ಕನ್ನಡ್ ಅಲ್ಲ ಕನ್ನಡ....ಹಿಂದಿವಾಲನನ್ನು ತಿದ್ದಿದ ಸುದೀಪ್; ವಿಡಿಯೋ ವೈರಲ್

By Suvarna News  |  First Published Jul 19, 2022, 11:40 AM IST

ಸುದೀಪ್ ಪಕ್ಕದಲ್ಲೇ ಕುಳಿತಿದ್ದ ವ್ಯಕ್ತಿ ಕನ್ನಡವನ್ನು ಕನ್ನಡ್...ಕನ್ನಡ್ ಎನ್ನುವುದನ್ನು ಗಮನಿಸಿ ಕನ್ನಡ ಎಂದು ಹೇಳಿಕೊಟ್ಟರು. ಹಿಂದಿವಾಲನನ್ನು ತಿದ್ದಿದ ಕಿಚ್ಚನ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಹರಿದಾಡುತ್ತಿದೆ. 


ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ಯ ಬಹುನಿರೀಕ್ಷೆಯ ವಿಕ್ರಾಂತ್ ರೋಣ ಸಿನಿಮಾದ ರಿಲೀಸ್‌ನ ಬ್ಯುಸಿಯಲ್ಲಿದ್ದಾರೆ. ಈಗಾಗಲೇ ಕಿಚ್ಚ ಅಂಡ್ ಟೀಂ ಭರ್ಜರಿ ಪ್ರಮೋಷನ್‌ನಲ್ಲಿ ನಿರತವಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿರುವ ವಿಕ್ರಾಂತ್ ರೋಣ ಸಿನಿಮಾದ ಪ್ರಚಾರ ಕಾರ್ಯ ದೇಶದಾದ್ಯಂತ ನಡೆಯುತ್ತಿದೆ. ಸುದೀಪ್ ಮತ್ತು ತಂಡ ಅನೇಕ ರಾಜ್ಯಗಳಿಗೆ ಭೇಟಿ ನೀಡಿ ವಿಕ್ರಾಂತ್ ರೋಣ ಪ್ರಮೋಷನ್ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಇತ್ತೀಚಿಗಷ್ಟೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಸುದೀಪ್ ದಂಪತಿ ಹಾಜರಿದ್ದರು. ಈ ಸಮಯದಲ್ಲಿ ವಿಕ್ರಾಂತ್ ರೋಣ ಸಿನಿಮಾದ ಬಗ್ಗೆ ಸಾಕಷ್ಟು ಇಂಟ್ರಸ್ಟಿಂಗ್ ವಿಚಾರಗಳನ್ನು ಶೇರ್ ಮಾಡಿದ್ದಾರೆ. ಬ್ಲಾಕ್ ಚೈನ್ ಆಧರಿತ ಟಿಕೆಟಿಂಗ್ ಪ್ಲಾಟ್ ಫಾರಂ ಬ್ಲಾಕ್ ಟಿಕೆಟ್ಸ್ ಸಂಸ್ಥೆ 3ಡಿ ಚಲನಚಿತ್ರ ವಿಕ್ರಾಂತ್ ರೋಣದ ವಿಶೇಷ ಎನ್.ಎಫ್.ಟಿ ಪ್ರೀಮಿಯರ್ ಸದಸ್ಯತ್ವವನ್ನು ಪ್ರಾರಂಭಿಸುತ್ತಿದೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗ ಪಡಿಸಲಾಯಿತು. ಈ ಬಗ್ಗೆ ಮಾತನಾಡುತ್ತಿದ್ದ ಹಿಂದಿ ಮಾತನಾಡುವ ವ್ಯಕ್ತಿ ಕನ್ನಡ ಪದವನ್ನು ಕನ್ನಡ್...ಕನ್ನಡ್ ಎಂದು ಹೇಳಿದ್ದರು. 

ಸುದೀಪ್ ಪಕ್ಕದಲ್ಲೇ ಕುಳಿತಿದ್ದ ವ್ಯಕ್ತಿ ಕನ್ನಡವನ್ನು ಕನ್ನಡ್...ಕನ್ನಡ್ ಎನ್ನುವುದನ್ನು ಗಮನಿಸಿ ಕನ್ನಡ ಎಂದು ಹೇಳಿಕೊಟ್ಟರು. ಹಿಂದಿವಾಲನನ್ನು ತಿದ್ದಿದ ಕಿಚ್ಚನ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಹರಿದಾಡುತ್ತಿದೆ. ಅನೇಕರ ವಾಟ್ಸಪ್ ಸ್ಟೇಟಸ್ ನಲ್ಲೂ ರಾರಾಜಿಸುತ್ತಿದೆ. 

