ಏಕಾಏಕಿ ದೇಹದ ತೂಕವನ್ನು ಕಡಿಮೆ ಮಾಡಿಕೊಂಡಿದ್ದಕ್ಕೆ ಬಾಲ್ಯದಿಂದಲೂ ಟ್ರೋಲ್ಗೆ ಒಳಗಾಗುತ್ತಿರುವ ನಟಿ ಹಂಸಿಕಾ ಮದ್ವೆಯಾದ ಮೇಲೂ ಇದೇ ಟ್ರೋಲ್ಗೆ ಗುರಿಯಾಗುತ್ತಿದ್ದಾರೆ. ನಟಿ ಹೇಳಿದ್ದೇನು?
'ಶಕಲಕಾ ಬೂಮ್ ಬೂಮ್', 'ಕೋಯಿ ಮಿಲ್ ಗಯಾ' ಮುಂತಾದ ಚಿತ್ರಗಳಲ್ಲಿ ಬಾಲ ಕಲಾವಿದೆಯಾಗಿ ಕಾಣಿಸಿಕೊಂಡಿರುವ ಹಂಸಿಕಾ ಮೋಟ್ವಾನಿ ಈಗ ಸೌತ್ ಚಿತ್ರರಂಗದ ಪ್ರಮುಖ ನಟಿ. ಕನ್ನಡದಲ್ಲಿ ಹನ್ಸಿಕಾ ಪುನೀತ್ ರಾಜ್‌ಕುಮಾರ್ ಜೊತೆ 'ಬಿಂದಾಸ್' ಸಿನಿಮಾದಲ್ಲಿ ನಟಿಸಿದ್ದಾರೆ. ಹನ್ಸಿಕಾ ಮೋಟ್ವಾನಿ ಚಿಕ್ಕ ವಯಸ್ಸಿನಲ್ಲೇ ನಾಯಕಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ತೆಲುಗಿನ ಟಾಪ್ ಹೀರೋ ಅಲ್ಲು ಅರ್ಜುನ್ (Allu Arjun) ಜೊತೆ ಹೀರೋಯಿನ್ ಆಗಿ ಪ್ರೇಕ್ಷಕರ ಮನ ಗೆದ್ದವರೀಕೆ. ತಮ್ಮ ಮುದ್ದು ಮೊಗ ಹಾಗೂ ಅಭಿನಯದಿಂದ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ ಹನ್ಸಿಕಾ. ಇತ್ತೀಚೆಗೆ ಅವರು ಹಾರ್ಮೋನ್ ಇಂಜೆಕ್ಷನ್ (Harmon Injuction) ಕುರಿತಂತೆ ಬಹಳ ಚರ್ಚೆಗೆ ಗ್ರಾಸವಾಗಿದ್ದರು. ಬಾಲಕಿಯಾಗಿರುವಾಗಲೇ ಯುವತಿಯಂತೆ ಕಾಣಲು ಈಕೆ ಹಾರ್ಮೋನ್ ಇಂಜೆಕ್ಷನ್ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು. 31 ವರ್ಷದ ಹನ್ಸಿಕಾ ಮೋಟ್ವಾನಿ 2007 ರಲ್ಲಿ ಹಿಮೇಶ್ ರೇಶಮಿಯಾ (Himesh Reshmiya) ಅವರ 'ಆಪ್ಕಾ ಸುರೂರ್' ಚಿತ್ರದಲ್ಲಿ ನಾಯಕಿಯಾಗಿ ಬಾಲಿವುಡ್‌ಗೆ ಪದಾರ್ಪಣೆ ಮಾಡಿದಾಗ, ಅವರ ದೈಹಿಕ ರೂಪಾಂತರವನ್ನು ಕಂಡು ಎಲ್ಲರೂ ಆಶ್ಚರ್ಯಚಕಿತರಾದರು. ಆಗಲೇ ಗುಸುಗುಸು ಶುರುವಾಗಿತ್ತು. ಸಿನಿಮಾದಲ್ಲಿ ಅವಕಾಶ ಕೈತಪ್ಪಿ ಹೋಗಬಾರದು ಎಂಬ ಕಾರಣಕ್ಕೆ ಹನ್ಸಿಕಾ ಇಂಜೆಕ್ಷನ್ ಬಳಸಿದ್ದು, ಇದು ನಟಿ ದಿಢೀರ್ ದಪ್ಪಗಾಗಲು ಕಾರಣ ಎನ್ನಲಾಗಿತ್ತು.
