
ಕಾಲಿವುಡ್ (Kollywood) ಲೇಡಿ ಸೂಪರ್ ಸ್ಟಾರ್ ನಯನತಾರಾ (Nayanatara) 37ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಪ್ರೀತಿಯಲ್ಲಿ ಬಿದ್ದಾಗಿನಿಂದಲೂ ನಯನಾ ಪ್ರತಿ ವರ್ಷದ ಬರ್ತಡೇಯನ್ನು (Birthday) ಅರ್ಥಪೂರ್ಣವಾಗಿ ಹಾಗೂ ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಾರೆ. ತಮ್ಮ ಕುಟುಂಬಸ್ಥರು, ನಿರ್ಮಾಣ ಸಂಸ್ಥೆ (Prouction House) ಸಿಬ್ಬಂದಿ ಹಾಗೂ ಸಿನಿ ಸ್ನೇಹಿತರು ಮಾತ್ರ ಭಾಗಿಯಾಗಿದ್ದರು. ಈ ವರ್ಷ ಸ್ವತಃ ನಯನಾನೇ ವಿಡಿಯೋ ಹಂಚಿಕೊಂಡಿದ್ದಾರೆ.
'ಹುಟ್ಟುಹಬ್ಬದ ಶುಭಾಶಯಗಳು ನನ್ನ ಕಣ್ಮಣಿ, ನನ್ನ ಪ್ರಪಂಚ. ಸದಾ ಇಷ್ಟೇ ಯೂನಿಕ್ (Unique), ಬ್ಯೂಟಿಫುಲ್ (Beautiful), ಪವರ್‌ಫುಲ್ (Powerful), ಸ್ಟ್ರಾಂಗ್ ವ್ಯಕ್ತಿಯಾಗಿರು. ಯಶಸ್ಸು (Success) ಮತ್ತು ಹ್ಯಾಪಿ ಕ್ಷಣಗಳಿಂದ ನಿನ್ನ ಜೀವನ ತುಂಬಿರಲಿ. ದೇವರು ಒಳ್ಳೆಯದು ಮಾಡಲಿ,' ಎಂದು ನಯನಾ ಸೀರೆ ಲುಕ್‌ನಲ್ಲಿ (Saree Look) ಕಾಣಿಸಿಕೊಂಡಿರುವ ಫೋಟೋ ಹಂಚಿಕೊಂಡಿದ್ದಾರೆ.
ನಯನಾತಾರ ಹುಟ್ಟುಹಬ್ಬ ಆಚರಣೆಯಲ್ಲಿ ಸಮಂತಾ (Samantha prabhu) ಭಾಗಿಯಾಗಿದ್ದರು. ಫೋಟೋ ಹಂಚಿಕೊಂಡ ಸಮಂತಾ 'ಆಕೆ ಬಂದಳು, ಆಕೆ ನೋಡಿದಳು, ಆಕೆ ಧೈರ್ಯ ತುಂಬಿದಳು, ಆಕೆ ಕನಸು ಕಂಡಳು, ಆಕೆ perform ಮಾಡಿದಳು, ಕೊನೆಯಲ್ಲಿ conquered! ಹ್ಯಾಪಿ ಬರ್ತೇ ನಯನಾ,' ಎಂದು ಸಮಂತಾ ಬರೆದುಕೊಂಡಿದ್ದಾರೆ. ಫೋಟೋದಲ್ಲಿ ಇಬ್ಬರೂ ತಬ್ಬಿಕೊಂಡು, ಆನಂತರ ಕೇಕ್ ತಿನ್ನಿಸುತ್ತಿರುವ ಫೋಟೋವಿದೆ.
ಹುಟ್ಟುಹಬ್ಬದ ದಿನ ನಯನಾ ನೀಲಿ ಮತ್ತು ಹಳದಿ ಬಣ್ಣ (Blue and Yellow) ಔಟ್‌ಫೀಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಹಾಗು ಸಮಂತಾ ವೈಟ್ ಜಮ್‌ಶೂಟ್ ವಿತ್ ಡೆನಿಮ್ ಜಾಕೆಟ್ (Denim Jacket) ಧರಿಸಿದ್ದಾರೆ. ಪಾರ್ಟಿಯಲ್ಲಿ ವಿಘ್ನೇಶ್ ಜೊತೆ ವಿಜಯ್ ಸೇತುಪತಿ ಕಾಣಿಸಿಕೊಂಡಿದ್ದಾರೆ.
ನಯನಾ ಹುಟ್ಟುಹಬ್ಬದ ದಿನವೇ ವಿಘ್ನೇಶ್ ತಮ್ಮ ಮುಂದಿನ ಸಿನಿಮಾ 'ಕಾತುವಾಕುಲಾ' ಸಿನಿಮಾದ ಎರಡು ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಟ್ಟಿಟರ್‌ನಲ್ಲಿ (Twitter) ಹಂಚಿಕೊಂಡು, ಚಿತ್ರಕ್ಕೆ ಕನೆಕ್ಟ್ ಎಂದು ಹೆಸರಿಡಲಾಗಿದೆ. ಕಪ್ಪು ಬೋರ್ಡ್ ಮೇಲೆ ನಯನಾ ಏನೋ ಬರೆಯುತ್ತಿರುವ ಹಾಗೆ ಪೋಸ್ ಮಾಡಿದ್ದಾರೆ. ಮತ್ತೊಂದು ಪೋಸ್ಟರ್‌ನಲ್ಲಿ ಕಿಟಕಿ ಬಳಿ ನಿಂತು ರಸ್ತೆ ನೋಡುತ್ತಿದ್ದಾರೆ. ಒಂದು ಕ್ಷಣ ಇದು ಹಾರರ್ ಸಿನಿಮಾ ರೀತಿ ಕಾಣಿಸುತ್ತಿದೆ ಎಂದು ನೆಟ್ಟಿಗರು (Netizens) ಕಾಮೆಂಟ್ ಮಾಡುತ್ತಿದ್ದಾರೆ.
ನಯನಾ ಮತ್ತು ವಿಘ್ನೇಶ್ (Vignesh) ಮದುವೆ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಈ ಜೋಡಿ ಸಪ್ತಪದಿ ತುಳಿಯುವ (Wedding) ಪ್ಲಾನ್ ಮಾಡುತ್ತಿದ್ದಾರೆ ಎನ್ನಲಾಗಿದೆ. ನಿಶ್ಚಿತಾರ್ಥ (Engagement) ಮಾಡಿಕೊಂಡು, ಎರಡು ವರ್ಷಗಳಾಗುತ್ತಿವೆ, ಎಂದು ಅಭಿಮಾನಿಗಳು ಮದುವೆ ಬಗ್ಗೆ ಪ್ರಶ್ನೆ ಮಾಡಿದಾಗ ಇಲ್ಲ ಮದುವೆ ಮಾಡಿಕೊಳ್ಳಲು ಹಣ ಬೇಕೇ ಬೇಕು, ಅದನ್ನು ರೆಡಿ ಮಾಡಿಕೊಳ್ಳುತ್ತಿದ್ದೀವಿ ಎಂದು ವಿಘ್ನೇಶ್ ಹೇಳಿದ್ದರು. ಈ ಜೋಡಿ ಹಲವು ವರ್ಷಗಳಿಂದಲೂ ಮುಂಬೈನಲ್ಲಿ ಒಟ್ಟಿಗೆ ವಾಸಿಸುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.