ಶ್ರೀದೇವಿ ದ್ವಿತೀಯ ಪುತ್ರಿ ಖುಷಿ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದು, 10 ವರ್ಷದ ಹಿಂದೆ ಅಮ್ಮ ಶ್ರೀದೇವಿ ಧರಿಸಿದ ಡ್ರೆಸ್ನಲ್ಲಿ ಕಾಣಿಸಿಕೊಂಡಿದ್ದಾರೆ.
ನಟಿ ಶ್ರೀದೇವಿ ಮತ್ತು ಬೋನಿ ಕಪೂರ್ ಅವರ ಪುತ್ರಿ ಜಾಹ್ನವಿ ಕಪೂರ್ ಇದಾಗಲೇ ಬಾಲಿವುಡ್ನಲ್ಲಿ ಸಕತ್ ಸದ್ದು ಮಾಡುತ್ತಿದ್ದಾರೆ. ಸಿನಿಮಾಗಳಿಗಿಂತಲೂ ಹೆಚ್ಚಾಗಿ ವೇಷಭೂಷಣ ಹಾಗೂ ಡೇಟಿಂಗ್ ಗಾಸಿಪ್ಗಳಿಂದ ತುಂಬಾ ಹಲ್ಚಲ್ ಸೃಷ್ಟಿಸುತ್ತಿದ್ದಾರೆ. ಇದೀಗ ಎರಡನೆಯ ಪುತ್ರಿ ಅಂದರೆ ಜಾಹ್ನವಿ ಅವರ ಸಹೋದರಿ ಖುಷಿ ಕಪೂರ್ (Khushi Kapoor) ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಜೋಯಾ ಅಖ್ತರ್ ಅವರ ದಿ ಆರ್ಚೀಸ್ ಚಿತ್ರದ ಮೂಲಕ ಖುಷಿ ಕಪೂರ್ ನಟನಾ ಲೋಕಕ್ಕೆ ಕಾಲಿಟ್ಟಿದ್ದಾರೆ. ಈ ಚಿತ್ರವು ನಾಳೆ ಅಂದರೆ ಡಿಸೆಂಬರ್ 7ರಂದು ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಾಗಲಿದ್ದು, ಖುಷಿ ಜೊತೆಗೆ, ಶಾರುಖ್ ಖಾನ್ ಮಗಳು ಸುಹಾನಾ ಖಾನ್ ಮತ್ತು ಅಮಿತಾಭ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದ ಅವರಂತಹ ಹೊಸಬರನ್ನು ಇದು ಪರಿಚಯಿಸಿದೆ.
ದಿ ಆರ್ಚೀಸ್ ಚಿತ್ರದ ಪ್ರೀಮಿಯರ್ ಷೋಗೆ ಬಂದಿದ್ದ ಖುಷಿ ಕಪೂರ್ ಸಕತ್ ಸದ್ದು ಮಾಡುತ್ತಿದ್ದಾರೆ. ಇದರಕ್ಕೆ ಕಾರಣ, ಸುಮಾರು 10 ವರ್ಷಗಳ ಹಿಂದೆ ತಾಯಿ ಶ್ರೀದೇವಿ ಅವರು ತೊಟ್ಟಿದ್ದ ಡ್ರೆಸ್ ಅನ್ನೇ ಖುಷಿ ತೊಟ್ಟುಕೊಂಡು ಬಂದಿದ್ದರು. ಈ ಈವೆಂಟ್ಗೆ ಬಾಲಿವುಡ್ ನಟ-ನಟಿಯರು ಬಂದಿದ್ದರು. ಖುಷಿ ಕಪೂರ್ ಜೊತೆಗೆ ಅವರ ಇಡೀ ಕುಟುಂಬ ಮತ್ತು ಚಿತ್ರತಂಡವಿತ್ತು. ಅಮ್ಮನ ಬಟ್ಟೆ ಧರಿಸುವ ಮೂಲಕ ಖುಷಿ ಅವರಿಗೆ ಗೌರವ ಸಮರ್ಪಿಸಿದರು. 10 ವರ್ಷಗಳ ಹಿಂದೆ ಐಐಎಫ್ಎ ಪ್ರಶಸ್ತಿ ಸಮಾರಂಭದಲ್ಲಿ ಶ್ರೀದೇವಿ ಈ ಡ್ರೆಸ್ ತೊಟ್ಟಿದ್ದರು. 10 ವರ್ಷಗಳ ನಂತರ ಖುಷಿ ಕಪೂರ್ ಅದೇ ಡ್ರೆಸ್ ಅನ್ನು ತನ್ನ ಮೊದಲ ಸಿನಿಮಾ ಪ್ರೀಮಿಯರ್ ಷೋಗಾಗಿ ತೊಟ್ಟು ಬಂದಿದ್ದು, ಶ್ರೀದೇವಿ ಅವರನ್ನು ನೆನಪಿಸಿದರು.
