ಗಂಡ ಬದುಕಿರುವಾಗ್ಲೇ ಇದೆಂಥ ವೇಷನಮ್ಮಾ? ಭಾರಿ ಟ್ರೋಲ್​ ಆಗ್ತಿರೋ Kiara Advani

Published : Feb 22, 2023, 05:55 PM IST
ಗಂಡ ಬದುಕಿರುವಾಗ್ಲೇ ಇದೆಂಥ ವೇಷನಮ್ಮಾ? ಭಾರಿ ಟ್ರೋಲ್​ ಆಗ್ತಿರೋ Kiara Advani

ಸಾರಾಂಶ

ಇತ್ತೀಚೆಗಷ್ಟೇ ಮದುವೆಯಾಗಿರುವ ತಾರಾ ಜೋಡಿ ಕಿಯಾರಾ ಅಡ್ವಾನಿ ಹಾಗೂ ಸಿದ್ಧಾರ್ಥ ಮಲ್ಹೋತ್ರಾ ಜೊತೆಯಾಗಿ ಕಾಣಿಸಿಕೊಂಡಿದ್ದು, ನಟಿಯ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ. ಇದಕ್ಕೆ ಕಾರಣವೇನು?  

ಸಿದ್ಧಾರ್ಥ್ ಮಲ್ಹೋತ್ರಾ (Sidharth Malhotra) ಮತ್ತು ಕಿಯಾರಾ ಅಡ್ವಾಣಿ (Kiara Advani) ಅವರು ಕಳೆದ ಕೆಲ ವಾರಗಳಿಂದ ಭಾರಿ ಸುದ್ದಿಯಲ್ಲಿದ್ದಾರೆ. ಇದೇ 7ರಂದು ಇವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಆ ದಿನದಿಂದ ಇಂದಿನವರೆಗೂ ಇವರು ಹೋದಲ್ಲಿ, ಬಂದಲ್ಲಿ ಎಲ್ಲವೂ ಸುದ್ದಿಗಳೇ. ಮಾಧ್ಯಮದವರ ಕಣ್ಣು ಇವರ ಮೇಲೆಯೇ ನೆಟ್ಟಿದೆ. ಅದೇ ಇನ್ನೊಂದೆಡೆ,  ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಮದುವೆ ಆದಾಗಿನಿಂದಲೂ  ತಮ್ಮ ಮದುವೆಯ ಸಂಭ್ರಮದ ಕ್ಷಣಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಳ್ಳುತ್ತಲೇ ಇದ್ದಾರೆ. ಅದರಲ್ಲಿಯೂ  ಕಿಯಾರಾ ಜಾಲತಾಣದಲ್ಲಿ ಮದುವೆಯಾದ ಮೇಲೆ ಬಹಳ ಆ್ಯಕ್ಟೀವ್​ ಆಗಿದ್ದಾರೆ. ಇಂದು ಅವರು  ಮ್ಯೂಸಿಕಲ್ ನೈಟ್​ನ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.  ಆ ರಾತ್ರಿ ತುಂಬಾ ವಿಶೇಷವಾಗಿತ್ತು ಎಂದು ನಟಿ ಬರೆದುಕೊಂಡಿದ್ದಾರೆ. ಈ ಫೋಟೋಗಳಲ್ಲಿ  ರಾಯಲ್ ಲುಕ್​ನಲ್ಲಿ ಕಿಯಾರಾ ಮಿಂಚುತ್ತಿದ್ದಾರೆ.

