ಅತ್ತ ರೀನಾ, ಇತ್ತ ಕಿರಣ್- ಮಾಜಿ ಪತ್ನಿಯರ ಜೊತೆ ನಟ ಆಮೀರ್ ಖಾನ್ ಸಂಬಂಧ ಹೇಗಿದೆ? ಈ ಕುರಿತು ಎರಡನೆಯ ಮಾಜಿ ಪತ್ನಿ ಕಿರಣ್ ರಾವ್ ಹೇಳಿದ್ದೇನು?
ಸದ್ಯ ಸಿನಿಮಾದಿಂದ ಅಂತರ ಕಾಯ್ದುಕೊಂಡಿರುವ ನಟ ಆಮೀರ್ ಖಾನ್ (Aamir Khan), ಶೀಘ್ರವೇ ಬಾಕ್ಸ್ ಆಫೀಸ್‌ನಲ್ಲಿ ಗ್ರ್ಯಾಂಡ್ ಎಂಟ್ರಿ ನೀಡಲಿದ್ದಾರೆ ಎಂಬ ಸುದ್ದಿ ಇದೆ. ಇದರ ನಡುವೆಯೇ, ಆಮೀರ್ ಸದ್ಯ ಸುದ್ದಿಯಲ್ಲಿರುವ ನಟ. ಏಕೆಂದರೆ ನಿನ್ನೆಯಷ್ಟೇ ಅವರು, ತಮ್ಮ ಮಾಜಿ ಪತ್ನಿ ರೀನಾ ದತ್ತಾ ಅವರೊಂದಿಗೆ ಬಾಂದ್ರಾದಲ್ಲಿ ಕಾಣಿಸಿಕೊಂಡಿದ್ದರು. ವಿಚ್ಛೇದನದ ಬಳಿಕವೂ ಒಟ್ಟಿಗೆ ಕಾಣಿಸಿಕೊಂಡಿದ್ದರಿಂದ ಹಳೆಯ ಹೆಂಡ್ತಿಯ ಪಾದವೇ ಗತಿಯಾಯ್ತಾ ಎಂದು ಟ್ರೋಲಿಗರು ಕಾಲೆಳೆಯುತ್ತಿದ್ದಾರೆ. ರೀನಾ ಜೊತೆ ಆಮೀರ್ ಖಾನ್ ಜ್ಯುವೆಲ್ಲರಿ ಷಾಪ್ನಲ್ಲಿ ಕಾಣಿಸಿಕೊಂಡಿದ್ದು, ಮಗಳು ಐರಾ ಖಾನ್ ಮದುವೆಗೆ ಷಾಪಿಂಗ್ಗೆ ಹೋಗಿದ್ದಾರೆ ಎನ್ನಲಾಗಿದೆ. ಅಂದರೆ ಈಗಲೂ ಇವರಿಬ್ಬರ ಸಂಬಂಧ ಚೆನ್ನಾಗಿಯೇ ಇದೆ ಎಂದು ತಿಳಿದುಬರುತ್ತದೆ. ಆಮೀರ್ ಖಾನ್ ಮತ್ತು ರೀನಾ ದತ್ತಾ ಅವರ ಪುತ್ರಿ ಇರಾ ಖಾನ್ ಈ ವರ್ಷ ನೂಪುರ್ ಶಿಖರೆಯೊಂದಿಗೆ ಮದುವೆಯಾಗಲಿದ್ದಾರೆ. 2022 ರ ನವೆಂಬರ್‌ನಲ್ಲಿ ಇರಾ ಖಾನ್ ತಮ್ಮ ತರಬೇತುದಾರರಾದ ನೂಪುರ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮುಂದಿನ ತಿಂಗಳು ಮದುವೆ ಇದೆ ಎನ್ನಲಾಗಿದೆ.
