
ಬಾಲಿವುಡ್ ಹಿರಿಯ ನಟ ಜಗದೀಪ್ ಎಂದ ತಕ್ಷಣ ಎಲ್ಲಾ ಸಿನಿ ಪ್ರೇಮಿಗಳಿಗೂ ಮೊದಲು ನೆನಪಾಗುವುದು ಶೋಲೆ ಚಿತ್ರದ ಸೂರ್ಯ ಭೋಪಾಲಿ ಪಾತ್ರ. ತೀವ್ರ ಅನಾರೋಗ್ಯದ ಕಾರಣ ಜಗದೀಪ್ ಬುಧವಾರ ವಿಧವಶರಾಗಿದ್ದಾರೆ.
ಕೊರೋನಾ ವೈರಸ್‌ಗೆ ಖ್ಯಾತ ನಿರ್ಮಾಪಕ ರಾಮ ರಾವ್ ನಿಧನ!
400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಜಗದೀಪ್ ಬಾಲನಟನಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ಅತಿ ಹೆಚ್ಚು ಜನಪ್ರಿಯತೆ ತಂದು ಕೊಟ್ಟ ಸಿನಿಮಾವೇ ಅಮಿತಾಭ್ ಬಚ್ಚನ್ ಜೊತೆ ಅಭಿನಯಿಸಿದ 'ಶೋಲೆ' ಸಿನಿಮಾ ಮತ್ತು 1984ರಲ್ಲಿ ತೆರೆ ಕಂಡ 'ಪುರಾನಾ ಮಂದಿರ್' ಮತ್ತು ಸಲ್ಮಾನ್ ಖಾನ್‌ಗೆ ತಂದೆಯಾಗಿ ಕಾಣಿಸಿಕೊಂಡ ಸಿನಿಮಾ 'ಅಂದಾಜ್ ಅಪ್ನಾ ಅಪ್ನಾ'.
1988ರಲ್ಲಿ ನಟನೆಯಿಂದ ನಿರ್ದೇಶನಕ್ಕೆ ಕೈ ಹಾಕಿದರು ಜಗದೀಪ್. 80-90ರ ದಶಕದಲ್ಲಿ ಅತಿ ಹೆಚ್ಚು ಕಾಮಿಡಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಜಗದೀಪ್ ಇನ್ನಿಲ್ಲ ಎಂಬ ವಿಚಾರವನ್ನು ನಟ ನಾಸಿರ್ ಖಾನ್ ಖಾಸಗಿ ಮಾಧ್ಯಮಗಳಿಗೆ ಖಚಿತ ಪಡಿಸಿದ್ದಾರೆ..
6 ಮಕ್ಕಳು ಮತ್ತು ಎರಡನೇ ಪತ್ನಿಯನ್ನು ಅಗಲಿರುವ ಜಗದೀಪ್, ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪಾರ್ಥಿಸೋಣ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.