ಪ್ರೊಡಕ್ಷನ್ ಮ್ಯಾನೇಜರ್‌ ಕಾರು ಗ್ಲಾಸ್ ಪುಡಿ; ದೂರು ದಾಖಲಿಸಿದ ನಟ ವಿಶಾಲ್!

Suvarna News   | Asianet News
Published : Jul 09, 2020, 03:14 PM IST
ಪ್ರೊಡಕ್ಷನ್ ಮ್ಯಾನೇಜರ್‌ ಕಾರು ಗ್ಲಾಸ್ ಪುಡಿ; ದೂರು ದಾಖಲಿಸಿದ ನಟ ವಿಶಾಲ್!

ಸಾರಾಂಶ

 ನಟ ವಿಶಾಲ್ ಸಂಸ್ಥೆಯಲ್ಲಿ ಏನಾಗುತ್ತಿದೆ? ಒಂದಾದ ಮೇಲ್ಲೊಂದು ಕಹಿ ಸುದ್ದಿ ಕೇಳಿ ಬರುತ್ತಿದ್ದು , ಯಾರ ಕೈವಾಡ ಇದೆ ಎಂದು ತಿಳಿದುಕೊಳ್ಳಲು ದೂರು ದಾಖಲಿಸಿದ್ದಾರೆ.   

ಕಾಲಿವುಡ್‌ ಚಿತ್ರರಂಗದಲ್ಲಿ ನೇಮ್‌ ಮತ್ತು ಫೇಮ್‌ ಎರಡನ್ನೂ ಸಮಾನವಾಗಿಗಳಿಸಿರುವ ನಟ ವಿಶಾಲ್‌ ಈಗ ಒಂದಾದ ಮೇಲ್ಲೊಂದು ಎಡವಟ್ಟಿನಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ.  ಇತ್ತೀಚಿಗೆ ಮ್ಯಾನೇಜರ್‌ ರಮ್ಯಾ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು ಅದರ ಬೆನ್ನಲ್ಲೇ ಮ್ಯಾನೇಜರ್‌ಗೂ ಅಪಾಯ ತಂದಿಟ್ಟಿದೆ.

ನಟ ವಿಶಾಲ್‌ಗೆ ವಂಚನೆ ಮಾಡಿದ ಮಹಿಳೆ; 45 ಲಕ್ಷ ಕುಟುಂಬಸ್ಥರ ಖಾತೆಯಲ್ಲಿ!

ವಿಶಾಲ್ ಫಿಲ್ಮಂ ಫ್ಯಾಕ್ಟರಿಯಲ್ಲಿ ಅಕೌಂಟೆಂಟ್‌ ಆಗಿ ಕೆಲಸ ಮಾಡುತ್ತಿದ್ದ ರಮ್ಯಾ ಎಂಬ ಮಹಿಳೆ ಆರು ವರ್ಷಗಳಿಂದ ಯಾರಿಗೂ ಟಿಡಿಎಸ್ ಹಣ ನೀಡದೆ ವಂಚಿಸಿದ್ದಾರೆ. ಒಟ್ಟು 45 ಲಕ್ಷ ರೂಪಾಯಿಗಳನ್ನು ನೇರವಾಗಿ ತಮ್ಮ ಕುಟುಂಬಸ್ಥರ ಖಾತೆಗೆ  ರವಾನೆ ಮಾಡಿಕೊಂಡಿದ್ದಾರೆ. ಆದಾಯ ತೆರಿಗೆ ಕಟ್ಟುವ ವೇ ಮ್ಯಾನೇಜರ್‌  ಹರಿಕೃಷ್ಣ ಅವರ ಗಮನಕ್ಕೆ ರಮ್ಯಾ ಮಾಡಿರುವ ವಂಚನೆ ಬೆಳಕಿಗೆ ಬಂದಿತ್ತು, ವಿಚಾರ ತಿಳಿಯುತ್ತಿದ್ದಂತೆ ನಟಿ ರಮ್ಯಾ ಪರಾರಿ ಆಗಿದ್ದಾರೆ. 

ಮ್ಯಾನೇಜರ್ ಕಾರಿಗೆ ಹಾನಿ:

ಹರಿಕೃಷ್ಣ ದೂರು ನೀಡಿದ ವಿಚಾರ ತಿಳಿಯುತ್ತಿದಂತೆ ರಮ್ಯಾ ಪರಾರಿ ಆಗಿದ್ದಾರೆ. ಇದಾದ ಕೆಲ ದಿನಗಳ ನಂತರ ಪ್ರೊಡಕ್ಷನ್ ಹೌಸ್ ಮ್ಯಾನೇಜರ್ ಕಾರಿಗೆ ಹಾನಿಯಾಗಿದೆ. ಕೊಡಂಬಕ್ಕಂನ ನಿವಾಸ ಎದುರು ನಿಲ್ಲಿಸಿದ್ದ ಕಾರಿನ ಗ್ಲಾಸನ್ನು ಯಾರೋ ಪುಡಿ ಪುಡಿ ಮಾಡಿದ್ದಾರೆ. ಪರಾರಿ ಆಗಿರುವ ರಮ್ಯಾಗೂ ಇದಕ್ಕೂ ಸಂಬಂಧವಿದೆಯಾ ಎಂದು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ.

ಈ ಹಿಂದೆ ರಮ್ಯಾ, ನಟ ವಿಶಾಲ್ ಮತ್ತು ಮ್ಯಾನೇಜರ್ ವಿರುದ್ಧ ದೂರು ನೀಡಿದ್ದರು ಎನ್ನಲಾಗಿದೆ. ಇವರಿಬ್ಬರು ಅವ್ಯವಹಾರದಲ್ಲಿ ತೊಡಗಿಕೊಂಡು ಹಣ ಸಂಪಾದಿಸುತ್ತಿದ್ದಾರೆ ತನ್ನ ಬಳಿ ಈ ಬಗ್ಗೆ ಸಾಕಷ್ಟು ಸಾಕ್ಷಿ ಇದೆ ಎಂದು ಹೇಳಿದ್ದಾರೆ ಅಷ್ಟಲ್ಲದೆ ವಿಶಾಲ್ ಗೂಂಡಗಳನ್ನು ಕಳುಹಿಸಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.  ಈ ಕಾರಣಕ್ಕೆ ವಿಶಾಲ್ ಮತ್ತು ಮ್ಯಾನೇಜರ್ ಹರಿ ಅವರಿಂದ ಜೀವ ಬೆದರಿಕೆ ಇದೆ ಎಂದು ಪೊಲೀಸರ ರಕ್ಷಣೆ ಕೇಳಿಕೊಂಡಿದ್ದಾರೆ.

ದಿನೇ ದಿನೆ ವಿಭಿನ್ನ ತಿರುವು ಪಡೆದುಕೊಳ್ಳುತ್ತಿರವ ಕಾರಣ ಪೊಲೀಸರು  ಹೆಚ್ಚಿನ ನಿಗ ವಹಿಸಿ ತನಿಖೆ ಪ್ರಾರಂಭಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಬ್ಬಬ್ಬಾ! ಈ ಸ್ಟಾರ್​ ನಟರು ನೋಡಲು ಸೇಮ್​ ಟು ಸೇಮ್: ಕುತೂಹಲದ ಫೋಟೋಸ್​ ವೈರಲ್​
ಸಿದ್ಧಾರ್ಥ ಮಲ್ಹೋತ್ರ ಕಿಯಾರ ಅಡ್ವಾಣಿ ಹಗ್ಗಿಂಗ್ ಹಳೇ ವಿಡಿಯೋ ವೈರಲ್, ಕಾರಣವೇನು?