ವಿವಾದಗಳ ಬಳಿಕ ಹಾಡಿನ ಟೀಸರ್ ಮೂಲಕ ಬಂದ ಪ್ರಭಾಸ್ 'ಆದಿಪುರುಷ್'; ಜೈ ಶ್ರೀಮ್ ಕೇಳಿ ಫ್ಯಾನ್ಸ್ ರೋಮಾಂಚನ

Published : Apr 22, 2023, 03:55 PM IST
ವಿವಾದಗಳ ಬಳಿಕ ಹಾಡಿನ ಟೀಸರ್ ಮೂಲಕ ಬಂದ ಪ್ರಭಾಸ್ 'ಆದಿಪುರುಷ್'; ಜೈ ಶ್ರೀಮ್ ಕೇಳಿ ಫ್ಯಾನ್ಸ್  ರೋಮಾಂಚನ

ಸಾರಾಂಶ

ವಿವಾದಗಳ ಬಳಿಕ ಹಾಡಿನ ಟೀಸರ್ ಮೂಲಕ ಬಂದ ಪ್ರಭಾಸ್ 'ಆದಿಪುರುಷ್'; ಜೈ ಶ್ರೀಮ್ ಕೇಳಿ ಫ್ಯಾನ್ಸ್  ರೋಮಾಂಚನ

ಟಾಲಿವುಡ್ ಸ್ಟಾರ್ ಪ್ರಭಾಸ್ ನಟನೆಯ ಆದಿಪುರುಷ್  ಸಿನಿಮಾ  ರಿಲೀಸ್​ಗೆ ರೆಡಿ ಆಗಿದೆ. ಸಾಕಷ್ಟು ವಿವಾದಗಳ ಬಳಿಕ ಆದಿಪುರುಷ್ ಕೊನೆಗೂ ಚಿತ್ರೀಕರಣ ಮುಗಿಸಿ ಚಿತ್ರಮಂದಿರಕ್ಕೆ ಎಂಟ್ರಿ ಕೊಡಲು ಸಜ್ಜಾಗಿದೆ. ಸಿನಿಮಾದ ಮೊದಲ ಟೀಸರ್ ರಿಲೀಸ್ ಆದ ಬಳಿಕ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಆಂಜನೆಯನ ಪಾತ್ರ, ರಾವಣ ಪಾತ್ರ ಚಿತ್ರಿಸಿದ್ದ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕಿದ್ದರು. ಭಾರಿ ವಿರೋಧದ ಬಳಿಕ ಒಂದಿಷ್ಟು ಬದಲಾವಣೆಯೊಂದಿಗೆ ಆದಿಪುರುಷ್ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದೆ. ಅಂದಹಾಗೆ ಈ ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ವಿವಾದ, ಟ್ರೋಲ್ ಬಳಿಕ ಆದಿಪುರುಷ್ ಇದೀಗ ಜೈ ಶ್ರೀರಾಮ್ ಎಂಬ ಲಿರಿಕಲ್ ಹಾಡಿನ ಟೀಸರ್ ರಿಲೀಸ್ ಮಾಡಿದೆ. ಜೈ ಶ್ರೀಮ್ ಕೇಳಿ ಫ್ಯಾನ್ಸ್  ರೋಮಾಂಚನಗೊಂಡಿದ್ದಾರೆ. 

ಸದ್ಯ ರಿಲೀಸ್ ಆಗಿರುವ ಜೈ ಶ್ರೀರಾಮ್  ಟೀಸರ್‌ಗೆ ಪ್ರತಿಕ್ರಿಯೆ ಸಿಕ್ಕಿರುವುದು ಚಿತ್ರತಂಡಕ್ಕೆ ಖುಷಿ ತಂದಿದೆ. ಆದಿಪುರುಷ್ ಈಗಾಗಲೇ ದೊಡ್ಡ ಮೊತ್ತದಲ್ಲಿ ತಯಾರಾದ ಸಿನಿಮಾ. ಬರೋಬ್ಬರಿ 550 ಕೋಟಿ ರೂಪಾಯಿಗೂ ಅಧಿಕ ಮೊತ್ತದಲ್ಲಿ ತಯಾರಾಗಿದೆ. ರಾಮನಾಗಿ ಪ್ರಭಾಸ್ ಕಾಣಿಸಿಕೊಂಡಿದ್ದಾರೆ. ಸೀತೆ ಪಾತ್ರದಲ್ಲಿ ಕೃತಿ ಸನೊನ್ ಮಿಂಚಿದ್ದಾರೆ. ರಾವಣ  ಪಾತ್ರದಲ್ಲಿ ಸೈಫ್ ಅಲಿ ಖಾನ್ ಕಾಣಿಸಿಕೊಂಡಿದ್ದಾರೆ. ಓಂ ರಾವುತ್ ಸಾರಥ್ಯದಲ್ಲಿ ಆದಿಪುರುಷ್ ಸಿನಿಮಾ ಮೂಡಿಬಂದಿದೆ.  ಈ ಸಿನಿಮಾದಿಂದ ಈಗಾಗಲೇ ರಿಲೀಸ್ ಆಗಿರುವ ಟೀಸರ್ ಮತ್ತು ಪೋಸ್ಟರ್ ಗಳು ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿತ್ತು. ಸದ್ಯ ರಿಲೀಸ್ ಆಗಿರುವ ಹಾಡಿನ ಟೀಸರ್ ಬಾರಿ ನಿರೀಕ್ಷೆ ಮೂಡಿಸಿದೆ.  