ಅಂದಹಾಗೆ ನಟ ಆಮೀರ್ ಖಾನ್ ಅವರ ಮೊದಲ ಪತ್ನಿ ಕೂಡ ಹಿಂದೂವೇ ಆಗಿದ್ದರು. ಅವರ ಹೆಸರು ರೀನಾ ದತ್ತಾ (Reena Dutta). 1986 ರಲ್ಲಿ ಇಬ್ಬರೂ ವಿವಾಹವಾದರು. 2002 ರಲ್ಲಿ ಆಮೀರ್ ಖಾನ್ ಮತ್ತು ರೀನಾ ದತ್ತಾ ಪರಸ್ಪರ ಬೇರ್ಪಟ್ಟರು. ಈ ದಂಪತಿಗೆ ರೀನಾ ಜುನೈದ್ ಮತ್ತು ಐರಾ ಎಂಬ ಮಕ್ಕಳಿದ್ದಾರೆ. ಇದಾದ ಬಳಿಕ ಕಿರಣ್ ರಾವ್ ಆಮೀರ್ ಖಾನ್ ಜೀವನದಲ್ಲಿ ಬಂದರು. ಆಮೀರ್ ಮತ್ತು ಕಿರಣ್ 2005 ರಲ್ಲಿ ವಿವಾಹವಾದರು. ಈ ಜೋಡಿಗೆ ಆಜಾದ್ ಖಾನ್ ಎಂಬ ಓರ್ವ ಪುತ್ರನಿದ್ದಾನೆ. ಕಿರಣ್ ಅವರ ಜತೆಗೂ ಒಂದಷ್ಟು ವರ್ಷ ಸಂಸಾರ ನಡೆಸಿದ ಆಮೀರ್ ಖಾನ್, 2021ರಲ್ಲಿ ಇಬ್ಬರೂ ಸಹಮತಿಯ ಮೇರೆಗೆ ವಿಚ್ಛೇದನ ಪಡೆದು ದೂರವಾಗಿದ್ದಾರೆ.
ಮಗಳ ಮದ್ವೆಗೆ ಮೊದಲ ಪತ್ನಿ ಜೊತೆ ಚಿನ್ನದಂಗಡಿಗೆ ಹೋದ ಆಮೀರ್: ಹಳೇ ಹೆಂಡ್ತಿ ಪಾದವೇ ಗತಿ ಎಂದ ನೆಟ್ಟಿಗರು!
ಆದರೆ ಆಮೀರ್ ಇಬ್ಬರೂ ಮಾಜಿ ಪತ್ನಿಯರ ಜೊತೆ ಇನ್ನೂ ಉತ್ತಮ ರೀತಿಯ ಸಂಬಂಧ ಹೊಂದಿದ್ದಾರೆ ಎನ್ನಲಾಗಿದೆ. ಮೊನ್ನೆಯಷ್ಟೇ ಮೊದಲ ಪತ್ನಿಯ ಜೊತೆ ಕಾಣಿಸಿಕೊಂಡಿದ್ದರೆ, ಇದೀಗ ಅವರ ಎರಡನೆಯ ಪತ್ನಿ ಕಿರಣ್ ರಾವ್, ಆಮೀರ್ ಖಾನ್ ಕುರಿತು ಮಾತನಾಡಿದ್ದಾರೆ. ಈಕೆ ಚಲನಚಿತ್ರ ನಿರ್ಮಾಪಕಿ ಕೂಡ. ಅವರು ಪ್ರಸ್ತುತ 'ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿದ್ದಾರೆ, ಅಲ್ಲಿ ಅವರ ಎರಡನೇ ಚಲನಚಿತ್ರ 'ಮಿಸ್ಸಿಂಗ್ ಲೇಡೀಸ್' ಪ್ರಥಮ ಪ್ರದರ್ಶನವಾಗುತ್ತಿದೆ. ಕಿರಣ್ 2011 ರಲ್ಲಿ 'ಧೋಬಿ ಘಾಟ್' (Dobhi Ghat) ಚಿತ್ರದ ಮೂಲಕ ನಿರ್ದೇಶಕರಾಗಿ ಪದಾರ್ಪಣೆ ಮಾಡಿದರು. ಅವರು 'ಡೆಲ್ಲಿ ಬೆಲ್ಲಿ', 'ಸೀಕ್ರೆಟ್ ಸೂಪರ್‌ಸ್ಟಾರ್', 'ದಂಗಲ್' ಮತ್ತು 'ಲಾಲ್ ಸಿಂಗ್ ಚಡ್ಡಾ' ಸೇರಿದಂತೆ ಹಲವು ಚಿತ್ರಗಳನ್ನು ನಿರ್ಮಿಸಿದ್ದಾರೆ. ಈಗ ಸಂದರ್ಶನದಲ್ಲಿ ಅವರು, ತಮ್ಮ ಚಿತ್ರದ ಯಶಸ್ಸಿನ ಬಗ್ಗೆ ಮಾತನಾಡಿದ್ದು, ಇದಕ್ಕೆ ಕಾರಣ ತಮ್ಮ ಮಾಜಿ ಪತಿ ಆಮೀರ್ ಖಾನ್ ಎಂದು ಹೇಳಿದ್ದಾರೆ. ಕಿರಣ್ ರಾವ್ ಜೊತೆ ಆಮೀರ್ ಖಾನ್ ಹಿಂದೂ ಸಂಪ್ರದಾಯವನ್ನೂ ಆಚರಿಸುತ್ತಿದ್ದುದು ಆಗಾಗ್ಗೆ ವರದಿಯಾಗುತ್ತಿತ್ತು.
'ಆಮೀರ್ ಖಾನ್ ದೊಡ್ಡ ಬೆಂಬಲ ನೀಡಿದ್ದಾರೆ. ಅವರಿಲ್ಲದೆ ನಮಗೆ ಈ ಚಿತ್ರ ಇರುತ್ತಿರಲಿಲ್ಲ, ಏಕೆಂದರೆ ಅವರು ಸ್ಕ್ರಿಪ್ಟ್ ರೆಡಿ ಮಾಡಿ ಅದನ್ನು ನಿರ್ದೇಶಿಸಲು ನನಗೆ ಅವಕಾಶ ನೀಡಿದರು, ಅದು ನನ್ನ ಅದೃಷ್ಟ ಎಂದಿದ್ದಾರೆ. ಆಮೀರ್ ಅವರಿಂದ ವಿಚ್ಛೇದನದ ನಂತರ ತನಗೆ ಯಾವತ್ತೂ ಆಘಾತವಾಗಲಿಲ್ಲ. ನನ್ನ ಜೀವನದಲ್ಲಿ ನಾನು ತುಂಬಾ ಪ್ರೀತಿಯ ಸಂಬಂಧಗಳನ್ನು ಹೊಂದಿದ್ದೇನೆ ಮತ್ತು ಇನ್ನೂ ಅವುಗಳನ್ನು ಸದಾ ಹೊಂದಿರುತ್ತೇನೆ ಎಂದಿದ್ದಾರೆ. ಸಂಬಂಧದ ವಿಷಯದಲ್ಲಿ ನಾನು ಅದೃಷ್ಟಶಾಲಿ, ಆಮೀರ್ ಜೊತೆ ನಾನು ಇನ್ನೂ ಉತ್ತಮ ಸಂಬಂಧವನ್ನು ಹೊಂದಿದ್ದೇನೆ. ನನಗೆ ನನ್ನ ಕುಟುಂಬ ಮತ್ತು ಅಮೀರ್ ಇಬ್ಬರ ಬೆಂಬಲವಿದೆ, ಹಾಗಾಗಿ ನಾನು ಯಶಸ್ಸು ಗಳಿಸಲು ಸಾಧ್ಯವಾಯಿತು. ಅವರು ಪತಿಯಾಗಿಯೂ ತುಂಬಾ ಒಳ್ಳೆಯವರು ಎಂದಿದ್ದಾರೆ.
ಶಾರುಖ್ ಖಾನ್ ಓಂ ಶಾಂತಿ ಓಂ ಸಿನಿಮಾದ ಹಾಡಿನಲ್ಲಿ ಆಮೀರ್ ಖಾನ್ ನಟಿಸಲು ನಿರಾಕರಿಸಿದ್ದೇಕೆ?