ಬೊಜ್ಜು ಕರಗಲು ಅಥವಾ ದೇಹಕ್ಕೆ ಸುಂದರ ರೂಪ ನೀಡಲು ವಿಧವಿಧ ಚುಚ್ಚುಮದ್ದುಗಳನ್ನು (Injection) ತೆಗೆದುಕೊಳ್ಳುವುದು ಸಿನಿ ರಂಗದಲ್ಲಿ ಮಾಮೂಲಾಗಿರುವ ಕಾರಣ, ಹನ್ಸಿಕಾ ಕೂಡ ಇದೇ ರೀತಿ ಮಾಡಿದ್ದರು ಎನ್ನಲಾಗಿತ್ತು. ಹನ್ಸಿಕಾ ಕೊನೆಗೂ ತಮ್ಮ ‘ಲವ್ ಶಾದಿ ಡ್ರಾಮಾ’ ಕಾರ್ಯಕ್ರಮದ ಸಂಚಿಕೆಯಲ್ಲಿ ಈ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದರು. ಈ ಆರೋಪಗಳನ್ನು ತಳ್ಳಿಹಾಕಿದ್ದರು. ಆದರೆ ಈ ಸರ್ಜರಿ ಮಾತಿನಿಂದ ಹನ್ಸಿಕಾ (Hansika Motwani) ಕೊನೆಗೂ ಮುಕ್ತರಾಗಿಲ್ಲ. ಮದುವೆಯಾದ ಬಳಿಕವೂ ಆಕೆಯ ಸ್ಲಿಮ್ ಸೀಕ್ರೆಟ್ ಬಗ್ಗೆ ಮಾತುಗಳು ನಡೆಯುತ್ತಲೇ ಇವೆ. ತಮ್ಮ ಬಾಲ್ಯದ ಗೆಳೆಯ ಸೊಹೆಲ್ ಕತುರಿಯಾ ಜೊತೆ ಹನ್ಸಿಕಾ ಕಳೆದ ಡಿಸೆಂಬರ್ 4ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ನಂತರವೂ ಬೇಡಿಕೆ ನಟಿಯಾಗಿಯೇ ಉಳಿದುಕೊಂಡಿದ್ದಾರೆ ಈಕೆ, ಇದಾಗಲೇ ಪಾರ್ಟ್ನರ್, 105 ಮಿನಿಟ್ಸ್, ಮೈ ನೇಮ್ ಇಸ್ ಶ್ರುತಿ, ರೌಡಿ ಬೇಬಿ, ಗಾರ್ಡಿಯನ್, ಗಾಂಧಾರಿ, ಮಾನ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಹಾಗೂ ವೆಬ್ ಸೀರೀಸ್‌ನಲ್ಲಿ ನಟಿಸಿದ್ದು, ಮದುವೆಯಾದ ಮೇಲೂ ಬಿಜಿ ಇದ್ದಾರೆ.
ನೀತಾ ಅಂಬಾನಿ ಬ್ಯೂಟಿ ಸೀಕ್ರೆಟ್ ರಿವೀಲ್: ಹಾಟ್ ಆಗಿ ಕಾಣಲು ಇವರೇ ಕಾರಣ..
