National Crush: ಈ ಅಜ್ಜಿಯ ಸದಾಕಾಲದ ಕ್ರಷ್​ ಶಾರುಖ್​ ಖಾನ್​ ಅಂತೆ!

Published : Feb 22, 2023, 05:39 PM IST
National Crush: ಈ ಅಜ್ಜಿಯ ಸದಾಕಾಲದ ಕ್ರಷ್​ ಶಾರುಖ್​ ಖಾನ್​ ಅಂತೆ!

ಸಾರಾಂಶ

ಪಠಾಣ್​ ಯಶಸ್ಸಿನ ನಂತರ ಶಾರುಖ್​ ಖಾನ್​ ಜನಪ್ರಿಯತೆ ಹೆಚ್ಚಿದೆ. ಇದೀಗ ವಯೋವೃದ್ಧೆಯೊಬ್ಬರು ತಮ್ಮ ಕ್ರಷ್​ ಶಾರುಖ್​ ಖಾನ್​ ಎಂದು ಹೇಳಿದ್ದು, ಅದೀಗ ವೈರಲ್​ ಆಗಿದೆ.  

ಈಗ ಎಲ್ಲೆಲ್ಲೂ ಶಾರುಖ್​ ಖಾನ್​ (Shah Rukh Khan) ಹವಾ. ಒಂದರ ಮೇಲೊಂದು ಚಿತ್ರ ಸೋತ ನಂತರ ನಾಲ್ಕು ವರ್ಷಗಳ ಸುದೀರ್ಘ ವಿರಾಮದ ಬಳಿಕ ಕಮ್​ ಬ್ಯಾಕ್​ ಆಗಿರೋ ಶಾರುಖ್​ ಖಾನ್​ ಭರ್ಜರಿ ಯಶಸ್ಸಿನತ್ತ ಮುನ್ನುಗ್ಗುತ್ತಿದ್ದಾರೆ. ಪಠಾಣ್​ (Pathaan) ಚಿತ್ರ ಬ್ಲಾಕ್​ಬಸ್ಟರ್​ ಆಗಿದ್ದು, ಮಕಾಡೆ ಮಲಗಿದ್ದ ಬಾಲಿವುಡ್​ (Bollywood) ಅನ್ನು ಎದ್ದು ನಿಲ್ಲಿಸಿದೆ. 250 ಕೋಟಿ ರೂಪಾಯಿಗಳಲ್ಲಿ ತಯಾರು ಮಾಡಲಾಗಿದ್ದ ಈ ಚಿತ್ರ ಸಾವಿರ ಕೋಟಿ ಗಡಿ ದಾಟಿ ಲಾಭ ಮಾಡಿದ್ದು ಇನ್ನೂ ಶರವೇಗದಲ್ಲಿ ಅಬ್ಬರಿಸುತ್ತಲೇ ಸಾಗಿದೆ.  ವಿದೇಶಗಳಲ್ಲಿಯೂ ಭರ್ಜರಿ ಯಶಸ್ಸು ಗಳಿಸುತ್ತಿರೋ ಈ ಚಿತ್ರದಿಂದ ಶಾರುಖ್​ ಅವರ ವರ್ಚಸ್ಸು ಹೆಚ್ಚಾಗುತ್ತಲಿದೆ. ಈಗ 57ನೇ ವಯಸ್ಸಿನಲ್ಲಿಯೂ 27 ವರ್ಷದ ಯುವಕರನ್ನು (Youth) ನಾಚಿಸುವಂತೆ ಸಿಕ್ಸ್​ ಪ್ಯಾಕ್​ನಿಂದ ಪಠಾಣ್​ನಲ್ಲಿ ಮಿಂಚಿರೋ ಶಾರುಖ್​ ಈಗೊಂದು ರೀತಿಯಲ್ಲಿ ನ್ಯಾಷನಲ್​ ಕ್ರಷ್​ (National Crush) ಆಗುತ್ತಿದ್ದಾರೆ.

ಇವರ ಮೇಲೆ ಯುವತಿಯರು ಬಹಳ ವರ್ಷಗಳಿಂದಲೂ ಕಣ್ಣು ಹಾಕುತ್ತಲೇ ಇದ್ದಾರೆ. ಇದೀಗ ಪಠಾಣ್​ ಸಕ್ಸಸ್​ ಆದ ಬಳಿಕವಂತೂ ಶಾರುಖ್​ ಅವರ ವಯಸ್ಸನ್ನು ಪರಿಗಣನೆಗೆ ತೆಗೆದುಕೊಳ್ಳದೇ ಹದಿಹರೆಯದ ಯುವತಿಯರೂ ಶಾರುಖ್​ ತಮ್ಮ ಕ್ರಷ್​ ಎನ್ನುತ್ತಿದ್ದಾರೆ. ಇದು ಒಂದೆಡೆಯಾದರೆ ಈಗ ವೈರಲ್​ (Viral) ಆಗಿರೋದು ಒಂದು ಕುತೂಹಲದ ವಿಡಿಯೋ. ಅದರಲ್ಲಿ ವೃದ್ಧೆಯೊಬ್ಬರು ಶಾರುಖ್​ ಖಾನ್​ ತಮ್ಮ ಕ್ರಷ್​ ಎಂದು ಹೇಳಿಕೊಂಡಿದ್ದಾರೆ!  ಸಿದ್ಧಾರ್ಥ್ ಅಮಿತ್ ಭಾವಸರ್ (Siddharth Amith Bhavasar0 ಅವರ ಅಜ್ಜಿ ಹೇಳಿರುವ ಮಾತು ಇದಾಗಿದ್ದು, ಅದನ್ನು ಅವರು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

ಪಾರ್ಟಿ ಡ್ಯಾನ್ಸ್‌ಗೆ ಶಾರುಖ್ ಪಡೆಯೋ ಸಂಭಾವನೆ ಇದು!

