ರಣವೀರ್​ ಸಿಂಗ್​ ಅಂಡರ್​ವೇರ್​ ಹಾಕಲ್ವಂತೆ, ಆಲಿಯಾ ಪತಿಗೆ ದೀಪಿಕಾ ಕಾಂಡೋಮ್​ ಕೊಡ್ತಾರಂತೆ! ಏನಿದು?

By Suvarna News  |  First Published Dec 11, 2023, 12:17 PM IST

ನಟ ರಣವೀರ್​ ಸಿಂಗ್​ ಅಂಡರ್​ವೇರ್​ ಹಾಕಲ್ವಂತೆ, ನಟಿ ದೀಪಿಕಾ ಕಾಂಡೋಮ್​ ಕೊಡ್ತಾರಂತೆ!  ಕಾಫಿ ವಿತ್​ ಕರಣ್​ ಷೋನಲ್ಲಿ ಏನು ಇದೆಲ್ಲಾ?  
 


ಹಿಂದಿ ಚಾನೆಲ್​ ವೀಕ್ಷಿಸುವ ಪ್ರೇಕ್ಷಕರಿಗೆ ಕಾಫಿ ವಿತ್​ ಕರಣ್​ ಬಗ್ಗೆ ತಿಳಿದೇ ಇದೆ. ಈ ಕಾರ್ಯಕ್ರಮ ನಡೆಸಿಕೊಡುತ್ತಿರುವವರು ಇನ್ನೂ ಅವಿವಾಹಿತರಾಗಿಯೇ ಇರೋ ನಿರ್ದೇಶಕ ಕರಣ್​ ಜೋಹರ್​. ಆದರೆ ಈ ಕಾರ್ಯಕ್ರಮ ಸದಾ ವಿವಾದಗಳಿಂದಲೇ ಫೇಮಸ್ಸು. ಅದರಲ್ಲಿಯೂ ಸೆಕ್ಸ್​ ಪ್ರಶ್ನೆಗಳಿಗೇ ಇಲ್ಲಿ ಪ್ರಾಧಾನ್ಯ. ಅಶ್ಲೀಲ ಪ್ರಶ್ನೆಗಳನ್ನು ಗೆಸ್ಟ್​ಗಳಿಗೆ ಕೇಳುವ ಮೂಲಕ ತಮ್ಮ ಷೋನ ಟಿಆರ್​ಪಿ ಹೆಚ್ಚಿಸಿಕೊಳ್ಳುತ್ತಿದ್ದಾರೆ ಎನ್ನುವುದೂ ಸುಳ್ಳಲ್ಲ. ಜನರೂ ಬೈಯುತ್ತಲೇ ಇಂಥ ಷೋಗಳನ್ನು ನೋಡುವುದು ಈ ರೀತಿಯ ರಿಯಾಲಿಟಿ ಷೋಗಳ ಟಿಆರ್​ಪಿ ರೇಟ್​ ನೋಡಿದರೆ ತಿಳಿಯುತ್ತದೆ. ಇವರ ಈ ಷೋ ಇದಾಗಲೇ ಹಲವಾರು ಸೆಲೆಬ್ರಿಟಿಗಳ ಗುಟ್ಟುಗಳನ್ನು ಬಯಲು ಮಾಡಿದ್ದೂ ಇದೆ, ಇದೇ ವೇಳೆ ಹಲವು ರೀತಿಯ ಕಾಂಟ್ರವರ್ಸಿಗಳನ್ನು ಸೃಷ್ಟಿಸಿದ್ದೂ ಇದೆ. ಇದೀಗ ಇಂಥದ್ದೇ ಕೆಲವು ಕಾಂಟ್ರವರ್ಸಿಗಳು ಹಾಗೂ ನಟ-ನಟಿಯರ ತೀರಾ ವೈಯಕ್ತಿಯ ವಿಚಾರಗಳ ಥ್ರೋ ಬ್ಯಾಕ್​ ಇರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿವೆ. 

