Koffee with Karan; ಸೆಕ್ಸ್ ನನಗೆ ಮತ್ತಷ್ಟು ಯಂಗ್ ಭಾವನೆ ನೀಡುತ್ತೆ- ನಟ ಅನಿಲ್ ಕಪೂರ್

Published : Sep 12, 2022, 05:47 PM IST
Koffee with Karan; ಸೆಕ್ಸ್ ನನಗೆ ಮತ್ತಷ್ಟು ಯಂಗ್ ಭಾವನೆ ನೀಡುತ್ತೆ- ನಟ ಅನಿಲ್ ಕಪೂರ್

ಸಾರಾಂಶ

ಕಾಫಿ ವಿತ್ ಕರಣ್ ಎಪಿಸೋಡ್ ನಲ್ಲಿ ಬಾಲಿವುಡ್ ಹಿರಿಯ ನಟ ಅನಿಲ್ ಕಪೂರ್ ಮತ್ತು ವರುಣ್ ಧವನ್ ಕಾಣಿಸಿಕೊಂಡಿದ್ದಾರೆ. ಮತ್ತಷ್ಟು ಯಂಗ್ ಆಗಿ ಮಾಡುವ ಮೂರು ವಿಷಯ ಯಾವುದು ಎಂದು ಕೇಳಿದ ಪ್ರಶ್ನೆಗೆ ಸೆಕ್ಸ್ ಎಂದು ಹೇಳಿದ್ದಾರೆ.

ಬಾಲಿವುಡ್ ಖ್ಯಾತ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ರಿಯಾಲಿಟಿ ಶೋನ 7ನೇ ಸೀಸನ್ ನಡೆಯುತ್ತಿದೆ. ಇದೇ ಮೊದಲ ಬಾರಿಗೆ ಕಾಫಿ ವಿತ್ ಕರಣ್ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ಅಂದಹಾಗೆ ಈಗಾಗಲೇ ಸಾಕಷ್ಟು ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ಸಾರಾ ಅಲಿ ಖಾನ್ ಮತ್ತು ಜಾನ್ವಿ ಕಪೂರ್, ರಣವೀರ್ ಸಿಂಗ್ ಮತ್ತು ಅಲಿಯಾ ಹಾಗೂ ಸಮಂತಾ ಮತ್ತು ಅಕ್ಷಯ್ ಕುಮಾರ್, ವಿಜಯ್ ದೋವರಕೊಂಡ ಮತ್ತು ಅನನ್ಯಾ ಪಾಂಡೆ, ಕರೀನಾ ಕಪೂರ್ ಮತ್ತು ಆಮೀರ್ ಖಾನ್, ವಿಕ್ಕಿ ಕೌಶಲ್ ಮತ್ತು ಸಿದ್ಧಾರ್ಥ್ ಮಲ್ಹೋತ್ರ ಸೇರಿದಂತೆ ಅನೇಕ ಸ್ಟಾರ್ಸ್ ಭಾಗಿಯಾಗಿದ್ದರು. ಎಂದಿನಂತೆ ಈ ಬಾರಿಯೂ ಸೆಲೆಬ್ರಿಟಿಗಳು ಸಾಕಷ್ಟು ವಿಚಾರಗಳನ್ನು ಬಹಿರಂಗ ಪಡಿಸಿದರು. ಕರಣ್ ಶೋ ಹೆಚ್ಚಾಗಿ ಗಾಸಿಪ್, ವಿವಾದಗಳ ಬಗ್ಗೆ ಸದ್ದು ಮಾಡುತ್ತದೆ. ಈ ಬಾರಿ ಕೂಡ ಲವ್, ಬ್ರೇಕಪ್, ಡೇಟಿಂಗ್ ಹಾಗೂ ಸೆಕ್ಸ್ ವಿಚಾರಗಳ ಬಗ್ಗೆ ಕರಣ್ ಸ್ಟಾರ್ಸ್ ಜೊತೆ ಮಾತನಾಡಿದ್ದಾರೆ. 

ಈ ಬಾರಿ ಕರಣ್ ಶೋನಲ್ಲಿ ಹೆಚ್ಚು ಸದ್ದು ಮಾಡಿದ ವಿಚಾರ ಸೆಕ್ಸ್. ಕರಣ್ ನಟ-ನಟಿಯರ ಸೆಕ್ಸ್ ಲೈಫ್ ಬಗ್ಗೆ ಪ್ರಶ್ನೆ ಮಾಡಿ ಕೆದಕುತ್ತಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆ ಕೂಡ ಆಗಿತ್ತು. ಅನೇಕರು ವಿರೋದ ಮಾಡಿದ್ದರು. ಇನ್ನು ನಟ ಆಮೀರ್ ಖಾನ್ ಕೂಡ ಶೋನಲ್ಲೇ ಕರಣ್ ಜೋಹರ್ ಮುಂದೆಯೆ ತರಾಟೆ ತೆಗೆದುಕೊಂಡಿದ್ದರು. ನಿಮಗ್ಯಾಕೆ ನಟ-ನಟಿಯರ ಸೆಕ್ಸ್ ಲೈಫ್ ಎಂದು ಪ್ರಶ್ನಿಸಿದ್ದರು. ಇನ್ನು ನಟಿ ತಾಪ್ಸಿ ಪನ್ನು ತನ್ನ ಸೆಕ್ಸ್ ಲೈಫ್ ಇಂಟ್ರೆಸ್ಟಿಂಗ್ ಆಗಿಲ್ಲ ಹಾಗಾಗಿ ತನ್ನನ್ನು ಶೋಗೆ ಕರೆಯಲ್ಲ ಎಂದು ಹೇಳಿದ್ದರು. ಇಷ್ಟಾದರೂ ಕರಣ್ ಶೋ ಮತ್ತೆ ಸೆಕ್ಸ್ ವಿಚಾರವಾಗಿ ಸದ್ದು ಮಾಡುತ್ತಿದೆ. 

