾಲಿವುಡ್ ಇಂಡಸ್ಟ್ರಿಯಲ್ಲಿ ಮೋಸ್ಟ್ ವಾಂಟೆಡ್ (Most wanted) ಹೀರೋಯಿನ್‌ಗಳಲ್ಲಿ ಕೃತಿ ಶೆಟ್ಟಿ  ಒಬ್ಬರು.  ಮಂಗಳೂರಿನ ಬೆಡಗಿ ಈಕೆ. ಓದಿದ್ದೆಲ್ಲವೂ ಮುಂಬೈನಲ್ಲಿ.  2021ರಲ್ಲಿ ಮುಂಬೈನಲ್ಲಿ ಮನೋವಿಜ್ಞಾನವನ್ನು ಅಧ್ಯಯನ ಮಾಡುತ್ತಿರುವಾಗಲೇ  ಅವರು ವಾಣಿಜ್ಯ ಜಾಹೀರಾತುಗಳಲ್ಲಿ ಆಫರ್​ ಬಂದಿತ್ತು. ಅಲ್ಲಿಂದಲೇ ಅವರು ಮಾಡೆಲಿಂಗ್​ನಲ್ಲಿ ಮಿಂಚಲು ಶುರು ಮಾಡಿದರು. ಹಾಗೆ ನೋಡಿದರೆ 10ನೇ ವಯಸ್ಸಿನಲ್ಲಿಯೇ ಇವರು ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಕಾಲೇಜು ಓದುವಾಗ  ಅವರಿಗೆ ತೆಲುಗು ಚಿತ್ರರಂಗದ ಬಾಗಿಲು ತೆರೆಯಿತು. 'ಉಪ್ಪೆನ' ಸಿನಿಮಾ ಮೂಲಕ ಟಾಲಿವುಡ್​ಗೆ ಪದಾರ್ಪಣೆ ಮಾಡಿದರು. ಮೊದಲ ಚಿತ್ರ 100 ಕೋಟಿ ಕ್ಲಬ್ ಸೇರಿತ್ತು. ಈ ಯಶಸ್ಸಿನ ಬೆನ್ನಲ್ಲೇ  'ಶ್ಯಾಮ್ ಸಿಂಘರಾಯ್', 'ಬಂಗಾರ್‌ರಾಜು' ಬ್ಯಾಕ್‌ ಟು ಬ್ಯಾಕ್ ಹಿಟ್ ಆಯಿತು. ಹೀಗೆ ಉತ್ತುಂಗದಲ್ಲಿ ಇರುವಾಗಲೇ ಅದೇನಾಯಿತೋ ಗೊತ್ತಿಲ್ಲ. ಅದೃಷ್ಟ ಕೈಕೊಟ್ಟಿತ್ತು. ಮಾಡಿದ ಸಿನಿಮಾಗಳೆಲ್ಲಾ ಕುಸಿದು ಹೋಯಿತು.  ಒಳ್ಳೊಳ್ಳೆ ಆಫರ್‌ ಬಂದರೂ, ಇಂಡಸ್ಟ್ರಿಯಲ್ಲಿ ಅಷ್ಟೊಂದು ಸಕ್ಸಸ್‌ ಸಿಗಲೇ ಇಲ್ಲ. ಆರಂಭದಲ್ಲಿ ಒಂದಿಷ್ಟು ಹಿಟ್‌ ಚಿತ್ರಗಳು ಬಂದರೂ ಕೊನೆಕೊನೆಗೆ ಕೃತಿ ಶೆಟ್ಟಿ (Krity Shetty) ಮಾರುಕಟ್ಟೆ ಕುಸಿಯತೊಡಗಿದೆ. ಇದೀಗ ಈಕೆಗೊಂದು ಆಫರ್‌ ಬಂದಿದೆ. ಆದರೆ ಈ ಆಫರ್‌ನಲ್ಲಿ ಸಕ್ಸಸ್‌ ಕಾಣಬೇಕು ಎಂದರೆ ಕೃತಿ ರಿಸ್ಕ್‌ ಒಂದನ್ನು ತೆಗೆದುಕೊಳ್ಳುವ ಅನಿವಾರ್ಯತೆ ಉಂಟಾಗಿದೆಯಂತೆ. ಆದರೆ ನಟಿಯರು ಎಂದ ಮೇಲೆ ಇವೆಲ್ಲವೂ ಮಾಮೂಲು ಆಗಿರುವ ಕಾರಣ ಕೃತಿ ಇದಕ್ಕೆ ಒಪ್ಪುತ್ತಾರಾ ಇನ್ನುವುದು ಈಗಿರುವ ಪ್ರಶ್ನೆ.

