
ನಟ ಪ್ರಭಾಸ್ ಈಗಾಗಲೇ ಹಲವು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿ ಇದ್ದಾರೆ. ನಟ ಶೀಘ್ರವೇ ಕನ್ನಡದ ಫೇಮಸ್ ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ಕೈ ಜೋಡಿಸಲಿದ್ದಾರೆ ಎನ್ನಲಾಗಿದೆ. ಕೆಜಿಎಫ್ ಸಿನಿಮಾ ಮೂಲಕ ಎಲ್ಲೆಡೆ ಖ್ಯಾತಿ ಗಳಿಸಿದ ನಿರ್ದೇಶಕ ಇತ್ತೀಚೆಗೆ ಪ್ರಭಾಸ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಕೆಜಿಎಫ್ ಚಾಪ್ಟರ್ 2 ಸಿನಿಮಾ ಕೊನೆಯ ಹಂತದ ಶೂಟಿಂಗ್ ಕೆಲಸದಲ್ಲಿ ಬ್ಯುಸಿಯಾಗಿರುವ ನಟ ಶೆಡ್ಯೂಲ್‌ಗಳು ಮುಗಿಯುತ್ತಾ ಬರ್ತಿದ್ದಂತೆ ಪ್ರಭಾಸ್ ಅವರನ್ನು ಭೇಟಿಯಾಗಿರೋದು ಕುತೂಹಲ ಮೂಡಿಸಿದೆ. ಪ್ರಶಾಂತ್ ನೀಲ್ ಈಗಾಗಲೇ ಜೂನಿಯರ್ ಎನ್‌ಟಿಆರ್ ಜೊತೆ ಒಂದು ಪ್ರಾಜೆಕ್ಟ್‌ನಲ್ಲಿದ್ದಾರೆ.
ಹೊಟ್ಟೇಲಿರೋ ಕಂದನ ಜೊತೆ ನಟಿಯ ಡ್ಯಾನ್ಸ್..! ವಿಡಿಯೋ ವೈರಲ್
ಎಸ್‌ಎಸ್ ರಾಜಮೌಳಿ ಅವರ ಆರ್‌ಆರ್‌ಆರ್ ಸಿನಿಮಾದಲ್ಲಿ ಜೂನಿಯರ್ ಎನ್‌ಟಿಆರ್ ಅದ್ಯ ಬ್ಯುಸಿ ಇದ್ದು, ತ್ರಿವಿಕ್ರಮ ಅವರ ಇನ್ನೊಂದು ಪ್ರಾಜೆಕ್ಟ್‌ನಲ್ಲಿಯೂ ಕೆಲಸ ಮಾಡಲಿದ್ದಾರೆ.
ಇದೀಗ ಪ್ರಶಾಂತ್ ನೀಲ್ ಪ್ರಭಾಸ್ ಜೊತೆ ಶೀಗ್ರವೇ ಸಿನಿಮಾ ಮಾಡೋ ಪ್ಲಾನ್‌ನಲ್ಲಿದ್ದಾರೆ ಎನ್ನಲಾಗಿದೆ. ಸ್ಟಾರ್ ನಿರ್ದೇಶಕ ಮತ್ತು ಸ್ಟಾರ್ ನಟ ಭೇಟಿಯಾಗಿದ್ದು, ಇವರ ಕೊಲಾಬರೇಷನ್ ಪ್ರಾಜೆಕ್ಟ್ ಶೀಘ್ರ ಎನೌನ್ಸ್ ಆಗೋ ಸಾಧ್ಯತೆ ಇದೆ ಎನ್ನಲಾಗಿದೆ.
ಆಸ್ಕರ್‌ಗೆ ಆಯ್ಕೆಯಾದ ಜಲ್ಲಿಕಟ್ಟು ಸಿನಿಮಾ!
ಪ್ರಭಾಸ್ ಸದ್ಯ ರಾಧೇ ಶ್ಯಾಮ್ ಕೊನೆಯ ಹಂತದ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಾರೆ. ರಾಧಾ ಕೃಷ್ಣ ಕುಮಾರ್ ನಿರ್ದೇಶನದ ಈ ಸಿನಿಮಾದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾ ಹಿಂದಿಗೂ ಡಬ್ ಆಗಲಿದ್ದು ಮಲಯಾಳಂ, ತಮಿಳಿನಲ್ಲೂ ರಿಲೀಸ್ ಆಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.