ಕೆಜಿಎಫ್-2 ಸಿನಿಮಾದ ಯಶಸ್ಸಿನ ಬೆನ್ನಲ್ಲೇ ಸಂಜಯ್ ದತ್ ಮತ್ತೊಂದು ಸೌತ್ ಸ್ಟಾರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಗುಲ್ಲಾಗಿದೆ. ಸದ್ಯ ಅಧೀರನಾಗಿ ಅಬ್ಬರಿಸುತ್ತಿರುವ ಸಂಜಯ್ ದತ್ ಇದೀಗ ತಮಿಳಿನ ಸ್ಟಾರ್ ನಟ ದಳಪತಿ ವಿಜಯ್ ಸಿನಿಮಾದಲ್ಲಿ ವಿಲನ್ ಆಗಿ ಅಬ್ಬರಿಸಲಿದ್ದಾರೆ ಎನ್ನುವ ಮಾತು ವೈರಲ್ ಆಗಿದೆ.
ದಕ್ಷಿಣ ಭಾರತದ ಸಿನಿಮಾಗಳು ಬಾಲಿವುಡ್ ನಲ್ಲಿ ಸೂಪರ್ ಸಕ್ಸಸ್ ಆಗುತ್ತಿವೆ. ಇತ್ತೀಚಿನ ದಿನಗಳಲ್ಲಿ ಅನೇಕ ಸೌತ್ ಸಿನಿಮಾಗಳು ಬಾಲಿವುಡ್ ಉತ್ತಮ ಕಮಾಯಿ ಮಾಡುತ್ತಿವೆ. ಬಾಕ್ಸ್ ಆಫೀಸ್ ನಲ್ಲಿ ದೂಳ್ ಎಬ್ಬಿಸುವ ಮೂಲಕ ಬಾಲಿವುಡ್ ಮಂದಿಯನ್ನು ಬೆಚ್ಚಿಬೀಳಿಸಿವೆ. ಸೌತ್ ಸಿನಿಮಾಗಳ ಸಕ್ಸಸ್ ಹಿಂದಿಯ ಮಂದಿಯನ್ನು ನಿದ್ದೆ ಗೆಡಿಸಿದೆ. ಈ ನಡುವೆ ಸೌತ್ ಮತ್ತು ನಾರ್ತ್ ಎನ್ನುವ ಚರ್ಚೆ ಪ್ರಾರಂಭವಾಗಿದೆ. ಆದರೂ ಅನೇಕ ಉತ್ತರ ಭಾರತದ ಸ್ಟಾರ್ಸ್ ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಸಲ್ಮಾನ್(Salman Khan) ಖಾನ್ ತೆಲುಗು ಸಿನಿಮಾದಲ್ಲೂ ನಟಿಸುವ ಮೂಲಕ ಮೊದಲ ಬಾರಿಗೆ ದಕ್ಷಿಣ ಭಾರತದ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಅಂದಹಾಗೆ ಬ್ಲಾಕ್ ಬಸ್ಟರ್ ಕೆಜಿಎಫ್-2(KGF 2) ಮೂಲಕ ಬಾಲಿವುಡ್ ಸ್ಟಾರ್ ಸಂಜಯ್ ದತ್(Sanjay Dutt) ಸೌತ್ ಸಿನಿರಂಗದ ಕಡೆ ಮುಖ ಮಾಡಿದರು.
ಮೊದಲ ಸಿನಿಮಾವೇ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡರು ದತ್. ಜೊತೆಗೆ ಅಭಿಮಾನಿಗಳ ಅಪಾರ ಪ್ರೀತಿಯನ್ನು ಗಳಿಸಿದರು. ಬಾಲಿವುಡ್ ಗೆ ಮಾತ್ರಸೀಮಿತವಾಗಿದ್ದ ದತ್ ದಕ್ಷಿಣದಲ್ಲೂ ತನ್ನ ಮಾರುಕಟ್ಟೆಯನ್ನು ವಿಸ್ತರಿಕೊಂಡರು. ಮೊದಲ ಸಿನಿಮಾದ ಯಶಸ್ಸಿನ ಬೆನ್ನಲ್ಲೇ ಸಂಜಯ್ ದತ್ ಮತ್ತೊಂದು ಸೌತ್ ಸ್ಟಾರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಗುಲ್ಲಾಗಿದೆ. ಸದ್ಯ ಅಧೀರನಾಗಿ ಅಬ್ಬರಿಸುತ್ತಿರುವ ಸಂಜಯ್ ದತ್ ಇದೀಗ ತಮಿಳಿನ ಸ್ಟಾರ್ ನಟ ದಳಪತಿ ವಿಜಯ್ ಸಿನಿಮಾದಲ್ಲಿ ವಿಲನ್ ಆಗಿ ಅಬ್ಬರಿಸಲಿದ್ದಾರೆ ಎನ್ನುವ ಮಾತು ವೈರಲ್ ಆಗಿದೆ.
