ತಮಿಳಿನ ಖ್ಯಾತ ನಟ ವಿಜಯ್‌ಗೆ ಸಿಕ್ತು ಸ್ಯಾಂಡಲ್‌ವುಡ್ ಕಿಚ್ಚನ ಬಲ: ಏನಿದು ಸುದ್ದಿ?

Published : May 01, 2023, 01:07 PM ISTUpdated : May 01, 2023, 01:08 PM IST
ತಮಿಳಿನ ಖ್ಯಾತ ನಟ ವಿಜಯ್‌ಗೆ ಸಿಕ್ತು ಸ್ಯಾಂಡಲ್‌ವುಡ್ ಕಿಚ್ಚನ ಬಲ: ಏನಿದು ಸುದ್ದಿ?

ಸಾರಾಂಶ

 ತಮಿಳಿನ ಖ್ಯಾತ ನಟ ವಿಜಯ್ ಆಂಟೋನಿಗೆ ಸ್ಯಾಂಡಲ್‌ವುಡ್ ಕಿಚ್ಚನ ಬಲ ಸಿಕ್ಕಿದೆ. ವಿಜಯ್ ನಿರ್ದೇಶನದ ಮೊದಲ ಚಿತ್ರದ ಟ್ರೈಲರ್‌ಅನ್ನುಸುದೀಪ್ ರಿಲೀಸ್ ಮಾಡಿದ್ದಾರೆ. 

ತಮಿಳು ಚಿತ್ರರಂಗದ ಖ್ಯಾತ ನಟ ಹಾಗೂ ಸಂಗೀತ ನಿರ್ದೇಶಕ ವಿಜಯ್ ಆಂಟೋನಿ  ಭಿಕ್ಷುಕ-2(ಪಿಚೈಕ್ಕಾರನ್ 2 ತಮಿಳಿನಲ್ಲಿ) ಸಿನಿಮಾ ಮೂಲಕ ನಿರ್ದೇಶನದ ಅಖಾಡಕ್ಕಿಳಿದಿರುವುದು ಗೊತ್ತೇ ಇದೆ.  ಪಿಚೈಕ್ಕಾರನ್ ಸಿನಿಮಾದ ಸೀಕ್ವೆಲ್ ಆಗಿರುವ ಈ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗಿದೆ. ಕನ್ನಡದಲ್ಲಿ ಭಿಕ್ಷುಕ-2 ಟೈಟಲ್‌ನಡಿ ಈ ಸಿನಿಮಾ ಮೂಡಿ ಬರ್ತಿದೆ. ವಿಶೇಷ ಎಂದರೆ  ಈ ಸಿನಿಮಾದ ಕನ್ನಡದ ಟ್ರೇಲರ್ ನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಿ ನೆಚ್ಚಿನ ಗೆಳೆಯ ವಿಜಯ್ ಆಂಥೋನಿಗೆ ಶುಭ ಕೋರಿದ್ದಾರೆ.

ಪಿಚೈಕ್ಕರನ್ ಮೊದಲ ಭಾಗ ಅಭೂತಪೂರ್ವ ಯಶಸ್ಸು ಕಂಡಿತ್ತು. 2016ರಲ್ಲಿ ರಿಲೀಸ್ ಆಗಿದ್ದ ಈ ಚಿತ್ರ ವಿಜಯ್ ಅಂಥೋನಿಗೆ ಒಳ್ಳೆ ಹೆಸರು ತಂದುಕೊಟ್ಟಿತ್ತು. ಈಗ ಪಿಚೈಕ್ಕರನ್ ಸೀಕ್ವೆಲ್ ಮೂಲಕ ವಿಜಯ್ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ತಮ್ಮದೇ ವಿಜಯ್ ಆಂಟೋನಿ ಫಿಲ್ಮಂ ಕಾರ್ಪೊರೇಷನ್ ನಡಿ ಅವರೇ ನಿರ್ಮಿಸಿದ್ದು, ಪತ್ನಿ ಫಾತೀಮಾ ವಿಜಯ್ ಆಂಟೋನಿ ಭಿಕ್ಷುಕ-2 ಚಿತ್ರವನ್ನು ಪ್ರೆಸೆಂಟ್ ಮಾಡುತ್ತಿದ್ದಾರೆ. 