ಮದುವೆಯಾದ ಮೇಲೆ ಈಕೆ ಕೆಲವೊಂದು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದು, ಅದರಲ್ಲಿ ಸಕತ್ ಕ್ಯೂಟ್ ಆಗಿ ಕಾಣಿಸುತ್ತಿದ್ದಾರೆ. 31 ವರ್ಷದ ಹನ್ಸಿಕಾ ಮೋಟ್ವಾನಿ ಈ ಫೋಟೋಗಳಲ್ಲಿ ಸ್ಲಿಮ್ ಆಗಿ ಕಾಣಿಸುವ ಹಿಂದೆ ಏನಪ್ಪಾ ಸೀಕ್ರೇಟ್ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಬಾಲ್ಯದಿಂದಲೂ ಸರ್ಜರಿ ಅದೂ ಇದೂ ಎಂದೆಲ್ಲಾ ಟ್ರೋಲ್ ಆಗಿದ್ದ ನಟಿಗೆ ಈಗಲೂ ಅದನ್ನೇ ಜನರು ಪ್ರಶ್ನಿಸುತ್ತಿದ್ದಾರೆ. ಮದುವೆಯಾದ ಮೇಲೆ ಈಕೆ ತಮ್ಮ ದೇಹಕ ಬಹುತೇಕ ಕಡೆಗಳಲ್ಲಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂದು ಗುಸುಗುಸು ಶುರುವಾಗಿದೆ. ಈಕೆಗೂ ನೇರವಾಗಿ ಇದೇ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.
ಇದಕ್ಕೆ ಈಗ ಉತ್ತರಿಸಿರುವ ಹಂಸಿಕಾ, ತಮಗೆ ಅದರ ಅಗತ್ಯವಿಲ್ಲ ಎಂದು ಹೇಳಿಕೊಂಡಿದ್ದು, ಯೋಗ, (Yoga) ಧ್ಯಾನದ (Meditation) ಮೂಲಕ ತಮ್ಮ ತೂಕ ಇಳಿಸಿಕೊಂಡಿರುವುದಾಗಿ ಪರೋಕ್ಷವಾಗಿ ಫೋಟೋ ಶೇರ್ ಮಾಡುವ ಮೂಲಕ ಹೇಳಿದ್ದಾರೆ. ಜೂನ್ 21 ಅಂತಾರಾಷ್ಟ್ರೀಯ ಯೋಗ ದಿನದಂದು ಕೆಲವೊಂದು ಯೋಗ ಭಂಗಿಗಳ ಫೋಟೋಗಳನ್ನು ಶೇರ್ ಮಾಡಿರುವ ಅವರು, ''ಯೋಗ ದಿನವನ್ನು ಆಚರಿಸುತ್ತಿದ್ದೇನೆ, ಇಂದು ಹಾಗೂ ಪ್ರತಿದಿನ'' ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ತಾವು ಸಣ್ಣಗಾಗಲು ಯೋಗ-ಧ್ಯಾನದ ಮೊರೆ ಹೋಗುತ್ತಿರುವುದಾಗಿ ಪರೋಕ್ಷವಾಗಿ ತಿಳಿಸಿದ್ದಾರೆ. ಆದರೆ ಹನ್ಸಿಕಾ ಪೋಸ್ಟ್‌ಗೆ ಈಗಲೂ ಕೆಲವರು ಸಮ್ಮತಿ ಸೂಚಿಸುತ್ತಿಲ್ಲ. ಮದುವೆ ನಂತರ ಹನ್ಸಿಕಾ ಸರ್ಜರಿ ಮೂಲಕ ಇಡೀ ದೇಹವನ್ನು ಬದಲಿಸಿಕೊಂಡಿದ್ದು, ಯೋಗ ಮಾಡುವ ಡ್ರಾಮಾ (drama) ಮಾಡುತ್ತಿದ್ದಾರೆ ಎಂದಿದ್ದರೆ, ಇನ್ನು ಹಲವರು, ಇದು ನಿಜ ಯೋಗ, ಧ್ಯಾನದ ಮೂಲಕ ಮನಸ್ಸನ್ನು ಹಗುರ ಮಾಡಿಕೊಳ್ಳಬಹುದು ಮಾತ್ರವಲ್ಲದೆ ದೇಹದ ತೂಕವನ್ನೂ ಕಡಿಮೆ ಮಾಡಿಕೊಳ್ಳಬಹುದು ಎಂದಿದ್ದಾರೆ.
ಅತ್ತೆ ತೊಡೆ ಮೇಲೆ ಶಾರುಖ್: ಪತಿ ಮೇಲೆ ಕಾಲಿಟ್ಟು ಕೂತ ಗೌರಿ- ಇದೆಂಥ ಸಂಸ್ಕಾರ ಎಂದ ನೆಟ್ಟಿಗರು!