ಅದರಲ್ಲಿ ಮೊದಲನೆಯದ್ದಾಗಿ ಬಾಲಿವುಡ್​ನ ಕ್ಯೂಟ್​ ಕಪಲ್​ಗಳಲ್ಲಿ ಒಬ್ಬರು ರಣವೀರ್​ ಸಿಂಗ್​ ಮತ್ತು ದೀಪಿಕಾ ಪಡುಕೋಣೆ. ಈ ಜೋಡಿ ಮದುವೆಯಾಗಿ ಕಳೆದ ನವೆಂಬರ್​ 14ಕ್ಕೆ ಐದು ವರ್ಷಗಳು ಕಳೆಯಲಿವೆ. 2018ರ ನವೆಂಬರ್​ 14ರಂದು ಜೋಡಿ  ಇಟಲಿಯಲ್ಲಿ ದಾಂಪತ್ಯಕ್ಕೆ ಕಾಲಿಟ್ಟಿತು. ಕುತೂಹಲದ ವಿಷಯವೇನೆಂದರೆ, ಮದುವೆಯಾಗಿ ಐದು ವರ್ಷವಾದರೂ ಇವರ ವಿಡಿಯೋ ರಿಲೀಸ್​ ಮಾಡಿರಲಿಲ್ಲ ‘ಕಾಫಿ ವಿತ್ ಕರಣ್ ಸೀಸನ್ 8’ರಲ್ಲಿ ವಿಡಿಯೋ ರಿಲೀಸ್​ ಮಾಡಿತ್ತು. ಇದೇ ವೇಳೆ ಪತಿಯ ಎದುರೇ ಪರಪುರುಷರ ಜೊತೆ ಡೇಟಿಂಗ್​ ಬಗ್ಗೆ ಮಾತನಾಡಿ, ದೀಪಿಕಾ ಹಂಗಾಮ ಸೃಷ್ಟಿಸಿದ್ದ ದೊಡ್ಡ ಸುದ್ದಿಯೇ ಆಗಿದೆ. 

Tap to resize

Latest Videos

ಬೆತ್ತಲೆ ಸೀನ್​ ವೇಳೆ ನಾಲ್ವರು ಇದ್ವಿ, ರಣಬೀರ್​ ನರ್ವಸ್​ ಆಗಿದ್ರು: ಶೂಟಿಂಗ್ ಸಮಯದ ಘಟನೆ ವಿವರಿಸಿದ ನಟಿ ತೃಪ್ತಿ

ಆದರೆ ಇದೀಗ ಈ ಹಿಂದೆ ದೀಪಿಕಾ ಪಡುಕೋಣೆ ಪತಿ ರಣವೀರ್​ ಸಿಂಗ್​ ನಟಿ ಅನುಷ್ಕಾ ಶರ್ಮಾ ಜೊತೆಗೆ ಬಂದಾಗ  ತೀರಾ ವೈಯಕ್ತಿಯ ವಿಷಯ ಮಾತನಾಡಿದ್ದರು. ಅದೇನೆಂದರೆ, ತಾವು ರಾತ್ರಿ 10 ಗಂಟೆಯ ಬಳಿಕ ಅಂಡರ್​ವೇರ್​ ಧರಿಸುವುದಿಲ್ಲ ಎಂದು ಅವರು ಹೇಳಿದ್ದರು. ನ್ಯೂಡ್ ಫೊಟೋಶೂಟ್ ಮಾಡಿಕೊಂಡು ಸುದ್ದಿಯಾಗಿರೋ ನಟನ ಈ ಹೇಳಿಕೆ ಹಲ್​ಚಲ್​ ಸೃಷ್ಟಿಸಿತ್ತು. ನನಗೆ ರಾತ್ರಿ ಚೆಡ್ಡಿ ಹಾಕಿಕೊಂಡರೆ ಕನ್​ಫರ್ಟ್​ ಆಗಲ್ಲ, ಸೋ ಅದನ್ನು ಹಾಕದೇ ಮಲಗುವೆ ಎಂದಿದ್ದರು. ಇದನ್ನು ಕೇಳಿ ಇವರ ಜೊತೆಗೆ ಬಂದಿದ್ದ ಅನುಷ್ಕಾ ಶರ್ಮಾ ಮುಜುಗರ ಪಟ್ಟುಕೊಂಡಿದ್ದರು. ಇದಕ್ಕೂ ಮುನ್ನ ಅಂದರೆ 2010ರಲ್ಲಿ ನಡೆದ ಕಾಫಿ ವಿತ್ ಕರಣ್ ಷೋನಲ್ಲಿ ದೀಪಿಕಾ ಪಡುಕೋಣೆ, ಆಲಿಯಾ ಪತಿ ರಣಬೀರ್​ ಕಪೂರ್​ಗೆ ಕಾಂಡೋಮ್​ ಕೊಡಬೇಕು, ಅವರು ಅದಕ್ಕೆ ಅರ್ಹರು ಎಂದಿದ್ದರು. ಇದೇ ಷೋನಲ್ಲಿ ಭಾಗವಹಿಸಿದ್ದ ಸೋನಂ ಕಪೂರ್ ಕೂಡಾ ಈ ಸಂದರ್ಭ ರಣಬೀರ್ ಕಪೂರ್ ಒಳ್ಳೆಯ ಬಾಯ್​ಫ್ರೆಂಡ್ ಅಲ್ಲ ಎಂದಿದ್ದರು.

 
ಇದೇ ಷೋನಲ್ಲಿ  ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರು  'ನೆಪೋ ಮಕ್ಕಳು' ಕುರಿತು ಹೇಳಿದ ಮಾತುಗಳು ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ಕಂಗನಾ ರಣಾವತ್​ ಕರಣ್​ ಜೋಹರ್​ ವಿರುದ್ಧವೇ ಕಿಡಿ ಕಾರಿದ್ದು,  5 ನೇ ಸೀಸನ್‌ನಲ್ಲಿ ಕರಣ್ ಅವರನ್ನು  'ಸ್ವಜನಪಕ್ಷಪಾತದ ಧ್ವಜಧಾರಿ' ಎಂದಿದ್ದರು.  ಇನ್ನೊಂದು ಎಪಿಸೋಡ್​​ನಲ್ಲಿ, ನಟ ಇಮ್ರಾನ್ ಹಶ್ಮಿ  ಐಶ್ವರ್ಯಾ ರೈ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ್ದರು. ತಮ್ಮ ಸಂಬಂಧದ ಕುರಿತು ಪರೋಕ್ಷವಾಗಿ ಮಾತನಾಡಿದ್ದರು, ಐಶ್ವರ್ಯ ಹೇಗೆ ಮೋಸ ಮಾಡುತ್ತಾರೆ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದರು. ಇನ್ನೊಂದು ಎಪಿಸೋಡ್​ನಲ್ಲಿ  ವಿದ್ಯಾ ಬಾಲನ್ ಅವರು ವಿವಾಹಿತ ವ್ಯಕ್ತಿಯನ್ನು ಮದುವೆಯಾಗಲು ಬಯಸಿದ್ದರು ಎಂದು ಒಪ್ಪಿಕೊಂಡಿದ್ದರು.  ವಿವಾಹಿತ ವ್ಯಕ್ತಿ ತನ್ನ ಹೆಂಡತಿಗೆ ಮೋಸ ಮಾಡಿ ನನ್ನನ್ನು ಮದುವೆಯಾಗಬೇಕು ಎಂದುಕೊಂಡಿದ್ದೆ, ಹಾಗೂ ಆ  ಶಾರುಖ್ ಖಾನ್ ಆಗಬೇಕೆಂದು ಅವಳು ಬಯಸಿದ್ದೆ ಎಂದಿದ್ದರು. ಕೊನೆಗೂ ಈಕೆ  ಸಿದ್ಧಾರ್ಥ್ ರಾಯ್ ಕಪೂರ್ ಅವರ ಮೂರನೆಯ ಪತ್ನಿಯಾದರು. 

ದೇಶಭಕ್ತಿ ಮೆರೆವ ಚಿತ್ರಕ್ಕೂ ನಟರು ಬೆತ್ತಲಾಗೋದು ಅನಿವಾರ್ಯನಾ? 'ಫೈಟರ್'​ ಟೀಸರ್ ನೋಡಿ ಛೀ ಅಂತಿದ್ದಾರೆ ನೆಟ್ಟಿಗರು!

click me!