
ತಮಿಳು- ತೆಲುಗು ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದು ಕೈ ತುಂಬಾ ಸಿನಿಮಾ ಆಫರ್ ಹೊಂದಿದ್ದ ನಟಿ ಸಮಂತಾ ಚಿತ್ರರಂಗಕ್ಕೆ ಗುಡ್ ಬೈ ಹೇಳುವ ವಿಚಾರ ಅವರು ವೈವಾಹಿಕ ಬದುಕಿಗೆ ಕಾಲಿಟ್ಟಾಗಿನಿಂದಲೂ ಹೇಳುತ್ತಲೇ ಇದ್ದೀವಿ. ಇಷ್ಟು ದಿನ ಈ ಬಗ್ಗೆ ಯಾವುದೇ ಸ್ಪಷ್ಟನೇ ನೀಡದ ಸಮಂತಾ ಇದೀಗ ಸುಳಿವೊಂದನ್ನು ನೀಡಿದ್ದು ಅವರು ತೆಗೆದುಕೊಂಡಿರುವ ನಿರ್ಧಾರ ಗುಡ್ ಬೈ ಸೂಚನೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಚಿತ್ರರಂಗದಿಂದ ಕೊಂಚ ದೂರ ಉಳಿದ ಸಮಂತಾ ತಮ್ಮ ಶ್ವಾನ ಹಾಗೂ ಟೆರೆಸ್ ಗಾರ್ಡನಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಸಾವಯುವ ಸಾಬೂನು, ಗೊಬ್ಬರ ಹೀಗೆ ಅನೇಕ ಕೆಲಸಗಳನ್ನು ಮಾಡುತ್ತಾ ಸಮಯ ಕಳೆಯುತ್ತಿದ್ದಾರೆ. ಈ ಸಮಯದಲ್ಲಿ ಸಮಂತಾ ದೊಡ್ಡ ನಿರ್ಧಾರವನ್ನು ಕೈಗೊಂಡಿದ್ದಾರೆ.
ನಿರ್ಮಾಪಕಿ ಸಮಂತಾ?
ಹೌದು! ಸಮಂತಾ ಈಗ ನಿರ್ಮಾಣ ಸಂಸ್ಥೆ ಆರಂಭಿಸಬೇಕೆಂಬ ಆಲೋಚನೆಯಲ್ಲಿದ್ದಾರಂತೆ. ಈಗಾಗಲೇ ಅಕ್ಕಿನೇನಿ ಕುಟುಂಬದ ಅನ್ನಪೂರ್ಣ ಬ್ಯಾನರ್ ಇದ್ದು ಸಮಂತಾ ಮತ್ತೊಂದು ಬ್ಯಾನರ್ ಮಾಡಬೇಕು ಎಂದುಕೊಂಡಿದ್ದಾರೆ. ಸಂಸ್ಥೆಯ ಹೆಸರು ರಿವೀಲ್ ಮಾಡಿಲ್ಲ ಆದರೆ ಲಾಂಚ್ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಈ ಸೆಲೆಬ್ರಿಟಿಗಳು ರಿಯಲ್ ಲೈಫ್‌ನಲ್ಲೂ ಸಖತ್ ರೊಮ್ಯಾಂಟಿಕ್
ಸದ್ಯಕ್ಕೆ ಎರಡು ಸಿನಿಮಾಗಳಿಗೆ ಸಹಿ ಹಾಕಿರುವ ಸಮಂತಾ ಚಿತ್ರೀಕರಣ ಪೂರ್ಣಗೊಳ್ಳಿಸಿದ ನಂತರ ಸಂಸ್ಥೆ ಪ್ರಾರಂಭಿಸಬಹುದು ಎನ್ನಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.