
ಕರ್ನಾಟಕದ ಕರಾವಳಿ ಸುಂದರಿ ಕೃತಿ ಶೆಟ್ಟಿ(Krithi Shetty) ತೆಲುಗು ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ. ಉಪ್ಪೇನ(Uppena) ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿದ ನಟಿ ಕೃತಿ ಮೊದಲ ಸಿನಿಮಾದಲ್ಲೇ ದೊಡ್ಡ ಮಟ್ಟದ ಯಶಸ್ಸುಗಳಿಸಿದರು. ಗ್ರ್ಯಾಂಡ್ ಆಗಿ ಚಿತ್ರರಂಗ ಪ್ರವೇಶ ಮಾಡಿದ ನಟಿ ಕೃತಿ ತೆಲುಗಿನಲ್ಲಿ ಭಾರಿ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಮೊದಲ ಸಿನಿಮಾದ ಯಶಸ್ಸಿನ ಬಳಿಕ ಕೃತಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಇದೀಗ ಕೃತಿ ಬಗ್ಗೆ ಮತ್ತೊಂದು ಸುದ್ದಿ ಕೇಳಿಬರುತ್ತಿದೆ. ತೆಲುಗಿನ ಸ್ಟಾರ್ ನಟ ಪ್ಯಾನ್ ಇಂಡಿಯಾ ಹೀರೋ ಪ್ರಭಾಸ್(Prabhas) ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನುವ ಸುದ್ದಿ ಸದ್ದು ಮಾಡುತ್ತಿದೆ. ಇತ್ತೀಚಿಗಷ್ಟೆ ಕೃತಿ ಶ್ಯಾಮ್ ಸಿಂಘ ರಾಯ್ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಸಿನಿಮಾದಲ್ಲಿ ಕೃತಿ ತೆಲುಗಿನ ನ್ಯಾಚುರಲ್ ಸ್ಟಾರ್ ನಾನಿ(Actor Nani) ಜೊತೆ ತೆರೆಹಂಚಿಕೊಂಡಿದ್ದರು. ಇನ್ನು ನಾಗಚೈತನ್ಯ ಮತ್ತು ನಾಗಾರ್ಜುನ ನಟನೆಯ ಬಂಗರಾಜು ಸಿನಿಮಾದಲ್ಲೂ ಕೃತಿ ನಟಿಸಿದ್ದರು. ಈ ಎರಡು ಸಿನಿಮಾಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸತತ ಗೆಲುವಿನ ಸಂಭ್ರಮದಲ್ಲಿರುವ ಕೃತಿ, ಪ್ರಭಾಸ್ ಜೊತೆ ನಾಯಕಿಯಾಗಿ ಮಿಂಚಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಸೂಪರ್ ಸ್ಟಾರ್ ಪ್ರಭಾಸ್ ಫ್ಯಾಮಿಲಿ ಬ್ಯಾಕ್‌ಗ್ರ್ಯಾಂಡ್ ಬಗ್ಗೆ ನಿಮಗೆಷ್ಟು ಗೊತ್ತು?
ಪ್ರಭಾಸ್ ಮತ್ತು ನಿರ್ದೇಶಕ ಮಾರುತಿ ಕಾಂಬಿನೇಷನ್ ನಲ್ಲಿ ಬರ್ತಿರುವ ಹೊಸ ಸಿನಿಮಾಗೆ ಕೃತಿ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲು ಸಿನಿಮಾತಂಡ ತೀರ್ಮಾನಿಸಿದೆ ಎನ್ನುವ ಸುದ್ದಿ ಟಾಲಿವುಡ್ ನಲ್ಲಿ ಹರಿದಾಡುತ್ತಿದೆ. ಈಗಾಗಲೇ ಕೃತಿ ಜೊತೆ ಮಾತುಕತೆ ಕೂಡ ನಡೆಸಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ಇದು ನಿಜವೇ ಆಗಿದ್ದರೆ ಕೃತಿಗೆ ಬಂಪರ್ ಆಫರ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಅಂದಹಾಗೆ ಈ ಸಿನಿಮಾದಲ್ಲಿ ಮೂವರು ನಾಯಕಿಯರಿರಲಿದ್ದಾರಂತೆ. ಮೂವರಲ್ಲಿ ಒಬ್ಬರು ಕೃತಿ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಸಿನಿಮಾತಂಡದಿಂದ ಆಗಲಿ ಅಥವ ಕೃತಿ ಕಡೆಯಿಂದ ಇನ್ನು ಅಧಿಕೃತ ಮಾಹಿತಿ ಹೊರಬಂದಿಲ್ಲ.
