ಎಲ್ಲಿ ನೋಡಿದರೂ ರೆಡಿನ್ ಕಿಂಗ್ಸ್ಲಿ ಮತ್ತು ಸಂಗೀತಾ ಮದುವೆ ಫೋಟೋ. ಮೈಸೂರಿನಲ್ಲಿ ಮದುವೆಯಾಗಲು ಕಾರಣವೇನು?
ತಮಿಳು ಚಿತ್ರರಂಗದ ಜನಪ್ರಿಯ ಹಾಸ್ಯನಟ ರೆಡಿನ್ ಕಿಂಗ್ಸ್ಲಿ ಮತ್ತು ತಮಿಳು ಕಿರುತೆರೆ ನಟಿ ಸಂಗೀತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 46 ವರ್ಷದ ರೆಡಿನ್ ಕಿಂಗ್ಸಿ ಮದುವೆಯಾಗಿರುವ ಸಂಗೀತಾ 25ರ ಆಸುಪಾಸಿನವರು. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ರೆಡಿನ್ ಕಿಂಗ್ಸ್ ಮತ್ತು ಸಂಗೀತಾ ಮದುವೆ ಆಗುತ್ತಿರುವ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮದುವೆಯಲ್ಲಿ ಆಪ್ತರು ಮಾತ್ರ ಭಾಗಿಯಾಗಿದ್ದರು ಎನ್ನಲಾಗಿದೆ. ಮದುವೆ ಬಗ್ಗೆ ಸಂಗೀತಾ ಅಥವಾ ರೆಡಿನ್ ಎಲ್ಲಿಯೂ ರಿವೀಲ್ ಮಾಡಿಲ್ಲ ಮತ್ತು ಪ್ರತಿಕ್ರಿಯೆ ನೀಡಿಲ್ಲ.
'ಅವಳ್ ವರುವಾಳ' ಚಿತ್ರದ ಹಾಡೊಂದರಲ್ಲಿ ರೆಡಿನ್ ಕಾಣಿಸಿಕೊಂಡಿದ್ದರು. ಒಬ್ಬ ನಟನಾಗಿ ಗುರುತಿಸಿಕೊಂಡಿದ್ದು ನಯನತಾರ ನಟನೆಯ ಕೊಲಮಾವು ಕೋಕಿಲಾ ಸಿನಿಮಾದಲ್ಲಿ. 2018ರಿಂದ ರೆಡಿನ್ ಹಣೆಬರಹ ಬದಲಾಗಿತ್ತು. ಕಳೆದ 5-6 ವರ್ಷಗಳಲ್ಲಿ ರೆಡಿನ್ 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ರೆಡಿನ್ ಇದ್ದಾರೆ ಅಂದ್ರೆ ಸಿನಿಮಾದಲ್ಲಿ ಕಾಮಿಡಿ ಪಕ್ಕಾ ಅನ್ನೋದು ಜನರ ನಿರೀಕ್ಷೆ. ಕೊಲಮಾವು ಕೋಕಿಲಾ ನಂತರ, ಶಿವಕಾರ್ತಿಕೇಯನ್ ಜೊತೆ ಡಾಕ್ಟರ್ ಸಿನಿಮಾ ನಟಿಸಿದರು. ನಿರೀಕ್ಷೆಗೂ ಮೀರಿದ ಉತ್ತಮ ಪಾತ್ರ ಮಾಡಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಮತ್ತೊ ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳನ್ನು ಪಡೆದುಕೊಂಡರು. ಇದಾದ ಮೇಲೆ ವಿಜಯ್ ದಳಪತಿ ಜೊತೆ ಬೀಸ್ಟ್, ರಜನಿಕಾಂತ್ ಜೊತೆ ಜೈಲರ್ ಸಿನಿಮಾದಲ್ಲಿ ನಟಿಸಿದ್ದರು.
ಪ್ಯಾಂಟ್ ಹಾಕಿದ್ದೀರಾ?; ದೀಪಿಕಾ ದಾಸ್ ಫೋಟೋ ನೋಡಿ ಕನ್ಫ್ಯೂಸ್ ಅದ ನೆಟ್ಟಿಗರು!
2023ರಲ್ಲಿ ರಿಲೀಸ್ ಆಗಿ ಅಣ್ಣಾಥೆ, ಗಟ್ಟಿ ಕುಸ್ತಿ, ಪತ್ತು ತಲಾ, ಮಾರ್ಕ್ ಆಂಟನಿ, ರುದ್ರನ್, ನಾಯಿ ಶೇಖರ್ ರಿಟರ್ನ್ಸ್ ಸಿನಿಮಾಗಳಲ್ಲಿ ರೆಡಿನ್ ನಟಿಸಿದ್ದಾರೆ.
ಪ್ರೀತ್ಸೇ ಪ್ರೀತ್ಸೇ!!! 48 ವರ್ಷ ಆದ್ರೂ ಸೋನಾಲಿ ಬೇಂದ್ರೆಗೆ ಬೋಲ್ಡ್ ಆಗದ ಹುಡುಗರಿಲ್ಲ!
ಇನ್ನು ಸಂಗೀತಾ ತಮಿಳು ಕಿರುತೆರೆಯ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಸದ್ಯ ಅನಂದ ರಾಗಂ ಸೀರಿಯಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ ರೆಡಿನ್ ಮತ್ತು ಸಂಗೀತಾ ಕಳೆದ ಒಂದು ವರ್ಷದಿಂದ ರಿಲೇಷನ್‌ಶಿಪ್‌ನಲ್ಲಿ ಇದ್ದರು ಎನ್ನಲಾಗಿದೆ.