ಅಷ್ಟಕ್ಕೂ ಅದೆಂಥ ರಿಸ್ಕ್‌ ಅಂತೀರಾ? ಬಿಕಿನಿ (Bikini) ರಿಸ್ಕ್‌! ಹೌದು. ಕೃತಿ ಶೆಟ್ಟಿ ಮುಂದೆ ಈಗ ಬಿಕಿನಿ ಆಫರ್‌ ಇದೆ! ಕೃತಿ ಶೆಟ್ಟಿಗೆ ಹೊಸ ಸಿನಿಮಾ ಆಫರ್ ಬಂದಿದೆ. ಈ ಸಿನಿಮಾದಲ್ಲಿ ಕೃತಿ ಬಿಕಿನಿಯಲ್ಲಿ ಕಾಣಿಸಿಕೊಳ್ಳಬೇಕಿದೆ. ಇದಕ್ಕೆ ಕೃತಿ ಓಕೆ ಕೂಡ ಎಂದಿದ್ದಾರಂತೆ. ಸಿನಿಮಾ ಆಯ್ಕೆಯಲ್ಲಿ ರಿಸ್ಕ್ ತೆಗೆದುಕೊಳ್ಳುವುದಕ್ಕೆ ಇಷ್ಟಪಡದ ಕೃತಿ ಎಲ್ಲರೂ ದೇಹ ಸಿರಿಯನ್ನು ಸಲೀಸಾಗಿ ತೋರಿಸುತ್ತಿರುವಾಗ ತಾವ್ಯಾಕೆ ಹಿಂದೆ ಬೀಳಬೇಕು ಎಂದುಕೊಂಡಿದ್ದು, ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ ಎನ್ನುವ ಸುದ್ದಿ ಇದೆ. ಪ್ರೇಕ್ಷಕರಿಗೆ ಇದಾಗಲೇ ಬಹುತೇಕ ಎಲ್ಲಾ ನಟಿಯರು ಗ್ಲಾಮರ್ ಡೋಸ್ ನೀಡಲು ಬಿಕಿನಿ ತೊಟ್ಟಿರುವಾಗ ತಾವೇಕೆ ಹಿಂದೆ ಬೀಳುವುದು ಎಂದು ಕೃತಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಈ ರೀತಿ ಡ್ರೆಸ್​ ತೊಟ್ಟರೆ ಸಿನಿಮಾ ಸಕ್ಸಸ್​ ಆಗಬಹುದು ಎಂಬ ಲೆಕ್ಕಾಚಾರವೂ ಚಿತ್ರತಂಡಕ್ಕಿದೆಯಂತೆ!

Anushka Shetty: ಗುಟ್ಟಾಗಿ ಮದ್ವೆಯಾದ್ರಾ ಅನುಷ್ಕಾ ಶೆಟ್ಟಿ? ಮೌನ ಮುರಿದ ನಟಿ ಹೇಳಿದ್ದೇನು?
 
