
ಖ್ಯಾತ ಟಿವಿ ತಾರೆ ಕಿಮ್ ಕರ್ದಾಶಿಯನ್ ಮತ್ತೆ ಸುದ್ದಿಯಲ್ಲಿದ್ದಾರೆ. ಒಂದಲ್ಲೊಂದು ವಿಚಾರಕ್ಕೆ ಗಮನಸೆಳೆಯುವ ನಟಿ ಕಿಮ್ ಕರ್ದಾಶಿಯನ್ ಇದೀಗ ಸರ್ಜಾರಿ ಮಾಡಿಕೊಳ್ಳುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಸರ್ಜರಿ ಮಾಡಿಸಿಕೊಂಡಿರುವ ಬಗ್ಗೆ ಕಿಮ್ ಕರ್ದಾಶಿಯಾನ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಅಂದಹಾಗೆ ಕಿಮ್ ಸರ್ಜರಿಗೆ ಒಳಗಾಗಿರುವುದು ಹೊಟ್ಟೆಯ ಭಾಗ ದಪ್ಪ ಆಗದ ಹಾಗೆ. ಹೌದು, ತನ್ನ ಹೊಟ್ಟೆ ದಪ್ಪ ಆಗದ ಹಾಗೆ ಸರ್ಜರಿ ಮಾಡಿಸಿಕೊಂಡಿದ್ದಾರೆ. ಈ ಬಗ್ಗೆ ಸ್ವತಃ ಕಿಮ್ ಬಹಿರಂಗ ಪಡಿಸಿದ್ದಾರೆ. ನಟಿ ಮಣಿಯರು ಫಿಟ್ನೆಸ್ ಕಡೆ ಹೆಚ್ಚು ಗಮನ ಹರಿಸುತ್ತಾರೆ. ಕೊಂಚ ದಪ್ಪ ಆದರೂ ಸಿಕ್ಕಾಪಟ್ಟೆ ತಲೆಕೆಡಿಸಿಕೊಳ್ಳುತ್ತಾರೆ. ಹಾಗಾಗಿ ಸದಾ ವರ್ಕೌಟ್, ಯೋಗ, ಡಯಟ್ ಅಂತ ತಲೆಕೆಡಿಸಿಕೊಳ್ಳುತ್ತಾರೆ. ಆದರೆ ಖ್ಯಾತ ತಾರೆ ಕಿಮ್ ಕರ್ದಾಶಿಯನ್ ಹೊಟ್ಟೆ ದಪ್ಪ ಆಗಬಾರದು, ತೆಳ್ಳಗೆ ಬಳಕುವ ಬಳ್ಳಿಯ ಹಾಗೆ ಇರಬೇಕೆಂದು ಸರ್ಜರಿ ಮಾಡಿಸಿಕೊಂಡಿದ್ದಾರೆ.
ಹೊಟ್ಟೆಯ ಭಾಗದಲ್ಲಿ ಬೊಜ್ಜು ತುಂಬಬಾರದು ಎಂದು ಕಿಮ್ ಸರ್ಜರಿಗೆ ಒಳಗಾಗಿದ್ದಾರೆ. ಸರ್ಜರಿ ಸಕ್ಸಸ್ ಆಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಮೈಕ್ರೋ ನೀಡ್ಲಿಂಗ್ ಲೇಸರ್ ಚಿಕಿತ್ಸೆಗೆ ಒಳಗಾಗಿದ್ದರು. ಇದು ಚರ್ಮವನ್ನು ಬಿಗಿಗೊಳಿಸುವ ಚಿಕಿತ್ಸೆಯಾಗಿದೆ (Stomach Tightening Treatment). ಅಂದಹಾಗೆ ಕಿಮ್ ಸರ್ಜರಿಗೆ ಒಳಗಾಗಿದ್ದು ಆಗಸ್ಟ್ 3ರಂದು.ಈ ಬಗ್ಗೆ ಇನ್ಸಾಗ್ರಾಮ್‌ನಲ್ಲಿ ಮಾಹಿತಿ ಶೇಪರ್ ಮಾಡಿ,'ಇದು ನನ್ನ ನೆಚ್ಚಿನ ಲೇಸರ್ ಎಂದು ನಾನು ಭಾವಿಸುತ್ತೇನೆ ಆದರೆ ಇದು ತುಂಬಾ ನೋವಿನಿಂದ ಕೂಡಿದೆ' ಎಂದು ಹೇಳಿದರು. 'ಆದರೆ ಇದು ಯೋಗ್ಯವಾಗಿದೆ' ಎಂದು ಹೇಳಿದ್ದಾರೆ. ಜೊತೆಗೆ ಫೋಟೋವನ್ನು ಶೇರ್ ಮಾಡಿದ್ದಾರೆ. ಫೋಟೋದಲ್ಲಿ ಕಿಮ್ ಹೊಟ್ಟೆ ಭಾಗದ ಫೋಟೋ ಶೇರ್ ಮಾಡಿ ಸರ್ಜರಿ ಮಾಡಿದ ಭಾಗ ತುಂಬಾ ಕೆಂಪಾಗಿದೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಖ್ಯಾತ ನಟಿಯಂತೆ ಕಾಣಲು 4 ಕೋಟಿ ಖರ್ಚು, 40 ಪ್ಲಾಸ್ಟಿಕ್ ಸರ್ಜರಿ!