ಈ ಫೋಟೋ ನೋಡಿ ಜೋಡಿಯನ್ನು ಹಾಡಿ ಹೊಗಳಿದವರೇ ಈಗ ಕಿಯಾರಾ ವೇಷ ನೋಡಿ ಟ್ರೋಲ್​ (Troll)ಮಾಡುತ್ತಿದ್ದಾರೆ. ಇದಕ್ಕೆ ಕಾರಣ, ಈ ಜೋಡಿ ಹೊರಗೆ ಹೋಗುತ್ತಿದ್ದಾಗ ಕ್ಯಾಮೆರಾ ಕಣ್ಣಿಗೆ ಕಾಣಿಸಿದೆ. ಇಬ್ಬರೂ ಕ್ಯಾಶುಯಲ್ ಲುಕ್​ನಲ್ಲಿ ಕಾಣುತ್ತಿದ್ದಾರೆ. ಸಿದ್ಧಾರ್ಥ್ ತುಂಬಾ ಕೂಲ್ (Cool) ಆಗಿ ಕಾಣುತ್ತಿದ್ದರೆ, ಕಿಯಾರಾ ಕೂಡ ಸುಂದರವಾಗಿ ಕಾಣುತ್ತಿದ್ದಾರೆ. ಈ ಫೋಟೋ ಜಾಲತಾಣದಲ್ಲಿ ಬಹಳ ವೈರಲ್​ ಆಗುತ್ತಿದ್ದಂತೆಯೇ ಸಂಪ್ರದಾಯಸ್ಥರು ಕಿಯಾರಾ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಈಕೆಗೆ ಮಾನ ಮರ್ಯಾದೆ ಇದೆಯೇ ಎಂದು ಪ್ರಶ್ನಿಸುತ್ತಿದ್ದಾರೆ.

Pathaan: ಸುಳ್ಳು ಹೇಳ್ತೀರಾ? ಕೇಸ್​ ದಾಖಲಿಸ್ತೇನೆ ಎಂದು ಶಾರುಖ್​ ಖಾನ್​ಗೆ ಬೆದರಿಕೆ!

ಅಷ್ಟಕ್ಕೂ ಕಿಯಾರಾ ಟ್ರೋಲ್​ ಆಗದ ಕಾರಣ  ಆಕೆ ಧರಿಸಿರುವ ಡ್ರೆಸ್​ (Dress) ಅಲ್ಲ. ಬದಲಿಗೆ ಮದುವೆಯಾಗಿ ಇನ್ನೂ ಒಂದು ತಿಂಗಳಾಗಿಲ್ಲ. ಇದಾಗಲೇ ಆಕೆಯ ಕುತ್ತಿಗೆಯಲ್ಲಿ ಮಂಗಳಸೂತ್ರವೂ (Mangalasutra) ನಾಪತ್ತೆ, ಹಣೆಯಲ್ಲಿ ಸಿಂಧೂರವೂ ನಾಪತ್ತೆ ಎಂದು!  ನೀವು ಏನಾದರೂ ಮಾಡಿಕೊಳ್ಳಿ. ಆದರೆ ಭಾರತೀಯ ವಿವಾಹಿತೆಯ ಸಂಪ್ರದಾಯವನ್ನು ಕಾಪಾಡಿಕೊಳ್ಳಿ. ಈ ರೀತಿ ಅಸಭ್ಯವಾಗಿ ಅದೂ ನವವಿವಾಹಿತೆಯಾಗಿ ನಡೆದುಕೊಳ್ಳುವುದು ಸರಿಯಲ್ಲ ಎಂದಿದ್ದಾರೆ. ಹಿಂದೂ ಸಂಪ್ರದಾಯದ ಪ್ರಕಾರ ತಾಳಿ ಮತ್ತು ಸಿಂಧೂರವನ್ನು (Sindhur,) ತೆಗೆದು ಹಾಕುವುದು ಯಾವಾಗ ಎಂದು ಆಕ್ರೋಶದಿಂದ ಕೆಲವು ಕಮೆಂಟಿಗರು ಕಮೆಂಟ್​ ಮಾಡಿದ್ದು, ಮದುಮಗಳಿಗೆ ಬುದ್ಧಿ ಹೇಳಿದ್ದಾರೆ. 