ಅಂದಹಾಗೆ ಪ್ರಭಾಸ್ ಸದ್ಯ ಆದಿ ಪುರುಷ್, ಸಲಾರ್ ಮತ್ತು ಇನ್ನು ಹೆಸರಿಡದ ನಾಗ್ ಅಶ್ವಿನ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ಪ್ರಭಾಸ್ ರಾಧೆ ಶ್ಯಾಮ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಈ ಸಿನಿಮಾಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಲಾರ್ ಮತ್ತು ಆದಿಪುರುಷ್ ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿಸಿರುವ ಪ್ರಭಾಸ್ ನಾಗ್ ಅಶ್ವಿನ್ ಸಿನಿಮಾ ಪ್ರಾರಂಭ ಮಾಡಬೇಕಿದೆ. ಈ ನಡುವೆ ಮುಂದಿನ ಸಿನಿಮಾ ಸದ್ದು ಮಾಡುತ್ತಿದೆ.
Radhe Shyam: ಮೆಟಾವರ್ಸ್ನಲ್ಲಿ ಪ್ರಭಾಸ್-ಪೂಜಾ ಹೆಗ್ಡೆ ಚಿತ್ರದ ಟ್ರೇಲರ್ ಲಾಂಚ್!
ಕೃತಿ ಶೆಟ್ಟಿ ಕೂಡ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸುಧೀರ್ ಬಾಬು ನಾಯಕಿಯಾಗಿ ನಟಿಸುತ್ತಿದ್ದಾರೆ. ರಾಮ್ ಪೋತಿನೇನಿ ನಟನೆಯ ದಿ ವಾರಿಯರ್, ನಿತಿನ್ ನಟನೆಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಎಲ್ಲಾ ಸಿನಿಮಾಗಳ ಜೊತೆಗೆ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಎನ್ನಲಾಗುತ್ತಿದೆ. ನಟ ಸೂರ್ಯ ನಟನೆಯ ಚಿತ್ರದಲ್ಲಿ ಕೃತಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಇದೆಲ್ಲದರ ನಡುವೆ ಪ್ರಭಾಸ್ ಸಿನಿಮಾಗೂ ಕೃತಿ ಹೆಸರು ಕೇಳಿಬರುತ್ತಿರುವುದು ಕೃತಿ ಅಭಿಮಾನಿಗಳ ಸಂತಸ ಡಬಲ್ ಮಾಡಿದೆ.
ತೆಲುಗಿನಲ್ಲಿ ಕನ್ನಡ ನಟಿಯ ಹವಾ ಜೋರಾಗಿದೆ. ಈಗಾಗಲೇ ರಶ್ಮಿಕಾ, ಶ್ರೀಲೀಲಾ, ಶ್ರದ್ಧಾ ಸೇರಿದಂತೆ ಅನೇಕ ನಟಿಯರು ಮಿಂಚುತ್ತಿದ್ದಾರೆ. ಅದೆ ಸಾಲಿನಲ್ಲಿ ನಟಿ ಕೃತಿ ಇದ್ದಾರೆ. ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಸಿಕೊಂಡಿರುವ ಕೃತಿ ಪ್ರಭಾಸ್ ಜೊತೆ ನಟಿಸುವ ಮೂಲಕ ಪ್ಲಾನ್ ಇಂಡಿಯಾ ನಾಯಕಿಯಾಗಿ ಹೊರಹೊಮ್ಮುತ್ತಾರಾ ಎಂದು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.