ತಮ್ಮ ದೇಹ ಸೌಂದರ್ಯವನ್ನು ತೋರಿಸಬೇಕು ಎಂದರೆ ಸುಮ್ಮನೆಯೆ? ಇದಕ್ಕಾಗಿ ನಟಿ ಭಾರಿ ಡಿಮಾಂಡ್​ ಮಾಡಿದ್ದಾರೆ ಎನ್ನುವ ಸುದ್ದಿ ಇದೆ. ಸದ್ಯ ತಮ್ಮ ಚಿತ್ರಗಳಿಗೆ ನಟಿ 2 ಕೋಟಿ ರೂಪಾಯಿಗಳನ್ನು ಸರಾಸರಿ ಪಡೆಯುತ್ತಿದ್ದಾರೆ. ಆದರೆ ಇದೀಗ ಬಿಕಿನಿ ತೊಡುವ ದೃಶ್ಯಕ್ಕೆ 4-5 ಕೋಟಿ ರೂಪಾಯಿಗಳ ಬೇಡಿಕೆ ಇಟ್ಟಿದ್ದು, ಇದಕ್ಕೆ ನಿರ್ಮಾಪಕರೂ ಓಕೆ ಎಂದಿದ್ದಾರೆ ಎನ್ನುವ ಸುದ್ದಿಯಾಗಿದೆ. 17ನೇ ವಯಸ್ಸಿನಲ್ಲೇ ಹೃತಿಕ್ ರೋಷನ್ ನಟಿಸಿದ 'ಸೂಪರ್ 30' ಸಿನಿಮಾದಲ್ಲಿ ಚಿಕ್ಕ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದ ನಟಿಗೆ ಟಾಲಿವುಡ್​ನ ಬಾಗಿಲು ತೆರೆದೊಡನೇ ತಮ್ಮ ಸಂಭಾವನೆ ಏರಿಸಿಕೊಂಡಿದ್ದರು.ಮೊದಲ ಚಿತ್ರ  'ಉಪ್ಪೆನ' ಬ್ಲಾಕ್​ಬಸ್ಟರ್​ ಆಗುತ್ತಿದ್ದಂತೆಯೇ, ಅದರ ಬೆನ್ನಲ್ಲೇ  ಮೂಡಿಬಂದಿದ್ದ  'ಬಂಗಾರ್‌ರಾಜು' ಹೆಚ್ಚು ಸಂಭಾವನೆ (Remmuneration) ಪಡೆದಿದ್ದರು. ಆದರೆ ಈಗ ಬಿಕಿನಿ ಡ್ರೆಸ್​ಗೆ ಡಬಲ್​ ಸಂಭಾವನೆ ಕೇಳಿರುವುದಾಗಿ ಹೇಳಲಾಗುತ್ತಿದೆ.
 
ಅಂದಹಾಗೆ ಈ ತಮಿಳಿನ ಚಿತ್ರಕ್ಕೆ ಕೃತಿಗೆ ಸೂಪರ್‌ಸ್ಟಾರ್ (Superstar) ಜೊತೆ  ನಟಿಸಲು  ಅವಕಾಶ ಸಿಕ್ಕಿದೆಯೆನ್ನಲಾಗಿದೆ.  ಇದೊಂದು ಕಮರ್ಷಿಯಲ್ ಸಿನಿಮಾ ಎನ್ನಲಾಗಿದೆ.  ಆದ್ದರಿಂದ ಇದೇ ಮೊದಲ ಬಾರಿಗೆ ಬಿಕಿನಿ ಜೊತೆಗೆ ಗ್ಲಾಮರಸ್​ ಆಗಿ ಕಾಣಲು ಕೃತಿ ಮುಂದಾಗಿದ್ದಾರೆ.  ನಾಗ ಚೈತನ್ಯ, ಕೃತಿ ಕಾಂಬಿನೇಷನ್‌ನಲ್ಲಿ ಕಿಂಗ್ ಆಫ್ ಗೋಲ್ಡ್ ಬ್ಲಾಕ್‌ಬಸ್ಟರ್ ಹಿಟ್ ಕಸ್ಟಡಿ ಅದೇ ಮ್ಯಾಜಿಕ್ ಅನ್ನು ಪುನರಾವರ್ತಿಸುವ ಸಾಧ್ಯತೆಯಿದೆ ಎಂದು ಕಮೆಂಟ್‌ಗಳು ಹೇಳುತ್ತಿವೆ. 

Honey Rose: ಮದುವೆ ಯಾಕೆ, ರಿಲೇಷನ್​ ಓಕೆ ಎಂದು ಆಫರ್​ ಕೊಟ್ಟಿದ್ದಾರೆ ಸ್ನಿಗ್ಧ ಸುಂದರಿ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?