ಮದುವೆ ಎನ್ನುವುದು ಏನು ಜೋಕ್​ ಎಂದುಕೊಂಡ್ರಾ ಇಲ್ಲವೇ ಇದು ಫಿಲ್ಮ್​ ಶೂಟಿಂಗ್​ (Film Shooting) ಎಂದುಕೊಂಡ್ರಾ? ಭಾರತೀಯ ಸಂಪ್ರದಾಯ ಗೊತ್ತಿಲ್ಲದಿದ್ದರೆ ಬಿಟ್ಹಾಕಿ.ಕೊನೆಯ ಪಕ್ಷ ಮೊನ್ನೆ ಮೊನ್ನೆ ಕಟ್ಟಿರೋ ತಾಳಿಗಾದ್ರೂ ಮರ್ಯಾದೆ ಬೇಡ್ವಾ ಎಂದು ಕೆಲವರು ಭಾರಿ ತರಾಟೆಗೆ ತೆಗೆದುಕೊಂಡಿದ್ದಾರೆ. ಪಕ್ಕದಲ್ಲಿಯೇ ಗಂಡ ಇರುವಾಗ ಮಂಗಳಸೂತ್ರ ಕಿತ್ತು ಬೀಸಾಕಿದ್ದೀರಿ ಎಂದರೆ ಏನನ್ನಬೇಕು ನಿಮಗೆ ಎಂದು ಇನ್ನೊಬ್ಬರು ಗರಂ ಆಗಿದ್ದಾರೆ. ಇದೇ ವೇಳೆ ಕಿಯಾರಾ ಅಭಿಮಾನಿಗಳು ಕಿಯಾರಾ ಪರ ವಹಿಸಿಕೊಂಡಿದ್ದಾರೆ. ಇಂದಿನ ಬಹುತೇಕ ಹೆಣ್ಣುಮಕ್ಕಳು ಇದನ್ನೆಲ್ಲಾ ಪಾಲಿಸುವುದಿಲ್ಲ. ಗಂಡ ಬಳಿಯೇ  ಇರುವಾಗ ಇಂಥದ್ದೆಲ್ಲಾ ಯಾಕೆ? ಇವೆಲ್ಲಾ ಓಲ್ಡ್​ ಫ್ಯಾಷನ್​ ಎಂದಿದ್ದಾರೆ. ನೀವು ಕಿಯಾರಾ ಅವರನ್ನು ಮೂದಲಿಸುವ ಮೊದಲು ನಿಮ್ಮ ಮನೆಯಲ್ಲಿ ಈಗಿನ ಕಾಲದ ಹೆಣ್ಣುಮಕ್ಕಳಿದ್ದರೆ ಅವರ ಬಗ್ಗೆ ಗಮನ ಹರಿಸಿ. ಅವರೂ ಇದೇ ರೀತಿ ಮಾಡುತ್ತಾರೆ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಇನ್ನೋರ್ವ ಬಳಕೆದಾರ, ಎಲ್ಲರಿಗೂ ಈಗ ಚಿತ್ರ ನಟ-ನಟಿಯರೇ (Acotrs) ಆದರ್ಶವಾಗಿದ್ದಾರೆ. ಇಂಥ ದೃಶ್ಯಗಳನ್ನು ನೋಡಿದಾಗ ಅವರಿಗೂ ತಾವೇಕೆ ಸಂಪ್ರದಾಯ ಪಾಲನೆ  ಮಾಡಬೇಕು ಎಂದು ಎನಿಸುತ್ತದೆ. ಇಂಥ ಕೆಟ್ಟ ಆದರ್ಶಗಳನ್ನೇ ಇಟ್ಟುಕೊಂಡು ಎಲ್ಲರ ಜೀವನವೂ ಹಾಳಾಗುತ್ತದೆ ಎಂದಿದ್ದಾರೆ. 
ಅಮಿತಾಭ್​ ಪ್ರೀತಿ ತೊರೆದ ಮೇಲೆ... ನೋವಿನ ಸರಮಾಲೆ ತೆರೆದಿಟ್ಟ ನಟಿ ರೇಖಾ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮಾಧುರಿಗೆ 'ನಿನ್ನನ್ನು ತಾಯಿಯಾಗಿ ನೋಡುತ್ತೇನೆ' ಎಂದಿದ್ದ ಎಂಎಫ್ ಹುಸೇನ್; ಆದ್ರೆ ಮುಂದೆ ಆಗಿದ್ದೇನು?
ಮದುವೆ ಮುರಿದುಬಿದ್ದ ಬಳಿಕ ಸ್ಮೃತಿ ಮಂಧಾನ-ಪಲಾಶ್ ಲೈಫ್‌ ಸ್ಟೈಲ್‌ನಲ್ಲಿ ಏನೆಲ್ಲಾ ಆಗೋಯ್ತು ನೋಡಿ...!