Tap to resize

Latest Videos

ಅಂದಹಾಗೆ ಕನ್ನಡ ಪದವನ್ನು ಉತ್ತರ ಭಾರತದವರು ಕನ್ನಡ್ ಎಂದು ಹೇಳುವುದು ಇದೇ ಮೊದಲಲ್ಲ. ಬಹುತೇಕ ಉತ್ತರ ಭಾರತದವರು ಕನ್ನಡ್ ಎಂದೇ ಹೇಳುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಕನ್ನಡ್ ಎಂದು ಹೇಳುತ್ತಿರುವ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ಸುದೀಪ್ ಕನ್ನಡ ಎಂದು ತಿದ್ದುವ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. 

ಬಾಲಿವುಡ್‌ನಲ್ಲಿ ಸೌತ್ ಸಿನಿಮಾಗಳ ಅಬ್ಬರದ ಬಗ್ಗೆ ಸುದೀಪ್ ಪ್ರತಿಕ್ರಿಯೆ ಹೀಗಿತ್ತು

ಇನ್ನು ವಿಕ್ರಾಂತ್ ರೋಣ ಸಿನಿಮಾದ ಬಗ್ಗೆ ಹೇಳುವುದಾದರೆ, ಈ ಸಿನಿಮಾ ಹಿಂದಿ, ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಫ್ಯಾಂಟಸಿ ಆ್ಯಕ್ಷನ್-ಸಾಹಸದ ಥ್ರಿಲ್ಲರ್ ಆಗಿದ್ದು ಅನೂಪ್ ಭಂಡಾರಿ ರಚಿಸಿ ನಿರ್ದೇಶಿಸಿದ್ದಾರೆ. ಕಿಚ್ಚ ಸುದೀಪ್ ಜೊತೆ `ವಿಕ್ರಾಂತ್ ರೋಣ’ದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್, ನಿರೂಪ್ ಭಂಡಾರಿ, ನೀತಾ ಅಶೋಕ್, ರವಿಶಂಕರ್ ಗೌಡ ಮತ್ತು ವಾಸುಕಿ ವೈಭವ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 

ಬೆಂಗಳೂರಿನಲ್ಲಿ ಇರ್ಬೇಡ ಅಂತ ಅಪ್ಪ ಓಡ್ಸಿದ್ರು ಆಗ ದೆಹಲಿಗೆ ಹೋಗಿದ್ದೆ: ಸುದೀಪ್

ಈಗಾಗಲೇ ವಿಕ್ರಾಂತ್ ರೋಣ ಸಿನಿಮಾದ ಸಾಂಗ್ಸ್ ಮತ್ತು ಟ್ರೈಲರ್ ಗೆ ಎಲ್ಲಾ ಕಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕನ್ನಡ ಮಾತ್ರವಲ್ಲದೇ ಬೇರೆ ಬೇರೆ ಭಾಷೆಯ ಪ್ರೇಕ್ಷಕರು ವಿಕ್ರಾಂತ್ ರೋಣನ ಹಾಡನ್ನು ಮೆಚ್ಚಿದ್ದಾರೆ. ಬಾಲಿವುಡ್ ಸ್ಟಾರ್ ಜಾಕ್ವೆಲಿನ್ ಹೆಜ್ಜೆ ಹಾಕಿರುವ ಯಕ್ಕ..ಸಕ್ಕಾ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿದ್ದು ಎಲ್ಲಾ ಕಡೆ ಅದೇ ಹಾಡು ಕೇಳಿಬರುತ್ತಿದೆ. ಇದೀಗ ಸಿನಿಮಾವನ್ನು ದೊಡ್ಡ ಪರದೆ ಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಜುಲೈ 28ರಂದು ವಿಕ್ರಾಂತ್ ರೋಣ ದೇಶ ವಿದೇಶಗಳಲ್ಲಿ ರಿಲೀಸ್ ಆಗುತ್ತಿದೆ.  

click me!