ನಾನು ಯಾರಿಗೂ ಕರೆ ಮಾಡಿ ಕ್ಷಮೆ ಕೇಳಿ ಎಂದಿಲ್ಲ; ದಿಢೀರ್ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ ಕಿಚ್ಚ ಸುದೀಪ್

 ಮಲೇಷ್ಯಾದಲ್ಲಿ ಪಿಚೈಕ್ಕರನ್-2 ಶೂಟಿಂಗ್ ನಡೆಯುತ್ತಿದ್ದ ವೇಳೆ ವಿಜಯ್ ಆಂಟೋನಿ ಗಂಭೀರ ಗಾಯಗೊಂಡಿದ್ದರು. ಶಸ್ತ್ರ ಚಿಕಿತ್ಸೆ ಬಳಿಕ ಚೇತರಿಕೆ ಕೊಂಡಿರುವ ಅವರೀಗ ಪ್ರಮೋಷನ್ ಕಾರ್ಯಕ್ಕೆ ಸಜ್ಜಾಗಿದ್ದಾರೆ. ಅದರ ಮೊದಲ ಭಾಗವಾಗಿ ಭಿಕ್ಷುಕ-2 ಟ್ರೇಲರ್ ರಿಲೀಸ್ ಆಗಿದೆ. ಅಂದಹಾಗೆ ಇದು ಮೊದಲ ಭಾಗದ ಮುಂದುವರೆದ ಭಾಗವಲ್ಲ, ಪಪಾರ್ಟ್-2 ವಿಭಿನ್ನ ಕಥೆಯಾಗಿದೆ ಎಂದು ಹೇಳಲಾಗುತ್ತಿದೆ. ವಿಜಯ್ ಗುರುಮೂರ್ತಿ ಪಾತ್ರದಲ್ಲಿ ವಿಜಯ್ ಕಾಣಿಸಿಕೊಂಡಿದ್ದಾರೆ. ಖ್ಯಾತ ಉದ್ಯಮಿ ವಿಜಯ್ ಮೂರ್ತಿಯನ್ನು ಸತ್ಯ ಕೊಲೆ‌ ಮಾಡ್ತಾನೆ. ಕೊಲೆ ನಂತರ ಮುಂದೇನಾಗುತ್ತದೆ‌ ಎಂಬ ಒಂದಷ್ಟು ಟ್ವಿಸ್ಟ್ ಅಂಡ್ ಟರ್ನ್‌ ಅಂಶಗಳು ಟ್ರೇಲರ್ ನ ಹೈಲೆಟ್ಸ್.

ಜೂನ್ 1ಕ್ಕೆ ಕಾದಿದೆ ಬಿಗ್ ಸರ್ಪ್ರೈಸ್: ಪ್ರಚಾರದ ನಡುವೆಯೇ ಭರ್ಜರಿ ಸುದ್ದಿ ನೀಡಿದ ಕಿಚ್ಚ ಸುದೀಪ್

ವಿಜಯ್ ಆಂಟೋನಿ ನಿರ್ದೇಶನದ ಈ ಚಿತ್ರದಲ್ಲಿ ದೇವ್ ಗಿಲ್, ಹರೀಶ್ ಪೆರಾಡಿ, ಜಾನ್ ವಿಜಯ್, ರಾಧಾ ರವಿ, ಮನ್ಸೂರ್ ಅಲಿ ಖಾನ್, ವೈ ಜಿ ಮಹೇಂದ್ರನ್, ರಾಜಾ ಕೃಷ್ಣಮೂರ್ತಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕಾವ್ಯ ಥಾಪರ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ವಿಜಯ್ ಆಂಟೋನಿ ನಟನೆ ನಿರ್ದೇಶನದ ಜೊತೆಗೆ ಸಂಗೀತ, ಸಂಕಲನ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಮೇ 19 ರಂದು ಕನ್ನಡ ಸೇರಿ ಪಂಚ ಭಾಷೆಯಲ್ಲಿ ಭಿಕ್ಷುಕ-2 ರಿಲೀಸ್ ಆಗಲಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?