ರಸ್ತೆಯಲ್ಲಿ ಮುಗ್ಗರಿಸಿ ಬಿದ್ದ ಕಿರುತೆರೆ ನಟಿ ಸುಮತಿ; ಮೂಗು ಪುಡಿಪುಡಿ, ಆಪರೇಷನ್‌ ನಂತರ ಲಕ್ಷಣನೇ ಇಲ್ಲ ಎಂದು ಕಣ್ಣೀರು!

Published : Jul 11, 2023, 05:27 PM IST
 ರಸ್ತೆಯಲ್ಲಿ ಮುಗ್ಗರಿಸಿ ಬಿದ್ದ ಕಿರುತೆರೆ ನಟಿ ಸುಮತಿ; ಮೂಗು ಪುಡಿಪುಡಿ, ಆಪರೇಷನ್‌ ನಂತರ ಲಕ್ಷಣನೇ ಇಲ್ಲ ಎಂದು ಕಣ್ಣೀರು!

ಸಾರಾಂಶ

ರಸ್ತೆಯಲ್ಲಿ ವಾಕಿಂಗ್ ಮಾಡುವಾಗ ಮುಗ್ಗರಿಸಿ ಬಿದ್ದ ಕಿರುತೆರೆ ನಟಿ ಸುಮತಿ ಸಿಂಗ್. ಮೂಗು ಮುರಿದುಕೊಂಡ ಗಂಭೀತ ಸ್ಥಿತಿ ಬಗ್ಗೆ ಹಂಚಿಕೊಂಡ ನಟಿ....  

ರೂಪ್-ಮರ್ದ್ ಕಾ ನಯಾ ಸ್ವರೂಪ್ ಮತ್ತು ಅಮ್ಮ ಕೆ ಬಾಬು ಕಿ ಬೇಬಿ ಧಾರಾವಾಹಿಯಲ್ಲಿ ಅಭಿನಯಿಸಿರುವ ನಟಿ ಸುಮತಿ ಸಿಂಗ್ 2021ರಲ್ಲಿ ಆದ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡರು. ಅದಾದ ನಂತರ ಸುಮಾರು ಎರಡು ವರ್ಷಗಳ ಕಾಲ ಸುಮತಿ ಸಿಂಗ್ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ ಎಲ್ಲಿದ್ದಾರೆ ಹೇಗಿದ್ದಾರೆ ಅನ್ನೋದು ಅವರ ಇನ್‌ಸ್ಟಾಗ್ರಾಂ ಮೂಲಕವೇ ತಿಳಿದುಕೊಳ್ಳಬೇಕಿತ್ತು. ಆದರೀಗ ಸುಮತಿ ಮೂಗು ಆಪರೇಷನ್ ಮಾಡಿಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗುತ್ತಿದೆ. 

'ಒಂದು ದಿನ ನನ್ನ ಶೂಟಿಂಗ್ ಮುಗಿಸಿಕೊಂಡು ನನ್ನ ಧಾರಾವಾಹಿ ಸ್ನೇಹಿತೆ ಜೊತೆ ವಾಕಿಂಗ್‌ಗೆ ತೆರಳಿದೆ. ನಮ್ಮ ಏರಿಯಾದಲ್ಲಿ ಕಾಮಗಾರಿ ಕೆಲಸ ನಡೆಯುತ್ತಿದೆ ಏನಾಯ್ತು ಎಂದು ನನಗೆ ಸ್ಪಷ್ಟವಾಗಿ ತಿಳಿದಿಲ್ಲ ಆದರೆ ನನ್ನ ಕಾಲು ಉಳುಕಿ ಬಿದ್ದೆ ಆಗ ನೆಲಕ್ಕೆ ಮೊದಲು ಮುಖ ಕೊಟ್ಟ ಕಾರಣ ಮೂಗಿಗೆ ಪೆಟ್ಟು ಬಿತ್ತು. ನನಗೆ ನೆನಪಿರುವುದು ಒಂದೆ ರಸ್ತೆ ಡಿವೈಡರ್ ಮಾಡಲು ಇಟ್ಟಿರುವ ಕಲ್ಲಿಗೆ ಮುಖ ಕೊಟ್ಟಿರುವೆ ಎಂದು. ನನ್ನ ಮೂಗಿನ ಎಡಭಾಗವು ಸಂಪೂರ್ಣವಾಗಿ ಮುರಿದುಹೋಯಿತು, ಮತ್ತು ಮೂಗಿನ ಬಲಭಾಗದ ಮೂಳೆಯು ಸ್ಥಳಾಂತರಗೊಂಡಿತು, ಆದ್ದರಿಂದ ತುಂಬಾ ಬ್ಲೀಡ್ ಅಯ್ತು' ಎಂದು ಸುಮತಿ ಟೈಮ್ಸ್‌ ಆಫ್‌ ಇಂಡಿಯಾ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಹಾರ್ಮೋನ್ ಬದಲಾವಣೆ, PCODಯಿಂದ ಬಳಲುತ್ತಿರುವ ನಟಿ ವಿದ್ಯಾ ಬಾಲನ್; ತೂಕ ಹೆಚ್ಚಾಗಿದೆ ಎಂದು ನೊಂದುಕೊಂಡ ನಟಿ!