ಅಮಿತಾಭ್ ಮೊಮ್ಮಗನ ಜೊತೆ ಡೇಟಿಂಗ್ ಮಾಡ್ತಿರೋ ಶಾರುಖ್ ಪುತ್ರಿ ಕೆಬಿಸಿಯಲ್ಲಿ! ಸುಹಾನಾಗೆ ಬಿಗ್ಬಿ ಕೇಳಿದ್ದೇನು?
ಅಷ್ಟೇ ಅಲ್ಲದೇ, ಶ್ರೀದೇವಿಯವ ಡೈಮೆಂಡ್ ನೆಕ್ ಪೀಸ್ ಕೂಡ ಖುಷಿ ಧರಿಸಿದ್ದರು. ಯಾವುದೇ ಫ್ಯಾಷನ್ ಟಚ್ ನೀಡದೆ ಅಮ್ಮನ ಲುಕ್ ಹೇಗಿತ್ತೋ ಅದೇ ರೀತಿ ರೆಡಿ ಆಗಿದ್ದರು. ಈ ಹಿಂದೆ ಮಿಲ್ಲಿ ಚಿತ್ರದ ಪ್ರಮೋಷನ್ ವೇಳೆ ಜಾಹ್ನವಿ ಕಪೂರ್ ಕೂಡ ತಾಯಿ ಶ್ರೀದೇವಿಯ ಸೀರೆಯನ್ನು ಉಟ್ಟಿದ್ದರು. ಜಾಹ್ನವಿ ಕಪೂರ್ ಮತ್ತು ಖುಷಿ ಅವರ ವಿಡಿಯೋ ಸಕತ್ ವೈರಲ್ ಆಗುತ್ತಿದೆ.
ಈ ಹಿಂದೆ ಜಾಹ್ನವಿ ಕಪೂರ್ ಖುಷಿ 'ಆರ್ಚೀಸ್' ಚಿತ್ರೀಕರಣದ ಮೊದಲ ದಿನದಂದು ಆಕೆಯ ಜೊತೆ ಇರಲು ಸಾಧ್ಯವಾಗಲಿಲ್ಲ ಎನ್ನುವ ಕಾರಣಕ್ಕೆ ನೊಂದು ವೃತ್ತಿಯನ್ನೇ ಬಿಡುವ ಬಗ್ಗೆ ಯೋಚನೆ ಮಾಡಿದ್ದಂತೆ. ಖುಷಿಯ ಚಿತ್ರೀಕರಣದಲ್ಲಿ ಅವಳೊಂದಿಗೆ ಹೋಗಲು ಸಾಧ್ಯವಾಗಲಿಲ್ಲ. ಅದು ತುಂಬಾ ನೋವು ಉಂಟು ಮಾಡಿತು. ಅದೇ ಕಾರಣಕ್ಕೆ ವೃತ್ತಿಯನ್ನೇ ಬಿಡುವ ಬಗ್ಗೆ ಯೋಚಿಸಿದ್ದೆ ಎಂದು ಜಾಹ್ನವಿ ಸಂದರ್ಶನವೊಂದರಲ್ಲಿ ಹೇಳಿದ್ದರು. ಆಗ ಜಾಹ್ನವಿ ಅವರಿಗೆ, ತಾವು ನಟನೆಯನ್ನು ನಿಲ್ಲಿಸಿ, 'ಬೇಬಿಗೆ ಜ್ಯೂಸ್ ತನ್ನಿ' ಎಂದು ಹೇಳುವ ಆನ್-ಸೆಟ್ ಅಮ್ಮಂದಿರಲ್ಲಿ ಒಬ್ಬಳಾಗಬೇಕು ಎಂದು ಅನಿಸಿತಂತೆ.
ಅದಿತಿ ಪ್ರಭುದೇವ ಮನೆ ಮುದ್ದು ನಾಯಿ ಚಾಕಲೇಟ್ಗೆ ಬಾಯ್ಫ್ರೆಂಡ್ ಸಿಕ್ಕಾಗ ಏನಾಯ್ತು ನೋಡಿ...