ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಕಾಂಬಿನೇಷನ್‌ನಲ್ಲಿ ಬರ್ತಿರುವ ಸಲಾರ್ ಸಿನಿಮಾದಲ್ಲಿ ಕೆಜಿಎಫ್ ಸ್ಟಾರ್ ಯಶ್ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.
ಸಲಾರ್, ಕೆಜಿಎಫ್ ಬಳಿಕ ಭಾರಿ ನಿರೀಕ್ಷೆ ಮೂಡಿಸಿರುವ ಸೌತ್ ಸಿನಿಮಾ. ಪ್ರಶಾಂತ್ ನೀಲ್ ಮತ್ತು ಹೊಂಬಾಳೆ ಕಾಂಬಿನೇಷನ್‌ನಲ್ಲಿ ಬರ್ತಿರುವ ಸಲಾರ್ ಈಗಾಗಲೇ ನಿರೀಕ್ಷೆಯ ಗೋಪುರ ಸೃಷ್ಟಿಸಿದೆ. ಪ್ರಭಾಸ್ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಈ ಸಿನಿಮಾದ ಅಪ್‌ಡೇಟ್‌ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ರಿಲೀಸ್ ಆಗಿರುವ ಕೇವಲ ಒಂದೇ ಒಂದು ಪೋಸ್ಟರ್ ಚಿತ್ರದ ಮೇಲಿನ ಕುತೂಹಲ ಹೆಚ್ಚಿಸಿದೆ. ಕೆಜಿಎಫ್2 ಸಿನಿಮಾ ನೋಡಿದ ಬಳಿಕ ಅನೇಕರು ಸಲಾರ್ ಸಿನಿಮಾಗೆ ಹೋಲಿಸಿ ಎರಡು ಸಸಿನಿಮಾಗೆ ಲಿಂಕ್ ಇದೆ ಎಂದು ಮಾತನಾಡುತ್ತಿದ್ದಾರೆ. ಸಲಾರ್ ಬಗ್ಗೆ ಅನೇಕ ಸುದ್ದಿಗಳು ಕೇಳಿ ಬರುತ್ತಿದೆ. ಇದೀಗ ಮತ್ತೊಂದು ಭರ್ಜರಿ ಸುದ್ದಿ ಹೊರಬಿದ್ದಿದೆ. ಸಲಾರ್ ಸಿನಿಮಾದಲ್ಲಿ ಕೆಜಿಎಫ್ ಸ್ಟಾರ್ ಯಶ್ ಕೂಡ ನಟಿಸುತ್ತಿದ್ದಾರೆ ಎನ್ನುವ ಮಾತು ವೈರಲ್ ಆಗಿದೆ.
ಕೆಜಿಎಫ್ ಸ್ಟಾರ್ ಯಶ್ ಸಲಾರ್ ಸಿನಿಮಾದ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ಗುಲ್ಲಾಗಿದೆ. ಕೆಜಿಎಫ್ -2 ಬಳಿಕ ಯಶ್ ಸಾವ ಸಿನಿಮಾನೂ ಅನೌನ್ಸ್ ಮಾಡಿಲ್ಲ. ಯಶ್ ಮುಂದಿನ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ನಡುವೆ ಸಲಾರ್ ಸಿನಿಮಾದ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನುವ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ನಿಜಕ್ಕೂ ಯಶ್ ಸಲಾರ್ ನಲ್ಲಿ ಕಾಣಿಸಿಕೊಳ್ಳುತ್ತಾರಾ ಎನ್ನುವ ಬಗ್ಗೆ ಸಿನಿಮಾತಂಡ ಅಥವಾ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಸಲಾರ್ ನಲ್ಲಿ ಯಶ್ ಎನ್ನುವ ಸುದ್ದಿ ಎಲ್ಲಾ ಕಡೆ ಹರಿದಾಡುತ್ತಿದೆ. ಯಶ್ ಜೊತೆಗೆ ಪ್ರಶಾಂತ್ ನೀಲ್ ಚೊಚ್ಚಲ ಸಿನಿಮಾದ ನಾಯಕ ಶ್ರೀಮುರಳಿ ಹೆಸರು ಕೂಡ ಕೇಳಿ ಬರುತ್ತಿದೆ. ನಟ ಶ್ರೀಮುರಳಿ ಕೂಡ ಸಲಾರ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
Salaar; ಪ್ರಶಾಂತ್ ನೀಲ್-ಪ್ರಭಾಸ್ ಸಿನಿಮಾದ ಸೀಕ್ವೆಲ್ ಬರ್ತಿದಿಯಾ? ನಿರ್ಮಾಪಕರು ಹೇಳಿದ್ದೇನು?
ಸಲಾರ್ ಬಗ್ಗೆ ಅಪ್‌ಡೇಟ್‌ಗಾಗಿ ಅಭಿಮಾನಿಗಳು ಕಾತರರಾಗಿದ್ದಾರೆ. ಆದರೆ ಇನ್ನೂ ಯಾವುದೇ ಅಪ್ ಡೇಟ್ ಹೊರಬಿದ್ದಿಲ್ಲ, ಪುಟ್ಟ ಟೀಸರ್ ಆದರೂ ರಿಲೀಸ್ ಮಾಡಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಆದರೆ ಇನ್ನೂ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಈ ನಡುವೆ ಯಶ್ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿರುವುದು ಅಚ್ಚರಿ ಮೂಡಿಸುವ ಜೊತೆಗೆ ಸಲಾರ್ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.
ಪ್ರಭಾಸ್ 'ಸಲಾರ್' ಸಿನಿಮಾದಲ್ಲಿ ಬ್ಲಾಕ್‌ಬಸ್ಟರ್ ಹಿಟ್ 'ಕಾಂತಾರ' ನಟ; ಯಾರು?
ಸಲಾರ್ ಬಗ್ಗೆ
ಸಲಾರ್ ಸಿನಿಮಾದಲ್ಲಿ ಮಲಯಾಳಂನ ಖ್ಯಾತ ನಟ ಪೃಥ್ವಿರಾಜ್ ಕೂಡ ನಟಿಸುತ್ತಿದ್ದಾರೆ. ಆದರೆ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಬಗ್ಗೆ ಯಾವುದೇ ಮಾಹಿತಿ ರಿವೀಲ್ ಮಾಡಿಲ್ಲ. ಸೌತ್ ಸಿನಿಮಾರಂಗದ ಮತ್ತೋರ್ವ ಖ್ಯಾತ ನಟ ಜಗಪತಿ ಬಾಬು ಕೂಡ ನಟಿಸುತ್ತಿದ್ದಾರೆ. ನಾಯಕಿಯಾಗಿ ಶ್ರುತಿ ಹಾಸನ್ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.