'ನನ್ನ ಜೊತೆಗಿದ್ದ ಕೋ-ಸ್ಟಾರ್ ತಕ್ಷಣವೇ ನನ್ನನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಎಮರ್ಜೆನ್ಸಿ ಡಿಪಾರ್ಟ್‌ಮೆಂಟ್‌ ಬಳಿ ಚಿಕಿತ್ಸೆ ಕೊಟ್ಟು ರಕ್ತ ಬರುವುದನ್ನು ಮೊದಲು ನಿಲ್ಲಿಸಿದ್ದರು ಆನಂತರ  X-ray ಮಾಡಿ ನೋಡಿದಾಗ ನನ್ನ ಮೂಗು ಸಂಪೂರ್ಣವಾಗಿ ಪುಡಿ ಪುಡಿಯಾಗಿರುವುದು ತಿಳಿಯಿತ್ತು. ಆಪರೇಷನ್ ಮಾಡಿಲ್ಲ ಅಂದ್ರೆ ತುಂಬಾ ಕಷ್ಟವಾಗುತ್ತದೆ ಎಂದಯ ವೈದ್ಯರು ಹೇಳಿದೆ. ಆ ಸಮಯದಲ್ಲಿ ನಾನು ಶೋ ಮಾಡುತ್ತಿದ್ದೆ ಮುಂದೆ ಹೇಗೆ ಏನು ಅನ್ನೋದು ತಿಳಿಯಲಿಲ್ಲ ಗಾಬರಿಯಲ್ಲಿ ಒಪ್ಪಿಕೊಂಡೆ' ಎಂದು ಸುಮತಿ ಹೇಳಿದ್ದಾರೆ.

'ಸಾಕಷ್ಟು ವೈದ್ಯರನ್ನು ಭೇಟಿ ಮಾಡಿರುವೆ ಆಗ ಎಲ್ಲರೂ ಆಪರೇಷನ್ ಮಾಡಿಸಿಕೊಳ್ಳಬೇಕು ಎಂದು ಹೇಳಿದರು. ಮುರಿದಿರುವ ಮೂಗನ್ನು ಸರಿ ಮಾಡಲು ಇರುವುದು ಆಪರೇಷನ್ ಒಂದೇ ದಾರಿ. ನನ್ನ ಮೂಗು ಚಿಕಿತ್ಸೆ ಪಡೆಯುವವರೆಗೂ ನನ್ನ ಮುಖ ನೋಡಲು ಆಗುತ್ತಿರಲಿಲ್ಲ. ದಿನ ಬೆಳಗ್ಗೆ ಬಾತ್‌ರೂಮ್‌ಗೆ ಹೋಗಿ 10 ರಿಂದ 15 ನಿಮಿಷ ಅಳುತ್ತಿದ್ದೆ  ನನ್ನ ಮುಖ ಸಂಪೂರ್ಣವಾಗಿ ಬದಲಾಗಿತ್ತು ನೋಡಲು ವಿಚಿತ್ರವಾಗಿ ಕಾಣಿಸುತ್ತಿದ್ದೆ' ಎಂದಿದ್ದಾರೆ ಸುಮತಿ.

ಒಬ್ಬೊಬ್ಬರಿಂದ ಒಂದೊಂದು ರೀತಿ ಮಾತುಗಳು ಬರುತ್ತೆ; ಸತ್ಯ ಮುಚ್ಚಿಡಲು ಕಾರಣ ಬಿಚ್ಚಿಟ್ಟ ಹರಿಪ್ರಿಯಾ- ವಸಿಷ್ಠ

'ಆಪರೇಷನ್‌ ನಂತರ ಎಲ್ಲೂ ಒಂದೇ ರೀತಿ ಇರಲಿಲ್ಲ. ನಾನು ಸರಿಯಾಗಿ ಊಟ ಮಾಡಲು ಆಗುತ್ತಿರಲಿಲ್ಲ ನೀರು ಕುಡಿಯಲು ಆಗುತ್ತಿರಲಿಲ್ಲ ನನ್ನ ಮುಖ ಊದಿಕೊಂಡಿತ್ತು ಮುಖದ ತುಂಬಾ ಮಾರ್ಕ್‌ಗಳಿತ್ತು ಸುಮಾರು 10 ದಿನಗಳ ಕಾಲ ಕ್ಯಾಪ್‌ ಹಾಕಿದ್ದರು. ನನ್ನ ಮೇಕಪ್ ನಾನೇ ಮಾಡಿಕೊಂಡು ಐಸ್‌ ಕೂಲಿಂಗ್ ಕೊಡುತ್ತಿದ್ದೆ. ಎಲ್ಲವೂ ಓಕೆ ಆದ ಮೇಲೆ ನಾನು ಶೂಟ್‌ ಮಾಡಲು ಮುಂದಾದೆ. ಒಂದು ಬಕೆಟ್‌ ತುಂಬಾ ಐಸ್‌ನ ಹೋಟೆಲ್‌ ರೂಮ್‌ಗೆ ತೆಗೆದುಕೊಂಡು ಹೋಗಿ ಊತ ಕಡಿಮೆ ಮಾಡಿಕೊಂಡೆ' ಎಂದು ಸುಮತಿ ಹೇಳಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?