
ಸ್ಯಾಂಡಲ್ ವುಡ್ ನ ಅದ್ದೂರಿ ಸಿನಿಮಾ, ಇಡೀ ವಿಶ್ವವೇ ಕಾತರ, ನಿರೀಕ್ಷೆಯಿಂದ ಕಾಯುತ್ತಿರುವ ಕೆಜಿಎಫ್-2 ಟ್ರೈಲರ್ ಬಿಡುಗಡೆಗೆಯಾಗಿದೆ. ರಾಕಿಂಗ್ ಸ್ಟಾರ್ ಯಶ್ ನಟನೆಯ, ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್2 ಸಿನಿಮಾದ ಟ್ರೈಲರ್ ಗಾಗಿ ಅಪಾರ ಸಂಖ್ಯೆಯ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಇದೀಗ ಕೊನೆಗೂ ಟ್ರೈಲರ್ ಅಭಿಮಾನಿಗಳ ಮುಂದೆ ಬಂದಿದೆ. ಬೆಂಗಳೂರಿನಲ್ಲಿ ಕೆಜಿಎಫ್2 ಸಿನಿಮಾದ ಕಾರ್ಯಕ್ರಮ ಅದ್ದೂರಿಯಾಗಿ ನಡೆಯುತ್ತಿದ್ದು, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕನ್ನಡ ಟ್ರೈಲರ್ ಬಿಡುಗಡೆ ಮಾಡಿದರು. 'ಐ ಲವ್ ಯು, ಯು ಶುಡ್ ಲವ್ ಮಿ' ಎನ್ನುತ್ತಾ ಓಂ ಸಿನಿಮಾದ ಡೈಲಾಗ್ ಹೇಳುವ ಮೂಲಕ ಕೆಜಿಎಫ್-2ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿದರು. ಎಲ್ಲರೂ ಲವ್ ಮಾಡಲೇ ಬೇಕು ಎನ್ನುವ ಕಾರಣಕ್ಕೆ ಈ ಡೈಲಾಗ್ ಹೇಳಿರವುದಾಗಿ ಶಿವಣ್ಣ ಹೇಳಿದ್ದಾರೆ.
ಕನ್ನಡದ ಜೊತೆಗೆ ಇನ್ನು 4 ಭಾಷೆಯಲ್ಲಿ ಟ್ರೈಲರ್ ಬಿಡುಗಡೆಯಾಗಿದೆ. ಹಿಂದಿಯಲ್ಲಿ ಫರ್ಹಾನ್ ಅಖ್ತರ್ ಬಿಡುಗಡೆ ಮಾಡಿದ್ದಾರೆ. ತಮಿಳಿನಲ್ಲಿ ನಟ ಸೂರ್ಯ ರಿಲೀಸ್ ಮಾಡಿದ್ದಾರೆ. ಇನ್ನು ತೆಲುಗಿನಲ್ಲಿ ರಾಮ್ ಚರಣ್ ಬಿಡುಗಡೆ ಮಾಡಿದ್ರೆ, ಮಲಯಾಳಂನಲ್ಲಿ ಪೃಥ್ವಿರಾಜ್ ಬಿಡುಗಡೆ ಮಾಡಿದ್ದಾರೆ.
KGF 2; ಬೆಂಗಳೂರಿಗೆ ಬಂದಿಳಿಯುತ್ತಿದ್ದಂತೆ ಪುನೀತ್ ಮನೆಗೆ ಭೇಟಿ ನೀಡಿದ ಸಂಜಯ್ ದತ್
ಅಂದಹಾಗೆ ಟ್ರೈಲರ್ ರಿಲೀಸ್ ಕಾರ್ಯಕ್ರಮವನ್ನು ಬಾಲಿವುಡ್ ನ ಖ್ಯಾತ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುತ್ತಿದ್ದಾರೆ. ಮೊದಲ ಬಾರಿಗೆ ಕರಣ್ ಜೋಹರ್ ಕನ್ನಡದ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವುದಲ್ಲದೆ, ನಡೆಸಿಕೊಡುತ್ತಿರುವುದು ಸಹ ಕನ್ನಡ ಅಭಿಮಾನಿಗಳು ಸಹ ಸಖತ್ ಥ್ರಿಲ್ ಆಗುವಂತಾಗಿದೆ. ಈ ಸುಂದರ ಸಮಾರಂಭದಲ್ಲಿ ಇಡೀ ಕೆಜಿಎಫ್-2 ತಂಡ ಭಾಗಿಯಾಗಿದೆ. ಅಧೀರ ಪಾತ್ರದಲ್ಲಿ ಮಿಂಚಿರುವ ಬಾಲಿವುಡ್ ನಟ ಸಂಜಯ್ ದತ್, ರವೀನಾ ಟಂಡನ್ ಸೇರಿದಂತೆ ಇಡೀ ತಂಡ ಹಾಜರಿದೆ.
5 ಭಾಷೆಯಲ್ಲಿ ಬರ್ತಿದೆ KGF-2 ಟ್ರೈಲರ್; ಯಾವ ಭಾಷೆಯಲ್ಲಿ ಯಾರ್ ರಿಲೀಸ್ ಮಾಡುತ್ತಿದ್ದಾರೆ?
ಈ ಮೊದಲು ಸಿನಿಮಾದಿಂದ ಬಂದಿದ್ದ ಪುಟ್ಟ ಟೀಸರ್ ನಲ್ಲ ಸಂಜಯ್ ದತ್ ಅವರ ಅಧೀರ ಪಾತ್ರದ ಲುಕ್ ರಿವೀಲ್ ಆಗಿರಲಿಲ್ಲ. ಅಧೀರ ಪಾತ್ರವನ್ನು ಹಿಂದೆಯಿಂದ ಮಾತ್ರ ತೋರಿಸಲಾಗಿತ್ತು. ಇಂದು ಬಿಡುಗಡೆಯಾಗಿರುವ ಟ್ರೈಲರ್ ನಲ್ಲ ಸಂಜಯ್ ದತ್ ದರ್ಶನ ಆಗಿದೆ. ಭಯಾನಕವಾಗಿರುವ ಅಧೀರ ಪಾತ್ರವನ್ನು ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಟ್ರೈಲರ್ ಬಿಡುಗಡೆಯಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಧೂಳ್ ಎಬ್ಬಿಸುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.