KGF 2 ನನ್ನ ಸಾಮರ್ಥ್ಯವನ್ನು ಮತ್ತೆ ನೆನಪಿಸಿದ ಸಿನಿಮಾ; ಸಂಜಯ್ ದತ್ ಭಾವುಕ ಮಾತು
ದಳಪತಿ ವಿಜಯ್ ಸದ್ಯ ದಳಪತಿ 67(ತಾತ್ಕಾಲಿಕ ಹೆಸರು) ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾಗೆ ಲೋಕೇಶ್ ಕನಗರಾಜ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇಬ್ಬರ ಕಾಂಬಿನೇಷನ್ ನಲ್ಲಿ ಬರ್ತಿರುವ ಸಿನಿಮಾಗೆ ಬಾಲಿವುಡ್ ಮುನ್ನಾಭಾಯ್ ವಿಲನ್ ಆಗಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಸಿನಿಮಾತಂಡ ಸಂಜಯ್ ಜೊತೆ ಮಾತುಕತೆ ನಡೆಸಿದ್ದು, ಕಥೆ ಕೇಳಿ ದತ್ ಇಂಪ್ರೆಸ್ ಆಗಿದ್ದಾರಂತೆ. ಸದ್ಯ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಡುವುದೊಂದೆ ಬಾಕಿ ಇದೆ ಎನ್ನುವ ಮಾತು ಕಾಲಿವುಡ್ ನಲ್ಲಿ ಕೇಳಿಬರುತ್ತಿದೆ. ಈ ಮೂಲಕ ಸಂಜಯ್ ದತ್ ತಮಿಳಿನ ಚೊಚ್ಚಲ ಚಿತ್ರಕ್ಕೆ ಸಜ್ಜಾಗಿದ್ದಾರೆ.
KGF 2ಗೆ ಅಲ್ಲು ಅರ್ಜುನ್ ಫಿದಾ; ಯಶ್, ಪ್ರಶಾಂತ್ ನೀಲ್ ಬಗ್ಗೆ ಹೇಳಿದ್ದೇನು?
ಅಂದಹಾಗೆ ನಿರ್ದೇಶಕ ಲೋಕೇಶ್ ಕನಗರಾಜ್ ಮತ್ತು ವಿಜಯ್ ಮೊದಲು ಮಾಸ್ಟರ್ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. 2021ರಲ್ಲಿ ತೆರೆಗೆ ಬಂದಿದ್ದ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಬಾಕ್ಸ್ ಆಫೀಸ್ ನಲ್ಲೂ ಉತ್ತಮ ಕಮಾಯಿ ಮಾಡಿತ್ತು. ಇದೀಗ ಮತ್ತೆ ದಳಪತಿ ಜೊತೆ ಕೈ ಜೋಡಿಸಿದ್ದಾರೆ ಕನಗರಾಜ್. ಇಬ್ಬರ ಕಾಂಬಿನೇಷನ್ ಸಿನಿಮಾಗೆ ಬಾಲಿವುಡ್ ಮುನ್ನಾಭಾಯ್ ಅಧೀರ ಸಂಜಯ್ ದತ್ ಎಂಟ್ರಿ ಮತ್ತಷ್ಟು ಕುತೂಹಲ ಮೂಡಿಸಿದೆ. ಮಾಸ್ಟರ್ ಸಿನಿಮಾದಲ್ಲಿ ವಿಜಯ್ ಗೆ ವಿಲನ್ ಆಗಿ ವಿಜಯ್ ಸೇತುಪತಿ ನಟಿಸಿದ್ದರು. ಇಬ್ಬರ ಕಂಬಿನೇಷನ್ ಅಭಿಮಾನಿಗಳಿಗೆ ದೊಡ್ಡ ಟ್ರೀಟ್ ಸಿಕ್ಕಿತ್ತು. ಇದೀಗ ವಿಜಯ್ ಮತ್ತು ಅಧೀರ ಸಂಜಯ್ ಅವರನ್ನು ಒಟ್ಟಿಗೆ ಕರೆತರುವ ಮೂಲಕ ಮತ್ತಷ್ಟು ನಿರೀಕ್ಷೆ ಹೆಚ್ಚಿಸುತ್ತಿದ್ದಾರೆ.