‘ಆದಿಪುರುಷ್​’ ಪೋಸ್ಟರ್ ರಿಲೀಸ್; ಸೀತೆ ಹಣೆಯಲ್ಲಿ ಕುಂಕುಮ ಇಲ್ಲ ಎಂದು ಟೀಕಿಸಿದ ನೆಟ್ಟಿಗರು

ಚಿತ್ರದಿಂದ ಮೊದಲು ರಿಲೀಸ್ ಆಗಿದ್ದ ಟೀಸರ್ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ರಾವಣನ ಪಾತ್ರ ಮಾಡಿದ ಸೈಫ್ ಅಲಿ ಖಾನ್ ಲುಕ್ ಸರಿ ಇಲ್ಲ ಎಂದು ಅನೇಕರು ಟೀಕಿಸಿದ್ದರು. ಕಳಪೆ ಗ್ರಾಫಿಕ್ಸ್ ಎಂದು ಜರಿದಿದ್ದರು. ವಾನರ ಸೇನೆಯಲ್ಲಿ ಬೇರೆ ಬೇರೆ ಪ್ರಾಣಿಗಳು ಕಾಣಿಸಿದ್ದು ಕೂಡ ನೆಟ್ಟಗರ ಟೀಕೆಗೆ ಕಾರಣವಾಗಿತ್ತು. ಸಾಕಷ್ಟು ಟೀಕೆ, ಟ್ರೋಲ್ ಗಳನ್ನು ಎದುರಿಸಿದ್ದ ಆದಿಪುರುಷ್ ತಂಡ ಒಂದುಷ್ಟು ಬದಲಾವಣೆ ಮಾಡಿ ಚಿತ್ರೀಕರಣ ಮುಗಿಸಿ ಇದೀಗ ರಿಲೀಸ್‌ಗೆ ಸಿದ್ಧವಾಗಿದೆ.

'ಆದಿಪುರುಷ್' ಸೆಟ್‌ನಲ್ಲಿ ಕೃತಿಗೆ ಪ್ರಪೋಸ್ ಮಾಡಿದ್ರಾ ಪ್ರಭಾಸ್? 'ಬಾಹುಬಲಿ' ಸ್ಟಾರ್ ಲವ್ ಸ್ಟೋರಿ ಫುಲ್ ವೈರಲ್

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಆದಿಪುರುಷ್ ಜನವರಿ ತಿಂಗಳಲ್ಲೇ ರಿಲೀಸ್ ಆಗಬೇಕಿತ್ತು. ಆದರೆ, ಗ್ರಾಫಿಕ್ಸ್ ಕೆಲಸ ವಿಳಂಬ ಆದ ಕಾರಣ ಸಿನಿಮಾ ರಿಲೀಸ್ ದಿನಾಂಕ ಮುಂದೂಡಲ್ಪಟ್ಟಿದೆ. ಎರಡು ಬಾರಿ ಸಿನಿಮಾ  ರಿಲೀಸ್ ಡೇಟ್ ಅನೌನ್ಸ್ ಮಾಡಿ ಮುಂದಕ್ಕೆ ಹಾಕಲಾಗಿದೆ. ಇದೀಗ ಜೈ ಶ್ರೀರಾಮ್ ಹಾಡಿನ ಟೀಸರ್ ರಿಲೀಸ್ ಮಾಡುವ ಮೂಲಕ ಪ್ರಮೋಷನ್ ಪ್ರಾರಂಭಿಸುತ್ತಿದೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನನ್ನ ಅರ್ಧ ವಯಸ್ಸಿನ ಹುಡುಗರು ಡೇಟಿಂಗ್‌ಗೆ ಕರೀತಿದ್ದಾರೆ.. 50 ಆದ್ರೂ ಮದುವೆಗೆ ರೆಡಿ: ನಟಿ ಅಮೀಶಾ ಪಟೇಲ್
ಬಾಲಯ್ಯರಿಂದ ಅನಿರೀಕ್ಷಿತ ಸರ್ಪ್ರೈಸ್.. ಅಖಂಡ 2 ಹೊಸ ರಿಲೀಸ್ ಡೇಟ್ ಫಿಕ್ಸ್: ಈ ಚಿತ್ರಗಳಿಗೆ ದೊಡ್ಡ ಹೊಡೆತ