​ ಭಾವಸರ್​ ಅವರು  ತಮ್ಮ ಅಜ್ಜಿಯ ವಿಡಿಯೋ ಶೇರ್​ ಮಾಡಿದ್ದಾರೆ. ಈ ವಿಡಿಯೋದಲ್ಲಿ ಅವರ  ಅಜ್ಜಿಯು  ಬಿಸಿ ಚಹಾವನ್ನು ಸೇವಿಸುತ್ತಿರುವುದನ್ನು ನೋಡಬಹುದು. ಈ ಸಂದರ್ಭದಲ್ಲಿ  ತಮ್ಮ ಮೊಮ್ಮಗ ಭಾವಸರ್‌ ಅವರೊಂದಿಗೆ  ಸಂಭಾಷಣೆಯಲ್ಲಿ ತೊಡಗಿದ್ದಾರೆ. ಗುಜರಾತಿ ಭಾಷೆಯಲ್ಲಿ ಇವರು ಸಂಭಾಷಣೆ ನಡೆಸುತ್ತಿದ್ದಾರೆ. ಭಾವಸರ್​ ಅವರು ತಮ್ಮ ಅಜ್ಜಿಗೆ ನಿಮ್ಮ ಕ್ರಷ್​ (Crush) ಯಾರು ನೀವು ಶಾಶ್ವತವಾಗಿ   ಯಾರನ್ನು ಪ್ರೀತಿಸುತ್ತಿದ್ದೀರಿ (Love) ಎಂದು ಕೇಳಿದ್ದಾರೆ.  ಅದಕ್ಕೆ  ಆ ಅಜ್ಜಿಯು  ಗುಜರಾತಿ ಭಾಷೆಯಲ್ಲಿ ತಮ್ಮ ಕಾಲದ ನಟ  ಧರ್ಮೇಂದ್ರ ಅವರ ಹೆಸರು ಹೇಳಿದ್ದರೆ ಮತ್ತೊಂದು ಹೆಸರು ಶಾರುಖ್​ ಎಂದಿದ್ದಾರೆ.  ಶಾರುಖ್ ಖಾನ್ ತನ್ನ ಶಾಶ್ವತ ಕ್ರಶ್‌ ಎಂದು ಹೇಳಿದ್ದು ಇದೀಗ ವೈರಲ್​ (Viral) ಆಗಿದೆ. ಭಾವಸರ್​ ಅವರು ರಣವೀರ್​ ಸಿಂಗ್​, ರಣವೀರ್​ ಕಪೂರ್​ ಅವರೆಲ್ಲರೂ ಯಂಗ್​ ಆಗಿದ್ದು, ಚೆನ್ನಾಗಿದ್ದಾರಲ್ಲ ಎಂದಿದ್ದರೆ ಅಜ್ಜಿ ಮಾತ್ರ ಇಲ್ಲವೇ ಇಲ್ಲ ನನ್ನ ಕ್ರಷ್​ ಶಾರುಖ್​ ಖಾನ್​ ಎಂದಿದ್ದಾರೆ. 

ಖಳನಾಯಕನಾಗಿಯೂ ಸೈ ಎನಿಸಿಕೊಂಡ ಶಾರುಖ್ ಖಾನ್
 
ಭಾವಸರ್​ ಅವರು ಟ್ವಿಟ್ಟರ್‌ನಲ್ಲಿ (Twitter) ವೀಡಿಯೊವನ್ನು (Vedio) ಪೋಸ್ಟ್ ಮಾಡಿದ್ದಾರೆ. ಶಾರುಖ್​ ಖಾನ್​ ಅವರ ಟ್ವಿಟರ್​ಗೆ ತಮ್ಮ ಅಜ್ಜಿಯ ಮಾತನ್ನು ಟ್ಯಾಗ್​ (Tag) ಮಾಡಿರುವ ಅವರು ನಮ್ಮ ಅಜ್ಜಿಯ ಕ್ರಷ್​ ನೀವು ಎಂದು ಹೇಳಿದ್ದಾರೆ. ಈ ವಿಡಿಯೋಗೆ ನೂರಾರು ಕಮೆಂಟ್​ಗಳು ಬಂದಿವೆ. ಚಿಕ್ಕ ಮಕ್ಕಳಿಂದ ಹಿಡಿದು ಅಜ್ಜಿಯವರೆಗೂ ಶಾರುಖ್​ ಈಗ ಕ್ರಷ್​ ಆಗಿದ್ದಾರೆ. ಶಾರುಖ್​ ಖಾನ್​ ಅವರನ್ನು ನ್ಯಾಷನಲ್​ ಕ್ರಷ್​ ಎಂದು ಹೇಳುವ ದಿನ ಬಂದಿದೆ ಎಂದು ಹಲವರು ಬರೆದುಕೊಂಡಿದ್ದಾರೆ. ಅಜ್ಜಿಯ (Grand Mother) ಸೌಂದರ್ಯವನ್ನೂ ಹಲವರು ಹೊಗಳಿದ್ದು, ಇವರು  ಮೋಹನಾಂಗಿ ಎಂದು ಬರೆದಿದ್ದರೆ, ಇನ್ನು ಕೆಲವರು  ಹೃದಯದ ಎಮೋಜಿಗಳೊಂದಿಗೆ ಕಮೆಂಟ್ (Comment) ಮಾಡಿದ್ದಾರೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!