ಲೇಸರ್ ಚಿಕಿತ್ಸೆಗೆ ಒಳಗಾಗುವ ಬಗ್ಗೆ ಕಿಮ್ ತೆರೆದುಕೊಂಡಿರುವುದು ಇದೇ ಮೊದಲಲ್ಲ. ಜುಲೈ ಆರಂಭದಲ್ಲಿ, ನಾಲ್ವರ ತಾಯಿ-ಮಕ್ಕಳು ಉತ್ತರ, ಸಂತ, ಪ್ಸಾಲ್ಮ್ ಮತ್ತು ಚಿಕಾಗೋವನ್ನು ಮಾಜಿ ಕಾನ್ಯೆ ವೆಸ್ಟ್‌ನೊಂದಿಗೆ ಹಂಚಿಕೊಳ್ಳುತ್ತಾರೆ-ಮಕ್ಕಳು ಎಲ್ಲರೂ ಸಿಕ್ಕಿಸಿದ ನಂತರ ಅವರು ಸಾಮಾನ್ಯವಾಗಿ ತಡರಾತ್ರಿಯಲ್ಲಿ ತನ್ನ ಕಟ್ಟುಪಾಡುಗಳನ್ನು ಕಾಯ್ದಿರಿಸುತ್ತಾರೆ ಎಂದು ಬಹಿರಂಗಪಡಿಸಿದರು.
Kim Kardashian: ಮೈ ತುಂಬಾ ಟೇಪ್ ಸುತ್ತಿ ಫೋಸ್, ಏನಮ್ಮಾ ನಿನ್ ಅವತಾರ ಅಂತಿದ್ದಾರೆ ನೆಟ್ಟಿಗರು !
ನಾಲ್ಕು ಮಕ್ಕಳ ತಾಯಿ ಕಿಮ್ ತನ್ನ ಹೊಟ್ಟೆಯ ಕೆಲವು ಚಿತ್ರಗಳನ್ನು ಮತ್ತು ಚಿಕಿತ್ಸೆಯ ಬಗ್ಗೆ ಬರೆದುಕೊಂಡಿದ್ದಾರೆ. ಹೊಟ್ಟೆಯ ಚಿಕಿತ್ಸೆ ನಂತರ ಕಿಮ್, ಎಲ್ಲಾ ಫಲಿತಾಂಶಗಳನ್ನು ಪಡೆಯಲು ಮತ್ತು ದೇಹದ ಸ್ಕ್ಯಾನ್ ಮಾಡಲು ಸುಮಾರು 7 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ನಂತರ ಕಿಮ್ ಕರ್ದಾಶಿಯ್ ತನ್ನ ಫಲಿತಾಂಶಗಳು ತುಂಬಾ ಧನಾತ್ಮಕವಾಗಿದೆ ಎಂದು ಬಹಿರಂಗಪಡಿಸಿದರು.
ಕಿಮ್ ಕರ್ದಾಶಿಯಾನ್ ತಮ್ಮ ದೇಹವನ್ನು ಅತ್ಯಾಕರ್ಷಕವಾಗಿ ಇಟ್ಟುಕೊಳ್ಳಲು ಹೆಚ್ಚು ತಲೆಕೆಡಿಸಿಕೊಳ್ಳುತ್ತಾರೆ. 41 ವರ್ಷದ ನಟಿ ತನ್ನ ಹೊಟ್ಟೆಯನ್ನು ಬಿಗಿಗೊಳಿಸಲು ನೋವಿನ ಲೇಸರ್ ಚಿಕಿತ್ಸೆಗೆ ಒಳಗಾಗುತ್ತಿರುವ ಫೋಟೋಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.