ಕಾರಲ್ಲಿ ಸೆಕ್ಸ್ ಮಾಡಿದ್ದಾರಾ ವಿಜಯ್ ದೇವರಕೊಂಡ? ಕರಣ್ ಮುಂದೆ ಸೆಕ್ಸ್ ಲೈಫ್ ತೆರೆದಿಟ್ಟ ಅರ್ಜುನ್ ರೆಡ್ಡಿ ಸ್ಟಾರ್

ಸದ್ಯ ಕಾಫಿ ವಿತ್ ಕರಣ್ ಎಪಿಸೋಡ್ ನಲ್ಲಿ ಬಾಲಿವುಡ್ ಹಿರಿಯ ನಟ ಅನಿಲ್ ಕಪೂರ್ ಮತ್ತು ವರುಣ್ ಧವನ್ ಕಾಣಿಸಿಕೊಂಡಿದ್ದಾರೆ. ಜಗ ಜಗ್ ಜಿಯೋ ಸಿನಿಮಾದಲ್ಲಿ ಈ ಜೋಡಿ ಒಟ್ಟಿಗೆ ನಟಿಸಿದ್ದರು. ಇವರು ಕರಣ್ ಶೋನಲ್ಲಿ ಮದುವೆ, ಸಂಬಂಧಗಳ ಬಗ್ಗೆ ಹಾಗು ಸಿನಿಮಾರಂಗದಲ್ಲಿನ ಪೈಪೋಟಿಗಳ ಬಗ್ಗೆ ಮಾತನಾಡಿದ್ದಾರೆ. ಸದ್ಯ ಈ ಎಪಿಸೋಡ್ ನ ಪ್ರೋಮೋ ರಿಲೀಸ್ ಆಗಿದೆ. ಪ್ರೋಮೋ ಆರಂಭದಲ್ಲಿ ಕರಣ್, ಅನಿಲ್ ಕಪೂರ್ ಅವರಿಗೆ ನಿಮ್ಮನ್ನು ಮತ್ತಷ್ಟು ಯಂಗ್ ಆಗಿ ಮಾಡುವ ಮೂರು ವಿಷಯ ಯಾವುದು ಎಂದು ಹೇಳಿ ಅಂತ ಕೇಳಿದರು. ಅನಿಲ್ ಕಪೂರ್ ತಕ್ಷಣ 'ಸೆಕ್ಸ್ ಸೆಕ್ಸ್ ಸೆಕ್ಸ್' ಎಂದು ಉತ್ತರಿಸಿದರು. ಅನಿಲ್ ಕಪೂರ್ ಅವರ ಈ ಉತ್ತರ ಪಕ್ಕದಲ್ಲೇ ಕುಳಿತಿದ್ದ ವರುಣ್ ಧವನ್‌ಗೆ ಅಚ್ಚರಿ ಮೂಡಿಸಿತು. 

ನಿಂಗ್ಯಾಕೆ ಸೆಲೆಬ್ರಿಟಿ ಸೆಕ್ಸ್ ಬಗ್ಗೆ ಕ್ಯೂರಿಯಾಸಿಟಿ? ಕರಣ್ ಜೋಹರ್ ಕಾಲೆಳೆದ ಆಮೀರ್ ಖಾನ್

ನಟ ವರುಣ್ ಧವನ್ ಮಾತನಾಡಿ 'ಒಂದು ವೇಳೆ ನಾನು ತಪ್ಪು ಮಾಡಿದ್ರೆ ನನ್ನ ನಾಯಿ ಬೊಗಳುತ್ತೆ. ಅದು ನನ್ನ ಪತ್ನಿಗೆ ಗೊತ್ತಾಗುತ್ತದೆ' ಎಂದು ಹೇಳಿದರು. ಇನ್ನು ನಟ ಅನಿಲ್ ಕಪೂರ್ ಮದುವೆ, ಸಂಬಂಧದ ಬಗ್ಗೆ ಮಾತನಾಡಿದ್ದಾರೆ. 'ನೀವು ನಿಮ್ಮ ಹೆಂಡತಿಯನ್ನು ಹೊಗಳುತ್ತಿರಬೇಕು. ಅವಳನ್ನು ಸಂತೋಷ ಪಡಿಸುವ ಕೆಲಸ ಮಾಡಬೇಕು. ಅವಳು ನಿಮ್ಮನ್ನು ಹೇಗೆ ಸಂತೋಷ ಪಡಿಸುತ್ತಾಳೆ ಎನ್ನುವುದು ಕೂಡ ಮುಖ್ಯವಾಗುತ್ತದೆ' ಎಂದು ನವ ಜೋಡಿಗಳಿಗೆ ಅನಿಲ್ ಕಪೂರ್ ಸಲಹೆ ನೀಡಿದರು.  ಈ ಪ್ರೋಮೋ ಸದ್ಯ ವೈರಲ್ ಆಗಿದ್ದು ಸಂಪೂರ್ಣ ಎಪಿಸೋಡ್ ನೋಡಲು ಕಾತರದಿಂದ ಕಾಯುತ್ತಿದ್ದಾರೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!